ಲಿಪ್‌ಸ್ಟಿಕ್ ಹಚ್ಚಿ ಮಲಗುವುದ್ಯಾಕೆ ನಾಗಿಣಿ ನಮ್ರತಾ? ಇದೇನು ರೋಗನಾ?

Published : Oct 08, 2024, 11:34 AM IST
 ಲಿಪ್‌ಸ್ಟಿಕ್ ಹಚ್ಚಿ ಮಲಗುವುದ್ಯಾಕೆ ನಾಗಿಣಿ ನಮ್ರತಾ? ಇದೇನು ರೋಗನಾ?

ಸಾರಾಂಶ

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ, ವಿಚಿತ್ರ ಅಭ್ಯಾಸವನ್ನು ಹೊಂದಿದ್ದಾರೆ. ಬೆಳಿಗ್ಗೆ ಎದ್ದಾಗ, ರಾತ್ರಿ ಮಲಗುವಾಗ ಅವರಿಗೆ ಒಂದು ವಸ್ತು ಬೇಕೇಬೇಕು. ಅದಿಲ್ದೆ ಮನೆ ಹೊರಗೂ ಹೋಗದ ಅವರು, ತಮ್ಮ ಈ ಅಭ್ಯಾಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.   

ಬಿಗ್ ಬಾಸ್ ಸೀಸನ್ 10ರ ಫೇಮ್ ನಮ್ರತಾ ಗೌಡ (Bigg Boss Season 10 fame Namrata Gowda), ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ. ನಾಗಿಣಿ ಸೀರಿಯಲ್ (Nagini serial) ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದಿರುವ ನಮ್ರತಾ ಗೌಡ ನಂತ್ರ ಬಿಗ್ ಬಾಸ್ ಮನೆಗೆ ಹೋಗಿ ಕಮಾಲ್ ಮಾಡಿದ್ದರು. ನಮ್ರತಾ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ನಮ್ರತಾ ಹಾಗೂ ಕಿಶನ್ (Kishan), ಹಳೆ ರೋಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕ್ತಾ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಮಧ್ಯೆ ನಮ್ರತಾ ಹಾಗೂ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಧ್ಯೆ ಪ್ರೀತಿ ಚಿಗುರಿದ್ದು, ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಇದೆ. ಈ ಎಲ್ಲದರ ಮಧ್ಯೆ ನಮ್ರತಾ ತಮ್ಮ ಕೆಲ ಅಭ್ಯಾಸಗಳ ಬಗ್ಗೆ ಅಭಿಮಾನಿಗಳ ಮುಂದೆ ಹೇಳ್ಕೊಂಡಿದ್ದಾರೆ.  

ರಾತ್ರಿ ಮಲಗುವಾಗ್ಲೂ ನಮ್ರತಾ ಬಳಸ್ತಾರೆ ಈ ವಸ್ತು : ಹುಡುಗೀರೆಂದ್ರೆ ಮೇಕಪ್. ಬೆಳಿಗ್ಗೆ ಏಳ್ತಿದ್ದಂತೆ ಕನ್ನಡಿ ಮುಂದೆ ಗಂಟಗಟ್ಟಲೆ ನಿಲ್ಲುವ ಹುಡುಗಿಯರು ಒಂದಿಷ್ಟು ಕಾಮನ್ ಐಟಂ ಮುಖಕ್ಕೆ ಹಚ್ಚಿಕೊಳ್ಳದೆ ರೂಮ್ ನಿಂದ ಹೊರಗೆ ಬರೋದಿಲ್ಲ. ಅದ್ರಲ್ಲಿ ಲಿಪ್ ಸ್ಟಿಕ್ ಮೊದಲ ಸ್ಥಾನದಲ್ಲಿದೆ. ನಮ್ರತಾ ಗೌಡ ಫೆವರೆಟ್ ನಲ್ಲಿ ಈ ಲಿಪ್ ಸ್ಟಿಕ್ ಸೇರಿದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ರತಾ ಮಾಡುವ ಮೊದಲ ಕೆಲಸ ಅಂದ್ರೆ ಲಿಪ್ ಸ್ಟಿಕ್ ಹಚ್ಚಿಕೊಳ್ಳೋದು.

ರಾಕಿಂಗ್ ಸ್ಟಾರ್ ಡಿಪ್ರೆಷನ್ ಬಗ್ಗೆ ಡೈರೆಕ್ಟರ್ ಶ್ರುತಿ ನಾಯ್ಡುಗೇಕೆ ಭಯವಿತ್ತು?

ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋವನ್ನು ನಮ್ರತಾ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅವರು ಲಿಪ್ ಸ್ಟಿಕ್ ಮೇಲಿರುವ ಪ್ರೀತಿಯನ್ನು ಹೇಳಿದ್ದಾರೆ. ಬಹುತೇಕ ಎಲ್ಲರೂ ರಾತ್ರಿ ಮಲಗುವ ಮೊದಲು ಮೇಕಪ್,  ಲಿಪ್ ಸ್ಟಿಕ್ ತೆಗೆದು ಮಲಗ್ತಾರೆ. ಆದ್ರೆ ನಮ್ರತಾ, ರಾತ್ರಿ ಮಲಗುವ ಮೊದಲೂ ಲಿಪ್ ಸ್ಟಿಕ್ ಹಾಕಿಕೊಂಡು ಮಲಗ್ತಾರೆ. ಲಿಪ್ ಸ್ಟಿಕ್ ಗೆ ಸ್ಟಿಕ್ ಆಗಿದ್ದಾರೆ ನಮ್ರತಾ. ಅದ್ಯಾಕೆ ಹೀಗೆ ಅನ್ನೋದು ಅವರಿಗೆ ಗೊತ್ತಿಲ್ಲ. ಮನೆಯಿಂದ ಹೊರಗೆ ಹೋಗುವ ಮುನ್ನ ಬೇರೆ ಯಾವುದೇ ಮೇಕಪ್ ಇಲ್ಲವೆಂದ್ರೂ ಲಿಪ್ ಸ್ಟಿಕ್ ಇಲ್ಲದೆ ಹೋಗಲ್ಲ ನಮ್ರತಾ. ಮನೆಯಲ್ಲೂ ಇದನ್ನು ಹಚ್ಚಿಕೊಳ್ಳುವ ಬೆಡಗಿ, ಲಿಪ್ ಸ್ಟಿಕ್ ಇಲ್ಲ ಅಂದ್ರೆ ಏನೋ ಕಿರಿಕಿರಿಯಾಗುತ್ತೆ. ಲಿಪ್ ಸ್ಟಿಕ್ ನನ್ನನ್ನು ಆಳ್ತಿದೆ ಎಂದಿದ್ದಾರೆ ನಮ್ರತಾ. ಟ್ಯಾಗ್ ಯುವರ್ ಲಿಪ್ ಸ್ಟಿಕ್ ಫ್ರೆಂಡ್ ಅಂತ ನಮ್ರತಾ ಶೀರ್ಷಿಕೆ ಕೂಡ ಹಾಕಿದ್ದಾರೆ. ನಮ್ರತಾ ಈ ಪೋಸ್ಟ್ ಗೆ ಲಿಪ್ ಸ್ಟಿಕ್ ಪ್ರೇಮಿಗಳು ಲೈಕ್ ಒತ್ತಿದ್ದಾರೆ. ಲಿಪ್ ಸ್ಟಿಕ್ ನಮಗೂ ಬಹಳ ಮುಖ್ಯ ಎಂದು ಅನೇಕ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ನಮ್ರತಾ ತಮ್ಮ ಮತ್ತೊಂದು ಅಭ್ಯಾಸದ ಬಗ್ಗೆ ಹೇಳಿದ್ದರು. ಅವರು ಪದೇ ಪದೇ ಮೂಗು ಮುಟ್ಟಿಕೊಳ್ತಾರೆ. ಬಿಗ್ ಬಾಸ್ ಮನೆಯಲ್ಲಿ ಅವರ ಈ ಅಭ್ಯಾಸವನ್ನು ಜನರು ನೋಡಿದ್ದರು. ಅದಕ್ಕೆ ಕಾರಣವೇನು ಎಂಬುದನ್ನು ನಮ್ರತಾ ಹೇಳಿದ್ದರು. ಟೆನ್ಷನ್ ಆದಾಗ, ನರ್ವಸ್ ಆದಾಗ, ಕೋಪಗೊಂಡಾಗ ನನ್ನ ಅರಿವಿಲ್ಲದೆ ಕೈ ಮೂಗಿಗೆ ಹೋಗುತ್ತೆ ಎಂದಿದ್ದರು ನಮ್ರತಾ. ನನ್ನ ಆಪ್ತರಿಗೆ ಈ ವಿಷ್ಯ ಗೊತ್ತು ಎಂದಿದ್ದ ನಮ್ರತಾ, ಬಾಲನಟಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಯಾದವರು.

ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ ಡಿವೋರ್ಸ್: ಖ್ಯಾತ ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?

ಮೂಲತಃ ಬೆಂಗಳೂರಿನವರಾದ ನಮ್ರತಾ, 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಅವರು, ಪುಟ್ಟಗೌರಿ ಮದುವೆ, ನಾಗಿಣಿ ಸೇರಿದಂತೆ ಅನೇಕ ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಯಾವುದೇ ಸೀರಿಯಲ್, ಸಿನಿಮಾಕ್ಕೆ ನಮ್ರತಾ ಸಹಿ ಹಾಕಿಲ್ಲ. ಆದ್ರೆ ಪ್ರೋಗ್ರಾಂ, ಜಾಹೀರಾತಿನಲ್ಲಿ ಬ್ಯೂಸಿಯಿರುವ ನಟಿಗೆ, ಒಂದೊಳ್ಳೆ ಸಿನಿಮಾದಲ್ಲಿ ನಟಿಸುವ ಆಸೆ ಇದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!