Zee Kannada Gattimela Serial: ಜೀ ಕನ್ನಡದ ಬಹು ಜನಪ್ರಿಯ ಸೀರಿಯಲ್ ಗಟ್ಟಿಮೇಳ. ಟಿಆರ್‌ಪಿಯಲ್ಲೂ ಸದಾ ಮುಂದಿರುವ ಈ ಸೀರಿಯಲ್‌ನಲ್ಲಿ ಈಗ ಕೋರ್ಟ್ ಸೀನ್ ಶುರುವಾಗಿದೆ. ಮಜಾ ಅಂದರೆ ಹೀರೋ ವೇದಾಂತ್ ಲಾಯರ್ ಆಗಿದ್ದಾನೆ. ಲಾಯರ್‌ಗಿರಿ ಹಿನ್ನೆಲೆಯೇ ಇಲ್ಲದ ಈತ ಹೇಗೆ ಲಾಯರ್ ಆದ?
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ ( Gattimela Serial) ನಲ್ಲಿ ಕೋರ್ಟ್ ಸೀನ್ (Court scene) ಶುರುವಾಗಿದೆ. ಈ ಸೀರಿಯಲ್ ಆರಂಭದ ದಿನಗಳಿಂದಲೂ ಕುತೂಹಲ ಹೆಚ್ಚಿಸುತ್ತಲೇ ಇತ್ತು. ಪರಸ್ಪರ ವಿರುದ್ಧ ಧ್ರುವಗಳಂತಿದ್ದವರು ವೇದಾಂತ್ (Vedanth)ಮತ್ತು ಅಮೂಲ್ಯ (Amulya). ಒಬ್ಬರಿಗೊಬ್ಬರು ಜಗಳವಾಡ್ತನೇ ಆಕಸ್ಮಿಕವಾಗಿ ಈ ಇಬ್ಬರ ಮಧ್ಯೆ ಪ್ರೀತಿ ಹುಟ್ಟುತ್ತೆ. ಬೆಳೆಯುತ್ತೆ. ಮದುವೆ ಆಗುತ್ತೋ ಇಲ್ವೋ ಅನ್ನೋ ಗೊಂದಲದ ನಡುವೆ ಅದ್ದೂರಿ ಮದುವೆಯೂ ಆಗಿ ಬಿಡುತ್ತೆ. ಈ ಸೀರಿಯಲ್‌ನ ಹೆಸರೇ ಗಟ್ಟಿಮೇಳ. ಈ ಹಿನ್ನೆಲೆಯಲ್ಲೋ ಏನೋ ವೇದಾಂತ್ ಮತ್ತು ಅಮೂಲ್ಯ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ.
ಇದೀಗ ಗಟ್ಟಿಮೇಳದ ಟ್ರಾಕ್ ಸ್ವಲ್ಪ ಬೇರೆ ಟರ್ನ್ ತಗೊಳ್ತಿದೆ.
