ಬಂಗಾಳಿಯಲ್ಲಿ ಗೊತ್ತಿಲ್ಲದೇ ಭೂಮಿಕಾಗೆ ಐ ಲವ್ ಯು ಅಂದಿದ್ದಾನೆ ಗೌತಮ್. ಅತ್ತ ಭೂಮಿಕಾ ನಾಚಿ ನೀರಾದ್ರೆ ಫ್ಯಾನ್ಸ್ ಹೇಳ್ತಿರೋದೇನು?
ಗೌತಮ್ ಮೊದಲು ಪ್ರೀತಿ ಬಗ್ಗೆ ಹೇಳಲಿ ಎಂದು ಭೂಮಿಕಾ, ಭೂಮಿಕಾ ಮೊದಲು ಹೇಳಲಿ ಎಂದು ಗೌತಮ್... ಒಟ್ಟಿನಲ್ಲಿ ಇಬ್ಬರೂ ಐ ಲವ್ ಯೂ ಅನ್ನೋದಕ್ಕೆ ಪರದಾಡುತ್ತಿದ್ದರು. ಅಷ್ಟಕ್ಕೂ, ಗೌತಮ್ ಮತ್ತು ಭೂಮಿಕಾ ನಡುವೆ ಲವ್ ಶುರುವಾಗಿದೆ. ಆದರೆ ಇಬ್ಬರೂ ಒಬ್ಬರಿಗೊಬ್ಬರು ಈ ವಿಷಯವನ್ನು ಹೇಳಿಕೊಂಡಿಲ್ಲ. ಆನಂದ್ ಮತ್ತು ಪತ್ನಿ ಇವರಿಬ್ಬರನ್ನು ಹೇಗಾದರೂ ಒಂದು ಮಾಡಲು ನೋಡುತ್ತಿದ್ದಾರೆ. ಭೂಮಿಕಾಳಿಗೆ ಆನಂದ್ ಪತ್ನಿ ಬಂದು ಎಲ್ಲಿಗೆ ಬಂತು ಲವ್‌ಸ್ಟೋರಿ ಎಂದಿದ್ದಾಳೆ. ಅದಕ್ಕೆ ಭೂಮಿಕಾ, ಗೌತಮ್ ನನ್ನನ್ನು ತುಂಬಾ ಪ್ರೀತಿಸ್ತಾರೆ. ಅವರೇ ಮೊದಲು ಹೇಳಲಿ ಎಂದುಕೊಂಡು ಸುಮ್ಮನಿದ್ದೇನೆ. ನಾನು ಹೇಳಲು ಹೋಗುವುದಿಲ್ಲ ಎಂದಿದ್ದಾಳೆ. ಹೀಗೆ ಮೊದಲೇ ಹೆಣ್ಣುಮಕ್ಕಳ ಲವ್ ಫೀಲಿಂಗ್ಸ್ ಹೇಳಿಕೊಂಡು ಬಿಟ್ರೆ ತುಂಬಾ ಚಿಕ್ಕವರಾಗಿಬಿಡ್ತಾರೆ. ಅದಕ್ಕೇ ಅವರೇ ಮೊದಲು ಹೇಳಲಿ. ಅವರಿಗೆ ನನಗಿಂತಲೂ ಹೆಚ್ಚಾಗಿ ನನ್ನ ಮೇಲೆ ಲವ್ ಇದೆ ಅದಕ್ಕಾಗಿಯೇ ಅವರೇ ಮೊದ್ಲು ಹೇಳಿ ಎನ್ನುತ್ತಿದ್ದಾಳೆ.
