30 ಕೆಜಿ ಆಯ್ತು ಈಗ 50 ಕೆಜಿ ಕಮ್ಮಿ ಆಗ್ಬೇಕು: ಗುಂಡಮ್ಮ ಗೀತಾ ಭಟ್ ರೋಚಕ ವೇಟ್‌ ಲಾಸ್‌ ಜರ್ನಿ

By Vaishnavi Chandrashekar  |  First Published Nov 24, 2022, 12:31 PM IST

ಡುಮ್ಮಿ, ಪುರಿ ಮೂಟೆ ಎಂದು ಕಾಲೆಳೆದವರಿಗೆ ಸವಾಲ್ ಹಾಕಿದ ಗೀತಾ. ತೂಕ ಇಳಿಸಿಕೊಳ್ಳಲು ಮನಸ್ಸು ಮಾಡಿದ್ದು ಯಾಕೆ ಎಂದು ಮಾತನಾಡಿದ್ದಾರೆ. 


ಜೀ ಕನ್ನಡ ವಾಹಿನಿಯಲ್ಲಿ ಬ್ರಹ್ಮಗಂಟು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ಗೀತಾ ಭಾರತಿ ಭಟ್ ನೋಡಲು ದಪ್ಪಗಿದ್ದ ಕಾರಣ ಜನರಿಂದ ಸಾಕಷ್ಟ ಅವಮಾನ ಎದರುಸಿದ್ದಾರೆ. ಧಾರಾವಾಹಿ ಮುಗಿದ ನಂತರ ಬಿಗ್ ಬಾಸ್ ಪ್ರವೇಶಿಸಿ ಕನ್ನಡಿಗರ ಮನೆ ಮಗಳಾಗಿದ್ದಾರೆ. ಆ ನಂತರ ಬಣ್ಣದ ಜರ್ನಿಗೆ ಬ್ರೇಕ್ ಹಾಕಿ ಫಿಟ್ನೆಸ್‌ ಕಡೆ ಗಮನ ಕೊಟ್ಟಿದ್ದಾರೆ. ಈಗ 30 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಹೊಸ ರಿಯಾಲಿಟಿ ಶೋ ಸೂಪರ್ ಕ್ವೀನ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ರಚಿತಾ ರಾಮ್‌ ಮತ್ತು ವಿಜಯ್ ರಾಘವೇಂದ್ರ ತೀರ್ಪುಗಾರಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು ಗೀತ ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ.

'ಕಾರ್ಪೋರೆಟ್‌ ಕಂಪನಿಯಲ್ಲಿ ಕಂಪ್ಯೂಟರ್‌ ಮುಂದೆ ಕುಳಿತುಕೊಂಡು ಕೆಲಸ ಮಾಡುತ್ತಿದ್ದವಳು ನಾನು ಹಾಡಬೇಕು ಅಂತ ಆಸೆ ಇತ್ತು ಹಾಡಲು ಬಂದು ನಟನೆ ಮಾಡಲು ಅವಕಾಶ ಪಡೆದುಕೊಂಡೆ. ಬ್ರಹ್ಮಗಂಟು ಸೀರಿಯಲ್‌ ನನಗೆ ಒಂದು ಲೈಫ್ ಕೊಡ್ತು. ಸರಿಗಮಪ ರಿಯಾಲಿಟಿ ಶೋನಲ್ಲಿ ಆಡಿಷನ್ ಕೊಟ್ಟು ರಿಜೆಕ್ಟ್‌ ಆಗಿದ್ದೆ. ದಪ್ಪಗಿದ್ದರೂ ಕೂಡ ನಾನು ಬ್ಯೂಟಿಫುಲ್ ಆಗಿದ್ದೀನಿ ಅಂತ ಆತ್ಮವಿಶ್ವಾಸ ಕೊಟ್ಟಿದ್ದು ಗುಂಡಮ್ಮ ಪಾತ್ರ. ಇಷ್ಟು ದಿನ ಹೀಗಿದ್ದೆ ಓಕೆ ಬದಲಾದರೆ ಹೇಗೆ ಇರುತ್ತೀನಿ ಅನ್ನೋ ಯೋಚನೆ ಬಂತು. ಸಣ್ಣ ಆಗೋಕೆ ವರ್ಕೌಟ್ ಮಾಡೋದು ಒಂದು ಆದರೆ ಡಯಟ್ ಮಾಡೋದು ಒಂದು. ರೋಡ್‌ ಸೈಡ್ ಊಟ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಒಂದು ಮೂಲೆಯಲ್ಲಿ ಕುಳಿತುಕೊಂಡು ಅಳುತ್ತಿದ್ದೆ. 30-50 ಕೆಜಿ ಸಣ್ಣ ಆಗಬೇಕು ಅನ್ನೋ ಗೋಲ್ ಇದೆ' ಎಂದು ಗೀತಾ ಹೇಳಿದ್ದಾರೆ.

Tap to resize

Latest Videos

'ಚಿಕ್ಕ ವಯಸ್ಸಿನಿಂದಲ್ಲೂ ದಪ್ಪಗಿದ್ದಳು ಅವಳ ಸೈಜ್‌ಗೆ ಯಾವ ಬಟ್ಟೆನೂ ಸಿಗುತ್ತಿರಲಿಲ್ಲ ಮನಸ್ಸಿನಲ್ಲಿ ಅವಳಿಗೆ ಬೇಸರ ಇತ್ತು ಈಗ ಸಣ್ಣಗಾದ ಮೇಲೆ ಖುಷಿಯಾಗಿದ್ದಾಳೆ' ಗೀತಾ ತಾಯಿ ಹೇಳಿದ್ದಾರೆ.