ಹೀರೋ ವೇದಾಂತ್‌ನ ತಮ್ಮ ಧ್ರುವನ ಕೊಲೆ (Murder) ಆಗಿದೆ. ಈ ಕೇಸ್‌ನಲ್ಲಿ ವೇದಾಂತ್‌ನ ಇನ್ನೊಬ್ಬ ತಮ್ಮ ವಿಕ್ರಾಂತ್ ವಸಿಷ್ಠನನ್ನು ಅರೆಸ್ಟ್ (Arrest)ಮಾಡಲಾಗಿದೆ. ಈಗಾಗಲೇ ತಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿರುವ ವೇದಾಂತ್ ಗೆ ಇದೀಗ ಮತ್ತೊಬ್ಬ ತಮ್ಮ ವಿಕ್ರಾಂತ್ ಅರೆಸ್ಟ್ ಆಘಾತ ತಂದಿದೆ. ಸದ್ಯಕ್ಕೆ ವಿಕ್ರಾಂತ್ ನನ್ನು ಈ ಕೊಲೆ ಕೇಸ್‌ನಿಂದ ಬಚಾವ್ ಮಾಡಿ ಬೇಲ್ (Bail)ಕೊಡಿಸಬೇಕಾದ ಹೊಣೆಗಾರಿಕೆ ವೇದಾಂತ್ ಮೇಲಿದೆ. ಮಜಾ ಅಂದರೆ ಇದರಲ್ಲಿ ಯಾವ ಹಿನ್ನೆಲೆಯೂ ಇಲ್ಲದ ವೇದಾಂತ್ ವಸಿಷ್ಠ ಲಾಯರ್ (Lawyer) ಆಗಿ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ. ಹಿನ್ನೆಲೆಯಲ್ಲಿ ಕೆಜಿಎಫ್ 2 (KGF 2)ನ ಸುಲ್ತಾನ ಸಾಂಗ್ ಇದೆ. ರಾಕಿಭಾಯ್ ಹಾಡಿನ ಬಿಲ್ಡಪ್‌ನಲ್ಲಿ ಲಾಯರ್ ಗೆಟಪ್‌ನಲ್ಲಿ ವೇದಾಂತ್ ಎಲ್ಲರನ್ನೂ ಅಚ್ಚರಿಗೆ ಬೀಳಿಸುತ್ತಾನೆ. ಈ ಸೀರಿಯಲ್ ನೋಡುಗರೂ ಉಗುರು ಕಚ್ಚುವಷ್ಟು ಟೆನ್ಶನ್ ಕ್ರಿಯೇಟ್ ಮಾಡಿದ್ದಾನೆ.
Hitler Kalyana: ಮಿ. ಪರ್ಫೆಕ್ಟ್ ಎಜೆ - ಮಹಾ ಎಡವಟ್ಟು ಲೀಲಾನ ಆ ದೇವ್ರೇ ಒಂದು ಮಾಡಬೇಕು!
ವೇದಾಂತ್ ಲಾಯರ್ ಕೋಟು ತೊಡೋದಕ್ಕೂ ಒಂದು ಕಾರಣ ಇದೆ. ಒಂದು ಬಾರಿ ವಿಕ್ಕಿಗೆ ಬೇಲ್ ಕೊಡಿಸುವ ಸಲುವಾಗಿ ಅಮೂಲ್ಯಳನ್ನು ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ವಕೀಲರ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ಸಿಕ್ಕಿ ಹಾಕಿಕೊಂಡು, ವಿಕ್ಕಿಗೆ ಬೇಲ್ ಕೊಡಿಸಲು ಆಗಲಿಲ್ಲ. ಇನ್ನೊಂದೆಡೆ ವಿಕ್ಕಿ ಪರ ವಕೀಲರು ಕೂಡ ಕೈಕೊಟ್ಟಿದ್ದಾರೆ. ವಿಕ್ಕಿಯನ್ನು ಸೆರೆಯಿಂದ ಬಿಡಿಸಲು ಅನುಭವಿ ಲಾಯರ್ ಗಳನ್ನು ವೇದಾಂತ್ ಸಂಪರ್ಕಿಸಿದ್ದಾನೆ. ಆದರೆ ಯಾರೂ ವಿಕ್ಕಿ ಪರ ವಾದ ಮಂಡಿಸಲು ಮುಂದೆ ಬಂದಿಲ್ಲ. ಈ ಸಂದರ್ಭದಲ್ಲಿ ವೇದಾಂತ್ ಕೈ ಹಿಡಿದಿದ್ದೇ ಆದಿತ್ಯ. ಕೈಯಲ್ಲೇ ಬೆಣ್ಣೆ ಹಿಡಿದುಕೊಂಡು. ತುಪ್ಪಕ್ಕಾಗಿ ಊರೆಲ್ಲಾ ಹುಡುಕುತ್ತಿದ್ದೀಯಾ, ನೀನೇ ಯಾಕೆ ತಮ್ಮನ ಪರವಾಗಿ ವಾದ ಮಾಡಬಾರದು ಎಂದು ಆತ ವೇದಾಂತ್‌ನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾನೆ. ಅನುಭವಕ್ಕಿಂತ ಬುದ್ದಿವಂತಿಕೆ ಇಲ್ಲಿ ವರ್ಕ್ ಆಗುತ್ತೆ ಅಂತ ಆದಿ ಧೈರ್ಯ ಹೇಳಿದ್ದಾನೆ. ಮೊದಮೊದಲು ಇದು ಸಾಧ್ಯವಿಲ್ಲ ಎಂದಿದ್ದ ವೇದಾಂತ್ ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾನೆ. ಎಲ್ಲಾ ಸಾಕ್ಷಿಗಳನ್ನೂ ಇಬ್ಬರೂ ಸೇರಿ ಕಲೆ ಹಾಕಿದ್ದಾರೆ. ಅದನ್ನು ವಾದದ ಮೂಲಕ ವೇದಾಂತ್ ನ್ಯಾಯಾಲಯದ ಮುಂದೆ ಮಂಡಿಸುತ್ತಿದ್ದಾನೆ.
