
ನಾವಿದ್ದಾಗ ಶಾಲೆಯಲ್ಲಿ 30 ಹುಡುಗರು ಮೂರೇ ಮೂರು ಹುಡುಗಿಯರು ಇದ್ದರು. ಈ 30 ಗಂಡುಮಕ್ಕಳ ಕಣ್ಣು ಹುಡುಗಿಯರ ಮೇಲೆ. ಯಾರಿಗೂ ಮೇಸ್ಟ್ರ ಪಾಠದ ಮೇಲೆ ಗಮನನೇ ಇರ್ತಾ ಇರಲಿಲ್ಲ. ಇದರಿಂದ ಬೇಸತ್ತ ಮೇಸ್ಟ್ರು ಏನು ಮಾಡುವುದು ಎಂದು ಯೋಚನೆ ಮಾಡಿದ ಬಳಿಕ ಒಂದು ಹೆಣ್ಣು ಇಲಿಯನ್ನು ಬೋನಿನಲ್ಲಿ ಇಟ್ಟರು. ಗಂಡು ಇಲಿಯನ್ನು ಹೊರಕ್ಕೆ ಬಿಟ್ಟರು. ಆ ಬೋನಿನ ಸಮೀಪ ಬೇರೆ ಬೇರೆ ರೀತಿಯ ಪದಾರ್ಥಗಳನ್ನು ಇಟ್ಟರು. ಆ ಗಂಡು ಇಲಿ ಆ ಪದಾರ್ಥಗಳನ್ನು ತಿನ್ನುವ ಕೆಲಸವೊಂದೇ ಮಾಡುತ್ತಿತ್ತು. ಅಪ್ಪಿತಪ್ಪಿಯೂ ಆ ಹೆಣ್ಣು ಇಲಿಯ ಕಡೆ ಅದು ಗಮನ ಕೊಡಲಿಲ್ಲ.
ಇದನ್ನೇ ಉದಾಹರಣೆಯಾಗಿಟ್ಟುಕೊಂಡ ಮೇಷ್ಟ್ರು... ನೋಡಿದ್ರೆ ಆ ಇಲಿಯನ್ನು ನೋಡಿ ಕಲೀರಿ. ಅದಕ್ಕೆ ಆಹಾರ ಅಷ್ಟೇ ಮುಖ್ಯ. ಅದರ ಗುರಿ ಹೆಣ್ಣಲ್ಲ, ಬದಲಿಗೆ ಆಹಾರ. ಮನುಷ್ಯರೂ ಹಾಗೆನೇ, ಗುರಿಯ ಮೇಲೆ ಗಮನ ಇರಬೇಕು, ಹೆಣ್ಣುಮಕ್ಕಳ ಮೇಲೆ ಗಮನ ಕೊಡ್ತೀರಲ್ರೋ ಎಂದು ನಮ್ಮನ್ನೆಲ್ಲಾ ತರಾಟೆಗೆ ತೆಗೆದುಕೊಂಡರು.... ಬಳಿಕ ಏನಾಯ್ತು ಅಂದ್ರೆ...
