ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದ ಸೀತಾ: ಸಿಹಿಯ ಸತ್ಯ ತಾತಂಗೆ ತಿಳೀತಾ?

Published : Apr 22, 2024, 12:27 PM ISTUpdated : Apr 22, 2024, 12:32 PM IST
ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದ ಸೀತಾ:  ಸಿಹಿಯ ಸತ್ಯ ತಾತಂಗೆ ತಿಳೀತಾ?

ಸಾರಾಂಶ

ಮಗಳು ಇರುವ ಸತ್ಯವನ್ನು ತಾತನಿಗೆ ಹೇಳಬೇಡ ಎಂದಿದ್ದಾಳೆ ಭಾರ್ಗವಿ. ಎಲ್ಲ ಸತ್ಯ ಹೇಳುತ್ತೇನೆ ಎಂದು ಹೋಗಿದ್ದಾಳೆ ಸೀತಾ. ಮುಂದೇನಾಯ್ತು?   

ತನಗೆ ಮಗಳು ಸಿಹಿ ಇರುವ ಸತ್ಯವನ್ನು ತಾತನ ಎದುರು ಹೇಳಬೇಡ ಎಂದು ಭಾರ್ಗವಿ ಸೀತಾಳಿಗೆ ಹೇಳಿದ್ದಾಳೆ. ಅಷ್ಟಕ್ಕೂ ಅವಳೇನೂ ಅದನ್ನು ಕಾಳಜಿಯಿಂದ ಹೇಳಿದ್ದಲ್ಲ. ಬದಲಿಗೆ ಸೀತಾ ಈ ಸತ್ಯವನ್ನು ಅಡಗಿಸಿಟ್ಟರೆ, ಕೊನೆಗೆ ಸತ್ಯ ಮುಚ್ಚಿಟ್ಟಿದ್ದಾಳೆ ಎಂದು ರಾಮ್​ ಮತ್ತು ಸೀತಾಳನ್ನು ದೂರ ಮಾಡುವ ದುರುದ್ದೇಶ ಇವಳದ್ದು. ಆದರೆ ಚಿಕ್ಕಮ್ಮನ ಕುತಂತ್ರ ಇತ್ತ ರಾಮ್​ಗೂ ಗೊತ್ತಿಲ್ಲ, ಸೀತಾಳಿಗೂ ಗೊತ್ತಿಲ್ಲ. ಇಬ್ಬರೂ ಭಾರ್ಗವಿ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾರೆ. ಆದರೆ ಸತ್ಯ ಹೇಳಿದರೆ ತಾತನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಚಿಕ್ಕಮ್ಮ ಹೇಳಿದ್ದರಿಂದ ಏನು ಮಾಡುವುದು ಎಂದು ಸೀತಾಳಿಗೆ ತಿಳಿಯುತ್ತಿಲ್ಲ. ಆದರೆ ತಾನು ಸತ್ಯವನ್ನು ಮುಚ್ಚಿಡುವುದು ಸಾಧ್ಯವೇ ಇಲ್ಲ ಎಂದಿದ್ದಾಳೆ. ನಿಮಗೆ ಹೇಗೆ ಅನ್ನಿಸುತ್ತದೆಯೋ, ಅದೇ ರೀತಿ ಮಾಡಿ ಎಂದೂ ರಾಮ್​ ಸಪೋರ್ಟ್​ ಮಾಡಿದ್ದಾನೆ.

ಆದರೆ...? ಆಗಿದ್ದೇನು? ಸೀತಾ ತಾತನ ಬಳಿ ಹೋಗಿದ್ದಾಳೆ. ಅವನು ವಿಷಯ ಕೇಳಿದಾಗ ನನಗೆ ಅಪ್ಪ-ಅಮ್ಮ ಇಲ್ಲ... ಅವರ ಜಾಗದಲ್ಲಿ... ಎಂದಷ್ಟೇ ಸೀತಾ ಹೇಳಿದ್ದಾಳೆ. ಇದರ ಪ್ರೊಮೋ ಅನ್ನುಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಸೀತಾ ಅಳು ಮೋರೆ ಹಾಕಿಕೊಂಡು ಕೊಠಡಿಯಿಂದ ಹೊರಬಂದಿದ್ದಾಳೆ. ಅಲ್ಲಿ ನಡೆದದ್ದೇನು? ಸೀತಾ ಸತ್ಯವನ್ನು ಹೇಳಿದ್ಲಾ ಅಥವಾ ಚಿಕ್ಕಮ್ಮ ಕೊಟ್ಟ ವಾರ್ನಿಂಗ್​ನಿಂದ ಬೆದರಿ ಸತ್ಯ ಮುಚ್ಚಿಟ್ಟಳಾ ಎನ್ನುವುದು ಈಗಿರುವ ಕುತೂಹಲ. 

ಮನಸ್ಸು ಮಾಡಿದ್ರೆ ಹೆಲಿಕಾಪ್ಟರ್​ ತಗೋತೇನೆ ಎಂದ ಮಹಿಮಾ ಕೈಗೆ ನೆಲ ಒರೆಸೋ ಮಾಪ್​ ಕೊಡೋದಾ?

ಅಷ್ಟಕ್ಕೂ ಭಾರ್ಗವಿ ಮತ್ತು ಚಾಂದನಿ ಒಂದಾಗಿಯೇ ಈ ಕುತಂತ್ರ ಹೆಣೆದಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್‌ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಹಾಗಿದ್ದರೆ ರಾಮ್‌ನ ಮದುಮಗಳ ಹೆಸರು ಯಾರದ್ದು ಹೇಳಲಾಗುತ್ತದೆ? ಸದ್ಯ ಸೀತಾ ಮತ್ತು ರಾಮ್‌ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಪಡುತ್ತಿದ್ದಾರೆ.

ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಾಳೆ. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಾಳೆ. ಅದೇ ಇನ್ನೊಂದೆಡೆ ರಾಮ್​ ಸೀತಾ ಹೆಸರಿನ ಎಸ್​ ಅನ್ನು ಕೈ ಮೇಲೆ ಬರೆಸಿಕೊಂಡಿದ್ದ. ಅದನ್ನು ಸೀತಾಳಿಗೆ ತೋರಿಸಿದಾಗ ನಾಚಿಕೊಂಡಿದ್ದಳು.  ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್​ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಇದೀಗ ಸೀತಾಳನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿ ಮಜಾ ನೋಡುತ್ತಿದ್ದಾಳೆ. 

ಈಗಷ್ಟೇ ಶುರುವಾದ ಸೀತಾ-ರಾಮ ಪ್ರೀತಿಗೆ 200ರ ಸಂಭ್ರಮ: ಅರಳುವ ಮುನ್ನವೇ ಕಮರಿಹೋಗುವುದೇ ಖುಷಿ?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್