Latest Videos

ಆಹಾ! ವೀಕ್ಷಕರು ಕಾತರದಿಂದ ಕಾಯ್ತಿರೋ ಆ ಅಣಿ ಮುತ್ತುಗಳು ಕೊನೆಗೂ ಉದುರಿಯೇ ಬಿಟ್ಟವು....

By Suchethana DFirst Published May 22, 2024, 12:34 PM IST
Highlights

ಕೊನೆಗೂ ಗೌತಮ್​, ಪತ್ನಿ ಭೂಮಿಕಾಗೆ ತನ್ನ ಪ್ರೀತಿಯ ನಿವೇದನೆಯನ್ನು ಮಾಡಿಕೊಂಡಿದ್ದಾನೆ. ಇದನ್ನು ನೋಡಿ ಫ್ಯಾನ್ಸ್​ ಫುಲ್​ ಖುಷ್​. 
 

ಬೇಗ ಐ ಲವ್​ ಯೂ ಹೇಳಪ್ಪಾ ಗೌತಮ್​. ಎಷ್ಟೂ ಅಂತ ಕಾಯಿಸ್ತಿಯಾ... ಅದೂ ನಿನ್ನ ಪತ್ನಿಗೆ ಹೇಳೋಕೂ ಇಷ್ಟು ನಾಚಿಕೆನಾ? ಅದ್ಯಾಕೆ ಲವ್​ ಅಂದ್ರೆ ಬೆವರುತ್ತೀಯಾ ಎಂದೆಲ್ಲಾ ಪ್ರಶ್ನಿಸಿ ಪ್ರಶ್ನಿಸಿ ಅಮೃತಧಾರೆ ಫ್ಯಾನ್ಸ್​ಗೆ ಸಾಕಾಗಿ ಹೋಗಿತ್ತು. ಆದರೆ ಈಗ ಆ ಕ್ಷಣ ಬಂದೇ ಬಿಟ್ಟಿತು. ಬೆಟ್ಟದ ಮೇಲೆ ಭೂಮಿಕಾಳನ್ನು ಕರೆದುಕೊಂಡು ಹೋಗಿರುವ ಗೌತಮ್​, ನೇರವಾಗಿ ಭೂಮಿಕಾ ಮುಖ ನೋಡಿ ಪ್ರೀತಿಯ ನಿವೇದನೆ ಮಾಡಿಕೊಳ್ಳದಿದ್ದರೂ ಬೆನ್ನು ಹಿಂದಕ್ಕೆ ಮಾಡಿ ಐ ಲವ್​ ಯೂ ಅಂದೇ ಬಿಟ್ಟಿದ್ದಾನೆ. ಗೌತಮ್​ ಬಾಯಲ್ಲಿ ಈ ಅಣಿಮುತ್ತುಗಳನ್ನು ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ನನಗೆ ಗೊತ್ತಿಲ್ಲದ ಹಾಗೆಯೇ ನಿಮ್ಮ ಮೇಲೆ ನನಗೆ ಪ್ರೀತಿ ಹುಟ್ಟಿದೆ. ಎಂಥ ಪ್ರೀತಿ ಎಂದು ನನಗೆ  ಹೇಳಿಕೊಳ್ಳಲು ಆಗ್ತಿಲ್ಲ. ನನ್ನಲ್ಲಿ ಆಗಿರೋ ಚೇಂಜಸ್​ ಹೇಳಿಕೊಳ್ಳಲು ನನಗೆ ಆಗ್ತಿಲ್ಲ. ಐ ಲವ್​ ಯೂ ಎಂದು ಹೇಳಿದ್ದಾನೆ. ಇದನ್ನು ಕೇಳಿ ಭೂಮಿಕಾಗಿಂತಲೂ ಹೆಚ್ಚು ಖುಷಿ ಸೀರಿಯಲ್​ ಫ್ಯಾನ್ಸ್​ಗೆ ಆಗಿದೆ. 