ತಮ್ಮದೇ ಫಸ್ಟ್ ನೈಟ್ ವಿಡಿಯೋ ನೋಡಿ ನಾಚಿ ನೀರಾದ ಕಿಚ್ಚ ಸುದೀಪ್! ತುಂಟತನಕ್ಕೆ ಫ್ಯಾನ್ಸ್ ಫಿದಾ
ಹೀಗೆ ಸಾಗಿತ್ತು ಹಾಸ್ಯ ಕಲಾವಿದ ಪ್ರಾಣೇಶ್ ಅವರ ಹಾಸ್ಯದ ಪ್ರಸಂಗ. ಪ್ರಾಣೇಶ್ ಅವರು ಹಾಸ್ಯ ಮಾಡುವ ಪರಿಯೇ ಸೊಗಸು. ಪ್ರತಿಯೊಂದು ಹಾಸ್ಯವನ್ನೂ ತಮ್ಮದೇ ಜೀವನದಲ್ಲಿ ಆಗಿರುವ ಘಟನೆಯಂತೆ ವಿವರಿಸುವಲ್ಲಿ ಅವರು ನಿಸ್ಸೀಮರು. ಇದೀಗ ಶಾಲೆಯಲ್ಲಿ ಗಂಡುಮಕ್ಕಳು ಹೆಣ್ಣುಮಕ್ಕಳ ಮೇಲೆ ಗಮನ ಕೊಡುವುದು ಹಾಗೂ ಇಲಿಯನ್ನು ಮೇಷ್ಟ್ರು ತಂದು ಉದಾಹರಣೆ ಕೊಟ್ಟಿರುವ ಕಾಲ್ಪನಿಕ ಕಥೆಯನ್ನು ತಮ್ಮದೇ ಶಾಲೆಯಲ್ಲಿ ನಡೆದ ಘಟನೆಯಂತೆ ಹಾಸ್ಯದ ರೂಪದಲ್ಲಿ ವಿವರಿಸಿದರು. ಕಥೆ ಇಲ್ಲಿಗೇ ಮುಗಿದಿಲ್ಲ. ಮೇಷ್ಟ್ರು ಇಷ್ಟು ಹೇಳುತ್ತಿದ್ದಂತೆಯೇ ನನ್ನ ಸ್ನೇಹಿತನೊಬ್ಬ ಎದ್ದುನಿಂತು. ಮೇಷ್ಟ್ರೇ ನೀವು ಅಲ್ಲಿರೋ ಆಹಾರ ಬದಲಿಸಿದ್ರೆ ವಿನಾ ಆ ಇಲಿಯನ್ನು ಅಲ್ಲ. ಒಮ್ಮೆ ಇಲಿಯನ್ನು ಬದಲಿಸಿ ನೋಡಿ, ಅದು ಹೊರಗೆ ಇರುವ ಇಲಿಯ ಹೆಂಡ್ತಿ ಇರ್ಬೇಕು. ಆ ನೋಡಿದವಳನ್ನೇ ಎಷ್ಟೂ ಅಂತ ಅದು ನೋಡ್ತದೆ ಎಂದಾಗ ಮೇಷ್ಟ್ರು ಸುಸ್ತಾಗಿ ಹೋದರು ಎಂದು ಪ್ರಾಣೇಶ್ ಹಾಸ್ಯದ ರೂಪದಲ್ಲಿ ಕಥೆ ಹೆಣೆದು ಎಲ್ಲರನ್ನೂ ನಗಿಸಿದ್ದು, ಅದೀಗ ವೈರಲ್ ಆಗಿದೆ.
ಇನ್ನು ಪ್ರಾಣೇಶ್ ಕುರಿತು ಹೇಳುವುದಾದರೆ, ಇವರು ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಆದ್ದರಿಂದ ಗಂಗಾವತಿ ಪ್ರಾಣೇಶ್ ಎಂದೇ ಫೇಮಸ್. ಭಾರತ ಮಾತ್ರವಲ್ಲದೇ ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಪುರ, ಥಾಯ್ಲೆಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿಯೂ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತಬಲಾ, ಕೊಳಲು, ಸಂಗೀತಗಳಲ್ಲಿಯೂ ಇವರು ಪ್ರವೀಣರು. ‘ನಗಿಸುವವನ ನೋವುಗಳು’ ಎಂಬ ಪುಸ್ತಕ ಬರೆದಿರುವ ಇವರು, ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ.
ತಲೆದಿಂಬಿನ ಜೊತೆ ನಾಚಿಕೊಂಡು ಪವಿತ್ರಾ ಗೌಡ ರೀಲ್ಸ್ : ವಿಡಿಯೋ ನೋಡಿ ಭಯ ಆಗ್ತಿದೆ ಎನ್ನೋದಾ ನೆಟ್ಟಿಗರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.