ಇಂಗ್ಲಿಷ್ ಬಾರದ ಪುಷ್ಪಾಗೆ ಮಲ್ಲಿಯ ತಪ್ಪು ಪಾಠ; ಪುಷ್ಪಾ ಲವ್ ಚೀಟಿ ನೋಡಿ ಆಕಾಶ್ ಏನ್ಮಾಡ್ತಾನೋ..!?

By Shriram Bhat  |  First Published Feb 1, 2024, 1:05 PM IST

ಫಿ ಕೊಡಲು ಹೋಗುತ್ತಿದ್ದ ಪುಷ್ಪಾಳನ್ನು ಮನೆಯ ಹಾಲ್‌ನಲ್ಲಿದ್ದ ಮಹಿಳಾ ಮಣಿಗಳ ಪಟಾಲಂ ತಡೆಯುವುದು. ಆಕಾಶ್‌ಗೆ ಕಾಫಿ ನಾವು ಕೊಡುತ್ತೇವೆ, ನೀನು ಇಲ್ಲಿ ಬಂದು ಮಕ್ಕಳಿಗೆ ಡಾನ್ಸ್‌ ಆಯ್ಕೆ ಮಾಡಿಕೊಂಡು ಎನ್ನುವರು. ಅದರೆ, ಪುಷ್ಪಾ ತಾನೇ ಆಕಾಶ್‌ಗೆ ಕಾಫಿ ಕೊಡುವುದಾಗಿ ಹಠಕ್ಕೆ ಬೀಳುವಳು. 



ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಬೃಂದಾವನ ಸೀರಿಯಲ್‌ನಲ್ಲಿ ಮದುವೆಯಾಗಿದ್ದರೂ ಗಂಡ-ಹೆಂಡತಿ ಮಧ್ಯೆ ಇನ್ನೂ ಪ್ರೀತಿ-ಪ್ರೇಮ, ಸರಿಯಾದ ಸಂಸಾರ ಏನೂ ಶುರುವಾಗಿಲ್ಲ ಎನ್ನಬಹುದು. ಆಕಾಶ್ (Akash) ಹಾಗು ಪುಷ್ಪಾ ಅವರಿಬ್ಬರ ಮಧ್ಯೆ ಸಾಮರಸ್ಯ ಮೂಡಿಸಲು ಈಗ ಪುಷ್ಪಾ (Pushpa) ಸ್ನೇಹಿತೆ ಮಲ್ಲಿ (Malli) ಕೆಲಸ ಶುರು ಮಾಡಿಕೊಂಡಿದ್ದಾರೆ. ಹಳ್ಳಿಯಲ್ಲಿರುವ ಪುಷ್ಪಾಗೆ ಮಲ್ಲಿ ಆಕಾಶ್‌ನನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊಸ ಹೊಸ ಐಡಿಯಾ ಹೇಳಿಕೊಡುತ್ತಿದ್ದಾಳೆ. 

ಪುಷ್ಪಾಗೆ ಕಾಲ್ ಮಾಡಿದ ಮಲ್ಲಿಆಕಾಶ್ ಮನೆಲ್ಲಿ ಇದಾನಾ ಎಂದು ಕೇಳುತ್ತಾಳೆ. 'ಹೌದು, ಈಗ ತಾನೇ ಕಾಲೇಜಿಂದ ಬಂದ್ರು' ಎಂದು ಪುಷ್ಪಾ ಹೇಳಲು 'ಹಾಗಿದ್ರೆ ಅವ್ರಿಗೆ ಐ ಲವ್‌ ಯೂ ಹೇಳು' ಎನ್ನುವಳು ಮಲ್ಲಿ. ಅದಕ್ಕೊಪ್ಪದ ಪುಷ್ಪಾ ಹಾಗೆಲ್ಲ ಹೇಳೋಕೆ ನಂಗೆ ಭಯ ಆಗುತ್ತೆ ಎನ್ನಲು ಏನ್ ಹೇಳಿದ್ರೂ ಆಗಲ್ಲ ಅಂತೀಯ, ಏನೇ ನಿನ್ ಕಥೆ..!? ಮುತ್ತು ಕೇಳು ಅಂದ್ರೂ ಆಗಲ್ಲ ಅಂತೀಯಾ, ಲವ್ ಯೂ ಹೇಲು ಅಂದ್ರೂ ಆಗಲ್ಲ ಅಂತೀಯಾ, ಮತ್ತೆ ಹೇಗೆ ನೀನು ಅವ್ನ ಪ್ರೀತಿ ಗಳಿಸ್ತೀಯಾ ಹೇಳು' ಎಂದು ಕೇಳುವಳು ಮಲ್ಲಿ. 

