ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಸೀಸನ್-3 ರಿಯಾಲಿಟಿ ಶೋ ವಿಜೇತ ಹಾಸ್ಯನಟ ಹುಲಿ ಕಾರ್ತಿಕ್ ಅವರ ವಿರುದ್ಧ ಬೋವಿ ಸಮುದಾಯದವರು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಡೆದ ಸ್ಕಿಟ್‌ನಲ್ಲಿ ಬಳಸಲಾದ ಪದಗಳು ಸಮುದಾಯಕ್ಕೆ ನೋವುಂಟು ಮಾಡಿವೆ ಎಂಬ ಆರೋಪವಿದೆ.
ಬೆಂಗಳೂರು (ಅ.08): ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಗಿಚ್ಚಿ ಗಿಲಿ ಗಿಲಿ ಸೀಸನ್-3 ರಿಯಾಲಿಟಿ ಶೋ ವಿಜೇತ ಹಾಸ್ಯನಟ ಹುಲಿ ಕಾರ್ತಿಕ್ ಅವರು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಕಿಟ್ ಮಾಡುವಾಗ ತುಕಾಲಿ ಸಂತೋಷ್‌ಗೆ ಬೈಯುವಾಗ ಭೋವಿ ಸಮುದಾಯಕ್ಕೆ ಅವಮಾನ ಆಗುವಂತೆ ಜಾತಿ ನಿಂದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೋವಿ ಸಮುದಾಯದ ಲೋಕೇಶ್ ಎಂಬುವವರಿಂದ ಅನ್ನಪೂರ್ಣೇಶ್ವರಿನಗರದಲ್ಲಿ ದೂರು ನೀಡಲಾಗಿದ್ದು, ಈ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಹೌದು, ಗಿಚ್ಚಿ ಗಿಲಿ ಗಿಲಿ ಹಾಸ್ಯನಟ ಹುಲಿ ಕಾರ್ತಿಕ್ ಒಂದು ಸಮುದಾಯದ ಬಗ್ಗೆ ನಾಲಿಗೆ ಹರಿ ಬಿಟ್ಟ ಹಿನ್ನಲೆ ದಾಖಲಾಯ್ತು ದೂರು ನೀಡಲಾಗಿದೆ. ನಟನ ಮೇಲೆ ಗಂಭೀರ ಆರೋಪದ ಸೆಕ್ಷನ್‌ಗಳನ್ನು ದಾಖಲಿಸಿ ಜಾತಿ ನಿಂದನೆ ಮಾಡಿದ್ದಾನೆಂದು ಅಟ್ರಾಸಿಟಿ ಕೇಸ್ ಮಾಡಲಾಗಿದೆ. ಒಂದು ಸಮುದಾಯವನ್ನ ಹೀಗಳೆಯುವ ರೀತಿಯಲ್ಲಿ ಮಾತನಾಡಿದ್ದ ನಟ ಹುಲಿ ಕಾರ್ತಿಕ್ ಬೋವಿ ಸಮುದಾಯವನ್ನು ಕೀಳಾಗಿ ಕಾಣುವ ರೀತಿಯಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬೋವಿ ಸಮುದಾಯದ ಲೋಕೇಶ್ ಎನ್ನುವವರು ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ.
undefined
ಇದನ್ನೂ ಓದಿ: ನೀವು ಬೆಂಗಳೂರು ನಿವಾಸಿಗಳಾಗಿದ್ದು, ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ!
ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಸೀಸನ್ 3ರ ವಿನ್ನರ್ ಆಗಿ ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಪ್ರಶಸ್ತಿ ಗಳಿಸಿದ ಹುಲಿ ಕಾರ್ತಿಕ್ ಬೆಸ್ಟ್ ಕಾಮಿಡಿ ಆಕ್ಟರ್ ಆಗಿದ್ದಾರೆ. ಜೊತೆಗೆ, ಕಲರ್ಸ್ ಕನ್ನಡ ವಾಹಿನಿಯ 2024ರ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಮಿಡಿ ಸ್ಕಿಟ್ ಮಾಡುತ್ತಿರುವಾ ಮತ್ತೊಬ್ಬ ನಟ ತುಕಾಲಿ ಸಂತೋಷ್‌ಗೆ ;ಯಾವುದೋ ರೋಡಲ್ಲಿ ಬಿದ್ದಿರೋ ವಡ್ಡ ಇದ್ದಂಗೆ ಅವ್ನೆ' ಎಂದು ಹೇಳಿದ್ದಾರೆ. ಆದರೆ, ಈ ಪದ ಬಳಕೆ ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿಯನ್ನ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಇನ್ನು ದೂರಿನಲ್ಲಿ ಹುಲಿ ಕಾರ್ತಿಕ್ (ಎ1) ಅಲ್ಲದೆ ಸಂಭಾಷಣೆಕಾರ (ಸ್ಕ್ರಿಪ್ಟ್ ರೈಟರ್-ಎ2), ಕಾರ್ಯಕ್ರಮದ ನಿರ್ದೇಶಕ (ಅನುಬಂಧ ಡೈರೆಕ್ಟರ್ -ಎ3) ಹಾಗೂ ಕಾರ್ಯಕ್ರಮದ ನಿರ್ಮಾಪಕ (ಎ4) ವಿರುದ್ಧವೂ ದೂರು ದಾಖಲಿಸಲಾಗಿದೆ. ಈ ಸಂಬಂಧ ಅನ್ನವುರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮುಂದುವರೆದು, ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್‌ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.