ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?

Published : Dec 05, 2023, 04:15 PM ISTUpdated : Dec 05, 2023, 04:27 PM IST
 ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?

ಸಾರಾಂಶ

 ಬಿಗ್​ಬಾಸ್​ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?  

ಬಿಗ್ ಬಾಸ್‌ ಕನ್ನಡ 10 ರಿಯಾಲಿಟಿ ಷೋ (Bigg Boss 10)  ಆರಂಭವಾಗಿ ಎಂಟು ವಾರ ಕಳೆದಿದ್ದು, ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್​ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್​ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್​, ತನಿಷಾ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್, ಕಾರ್ತಿಕ್​ ಸೇರಿದಂತೆ ಇತರ ಸ್ಪರ್ಧಿಗಳ​ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್​ಬಾಸ್​ ಮನೆಯ ಹೊರಗೂ ಇವರ ಫ್ಯಾನ್ಸ್​ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್​  ಮಾಡುತ್ತಿದ್ದಾರೆ. ಇದರ ನಡುವೆ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್​ ಅವರು ಹಾಸ್ಯದ ಮಾತಿನಿಂದ ಬಿಗ್​ಬಾಸ್​ ಸ್ಪರ್ಧಿಗಳಿಗೆ ನಗುವಿನ ಟಾನಿಕ್​ ನೀಡುತ್ತಿದ್ದಾರೆ. ಇದರ ನಡುವೆನೇ ತುಕಾಲಿ ಸಂತೋಷ್​ ಕೂಡ ಆಗಾಗ್ಗೆ ಜೋಕ್​ ಮಾಡುತ್ತಲೇ ಇರುತ್ತಾರೆ. ಇವೆಲ್ಲವುಗಳ ನಡುವೆ ಇದೀಗ ಬಿಗ್​ಬಾಸ್​ನಲ್ಲಿ ಹೊಸ ಲೋಕ ಸೃಷ್ಟಿಯಾಗಿದ್ದು ಅದರ ಪ್ರೊಮೋ ಬಿಡುಗಡೆಯಾಗಿದೆ.

ಬಿಗ್​ಬಾಸ್​ ಮನೆ ಈ ಕ್ಷಣದಿಂದ ಬಿಗ್​ಬಾಸ್​ ಲೋಕ ಆಗಿ ಪರಿವರ್ತನೆ ಆಗಿದೆ. ಇಲ್ಲಿ ಗಂಧರ್ವರು, ರಾಕ್ಷಸರು ಇಬ್ಬರೂ ಇದ್ದಾರೆ ಎನ್ನುವ ದನಿಯೊಂದಿಗೆ ಈ ಪ್ರೊಮೋ ಬಿಡುಗಡೆಯಾಗಿದೆ. ಇಲ್ಲಿ ಒಂದಿಷ್ಟು ಸ್ಪರ್ಧಿಗಳು ಗಂಧರ್ವರಾಗಿಯೂ, ಇನ್ನೊಂದಿಷ್ಟು ಮಂದಿ ರಾಕ್ಷಸರಾಗಿಯೂ ಪರಿವರ್ತನೆಯಾಗಿದ್ದಾರೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್​, ಡ್ರೋನ್ ಪ್ರತಾಪ್​, ತನಿಷಾ, ನೀತು ರಾಕ್ಷಸ ಗಣದ ಟೀಮ್ ಸೇರಿದ್ದಾರೆ. ವಿನಯ್, ನಮ್ರತಾ, ವರ್ತೂರು ಸಂತೋಷ್​, ಮೈಕಲ್​, ಪವಿ ಗಂಧರ್ವರ ಟೀಮ್​ನಲ್ಲಿದ್ದಾರೆ. ಇಲ್ಲಿಯೂ ಮಾಮೂಲಿನಂತೆ ನೆಟ್ಟಿಗರಿಂದ ಸಂಗೀತಾ ವಿಷಯವಾಗಿಯೇ ಬಹುದೊಡ್ಡ ಚರ್ಚೆ ಶುರುವಾಗಿದೆ. ಸಂಗೀತ ತಂಡದ ರಾಕ್ಷಸತನದ ಅಬ್ಬರಕ್ಕೆ ಬಳಲಿ ಬೆಂಡಾಗಿ ತನ್ನ ಪಾತ್ರದಿಂದ ಹೊರಬರಲು ಯೋಚನೆ ಮಾಡುತ್ತಿರುವ ವಿನಯ್ ಎಂದು ಒಬ್ಬರು ಬರೆದಿದ್ದರೆ, ವಿನಯ್​ ಸ್ಥಿತಿ ಈಗ  ಸಂಗೀತಾ ಪಳಗಿಸಿದ ನಾಯಿಯಂತಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.  

