ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!

By Shriram Bhat  |  First Published May 20, 2024, 12:29 PM IST

ನಟ ಸಿದ್ದಾರ್ಥ್ ಸೀರಿಯಲ್‌ಗೆ ಮಾತ್ರ ಸೀಮಿತವಾಗಿರದೇ ಸ್ಯಾಂಡಲ್‌ವುಡ್ ಕಡೆ ಕೂಡ ತಮ್ಮ ದೃಷ್ಟಿ ಹಾಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಕನ್ನಡ ಸಿನಿರಂಗದಲ್ಲಿ ಮಿಂಚುವ ಕ್ಷಣ ಸನ್ನಿಹಿತವಾಗಿದೆ. 


ಇತ್ತೀಚಿನ ವರ್ಷಗಳಲ್ಲಿ ತೆಲುಗು ಸೀರಿಯಲ್‌ಗಳಲ್ಲಿ ಕನ್ನಡಿಗರ ಕಾರುಬಾರು ಸಖತ್ ಜೋರು. ಕರ್ನಾಟಕದ ಬಹಳಷ್ಟು ನಟ-ನಟಿಯರು ತೆಲುಗಿನ ಸಾಕಷ್ಟು ಸೀರಿಯಲ್‌ಗಳಲ್ಲಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಇತ್ತ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತ, ಅತ್ತ ತೆಲುಗು ಸೀರಿಯಲ್‌ಗಳಲ್ಲಿಯೂ ಅವಕಾಶ ಪಡೆಯುತ್ತ ಏಕಕಾಲಕ್ಕೆ ಬಹಳಷ್ಟು ಸೀರಿಯಲ್ ಪ್ರಿಯರ ಮನೆಮನಗಳಿಗೆ ರೀಚ್ ಆಗುತ್ತಿದ್ದಾರೆ. ಅದೇ ರೀತಿಯಲ್ಲಿ, ಕನ್ನಡ ಹಾಗೂ ತೆಲುಗು ನೆಲಗಳ ಕಿರುತೆರೆ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿರುವ ಅಚ್ಚಗನ್ನಡದ ಹೊಚ್ಚಹೊಸ ಪ್ರತಿಭೆ ನಟ ಸಿದ್ಧಾರ್ಥ್ ಸ್ವಾಮಿ. 

ಮೂಲತಃ ಬೆಂಗಳೂರಿನವರಾದ ನಟ ಸಿದ್ಧಾರ್ಥ್‌, ಕನ್ನಡದಲ್ಲಿ ಖ್ಯಾತಿ ಪಡೆದಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ಮೊದಲು ಬಣ್ಣ ಹಚ್ಚಿದ್ದಾರೆ. ಬಳಿಕ, ತೆಲುಗಿನ 'ಪಾಪೇ ಮಾ ಜೀವನಜ್ಯೋತಿ (Paape Maa Jeevanajyothi)' ಸೀರಿಯಲ್‌ನಲ್ಲಿ 'ಸೂರಜ್' ಹೆಸರಿನ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಕನ್ನಡದ 'ಮೈನಾ' ಸೀರಿಯಲ್ ಹೀರೋ ರೋಲ್‌ನಲ್ಲಿ ಮಿಂಚುತ್ತಿರುವ ನಟ ಸಿದ್ದಾರ್ಥ್‌ (Sidharth R Swamy), ತೆಲುಗಿನ ಮತ್ತೊಂದು ಸೀರಿಯಲ್‌ನಲ್ಲಿ ಸದ್ಯವೇ ಕಿರುತೆರೆ ಮೇಲೆ ದರ್ಶನ ನೀಡಲಿದ್ದಾರೆ. 

Tap to resize

Latest Videos

undefined

ಉಪೇಂದ್ರರ 'ಎ' ಸಿನಿಮಾ ರೀ-ರಿಲೀಸ್, ಧ್ರುವ ಸರ್ಜಾ ಹೇಳಿದ್ದೇನು? ಉಪ್ಪಿ ಕೌಂಟರ್‌?

ನಟ ಸಿದ್ದಾರ್ಥ್ ಸೀರಿಯಲ್‌ಗೆ ಮಾತ್ರ ಸೀಮಿತವಾಗಿರದೇ ಸ್ಯಾಂಡಲ್‌ವುಡ್ ಕಡೆ ಕೂಡ ತಮ್ಮ ದೃಷ್ಟಿ ಹಾಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಕನ್ನಡ ಸಿನಿರಂಗದಲ್ಲಿ ಮಿಂಚುವ ಕ್ಷಣ ಸನ್ನಿಹಿತವಾಗಿದೆ. 'ಜನಮೆಚ್ಚುಗೆ ಗಳಿಸುವ ಯಾವುದೇ ಪಾತ್ರವಾದರೂ ಸೈ, ಮಾಡಲು ನಾನ್ ರೆಡಿ' ಎನ್ನುವ ಸಿದ್ಧಾರ್ಥ್, ಹೀರೋಗೆ ಬೇಕಾಗಿರುವ ಫೇಸ್, ಹೈಟ್‌-ವೇಟ್‌, ಮೈಕಟ್ಟು ಹಾಗೂ ಪ್ರತಿಭೆ ಎಲ್ಲವನ್ನೂ ಹೊಂದಿದ್ದಾರೆ ಎಂಬುದು ಅವರನ್ನು ನೋಡಿದ ತಕ್ಷಣ ಯಾರಿಗಾದರೂ ಅರ್ಥವಾಗುವ ಸಂಗತಿ. 