28 ಕೆಜಿ Weight ಇಳಿಸಿಕೊಂಡ ಗುಂಡಮ್ಮ; ಗೀತಾ ಟ್ರಾನ್ಸ್‌ಫಾರ್ಮೇಷನ್‌ ಫೋಟೋ ವೈರಲ್!

'ದಪ್ಪಗಿದ್ದ ಕಾರಣ ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಎಲ್ಲರೂ ಗೇಲಿ ಮಾಡುತ್ತಿದ್ದರು. ಡುಮ್ಮಿ, ಆಲದ ಮರ, ಪುರಿ ಮೂಟೆ ಅಂತ ಬೇರೆ ಬೇರೆ ಹೆಸರುಗಳನ್ನು ಕರೆಯುತ್ತಿದ್ದರು. ಯಾವ ರೇಷನ್ ಅಕ್ಕಿ ತಿನ್ನಿಸುತ್ತೀರಾ ಅಂತ ಅಮ್ಮ-ಅಪ್ಪಂಗೆ ಕೇಳುತ್ತಿದ್ದರು. ನಿನಗೆ ಯಾರು ಗಂಡು ಕೊಡುತ್ತಾರೆ ಯಾವ ಹುಡುಗ ಇಷ್ಟ ಪಡುತ್ತಾನೆ ಅಂತ ಕೇಳುತ್ತಿದ್ದರು. ಆಗ ಮನಸ್ಸಿಗೆ ಹಿಂಸೆ ಆಗುತ್ತಿತ್ತು. ನನ್ನ ಮೈನಸ್ ಪ್ಲಸ್ ಆಗಿ ಬದಲಾಗುತ್ತದೆ ಎಂದು ಗೊತ್ತಿರಲಿಲ್ಲ. ಈ ಜರ್ನಿಯಲ್ಲಿ ತುಂಬಾ ವಿಚಾರಗಳನ್ನು ಬಗ್ಗೆ ಕಲಿತಿರುವೆ, ಕಳೆದುಕೊಂಡಿರುವೆ ಮತ್ತು ಪಡೆದುಕೊಂಡಿರುವೆ. ಈಗ 30 ಕೆಜಿ ತೂಕ ಕಡಿಮೆ ಆಗಿದೆ ಇನ್ನೂ 30 ಕೆಜಿ ಕಡಿಮೆ ಮಾಡಿಕೊಳ್ಳಬೇಕು' ಎಂದಿದ್ದಾರೆ.

'ನನ್ನ ತಾಯಿ ನನ್ನ ಜೀವನದ ಸೂಪರ್ ಕ್ವೀನ್ ಏಕೆಂದರೆ ನನ್ನಿಂದ ಅವರಿಗೆ ಅವಮಾನ ಆಗಿದೆ ನನ್ನ ಬಗ್ಗೆ ಮಾಡುತ್ತಿದ್ದ ಟೀಕೆಗಳನ್ನು ಕೇಳಿಸಿಕೊಂಡಿದ್ದಾರೆ ಸಣ್ಣ ಆಗು ಅಂತ ಕ್ಯೂಟ್ ಕ್ಯೂಟ್ ಆಗಿ ಕೇಳುತ್ತಿದ್ದರು. 500 ಸ್ಕಿಪಿಂಗ್ ಮಾಡು ಅಕ್ಕಿ ರೊಟ್ಟಿ ಕೊಡುತ್ತೀನಿ ಅಂತ ಹೇಳುತ್ತಿದ್ದರು ತುಂಬಾ ಒಳ್ಳೆ ರೀತಿಯಲ್ಲಿ ನನಗೆ ಅರ್ಥ ಮಾಡಿಸುತ್ತಿದ್ದರು' ಎಂದು ಗೀತಾ ಮಾತನಾಡಿದ್ದಾರೆ.

'ಎಲ್ಲಾ ನೆಗೆಟಿವ್ ಪಾಯಿಂಟ್‌ಗಳನ್ನು ದಾಟಿ ಚಲದಿಂದ ಮಾಡಿದ್ದಾಳೆ ಈಗ ನನಗೆ ಆಕೆ ರೋಲ್ ಮಾಡಲ್' ಎಂದು ಗೀತಾ ತಂದೆ ಹೇಳಿದ್ದಾರೆ.

'ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಗೀತಾ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು. ಮೊದಲೆರಡು ವಾರ ಗೀತಾ ಡ್ಯಾನ್ಸ್ ಮಾಡಿದಾಗ ಪಾಪ ಯಾಕೆ ಇಷ್ಟೊಂದು ತೊಂದರೆ ಕೊಡುತ್ತಿದ್ದಾರೆ ಯಾಕಿಷ್ಟು ಕಷ್ಟ ಪಡಬೇಕು ಅನಿಸುತ್ತಿತ್ತು. ಅದೇ ನಾಲ್ಕನೇ ವಾರಕ್ಕೆ ಅದ್ಭುತವಾಗಿ ಡ್ಯಾನ್ಸ್‌ ಮಾಡಿ ಪ್ರೂವ್ ಮಾಡಿದ್ದರು ಎಷ್ಟು ರಿಸ್ಕ್‌ ತೆಗೆದುಕೊಂಡು ಮಾಡುತ್ತಿದ್ದರು. ಅವತ್ತು ನೋಡಿದ ಗೀತಾ ಇವತ್ತು ನೋಡಿದ ಗೀತಾನ ನೋಡಿದ್ದರೆ ಎದ್ದು ನಿಂತು ನಮಸ್ಕಾರ ಮಾಡಬೇಕು ಅನಿಸುತ್ತದೆ' ಎಂದು ವಿಜಯ್ ಮಾತನಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!