ವಿಡಿಯೋಗಳಿಂದ ಕೇವಲ 50 ಸಾವಿರ ರೂ. ಬರ್ತಿದೆ, ಆಚೆ ಬಂದ್ರೆ 10 ಸಾವಿರ ತರ್ತೀನಿ: ಸೋನು ಶ್ರೀನಿವಾಸ್ ಗೌಡ

Published : Apr 22, 2024, 12:13 PM IST
ವಿಡಿಯೋಗಳಿಂದ ಕೇವಲ 50 ಸಾವಿರ ರೂ. ಬರ್ತಿದೆ, ಆಚೆ ಬಂದ್ರೆ 10 ಸಾವಿರ ತರ್ತೀನಿ: ಸೋನು ಶ್ರೀನಿವಾಸ್ ಗೌಡ

ಸಾರಾಂಶ

 ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡುವ ಸೋನು ಎಷ್ಟು ದುಡಿಯುತ್ತಾಳೆ? ಕಿರಿಕ್‌ ಕೀರ್ತಿ ಪ್ರಶ್ನೆಗೆ ಸಿಕ್ಕ ಉತ್ತರವಿದು.... 

ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ ಮಗು ದತ್ತು ತೆಗೆದುಕೊಂಡ ಪ್ರಕರಣದ ಮೇಲೆ ಪರಪ್ಪನ ಅಗ್ರಹಾರದಲ್ಲಿದ್ದರು. ಬೇಲ್ ಪಡೆದು ಹೊರ ಬಂದ ಮೇಲೆ ಸೋನು ಲೈಫ್‌ಸ್ಟೈಲ್ ತುಂಬಾನೇ ಬದಲಾಗಿದೆ. ಸೋನು ದುಡಿಮೆ ಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತದೆ, ಇದಕ್ಕೆ ನಟಿ ಕೊಟ್ಟ ಉತ್ತರ ಇಲ್ಲಿದೆ.

'ನನ್ನನ್ನು ಟ್ರೋಲ್ ಮಾಡುವವರನ್ನು ಬೈಯುವುದಿಲ್ಲ ನಾನೇ ಖುಷಿಯಿಂದ ನಗುತ್ತಾ ಕಾಮೆಂಟ್ ಮಾಡುತ್ತೀನಿ. ಕೆಲವೊಂದು ಕೆಟ್ಟ ಪದಗಳನ್ನು ಫ್ಯಾಮಿಲಿಗೆ ಬಳಸುತ್ತಾರೆ ಅದರಿಂದ ತುಂಬಾ ಬೇಸರವಾಗುತ್ತದೆ. ನನ್ನ ಬಗ್ಗೆ ಏನೇ ಮಾತನಾಡಿದರೂ ತುಂಬಾ ಪಾಸಿಟಿವ್ ಆಗಿ ಸ್ವೀಕರಿಸುತ್ತೀನಿ' ಎಂದು ಸೋನು ಶ್ರೀನಿವಾಸ್ ಗೌಡ ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ನನಗೆ ಯಾರೂ ಇಲ್ಲ; ನೆಗೆಟಿವ್ ಕಾಮೆಂಟ್‌ ನೋಡಿ ಸೋನು ಗೌಡ ತಾಯಿ ಆರೋಗ್ಯದಲ್ಲಿ ಏರುಪೇರು

'ನಾನು ತುಂಬಾ ಡೀಸೆಂಟ್ ಫ್ಯಾಮಿಲಿಯಿಂದ ಬೆಳೆದು ಬಂದ ಹುಡುಗಿ ಯಾವುದೇ ರೀತಿ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಎಕ್ಸ್‌ಪೋಷರ್ ಸಿಕ್ಕಿಲ್ಲ. ಯಾವಾಗ ಹೆಚ್ಚಿಗೆ ಸುದ್ದಿಯಲ್ಲಿ ಇರುವುದಕ್ಕೆ ಶುರು ಮಾಡಿದೆ ಆಗ ನಮ್ಮ ಸಂಬಂಧಿರ ಜೊತೆ ಚೆನ್ನಾಗಿಲ್ಲ. ಯಾಕೆ ವಿಡಿಯೋ ಮಾಡುತ್ತೀಯಾ? ಯಾಕೆ ಡ್ಯಾನ್ಸ್ ಮಾಡಬೇಕು? ನಿನಗೆ ಫ್ರೆಂಡ್ಸ್‌ ಯಾಕೆ ಬೇಕು ಅನ್ನೋ ಪ್ರಶ್ನೆಗಳನ್ನು ತಾಯಿ ಮನೆ ಕಡೆಯವರು ಕೇಳುತ್ತಾರೆ ಆದರೆ ತಂದೆ ಮನೆ ಕಡೆಯವರು ಸಂಪೂರ್ಣವಾಗಿ ಸಪೋರ್ಟ್ ಮಾಡುತ್ತಾರೆ. ಡಿಪ್ಲಮೋ ಕೊನೆ ವರ್ಷ ಮಾಡುವಾಗ ಮನೆಯಿಂದ ಪಾಕೆಟ್ ಮನೆ ತೆಗೆದುಕೊಳ್ಳುತ್ತಿದ್ದೆ ಆದರೆ ಈಗ ನಾನೇ ದುಡಿದು ಒಂದು ರೂಪಾಯಿನೂ ಕೇಳಿಲ್ಲ. ಜೈಲು ವಿಚಾರ ಆದಾಗ ನನ್ನ ಸ್ನೇಹಿತರು ಓಡಾಡಿ ಸಹಾಯ ಮಾಡಿದರು' ಎಂದು ಸೋನು ಗೌಡ ಹೇಳಿದ್ದಾರೆ.

ಒಂದು ಸುಳ್ಳು ಹೇಳಿರುವುದಕ್ಕೆ ಇಷ್ಟು ದೊಡ್ಡು ಶಿಕ್ಷೆನಾ?; ಸೋನು ಗೌಡ ಪರ ಧ್ವನಿ ಎತ್ತಿದ ರಾಕೇಶ್ ಅಡಿಗ

'ನನ್ನ ಅಕೌಂಟ್ ಓಪನ್ ಮಾಡಿ ನೋಡಿ...ಈಗಲೂ ಕೇವಲ 10 ಸಾವಿರ ರೂಪಾಯಿ ಹಿಡ್ಕೊಂಡು ಬಂದಿದ್ದೀನಿ. ನಿಜ ನನ್ನ ಬಳಿ ಹಣವಿಲ್ಲ. ಯುಟ್ಯೂಬ್‌ನಲ್ಲಿ ಯಾವ ವಿಡಿಯೋ ಹಾಕಿದರೆ ಎಷ್ಟು ಹಣ ಬರುತ್ತದೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ ಲಕ್ಷ ಲಕ್ಷ ಬರಬೇಕು ಅಂದ್ರೆ ನಾವು ಯಾಕೆ ಹೀಗೆ ಇರುತ್ತಿದ್ವಿ? ನಾನು ದುಡಿಯುವುದು 50 ಸಾವಿರ ಮಾತ್ರ. ಲಕ್ಷಕ್ಕೆ ಒಂದು ರೂಪಾಯಿ ಹಾಕಿದರೆನೇ ಲಕ್ಷ ಆಗುವುದು' ಎಂದಿದ್ದಾರೆ ಸೋನು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?