ಅನಿಮಲ್ ಚಿತ್ರವನ್ನು ಹೊಗಳುವ ಭರದಲ್ಲಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ತ್ರಿಷಾ. ಆಮೇಲೆ ಆದದ್ದೇನು?
ಸದ್ಯ ಎಲ್ಲೆಲ್ಲೂ ಅನಿಮಲ್ ಹವಾ ಸೃಷ್ಟಿಯಾಗಿದೆ. ಇದೇ ಒಂದನ್ನು ಬಿಡುಗಡೆಯಾದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಮೂರು ದಿನಗಳಲ್ಲಿಯೇ 350 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್ ಮಾಡಿದ್ದು, ಇಂದಿಗೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಲೇ ಇದೆ. ಇದಾಗಲೇ ಹಲವು ಬ್ಲಾಕ್ಬಸ್ಟರ್ ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿದೆ. ನಟ ರಣಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಇಂಟಿಮೇಟ್ ಸೀನ್ಗಳು ಹೇರಳವಾಗಿದ್ದ ಕಾರಣ, ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದೆ. ಕತ್ತರಿ ಹಾಕಿದ ಮೇಲಷ್ಟೇ ಚಿತ್ರ ಬಿಡುಗಡೆಯಾಗಿದೆ. ಆದರೂ ನಾಗಾಲೋಟದಿಂದ ಚಿತ್ರ ಓಡುತ್ತಿದೆ.
ಚಿತ್ರ ಬಿಡುಗಡೆಗೂ ಮೊದಲು ರಿಲೀಸ್ ಆಗಿದ್ದ ಹಾಡೊಂದು ಹಲ್ಚಲ್ ಸೃಷ್ಟಿಸಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಲಿಪ್ಲಾಕ್ ಸೀನ್ ನೋಡಿ ಫ್ಯಾನ್ಸ್ ಉಫ್ ಎಂದಿದ್ದರು. ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್ ಪತಿ ರಣಬೀರ್ ಜೊತೆ ದೀರ್ಘ ಲಿಪ್ಲಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್ ಆಗುತ್ತಲೇ ಇದೆ. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್ ಉಫ್ ಎಂದಿದ್ದರು. ಇದೇ ಕಾರಣಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಡಲ್ಟ್ ಸರ್ಟಿಫಿಕೇಟ್ ನೀಡಿ ಹಲವು ದೃಶ್ಯಕ್ಕೆ ಕತ್ತರಿ ಹಾಕಿದೆ. ಆದರೆ ತೆರೆಯ ಮೇಲೆ ಕಾಣದಿದ್ದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಣಬೀರ್ ಕಪೂರ್ ಅವರ ಬೆತ್ತಲೆ ದೃಶ್ಯ, ರಶ್ಮಿಕಾ ಜೊತೆಗಿನ ಬೆಡ್ರೂಮ್ ದೃಶ್ಯ ಮಾತ್ರವಲ್ಲದೇ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಅವರು ಸಂಪೂರ್ಣವಾಗಿ ಬೆತ್ತಲಾಗಿದ್ದು, ಅವರ ಮೇಲೆ ರಣಬೀರ್ ಕಪೂರ್ ಇದ್ದ ವಿಡಿಯೋಗಳು ವೈರಲ್ ಆಗುತ್ತಲೇ ಇವೆ.
ಅನಿಮಲ್ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್!
ಇದೀಗ ಇದೇ ವಿಷಯವಾಗಿ ನಟಿ ತ್ರಿಷಾ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಅಷ್ಟಕ್ಕೂ ಅನಿಮಲ್ ಚಿತ್ರಕ್ಕೂ, ನಟಿ ತ್ರಿಷಾಗೂ ಏನಪ್ಪಾ ಸಂಬಂಧ ಎಂದರೆ, ತ್ರಿಷಾ ಅನಿಮಲ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೊಸ್ಟ್. ಅದರಲ್ಲಿ ಅವರು ಅನಿಮಲ್ ಚಿತ್ರವನ್ನು ಕಲ್ಟ್ ಮೂವಿ ಎಂದು ಬರೆದಿದ್ದಾರೆ. ಇದರ ಅರ್ಥ ಇದು ತುಂಬಾ ಸಂಪ್ರದಾಯಬದ್ಧ, ಸಂಸ್ಕೃತಿ ಇರುವ ಚಿತ್ರ ಎಂದು. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಇತ್ತೀಚೆಗೆ ಖಳ ನಟ ಮನ್ಸೂರ್ ಅಲಿ ಖಾನ್ ತ್ರಿಷಾ ಜೊತೆ ಚಿತ್ರವೊಂದರಲ್ಲಿ ರೇಪ್ಸೀನ್ ಮಾಡುವ ಆಸೆ ವ್ಯಕ್ತಪಡಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆ ಸಮಯದಲ್ಲಿ ಖಾನ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ನಟಿ ತ್ರಿಷಾ, ಹೆಣ್ಣಿನ ಮಾನ ಮರ್ಯಾದೆ ಬಗ್ಗೆ ಮಾತನಾಡಿದ್ದರು.
ಇದೀಗ ಮೂರೂ ಬಿಟ್ಟ ದೃಶ್ಯಗಳಿಗೆ ಅನಿಮಲ್ ಚಿತ್ರವನ್ನು ಸಂಸ್ಕೃತಿಯ ಚಿತ್ರವೆಂದು ಕರೆಯುವುದಕ್ಕೆ ನಾಚಿಕೆ ಆಗುವುದಿಲ್ಲವಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಹೆಣ್ಣಿನ ಗೌರವದ ಬಗ್ಗೆ ಮಾತಾಡಿದ ನೀವು ಈಗ ಅನಿಮಲ್ ಸಿನಿಮಾವನ್ನು ಹೊಗಳುವ ಪರಿ ನೋಡಿ ನಿಮ್ಮ ಮೇಲೆ ಅಸಹ್ಯ ಹುಟ್ಟುತ್ತಿದೆ ಎನ್ನುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೆ ಒಳಗಾಗುತ್ತಲೇ ನಟಿ ತ್ರಿಷಾ ಈ ಪೋಸ್ಟ್ ಡಿಲೀಟ್ ಮಾಡಿಬಿಟ್ಟಿದ್ದಾರೆ!
ರಣಬೀರ್ ಕಪೂರ್- ರಶ್ಮಿಕಾ ಬೆಡ್ರೂಮ್ ಸೀನ್ ಲೀಕ್: ಇನ್ನೇನ್ ಉಳಿಸಿದ್ಯಪ್ಪಾ ಎಂದು ಕೇಳಿದ ಫ್ಯಾನ್ಸ್