ಭಾರೀ ಮೊತ್ತಕ್ಕೆ ಸೇಲ್ ಆಯ್ತು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಡಿಜಿಟಲ್ ರೈಟ್ಸ್!

ಸಿನಿಮಾ-ಸೀರಿಯಲ್ ಸ್ಟಾರ್ ಕಲಾವಿದರಾಗಿ ಮಿಂಚಲು ಬೇಕಾದ ಡಾನ್ಸ್, ಫೈಟ್ಸ್ ಮುಂತಾದವುಗಳ ಟ್ರೇನಿಂಗ್ ಕೂಡ ತೆಗೆದುಕೊಂಡು 'ಐ ಆಮ್ ರೆಡಿ' ಎನ್ನುತ್ತಿರುವ ಸಿದ್ಧಾರ್ಥ್‌ ಸ್ವಾಮಿ, ಸೂಕ್ತ ಅವಕಾಶಕ್ಕಾಗಿ ಕಾಯುತ್ತಿರುವ ಅಚ್ಚ ಕನ್ನಡದ ಪ್ರತಿಭೆ. ಸದ್ಯ ತೆಲುಗು ಸೀರಿಯಲ್‌ ಪ್ರೇಕ್ಷಕರ ಅಚ್ಚುಮೆಚ್ಚಿನ 'ಹ್ಯಾಂಡ್‌ಸಮ್‌ ಹೀರೋ' ಆಗಿರುವ ಸಿದ್ದಾರ್ಥ್, ಎಲ್ಲಕಡೆ ಸಲ್ಲುವ ಕಲಾವಿದರಾಗುವ ಗುರಿ ಹೊಂದಿದ್ದಾರಂತೆ. ಈ ಬಗ್ಗೆ ನಟ ಸಿದ್ಧಾರ್ಥ್‌ ತಮ್ಮದೇ ಆದ ರೀತಿಯಲ್ಲಿ ಪ್ರಬುದ್ಧ ಅನಿಸಿಕೆ ಹೊಂದಿದ್ದಾರೆ. 

ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?

ನಟ ಸಿದ್ಧಾರ್ಥ್ 'ನಾನೊಬ್ಬ ಕಲಾವಿದನಾಗಿ ಅವಕಾಶ ಸಿಕ್ಕಲ್ಲಿ ಕೆಲಸ ಮಾಡಲೇಬೇಕು. ಆದರೆ ನನ್ನ ಮಾತೃಭಾಷೆ ಕನ್ನಡವನ್ನು ನಾನು ಯಾವತ್ತೂ ಕಡೆಗಣಿಸಲಾರೆ. ನನ್ನ ಮೊದಲ ಎಂಟ್ರಿ ಸಹ ಕನ್ನಡದ ರಾಮಾಚಾರಿ ಸೀರಿಯಲ್ ಮೂಲಕವೇ ಆಗಿದೆ. ಸೂಕ್ತ ಅವಕಾಶ ಸಿಕ್ಕಾಗ ಭಾಷೆಯ ಬೇಲಿ, ರಾಜ್ಯಗಳ ಗಡಿ ನೋಡುವ ಬದಲು ಗಡಿಯಿಲ್ಲದ ಕಲೆಯನ್ನು ನಂಬಿ ಹೋಗಲೇಬೇಕಿದೆ. ನನ್ನ ಜನರೇಶನ್ ಅದೃಷ್ಟವಿದು ಎಂಬಂತೆ, ಈಗ ಮನರಂಜನಾ ಕ್ಷೇತ್ರವು ರಾಜ್ಯ ಹಾಗೂ ಭಾಷೆಗಳ ಮೇರೆ ಮೀರಿ ಬೆಳೆದಿದೆ. 

ಸಿನಿಮಾ-ಸೀರಿಯಲ್ ಜಗತ್ತಿನಲ್ಲಿ ಈ ಮೊದಲಿದ್ದ ಸೌತ್ ಹಾಗೂ ನಾರ್ತ್ ಎಂಬ ಗಡಿರೇಖೆ ಇತ್ತೀಚೆಗೆ ತೀರಾ ತೆಳುವಾಗಿದೆ. ಆಲ್‌ಮೋಸ್ಟ್ ಆಲ್ ಇಲ್ಲವೇ ಇಲ್ಲ ಎನ್ನಬಹುದು. ಬಹಳಷ್ಟು ಕಲಾವಿದರು ಎಲ್ಲಾ ಕಡೆ ಸಲ್ಲುವವರಾಗಿ 'ಭಾರತೀಯ ಕಲಾವಿದರು' ಎನಿಸಿಕೊಂಡಿದ್ದಾರೆ. ಈಗಿರುವ 'Indian Actor'ಎಂಬ ಪದಕ್ಕೆ ಯಾವತ್ತೂ ಹೀಗೇ ಬೆಲೆಯಿರಲಿ ಎಂಬ ಆಶಯ ನನ್ನದು. ಈಗಷ್ಟೇ ನನ್ನಿಷ್ಟದ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ, ಇನ್ನೂ ಸಾಧಿಸುವುದು ಸಾಕಷ್ಟಿದೆ' ಎಂದಿದ್ದಾರೆ ಯಂಗ್ & ಎನರ್ಜಿಟಿಕ್ ಹೀರೋ ಸಿದ್ದಾರ್ಥ್‌ ಸ್ವಾಮಿ!

click me!