ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಒಟ್ಟಿಗೆ ಇದ್ದ ಉಗ್ರಂ ಮಂಜು ಮತ್ತು ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ಮಂಜು ಅವರ ಕುತಂತ್ರ ಗೌತಮಿಗೆ ಗೊತ್ತಾಗಿದ್ದು, ಮಂಜು ಅವರ ಸ್ವಾರ್ಥತೆಯಿಂದ ಬೇಸತ್ತ ಗೌತಮಿ ಸ್ನೇಹ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಡಿ.11): ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಉಗ್ರಂ ಮಂಜು, ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ಅವರು ಒಂದು ಗುಂಪು ಮಾಡಿಕೊಂಡಿದ್ದರು. ಅದ್ಯಾವಾಗ ಮೋಕ್ಷಿತಾ ಮನೆಯೊಂದ ಹೊರ ಹೋಗಲು ಕಾರಿನಲ್ಲಿ ಹೋಗಿ ಬಂದರೋ ಆಗ ಎಚ್ಚೆತ್ತುಕೊಂಡು ಗುಂಪು ತೊರೆದು ಆಟವಾಡುತ್ತಿದ್ದಳು. ಆದರೆ, ಗೌತಮಿ ಜಾಧವ್ ಹಾಗೂ ಮಂಜು ನಡುವೆ ಕೆಲವೊಂದಿಷ್ಟು ವೈಮನಸ್ಸು ಬಂದರೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದರು. ಇದೀಗ ಉಗ್ರಂ ಮಂಜು ಕುತಂತ್ರ ಗೌತಮಿಗೆ ಗೊತ್ತಾಗಿತ್ತು, ತಾನೂ ನಿನ್ನಿಂದ ದೂರ ಇರುವುದಾಗಿ ಹೇಳಿದ್ದಾಳೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈಗಾಗಲೇ 11 ವಾರಗಳು ಮುಕ್ತಾಯವಾಗಿವೆ. ಇದೀಗ ಕೇವಲ 12 ಜನರು ಮಾತ್ರ ಸ್ಪರ್ಧಿಗಳಿದ್ದು, ಅದರಲ್ಲಿ ಎಲ್ಲರೂ ಭಾರೀ ಪೈಪೋಟಿ ನಡುವೆ ಒಬ್ಬರನ್ನೊಬ್ಬರು ಹೊರಗೆ ಹಾಕಲು ಕುತಂತ್ರ ನಡೆಸುತ್ತಲೇ ಇದ್ದಾರೆ. ಅದರಲ್ಲಿ ಕೆಲವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಇನ್ನೊಂದು ವಾರ ಆಯಸ್ಸು ಎಂಬಂತೆ ಐದಾರು ವಾರಗಳಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಶಿಶಿರ್, ಐಶ್ವರ್ಯಾ ಸಿಂಧೋಗಿ ಹಾಗೂ ಧನರಾಜ್ ಅವರು ಇನ್ನೇನು ಮನೆಗೆ ಹೋಗಿಯೇ ಬಿಟ್ಟರು ಎನ್ನುವಾಗ ಕೆಲವೊಂದು ವಿಚಾರಗಳಿಂದ ಮನೆಯಲ್ಲಿ ಸೇಫ್ ಆಗಿ ಉಳಿದುಕೊಂಡರು.
ಅದರಲ್ಲಿ ಬಿಗ್ ಬಾಸ್ ಮನೆಯ ಸ್ವರ್ಗ, ನರಕ ಥೀಮ್ ಇರುವಾಗಿನಿಂದಲೂ ಸ್ವರ್ಗವಾಸಿಗಳಾಗಿದ್ದ ಗೌತಮಿ ಜಾಧವ್, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ಅವರು ಒಂದು ಗುಂಪಾಗಿ ಎಲ್ಲ ವಿಚಾರಗಳಲ್ಲಿಯೂ ತಮ್ಮ ಮೂವರು ಗುಂಪನ್ನು ರಕ್ಷಣೆ ಮಾಡಿಕೊಂಡೇ ಹೋಗುತ್ತಿದ್ದರು. ಬರ ಬರುತ್ತಾ ಮೂವರ ಗುಂಪಿನಲ್ಲಿ ಬಿಗ್ ಬಾಸ್ ಮನೆಗೆ ಪಾಸಿಟಿವ್ ಪರಿಮಳ ಹಂಚಿದ್ದ ಗೌತಮಿ ಅವರ ಮಾತುಗಳೇ ಇಲ್ಲಿ ಪ್ರಧಾನ ಆಗುತ್ತಿದ್ದವು. ಜೊತೆಗೆ, ಮಂಜು ಕೂಡ ತನಗೆ ಅವಕಾಶ ಸಿಕ್ಕಲ್ಲೆಲ್ಲಾ ಗೌತಮಿಗೆ ಹೆಚ್ಚು ಆದ್ಯತೆ ನೀಡುತ್ತಾ ಹೋದಂತೆ ಮೋಕ್ಷಿತಾ ಆಟ ಮಂಕಾಗಿತ್ತು. ಈ ಹಿನ್ನೆಲೆಯಲ್ಲಿ ಮೋಕ್ಷಿತಾ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋಗುವುದಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊನೇ ಕ್ಷಣದಲ್ಲಿ ವಾಪಸ್ ಬಂದಿದ್ದರು. ನಂತರ, ಇನ್ನು ಮುಂದಿನ ಆಟವೇ ಬೇರೆ ಎಂದು ಹೇಳಿದ್ದರು.