ಹೀಗೆ ಬಿಟ್ಟರೆ ಇವರಿಬ್ಬರೂ ಲವ್ ಬಗ್ಗೆ ಹೇಳುವುದೇ ಇಲ್ಲ ಎಂದು ಆನಂದ್ ಮತ್ತು ಪತ್ನಿ ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ಅದೇ ಇನ್ನೊಂದೆಡೆ ಬಂಗಾಳಿಯ ಕ್ಲೈಂಟ್ಸ್ ಜೊತೆ ಗೌತಮ್ ಮೀಟಿಂಗ್ ಫಿಕ್ಸ್ ಆಗಿದೆ. ಅವರನ್ನು ಸ್ವಾಗತಿಸಲು ಬಂಗಾಳಿಯಲ್ಲಿ ಮಾತನಾಡುವಂತೆ ಆನಂದ್ ಹೇಳಿದ್ದಾನೆ. ಒಂದಿಷ್ಟು ಬಂಗಾಳಿಯಲ್ಲಿ ಗೌತಮ್ ಮಾತನಾಡಿದ್ದಾನೆ. ಕೊನೆಗೆ ಅಲ್ಲಿ ಭೂಮಿಕಾ ಬಂದಿದ್ದಾಳೆ. ನಾವು ನಿಮ್ಮವರು ಎನ್ನಲು ಬೆಂಗಾಳಿಯಲ್ಲಿ ಹೇಗೆ ಹೇಳ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಗೌತಮ್ ಬಂಗಾಳಿಯಲ್ಲಿ ಮಾತನಾಡಿದ್ದಾನೆ. ನಿಜವಾಗಿ ಹೇಳಬೇಕು ಎಂದರೆ ಅದು ಬಂಗಾಳಿಯಲ್ಲಿ ಐ ಲವ್ ಯು ಎನ್ನುವುದು. ಇದು ಗೌತಮ್ಗೂ ತಿಳಿದಿರಲಿಲ್ಲ, ಭೂಮಿಕಾಗೂ ತಿಳಿದಿರಲಿಲ್ಲ. ಕೊನೆಗೆ ಆನಂದ್ನೇ ನೀನು ಹೇಳಿದ್ದು ಐ ಲವ್ ಯು ಅಂತ ಹೇಳಿದ್ದಾನೆ. ಇದನ್ನು ಮರೆಯಿಂದ ಕೇಳಿಸಿಕೊಂಡು ಭೂಮಿಕಾ ನಾಚಿ ನೀರಾಗಿದ್ದಾಳೆ. ಗೌತಮ್ ತಲೆ ತಲೆ ಚಚ್ಚಿಕೊಂಡಿದ್ದಾನೆ.
ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದ ಸೀತಾ: ಸಿಹಿಯ ಸತ್ಯ ತಾತಂಗೆ ತಿಳೀತಾ?
ಪತ್ನಿಗೆ ಐ ಲವ್ ಯೂ ಹೇಳಲು ಇಷ್ಟೊಂದೆಲ್ಲಾ ಕಷ್ಟ ಪಡಬೇಕಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಹಲವರು ಸೋ ಸ್ವೀಟ್ ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ಇವರಿಬ್ಬರನ್ನೂ ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ಪ್ಲ್ಯಾನ್ ಮಾಡುತ್ತಲೇ ಇದ್ದಾಳೆ. ಅವಳು ಮಾಡ್ತಿರೋ ತಂತ್ರಕ್ಕೆ ಎಲ್ಲೆಯೇ ಇಲ್ಲ. ಗೌತಮ್ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಳು. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದ. ಇದನ್ನು ಕೇಳಿ ಗೌತಮ್ಗೆ ಶಾಕ್ ಆಗಿತ್ತು. ಪತ್ನಿ ಭೂಮಿಕಾಳಿಗಾಗಿ ಗೌತಮ್, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್ ಹೇಳಿದ್ದಾನೆ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಳು. ಕೊನೆಗೆ ಅತ್ತೆಯ ಕಂತ್ರಿ ಬುದ್ಧಿ ತಿಳಿದಿತ್ತು.
ತಮ್ಮ ಜಾತಕದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡಲು ಮನೆಯ ಗುರುಗಳನ್ನು ಕರೆಸಿ ಪಂಚಾಂಗ ಶ್ರವಣ ಮಾಡಿಸೋ ಪ್ಲ್ಯಾನ್ ಮಾಡಿದ್ದಳು. ಏಕೆಂದರೆ ಏಕಾಏಕಿ ಶಕುಂತಲಾ ದೇವಿಯ ಕುತಂತ್ರವನ್ನು ಬಯಲು ಮಾಡುವುದು ಸುಲಭವಲ್ಲ. ಹೀಗೆ ಮಾಡಿದರೆ, ಗೌತಮ್ ಪತ್ನಿಯ ಮೇಲೇ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಈ ಪ್ಲ್ಯಾನ್ ಮಾಡಿದ್ದಾಳೆ. ಮನೆಗೆ ಗುರೂಜಿಯನ್ನು ಕರೆಸಿದ್ದು, ಇವರಿಬ್ಬರ ಜಾತಕ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಈ ಮೂಲಕ ಗೌತಮ್ಗೆ ಫುಲ್ ಖುಷ್ ಆಗಿದೆ. ಅತ್ತೆ ಶಕುಂತಲಾ ಮತ್ತು ನಾದಿನಿ ಮಾತ್ರ ಇಂಗು ತಿಂದ ಮಂಗನಂತಾಗಿದ್ದಾರೆ.
ಅಮೃತಧಾರೆಯ ಮುಗ್ಧ, ಪೆದ್ದಿ ಮಲ್ಲಿ ಇಷ್ಟೊಂದು ಕ್ಯೂಟಾ? ನಟಿಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ...