ಬರೀ ಮುತ್ತು ಕಣೋ.. ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ? ಗೌತಮ್​ ಕಾಲೆಳೀತಿರೋ ನೆಟ್ಟಿಗರು...

By Suchethana D  |  First Published May 20, 2024, 3:22 PM IST

ಹನಿಮೂನ್​ನಲ್ಲಿರೋ ಭೂಮಿಕಾ, ಪತಿ ಗೌತಮ್​ಗೆ ಕೀಟಲೆ ಮಾಡಿ ಸುಳ್ಳು ಹೇಳಿದ್ದಾಳೆ. ಇದನ್ನು ಕೇಳಿ ಗೌತಮ್​ ಶಾಕ್​ ಆಗಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 
 


ಪ್ರೀತಿಯ ವಿಷಯ ನಿವೇದನೆ ಸಮಯದಲ್ಲಿ ಹೆಣ್ಣುಮಕ್ಕಳು ನಾಚಿಕೊಳ್ಳುವುದು ಮಾಮೂಲಾದರೂ ಗಂಡು ಮಕ್ಕಳಿಗಿಂತ ಸ್ವಲ್ಪ ಧೈರ್ಯ ಇವರಿಗೇ ಹೆಚ್ಚು ಎಂದು ಹೇಳುವುದು ಉಂಟು. ಪ್ರೀತಿ, ಪ್ರೇಮ, ಪ್ರಯಣ ಈ ವಿಷಯಗಳಲ್ಲಿಯೂ ಹೆಣ್ಣುಮಕ್ಕಳೇ ಒಂದು ಕೈ ಮೇಲೆ ಎನ್ನುವ ಅಭಿಮತವೂ ಸಾಕಷ್ಟು ಇದೆ. ಪ್ರೇಮ ಪಕ್ಷಿಗಳು ಪಾರ್ಕ್​ಗಳಲ್ಲಿ, ರಸ್ತೆ ಬದಿಗಳಲ್ಲಿ ಮೈಮರೆತ ಸಂದರ್ಭಗಳನ್ನು ಉಲ್ಲೇಖಿಸುವ ಕೆಲವರು ಇಂಥ ದೃಶ್ಯಗಳನ್ನು ನೋಡಿದಾಗ ಯಾಕೋ ಹೆಣ್ಣುಮಕ್ಕಳೇ ಸ್ವಲ್ಪ ಓವರ್​ ಆಗಿ ಆಡುವಂತೆ ಕಾಣಿಸುತ್ತದೆ ಎಂಬ ಆರೋಪವನ್ನೂ ಮಾಡುವುದು ಉಂಟು. ಇನ್ನು ಮದುವೆಯಾದ ಮಹಿಳೆಯರಿಗಂತೂ ಪ್ರೀತಿಯ ವಿಷಯದಲ್ಲಿ ಗಂಡನನ್ನು ಗೋಳು ಹೊಯ್ದುಕೊಳ್ಳುವುದು ಎಂದರೆ ತುಂಬಾ ಇಷ್ಟ ಎನ್ನಲಾಗುತ್ತದೆ. ಇದೀಗ ಅಮೃತಧಾರೆಯ ಭೂಮಿಕಾ  ಮತ್ತು ಗೌತಮ್​ ವಿಚಾರದಲ್ಲಿಯೂ ಹಾಗೆಯೇ ಆಗಿದೆ!   

ಸದ್ಯ ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಮೂಡ್​ನಲ್ಲಿದ್ದಾರೆ. ಇದುವರೆಗೂ ಮನಸ್ಸು ಬಿಚ್ಚಿ ಐ ಲವ್​ ಯೂ ಎಂದು ಹೇಳದ ಈ ಜೋಡಿ ಹನಿಮೂನ್​ನಲ್ಲಿ ಏನು ಮಾಡಬಹುದು ಎನ್ನೋ ಕುತೂಹಲ ವೀಕ್ಷಕರದ್ದಾಗಿತ್ತು.   ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ನಾಚಿಕೊಳ್ಳುತ್ತಲೇ ಜೋಡಿ ಹೋಗಿದೆ.

Tap to resize

Latest Videos

undefined

ಭಾಗ್ಯ ಆದ್ಲು ಭಗಾಯಾ: ಸ್ಟಾರ್​ ಹೋಟೆಲ್​ನಲ್ಲಿ ಫುಲ್​ ಡಿಮಾಂಡ್​! ಇದೇನಪ್ಪಾ ಹೊಸ ಅಗ್ನಿ ಪರೀಕ್ಷೆ?
 

ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್​ ದಂಪತಿ ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್​ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್​ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್​ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್​ ಕುಡಿದಿದ್ದಾನೆ.

ಮಾಮೂಲಿನಂತೆ ಇಬ್ಬರೂ ಬೇರೆ ಬೇರೆ ಮಲಗಲು ಹೋಗಿದ್ದಾರೆ. ಭೂಮಿಕಾ ತಾನು ಕೆಳಗೆ ಮಲಗುವುದಾಗಿ ಹೇಳಿದ್ದಾಳೆ. ಅಷ್ಟರಲ್ಲಿ ಮದ್ಯದ ಅಮಲಿನಲ್ಲಿ ಪ್ರೀತಿಯ ಅಮಲೂ ಸೇರಿರೋ ಗೌತಮ್​, ಭೂಮಿಕಾಗೆ ಐ ಅಷ್ಟೇ ಹೇಳಿದ್ದಾನೆ. ಆದರೆ ಏನೂ ಹೇಳದೇ ಗೌತಮ್​ ಮಲಗಿದ್ದಾನೆ. ಬೆಳಿಗ್ಗೆ ಎದ್ದು ನೋಡಿದ್ರೆ ಗೌತಮ್​ ಭೂಮಿಕಾ ಹಾಸಿಗೆ ಮೇಲೆ ಮಲಗಿದ್ದ. ಇದನ್ನು ನೋಡಿ ಅವನಿಗೆ ಶಾಕ್​ ಆಯಿತು. ಅದಕ್ಕೆ ನಾನು ಹೇಗೆ ಇಲ್ಲಿಗೆ ಬಂದೆ ಎಂದು ಕೇಳಿದಾಗ, ತರ್ಲೆ ಭೂಮಿಕಾ ನೀವು ಮುತ್ತು ಬೇಕು ಎಂದು ಕೇಳಿದ್ರಿ, ಅದಕ್ಕೇ ಹತ್ತಿರ ಬಂದೆ ಎಂದಾಗ ಖುಷಿಯಾಗುವ ಬದಲು ಗೌತಮ್​ ಏನೋ  ಆಗಬಾರದ್ದು ಆದವರಂತೆ ಬೆಚ್ಚಿ ಬಿದ್ದಿದ್ದಾನೆ! ಇದರ ಪ್ರೊಮೋ ಜೀ ಕನ್ನಡ ವಾಹಿನಿ ರಿಲೀಸ್​ ಮಾಡಿದೆ. ಇದಕ್ಕೆ ಹಲವರು ಬರೀ ಮುತ್ತು ಕಣೋ ಅದ್ಯಾಕೆ ಅಷ್ಟು ಬೆವರ್ತಿದ್ದಿಯಾ ಎಂದು ಪ್ರಶ್ನಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಮಲ್ಲಿಯನ್ನು ಮುಗಿಸುವ ಪ್ಲ್ಯಾನ್​ ಮಾಡಿದ್ದ ಶಕುಂತಲಾ ದೇವಿಯ ಪ್ಲ್ಯಾನ್​ ಅನ್ನು ಹನಿಮೂನ್​ನಲ್ಲಿ ಇದ್ದುಕೊಂಡೇ ಭೂಮಿಕಾ ಠುಸ್​ ಮಾಡಿದ್ದಾಳೆ! 

ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ... ಅಪಶಕುನ ಅಲ್ಲ... ಅಶ್ವಿನಿ ಪರ ಫ್ಯಾನ್ಸ್​ ಬ್ಯಾಟಿಂಗ್​...

 

click me!