ಅಷ್ಟಕ್ಕೂ,  ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಟೂರ್​ನಲ್ಲಿದ್ದಾರೆ.  ಇದುವರೆಗೂ ಮನಸ್ಸು ಬಿಚ್ಚಿ ಐ ಲವ್​ ಯೂ ಎಂದು ಹೇಳದ ಈ ಜೋಡಿ ಹನಿಮೂನ್​ನಲ್ಲಿ ಏನು ಮಾಡಬಹುದು ಎನ್ನೋ ಕುತೂಹಲ ವೀಕ್ಷಕರದ್ದಾಗಿತ್ತು.   ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿಯುತ್ತಿದ್ದಾರೆ. ಸದಾ ಜಗಳವಾಡುತ್ತಲೇ ಮದುವೆಯಾಗಿ, ಇದೀಗ ಒಬ್ಬರನ್ನೊಬ್ಬರು ಸಕತ್​ ಲವ್​ ಮಾಡ್ತಿರೋ ಜೋಡಿ ಇದು.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ. ಇದೀಗ ಈ ಜೋಡಿ ಹನಿಮೂನ್​ಗೆ ನಾಚಿಕೊಳ್ಳುತ್ತಲೇ ಜೋಡಿ ಹೋಗಿದೆ.

ಹಿರಿಯರು ಬಂದಾಗ ಕೂತ್ಕೋಳಿ ಎನ್ನೋ ಕನಿಷ್ಠ ಪ್ರಜ್ಞೆ ಯಾರಲ್ಲೂ ಇಲ್ವಾ? ಡೈರೆಕ್ಟರ್​ಗೂ ನೆಟ್ಟಿಗರ ಕ್ಲಾಸ್​

ಇತ್ತ ಈ ಜೋಡಿ ಹೀಗೆ ಪ್ರೀತಿಯ ವಿಷಯ ಹೇಳುವುದೇ ಇಲ್ಲ ಎಂದು ತಿಳಿದಿರುವ ಆನಂದ್​ ದಂಪತಿ ಗೌತಮ್​ಗೆ ಪಾನೀಯದಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾರೆ. ಇದಾಗಲೇ ಇದೇ ರೀತಿಯ ಪ್ರಯೋಗ ಭೂಮಿಕಾ ಮೇಲೆ ಮಾಡಿಯಾಗಿತ್ತು. ಆಗ ಭೂಮಿಕಾ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಳು. ಇಷ್ಟಾದರೂ ಗೌತಮ್​ಗೆ ಅದರ ಅರಿವೇ ಇರಲಿಲ್ಲ. ಆದರೆ ಈಗ ಕಾಲ ಸ್ವಲ್ಪ ಡಿಫರೆಂಟ್​ ಆಗಿದೆ. ಪತ್ನಿಯ ಮೇಲೆ ಅವನಿಗೂ ಪ್ರೀತಿ ಮೊಳಗಿದೆ, ಆದರೆ ಹೇಳಿಕೊಳ್ಳೋ ಧೈರ್ಯ ಇಲ್ಲವಷ್ಟೇ. ಇದೇ ಕಾರಣಕ್ಕೆ ಆನಂದ್​ ದಂಪತಿ ಮದ್ಯ ಬೆರೆಸಿದ ಪಾನೀಯ ಕೊಟ್ಟಿದ್ದು, ಅದನ್ನು ಗೌತಮ್​ ಕುಡಿದಿದ್ದಾನೆ. ಆದರೂ ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಗೌತಮ್​ ತಡಕಾಡುತ್ತಿದ್ದ.

ಇದೀಗ ಆ ಕ್ಷಣ ಬಂದೇ ಬಿಟ್ಟಿದೆ. ಪತಿ-ಪತ್ನಿಯ ಮುಂದಿನ ನಡೆ ಏನು ಎನ್ನುವುದು ಈಗಿರುವ ಪ್ರಶ್ನೆ. ಆದಷ್ಟು ಬೇಗ ಮರಿ ಡುಮ್ಮನ ಕೊಡಿ ಅಂತಿದ್ದಾರೆ ಫ್ಯಾನ್ಸ್​. ಇಬ್ಬರೂ ನೂರ್ಕಾಲ ಚೆನ್ನಾಗಿ ಬಾಳಿ ಅಂತನೂ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 

ಜೋಪಾನ ಕಣೋ ಅಶೋಕಾ... ಭಾರ್ಗವಿ ಆಂಟಿ ನಿನ್​ ಮೇಲೆ ಕಣ್ಣು ಹಾಕಿದ್ದಾಳೆ ಅಂತಿರೋದ್ಯಾಕೆ ನೆಟ್ಟಿಗರು?

click me!