ಮೊದಲು ಫೋನ್ ನೆಟ್‌ವರ್ಕ್ ಬಗ್ಗೆ ವಾದ ಶುರುವಾಗುತ್ತೆ. ಆಕ್ಸಿಡೆಂಟ್ ಆದ ಜಾಗಕ್ಕೂ ವಿಕ್ರಾಂತ್ ಫೋನ್ ಇದ್ದ ನೆಟ್ ವರ್ಕ್ (Network) ಸ್ಥಳ ಎರಡೂ ಲೊಕೇಷನ್ (Location)ಬೇರೆ ಬೇರೆ ಇದೆ. ಅಲ್ಲಿಗೆ ಈ ಕೊಲೆ ವಿಕ್ರಾಂತ್ ಮಾಡಿದ್ದಲ್ಲ. ಇದು ಯಾರೋ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು, ವಿಕ್ರಾಂತ್ ತಲೆ ಮೇಲೆ ಈ ಅಪವಾದ ಬರಲಿ ಎಂಬ ಕಾರಣಕ್ಕೆ ಆತನ ಫೋನ್ ಗೆ ವಾಯ್ಸ್ ಮೆಸೇಜ್ ಕಳಿಸಲಾಗಿದೆ. ವಿಕ್ರಾಂತ್ ಜೊತೆ ಅಮೂಲ್ಯ ಇದ್ದದ್ದು ಕೂಡ ಸತ್ಯ. ವಿಕ್ರಾಂತ್ ಮೇಲೆ ಕೊಲೆ ಆರೋಪ ಬಂದಿದ್ದು, ತಮ್ಮ ಧೃವನ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದ ವಿಕ್ರಾಂತ್ ಈ ಕೊಲೆ ಮಾಡಿಸಲು ಸಾಧ್ಯವೇ ಇಲ್ಲ ಎಂಬ ವಾದ ಮಂಡಿಸಲಾಗಿದೆ.
ಕನ್ನಡತಿ : Stop This Nonsense ಅಂತಿದ್ದಾರೆ ಅಭಿಮಾನಿಗಳು
ಸುಪಾರಿ ಪಡೆದು ಧೃವನಿಗೆ ಆಕ್ಸಿಡೆಂಟ್ ಮಾಡಿದ ಲಾರಿ ಡ್ರೈವರ್ ಅನ್ನು ಕೂಡ ಕಟಕಟೆ ಮೇಲೆ ಕರೆಸಿ ಈಗ ವೇದಾಂತ್ ವಿಚಾರಣೆ ನಡೆಸುತ್ತಿದ್ದಾನೆ. ಲಾರಿ ಚಾಲಕ ವಾಯ್ಸ್ ಮೆಸೇಜ್ ನಲ್ಲಿ ವಿಕ್ಕಿ ನೀವು ಹೇಳಿದಂತೆ ಧೃವನನ್ನು ಆಕ್ಸಿಡೆಂಟ್ ನಲ್ಲಿ ಕೊಲೆ ಮಾಡಲಾಗಿದೆ. ಇನ್ನು ನನ್ನ ಹಣವನ್ನು ಕೊಟ್ಟುಬಿಡಿ ಎಂಬ ಅರ್ಥದಲ್ಲಿ ಲಾರಿ ಡ್ರೈವರ್ ವಾಯ್ಸ್ ಮೆಸೇಜ್ ಅನ್ನು ವಿಕ್ಕಿ ಮೊಬೈಲ್ ನಂಬರ್ ಗೆ ವಾಟ್ಸಪ್ ಮಾಡಲಾಗಿದೆ. ವಿಕ್ಕಿಯನ್ನು ಮನೆಯವರು ಹಾಗೂ ತುಂಬಾ ಹತ್ತಿರದವರು ಬಿಟ್ಟು ಬೇರೆ ಯಾರು ವಿಕ್ಕಿ ಎಂದು ಕರೆಯುವುದಿಲ್ಲ. ವಿಕ್ರಾಂತ್ ವಸಿಷ್ಠ ಎಂದು ಗುರುತಿಸುತ್ತಾರೆ. ಆದರೆ, ಲಾರಿ ಚಾಲಕ ವಿಕ್ಕಿ ಎಂದು ಕರೆದಿರುವ ಪಾಯಿಂಟ್ ಅನ್ನು ವೇದಾಂತ್ ತೆಗೆದುಕೊಂಡಿದ್ದಾನೆ. ಇದೇ ಪ್ರಶ್ನೆಯನ್ನು ಲಾರಿ ಚಾಲಕನನ್ನು ಕೇಳಿದ್ದಾನೆ.
ಆದರೆ ವೇದಾಂತ್ ಅಂದುಕೊಂಡಷ್ಟು ಸುಲಭವಲ್ಲ ಈ ಕೇಸ್ ಜಯಿಸೋದು. ಎದುರಾಳಿ ಲಾಯರ್ ಒಂದು ಹಂತದಲ್ಲಿ ಈ ಕೊಲೆಯಲ್ಲಿ ವೇದಾಂತ್ ಸಹ ಭಾಗಿಯಾಗಿದ್ದಾನೆ ಎಂದು ಹೇಳಿ ವೇದಾಂತ್ ಒಂದು ಕ್ಷಣ ತಬ್ಬಿಬ್ಬಾಗಿ ಏನು ಹೇಳಬೇಕು ಅನ್ನೋದನ್ನು ಮರೆಯೋ ಹಾಗೆ ಮಾಡಿದ್ದಾರೆ. ವೇದಾಂತ್ ಇದನ್ನು ಅಬ್ಜೆಕ್ಟ್ ಮಾಡಿದರೂ ಜಡ್ಜ್ ಅಬ್ಜೆಕ್ಷನ್ ಓವರ್‌ರೂಲ್ಡ್ ಅಂದಾಗ ವೇದಾಂತ್ ಕೊಂಚ ಕಂಗಾಲಾಗಿದ್ದಾನೆ.
ವೇದಾಂತ್ ಚಕ್ರವ್ಯೂಹವನ್ನು ಹೇಗೆ ಬೇಧಿಸಿ ಹೇಗೆ ತಮ್ಮ ವಿಕ್ರಮ್‌ಗೆ ಬೇಲ್ ಕೊಡಿಸುತ್ತಾನೆ ಅನ್ನೋ ವಿಚಾರದಲ್ಲಿ ಕುತೂಹಲ ಹೆಚ್ಚಾಗಿದೆ.
ಕನ್ನಡತಿಯಲ್ಲಿ ದೇವತೆ, ರಾಮಾಚಾರಿಯಲ್ಲಿ ರಾಕ್ಷಸಿ.. ಅಬ್ಬಬ್ಬಾ, ಭಾವನಾ ಟ್ಯಾಲೆಂಟೇ!
ಈ ಸೀರಿಯಲ್‌ನಲ್ಲಿ ವೇದಾಂತ್ ಪಾತ್ರದಲ್ಲಿ ರಕ್ಷ್ (Raksh), ಅಮೂಲ್ಯ ಪಾತ್ರದಲ್ಲಿ ನಿಶಾ (Nisha), ಅಭಿಷೇಕ್ ದಾಸ್ ವಿಕ್ರಮ್ ವಸಿಷ್ಠ ಪಾತ್ರದಲ್ಲಿ ನಟಿಸಿದ್ದಾರೆ.