ಕನ್ನಡದಲ್ಲಿ ಮಾತನಾಡುವ ಮೂಲಕ ಕರ್ನಾಟಕದ ನಿರೂಪಕಿಗೆ ತಿರುಗೇಟು ಕೊಟ್ಟ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ವಿಡಿಯೋ ವೈರಲ್ ಆಗಿದೆ.
ಕರ್ನಾಟಕದ ನೆಲ, ಜಲ ಇಲ್ಲಿಯ ಆಹಾರ, ಇಲ್ಲಿಯ ಉದ್ಯೋಗ ಎಲ್ಲವೂ ಬೇಕು. ಆದರೆ ಭಾಷೆಯ ವಿಷಯ ಬಂದಾಗ 'ಕನ್ನಡ ಗೋತಿಲ' ಎಂದು ಸ್ಟೈಲ್ನಲ್ಲಿ ಹೇಳುತ್ತಾ, ಹೆಮ್ಮೆ ಪಡುವ ದೊಡ್ಡ ವರ್ಗವೇ ಇದೆ. ಹೊರ ರಾಜ್ಯಗಳವರು ಯಾಕೆ? ಕರ್ನಾಟಕದಲ್ಲಿಯೇ ಅದರಲ್ಲಿಯೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರಿಗೆ ಕನ್ನಡ ಗೊತ್ತಿಲ್ಲ ಎಂದು ಹೇಳುವುದು ಹೆಮ್ಮೆಯ ವಿಷಯ. ಎಷ್ಟೋ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎನ್ನುತ್ತಲೇ ಕಂಡ ಕಂಡವರ ಬಳಿ ಹೆಮ್ಮೆಯಿಂದ ಹೇಳಿಕೊಳ್ಳುವುದೂ ಇದೆ. ಇಂಗ್ಲಿಷ್ ನಾಡಿನಲ್ಲಿಯೇ ಹುಟ್ಟಿ ಬೆಳೆದವರಂತೆ ಮನೆಯಲ್ಲಿ ಮಕ್ಕಳ ಜೊತೆ ಕನ್ನಡ ಬಿಟ್ಟು ಇಂಗ್ಲಿಷ್ನಲ್ಲಿ ಮಾತನಾಡುವವರು ಅದೆಷ್ಟು ಮಂದಿ ಬೇಕು? ಅದು ಅವರಿಗೆ ಹೆಮ್ಮೆಯ ವಿಷಯ. ಇಂಗ್ಲಿಷ್ನಲ್ಲಿ ಮಾತನಾಡಲು ಬರುವುದಿಲ್ಲ ಎಂದು ನಾಚಿಕೆ, ಮುಜುಗರ ಪಡುವ ದೊಡ್ಡ ವರ್ಗವೇ ಇದೆ. ಆದರೆ ಕನ್ನಡದ ವಿಷಯಕ್ಕೆ ಬಂದಾಗ ಖುಷಿಯಿಂದ 'ಕನ್ನಡ ಗೋತಿಲ' ಎನ್ನುತ್ತಾರೆ.
ಅದೇ ರೀತಿ ಇದೀಗ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ನಟನಿಗೆ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ನಮ್ಮ ಹುಬ್ಬಳ್ಳಿ ಮೀಮ್ಸ್ ಇದರ ವಿಡಿಯೋ ಶೇರ್ಮಾಡಿದೆ. ರೆಡಿಯೋ ನಿರೂಪಕಿಯೊಬ್ಬರಿಗೆ ಕನ್ನಡ ಗೊತ್ತಿದೆಯೇ ಎಂದು ಕೇಳಿದಾಗ ಆಕೆ ಮಾಮೂಲಿನಂತೆ ಕನ್ನಡ ಗೋತಿಲ ಎನ್ನುವುದು ಬಿಟ್ಟರೆ ನನಗೆ ಏನೂ ಬರುವುದಿಲ್ಲ. ಯಾರು ಕೇಳಿದರೂ ಇದನ್ನೇ ಹೇಳುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಆಗ ಇದನ್ನು ಕೇಳಿ ನಟನಿಗೆ ಸ್ವಲ್ಪ ಶಾಕ್ ಆಗಿದೆ. ನಂತರ ನನಗೆ ಕನ್ನಡ ಗೊತ್ತಿದೆ ಎನ್ನುತ್ತಲೇ ಸ್ಪಷ್ಟವಾಗಿ 'ನೀವು ಒಳ್ಳೆಯ ಹುಡುಗಿ, ಒಳ್ಳೆಯ ಷೋ, ನಾನು ನಿನ್ನನ್ನು ಇಷ್ಟಪಡುತ್ತೀನಿ' ಎಂದು ಹೇಳಿದ್ದಾರೆ. ಇದನ್ನು ಕೇಳಿ ನಿರೂಪಕಿ ಅಚ್ಚರಿ ಪಟ್ಟಿದ್ದಾರೆ. ಇದರ ವಿಡಿಯೋಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದ್ದು, ನಿರೂಪಕಿಯಂತೆ ಸ್ಟೈಲ್ ಮಾಡುವವರ ವಿರುದ್ಧ ಟೀಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