ಅನುಕಂಪ ಗಿಟ್ಟಿಸಿಕೊಳ್ಳಲು ಸುಳ್ಳು ಹೇಳಿ ತಗ್ಲಾಕೊಂಡ್ರಾ ಪ್ರತಾಪ್​? 2 ದಿನಗಳಲ್ಲಿ ತಪ್ಪು ಒಪ್ಪಿಕೊಳ್ಳದಿದ್ರೆ ಕೇಸ್​ ದಾಖಲು!

ಮದ ಏರಿದ ಆನೆಗೆ ಮತ್ತು ಇಳಿಸಿದ ಸಂಗೀತಾ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದರೆ, ಆನೆ ಅನ್ಕೊಂಡಿರೋ ವಿನಯ್ ಆನೆನೇ ಆಗಿರ್ಲಿ... ಮಾವುತ ಅನ್ಕೊಂಡಿರೋರು ಅಲ್ಲಿ ಮಾವುತಾನೆ ಆಗಿರ್ಲಿ... ಆದ್ರೆ ಆನೆ ಮೇಲೆ ಸವಾರಿ ಮಾಡೋ ಚಾಮುಂಡಿ ಮಾತ್ರ ನಮ್ಮ ಸಂಗೀತಾನೇ  ಆಗಿರತಾಳೆ ನೆನಪಿರಲಿ ಎಂದು ನಿಶಿತಾ ಗೌಡ ಎನ್ನುವವರು ಕಮೆಂಟ್​ ಹಾಕಿದ್ದಾರೆ. ಟಾಸ್ಕ್​ ಪ್ರಕಾರ, ರಾಕ್ಷಸ ನೀಡುವ ಕಾಟವನ್ನೆಲ್ಲಾ ಗಂಧರ್ವರ ತಂಡ ಸಹಿಸಿಕೊಳ್ಳಬೇಕಿದೆ. ಟಾಸ್ಕ್ ಮುಗಿಯುವವರೆಗೂ ಗಂಧರ್ವರು ಸೈಲೆಂಟ್ ಆಗಿ ರಾಕ್ಷಸ ಟೀಮ್​ ಹೇಳಿದಂತೆ ಕೇಳ್ತಿದ್ದಾರೆ. ಗಂಧರ್ವರು ಟೀಮ್​ ಸದಸ್ಯರ ಬಟ್ಟೆಗಳನ್ನೆಲ್ಲಾ ರಾಕ್ಷಸ ತಂಡದವರು ಚೆಲ್ಲಾ ಪಿಲ್ಲಿ ಮಾಡಿದ್ದಾರೆ. ಏನೂ ಮಾಡಲಾಗದೆ ವಿನಯ್, ನಮ್ರತಾ ಸೈಲೆಂಟ್ ಆಗಿದ್ದಾರೆ.

ಒಟ್ಟಿನಲ್ಲಿ ಈ ಆಟದಲ್ಲಿ ಜಯ ಯಾರ ಪಾಲಾಗುತ್ತದೆ ಎಂದು ಬಿಗ್​ಬಾಸ್​ ಸಂಪೂರ್ಣ ಸಂಚಿಕೆ ನೋಡಿದರೆ ತಿಳಿದುಬರಲಿದೆ. ಇದೇ ವೇಳೆ, ಕೋವಿಡ್​ ಸಂದರ್ಭದಲ್ಲಿ  ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿ ತಗ್ಲಾಕ್ಕೊಂಡಿರೋ ಡ್ರೋನ್​ ಪ್ರತಾಪ್​ ವಿಷಯ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ಇದು ಭಾರಿ ವೈರಲ್​  ಆಗುತ್ತಲೇ, ಇದೀಗ ಅವರ ವಿರುದ್ಧ ಕೇಸ್​ ದಾಖಲಿಸುವುದಾಗಿ ಹೇಳಿದ್ದಾರೆ ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್. ಇದರ ಬಗ್ಗೆ ಏನಾಯ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 
 

ಡ್ರೋನ್​ ಪ್ರತಾಪ್​ಗೆ ತುಕಾಲಿ ಸಂತೋಷ್​ ಕೇಳೋ ಈ ಪ್ರಶ್ನೆಗೆ ಉತ್ರ ಕೊಟ್ರೆ ನೀವೇ ಗ್ರೇಟ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