Tap to resize

Latest Videos

ವೆಂಕಟ್ ಭಾರದ್ವಾಜ್ 'ನಗುವಿನ ಹೂಗಳ ಮೇಲೆ' ಟ್ರೈಲರ್ ಬಿಡುಗಡೆಗೊಳಿಸಿದರು ನಿರ್ದೇಶಕ ಹರ್ಷ!

ಪುಷ್ಪಾ ಈಗ ನಿಜವಾಗಿಯೂ ಯೋಚನೆಗೆ ಬೀಳುತ್ತಾಳೆ. ಅದಕ್ಕೆ ಮಲ್ಲಿ, ನಿಂಗೆ ಹೇಳೋಕೆ ಆಗಲ್ಲ ಅಂದ್ರೆ ಒಂದು ಚೀಟಿಯಲ್ಲಿ ಬರೆದು ಕೊಡು' ಎನ್ನುವಳು. ಅದಕ್ಕೊಪ್ಪಿದ ಪುಷ್ಪಾ 'ಸರಿ, ಹಾಗೇ ಮಾಡ್ತೀನಿ, ಆದ್ರೆ ನಂಗೆ ಇಂಗ್ಲಿಷ್‌ನಲ್ಲಿ ಬರೆಯೋಕೆ ಬರಲ್ಲ ಎಂದಾಗ ಮಲ್ಲಿ ಫೋನಿನಲ್ಲೇ ಹೇಳಿ ತಪ್ಪಾಗಿ 'Law U'ಎಂದು ಬರೆಸುವಳು. ಈಗ ಅವ್ರಿಗೆ ಹೇಗೂ ಕಾಫಿ ಕೊಡೋಕೆ ಹೋಗ್ಬೇಕು. ಕಾಫಿ ಜತೆ ಟ್ರೇನಲ್ಲಿ ಚೀಟಿ ಇಟ್ಟು ಬರ್ತೀನಿ' ಎನ್ನವಳು. ಅದರಂತೆ ಕಾಫಿ ಜತೆ ಟ್ರೇನಲ್ಲಿ  ಎಂದು ತಪ್ಪಾಗಿ ಬರೆದಿರುವ ಚೀಟಿ ಇಟ್ಟುಕೊಂಡು ಹೋಗುವಳು. 

ಮೊದಲ ಭೇಟಿಯಲ್ಲಿ ಪುನೀತ್ ರಾಜ್‌ಕುಮಾರ್ ಏನ್ ಮಾಡಿದ್ರು ಅಂತ ಹೇಳಿದ್ರು ಸಾಯಿ ಪಲ್ಲವಿ!

ಕಾಫಿ ಕೊಡಲು ಹೋಗುತ್ತಿದ್ದ ಪುಷ್ಪಾಳನ್ನು ಮನೆಯ ಹಾಲ್‌ನಲ್ಲಿದ್ದ ಮಹಿಳಾ ಮಣಿಗಳ ಪಟಾಲಂ ತಡೆಯುವುದು. ಆಕಾಶ್‌ಗೆ ಕಾಫಿ ನಾವು ಕೊಡುತ್ತೇವೆ, ನೀನು ಇಲ್ಲಿ ಬಂದು ಮಕ್ಕಳಿಗೆ ಡಾನ್ಸ್‌ ಆಯ್ಕೆ ಮಾಡಿಕೊಂಡು ಎನ್ನುವರು. ಅದರೆ, ಪುಷ್ಪಾ ತಾನೇ ಆಕಾಶ್‌ಗೆ ಕಾಫಿ ಕೊಡುವುದಾಗಿ ಹಠಕ್ಕೆ ಬೀಳುವಳು. ಅಲ್ಲಿರಿಗೂ ಪುಷ್ಪಾಳ ಈ ನಡೆ ಅಚ್ಚರಿ ಹುಟ್ಟಿಸುವುದು. ಅಷ್ಟರಲ್ಲಿ ಟ್ರೇದಲ್ಲಿದ್ದ ಚೀಟಿ ಫ್ಯಾನ್ ಗಾಳಿಗೆ ಹಾರಿ ಹೋಗುವುದು. ಪುಷ್ಪಾ ಗಾಬರಿಯಾಗಿ ನಿಲ್ಲುವಳು. ಮುಂದೇನು ಎಂಬುದನ್ನು ಬೃಂದಾವನ (Brundavana) ಸೀರಿಯಲ್ ಸಂಚಿಕೆ ನೋಡಿ ತಿಳಿಯಬೇಕು. 

ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

 

 

click me!