ಇದನ್ನೂ ಓದಿ: ಮೋಕ್ಷಿತಾಗೆ ಬಿಗ್ ಬಾಸ್ ಅರ್ಥನೇ ಆಗಿಲ್ವಾ? ಕಿಚ್ಚನ ಪಂಚಾಯತಿಯಲ್ಲಿ ಕೆಲವರಿಗೆ ಕಿವಿಮಾತು, ಕೆಲವರಿಗೆ ಮಾತಿನ ಏಟು!
ಮೋಕ್ಷಿತಾ ಅವರು, ಚೈತ್ರಾ ಕುಂದಾಪುರ, ಶಿಶಿರ್ ಹಾಗೂ ಐಶ್ವರ್ಯಾ ಅವರೊಂದಿಗೆ ಸೇರಿಕೊಂಡು ಆದ್ಯತೆಯ ಮೇರೆಗೆ ತನ್ನ ಆಟವನ್ನು ಮುಂದುವರೆಸಿದರು. ನಂತರ, ಉಗ್ರಂ ಮಂಜು ಕೆಲವು ಕುತಂತ್ರಗಳು ಹಾಗೂ ಎಲ್ಲ ವಿಚಾರದಲ್ಲಿಯೂ ತನ್ನನ್ನು ತಾನು ಬಿಂಬಿಸಿಕೊಳ್ಳಬೇಕು ಎನ್ನುವ ಗುಣಗಳು ಗೌತಮಿಗೆ ಸ್ವಲ್ಪ ಕಸಿವಿಸಿ ಉಂಟುಮಾಡಲು ಆರಂಭಿಸಿತು. ಇದಾದ ನಂತರ ಒಂದೆರೆಡು ಬಾರಿ ಮಂಜು ಹಾಗೂ ಗೌತಮಿ ನಡುವೆ ಸಣ್ಣ ಪುಟ್ಟ ವೈಮನಸ್ಸು ಬಂದರೂ ಇಬ್ಬರೂ ಅತ್ತು ಕಣ್ಣೀರಿಟ್ಟು ಕೊನೆಗೆ ತಮ್ಮ ಆಪ್ತತೆ, ಸ್ನೇಹವನ್ನು ಮುಂದುವರೆಸಿದ್ದರು.
ಇದೀಗ ಗೌತಮಿಗೆ ಉಗ್ರಂ ಮಂಜು ಕರಾಳ ಮುಖದ ಪರಿಚಯ ಸ್ಪಷ್ಟವಾಗಿ ಸಿಕ್ಕಿದೆ. ಮಂಜು ಯಾವುದೇ ಕ್ಷಣಗಳಲ್ಲಿಯೂ ತನ್ನನ್ನು ತಾನು ಮುಂದೆ ಬರುವಂತೆ ಎಲ್ಲರ ಮುಂದೆಯೂ ಇಮೇಜ್ ಕ್ರಿಯೇಟ್ ಮಾಡುತ್ತಾನೆ. ಇದರಿಂದ ಕೋಪಗೊಂಡಿರುವ ಗೌತಮಿ ಅವರು ತ್ರಿವಿಕ್ರಮ್ ಅವರೊಂದಿಗೆ ಮಾತನಾಡುವಾಗ ಮಧ್ಯಕ್ಕೆ ಬಂದು ಮಾತನಾಡಲು ಮುಂದಾದನು. ಆಗ ನೀನು ನಾವು ಮಾತನಾಡುವುದನ್ನು ಇಂಟರಪ್ಟ್ ಮಾಡುತ್ತಿದ್ದೀರಿ. ನನ್ನ ಕಥೆಯ ಜೊತೆಗೆ ಯಾವಾಗಲೂ ನಿಮ್ಮ ಕಥೆಯನ್ನು ಸೇರಿಸಿಕೊಂಡು ಹೇಳುತ್ತೀರಿ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11: ತನಗೆ ಮತ್ತು ಗೌತಮಿಗೆ ಚಾಕು ಹಾಕಿದ ಐಶ್ವರ್ಯಾ ವಿರುದ್ಧ ಮಂಜು ಉಗ್ರ ರೂಪ!
ನಿಮ್ಮಲ್ಲಿ ಚಪ್ಪಾಳೆ ಹೊಡೆದಿರುವುದು, ನಾನು ನಿಮ್ಮನ್ನು ನೋಡಿದೆ ಎಂಬುದರ ಮೇಲೆ ಯಾರೂ ನಮ್ಮ ಬಗ್ಗೆ ಮಾತನಾಡುವುದಿಲ್ಲ. ಆದರೆ, ಎಲ್ಲ ವಿಚಾರಗಳನ್ನೂ ನಿಮ್ಮ ಕಥೆಯನ್ನೇ ಹೇಳುತ್ತಾ ಹೋಗುತ್ತೀರಿ. ನನ್ನ ಬಗ್ಗೆ ಮಾತನಾಡುವಾಗಲೂ ನಿಮ್ಮ ಪಾತ್ರದ ವಿವರಣೆ ನೀಡುತ್ತೀರಿ. ಹೀಗಾಗಿ, ನಾನು.. ನಾನು.. ನಾನು.. ಎಂಬ ಮಂಜು ಎಲ್ಲರಿಗೂ ಕಾಣಿಸುತ್ತಿದೆ. ನಾನು ನಿಮ್ಮನ್ನು ತುಂಬಾ ಬಾರಿ ನೋಡಿದ್ದೇನೆ. ನಮ್ಮಿಬ್ಬರ ಜಗಳ ಇದೀಗ ಟೇಕ್ ಆಫ್ ಆಗಿದೆ, ನಾನಂತೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದು ಗೌತಮಿ ಅವರು ಮಂಜುಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಆಟದ ಹೊಡೆತಕ್ಕೆ ಗೆಳೆತನ ‘ಪೀಸ್.. ಪೀಸ್!’
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/0YVXHbg6nl