ಬಿಗ್ ಬಾಸ್ ಮುಂದಿನ ಸೀಸನ್‌ಗೆ ತುಕಾಲಿ ಸಂತೋಷ್ ಹೆಂಡ್ತಿ ಮಾನಸಗೆ ಅವಕಾಶ ಕೊಡಿ ಎಂದ ಫ್ಯಾನ್ಸ್!

Published : Jan 31, 2024, 10:59 PM IST
ಬಿಗ್ ಬಾಸ್ ಮುಂದಿನ ಸೀಸನ್‌ಗೆ ತುಕಾಲಿ ಸಂತೋಷ್ ಹೆಂಡ್ತಿ ಮಾನಸಗೆ ಅವಕಾಶ ಕೊಡಿ ಎಂದ ಫ್ಯಾನ್ಸ್!

ಸಾರಾಂಶ

ಕಲರ್ಸ್ ಕನ್ನಡ ವಾಹಿನಿಯಿಂದ ಮುಂದಿನ ಬಿಗ್ ಬಾಸ್ ಸೀಸನ್‌ 11ಕ್ಕೆ ತುಕಾಲಿ ಸಂತೋಷ್ ಹೆಂಡ್ತಿ ಮಾನಸಗೆ ಅವಕಾಶ ಕೊಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬೆಂಗಳೂರು  (ಜ.31): ಕನ್ನಡ ಬಿಗ್‌ ಬಾಸ್‌ ಸೀಸನ್‌ 10ರ ಮನೆಗೆ ಹಾಸ್ಯದ ಹಿನ್ನೆಲೆಯಿಂದ ಬಂದಿದ್ದ ತುಕಾಲಿ ಸಂತೋಷ್ ಅವರು ನಾಡಿನ ಜನತೆಯನ್ನು ಸಾಕಷ್ಟು ನಗಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಹಾಗೂ ಫಿನಾಲೆ ವೇದಿಕೆಗೆ ಆಗಮಿಸಿದ್ದ ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಅವರೂ ಹಾಸ್ಯದ ಮೂಲಕ ಜನರನ್ನು ನಗಿಸುತ್ತಿದ್ದಾರೆ. ಹೀಗಾಗಿ, ಮುಂದಿನ ಬಿಗ್ ಬಾಸ್ ಸೀಸನ್ 11ರಲ್ಲಿ ಮಾನಸ ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ತುಕಾಲಿ ಹಾಗೂ ಮಾನಸ ದಂಪತಿ ಮನೆಯಲ್ಲಿ ತಮ್ಮ ಕಾಮಿಡಿ ಲೈಫ್‌ ಹಾಗೂ ಕಷ್ಟ ಪಟ್ಟು ಕಿರುತೆರೆ ವೇದಿಕೆಗೆ ಬಂದಿರುವ ಬಗ್ಗೆ ಹಂಚಿಕೊಂಡಿದ್ದರು. ಇವರ ದಾಂಪತ್ಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಇವರೀರ್ವರ ಅನ್ಯೂನ್ಯತೆ ಮನಗಂಡ ವೀಕ್ಷಕರು ಒಳಿತನ್ನು ಬಯಸಿದ್ದಾರೆ. ಜೊತೆಗೆ, ಮಾನಸ ಅವರ ಕಾಮಿಡಿ ಪಂಚ್‌ ಡೈಲಾಗ್‌ ಕಂಡು ಮುಂದಿನ 'ಬಿಗ್ ಬಾಸ್ ಸೀಸನ್ 11'ಕ್ಕೆ ಮಾನಸ ಬರಲೇಬೇಕು ಎಂದು ಹೇಳಿದ್ದಾರೆ. ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದ ಮಾನಸ, ತುಕಾಲಿ ಅವರ ಮಾತಿಗೆ ಸಖತ್‌ ಪಂಚ್‌ ಕೊಡುತ್ತಿದ್ದರು. ಅಷ್ಟೇ ಅಲ್ಲ, ಕಿಚ್ಚ ಸುದೀಪ್‌ ಅವರಿಗೂ ಮಾನಸ ಅವರ ಮಾತುಗಳು ಇಷ್ಟವಾಗಿತ್ತು. ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ತುಕಾಲಿ ಸಂತೋಷ್ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿದ್ದರೆ, ಸರಳವಾದ ಮಾತಿನಲ್ಲಿ ಸಖತ್‌ ಪಂಚ್‌ ಕೊಡುತ್ತಿದ್ದರು. ಹೀಗಾಗಿ, ಬಿಗ್‌ಬಾಸ್ ಮನೆಗೆ ಆಯ್ಕೆ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ಫಸ್ಟ್‌ ನೈಟ್‌ ವೇಳೆ ಹೆಂಡ್ತಿಯಿಂದ ಒದೆ ತಿಂದ ಬಿಗ್‌ಬಾಸ್ ತುಕಾಲಿ ಸಂತೋಷ್!