undefined
ಹಿರಿಯರು ಬಂದಾಗ ಕೂತ್ಕೋಳಿ ಎನ್ನೋ ಕನಿಷ್ಠ ಪ್ರಜ್ಞೆ ಯಾರಲ್ಲೂ ಇಲ್ವಾ? ಡೈರೆಕ್ಟರ್ಗೂ ನೆಟ್ಟಿಗರ ಕ್ಲಾಸ್
ಇನ್ನು ಆಯುಷ್ಮಾನ್ ಖುರಾನಾ ಅವರ ಕುರಿತು ಹೇಳುವುದಾದರೆ, ಇವರು 2012ರಲ್ಲಿ ‘ವಿಕ್ಕಿ ಡೋನರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ರು. ಅವರು ಬಾಲಿವುಡ್ ನಲ್ಲಿ ವಿಭಿನ್ನ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲದೆ, ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಎಂಟಿವಿ ರೋಡೀಸ್ ನ ಎರಡನೇ ಸೀಸನ್ ಗೆದ್ದ ನಂತರ ನಟ ಪ್ರಸಿದ್ಧಿಗೆ ಬಂದರು, ನಂತರ ಅವರು ತಮ್ಮ ವೃತ್ತಿಜೀವನವನ್ನು ಆಂಕರಿಂಗ್ ಆಗಿ ಮುನ್ನಡೆಸಿದರು.
ಇವರು ತಮ್ಮ ನಟನೆ ಮತ್ತು ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಡಿಸೈನರ್ ಕುರಿತು ವಿಷಯ ಹೇಳಿದ್ದರು. “ನಾನು ದಿಲ್ಜಿತ್ ದೋಸಾಂಜ್ ಅವರ ಸ್ಟೈಲಿಂಗ್ ಅನ್ನು ಇಷ್ಟಪಡುತ್ತೇನೆ. ಪ್ರಪಂಚದಾದ್ಯಂತದ ಜನರು ಸ್ಟೈಲ್ ನಿಂದ ಪ್ರಭಾವಿತರಾಗಿದ್ದಾರೆ. ಇದೇ ವೇಳೆ ಬಾಲಿವುಡ್ ನಟರು ಬಟ್ಟೆಗಳನ್ನು ಖರೀದಿಸುವುದಿಲ್ಲ, ಅವರು ಅವುಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಆದ್ದರಿಂದ ಇಡೀ ಬಾಲಿವುಡ್ ಬಾಡಿಗೆಯಲ್ಲಿದೆ ಎನ್ನುವ ಮೂಲಕ ಚರ್ಚಾಸ್ಪದ ಹೇಳಿಕೆಯನ್ನೂ ನೀಡಿದ್ದರು. ಅಷ್ಟಕ್ಕೂ ನಾವು ಸ್ಟೈಲಿಸ್ಟ್ ಗಳನ್ನು ನೇಮಿಸಿಕೊಳ್ಳುತ್ತೇವೆ. ಅವರು ನಮಗೆ ಬಟ್ಟೆಗಳನ್ನು ಆರ್ಡರ್ ಮಾಡುತ್ತಾರೆ ಮತ್ತು ನಂತರ ಅವುಗಳನ್ನು ಹಿಂತಿರುಗಿಸುತ್ತಾರೆ. ಅಷ್ಟೊಂದು ಬಟ್ಟೆಗಳನ್ನು ನಾವು ಖರೀದಿಸಿದ್ರೆ ಎಲ್ಲಿ ಸಂಗ್ರಹಿಸೋದು, ಅದಕ್ಕಾಗಿಯೇ ಎಲ್ಲವೂ ಬಾಡಿಗೆ ಎಂದಿದ್ದರು.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?