ಕಿರುತೆರೆಯ ರಿಯಾಲಿಟಿ ಶೋ ವೇದಿಕೆ ಹೊಸತೇನಲ್ಲ: ಈಗಾಗಲೇ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಲ್ಲಿ ತುಕಾಲಿ ಸಂತೋಷ್ ಅವರ ಜೊತೆಗೆ ಮಾನಸ ಕೂಡ ಕಾಮಿಡಿ ವೇದಿಕೆಗೆ ಕಾಲಿಟ್ಟಿದ್ದಾರೆ. ಇದಾದ ನಂತರ ಜೋಡಿ ನಂ.1 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ತುಕಾಲಿ ಅವರು ಮಾನಸಾರಿಗೆ 'ಇವಳು ಎಮ್ಮೆಯನ್ನು ಕಾಯುತ್ತಾ ನಿಂತಿದ್ದಳು' ಎಂದು ಹಾಸ್ಯ ಮಾಡಿದಾಗ, 'ನೀನು ಅರಮನೆಯ ಮುಂದೆ ಅರ್ಜುನನ್ನು ಕಾಯುತ್ತಾ ಇದ್ಯಾ?' ಎಂದು ತುಕಾಲಿಗೆ ಕೌಂಟರ್‌ ಕೊಟ್ಟಿದ್ದರು. ಇವರಿಬ್ಬರ ತಮಾಷೆ ನೋಡಿ ಸ್ವತಃ ಬಿಗ್‌ ಬಾಸ್‌ ಖುಷಿ ಪಟ್ಟಿದ್ದರು.

ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ತುಕಾಲಿ ಸಂತೋಷ್!

ಮನದಾಳದ ಮಾತು ಹಂಚಿಕೊಂಡಿದ್ದ ಮಾನಸ: ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರಿಗೆ ಗೊತ್ತಿರದ ವಿಚಾರವನ್ನು ಹೇಳಲು ಅವಕಾಶ ನೀಡಿದಾಗ ಮಾತನಾಡಿದ ಮಾನಸ, ನಾನು ಮನೆಯಲ್ಲಿ ಹುಟ್ಟಿದಾಗಿನಿಂದ 22 ವರ್ಷದವರೆಗೆ ಜೀವನದಲ್ಲಿ ಖುಷಿಯನ್ನೇ ಕಂಡಿರಲಿಲ್ಲ. ತುಕಾಲಿ ಸಂತು ಅವರನ್ನು ಮದುವೆಯಾದ ಮೇಲೆ ನನ್ನ ಜೀವನ ಉತ್ತಮವಾಗಿದೆ. ಮದುವೆ ಆಗೋಕೆ ಮುನ್ನ ನಮ್ಮ ಇಡೀ ಮನೆ ಹುಡುಕಿದರೂ 1 ರೂಪಾಯಿಯೂ ಸಿಗುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಊಟ ಮಾಡುವುದಕ್ಕೂ ಹಣ ಇರಲಿಲ್ಲ. ಇನ್ನು ಮದುವೆ ಆಗುವಾಗ ನನಗೆ ಕಾಫಿ ಮಾಡೋಕೂ ಬರಲ್ಲ ಅಂತ ಹೇಳಿದಾಗ, ನಾನೇ ಎಲ್ಲ ಮಾಡ್ತೀನಿ. ನಿನಗೆ ಕಲಿಸಿಕೊಡ್ತೀನಿ ಅಂತ ಸಂತು ಹೇಳಿದ್ದ. ಜೀವನದಲ್ಲಿ ಇದಕ್ಕಿಂತ ಒಳ್ಳೆಯ ವ್ಯಕ್ತಿ ನನಗೆ ಸಿಗುತ್ತಿರಲಿಲ್ಲ ಎಂದು ಹೇಳಿಕೊಂಡು ಭಾವುಕರಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?