ವಾಟರ್ ಮಿಕ್ಸ್‌ ,5 ಮಿರ್ಚಿ; ಮೆಣಸಿನಕಾಯಿ ಬಜ್ಜಿ ಮಾಡಿದ ನಿವೇದಿತಾ ಹಿಗ್ಗಾಮುಗ್ಗಾ ಟ್ರೋಲ್

By Vaishnavi Chandrashekar  |  First Published Dec 5, 2022, 2:37 PM IST

 ಮೆಣಸಿನಕಾಯಿ ಬಜ್ಜಿ ಮಾಡಿ ಟ್ರೋಲ್ ಆದ ನಿವೇದಿತಾ ಗೌಡ. ಹೆಮ್ಮೆ ಪಡೋ ವಿಚಾರ ಇದೇನಲ್ಲ ಬಿಡ ಎಂದ ನೆಟ್ಟಿಗರು...
 


ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಯೂಟ್ಯೂಬ್‌ ಚಾನೆಲ್‌ಗೆ ಕಮ್‌ ಬ್ಯಾಕ್ ಮಾಡಿದ್ದಾರೆ. ವೆರೈಟಿ ಅಡುಗೆ ಮಾಡುವ ನಿವಿ ಈ ಸಲ ಸಿಂಪಲ್ ಆಗಿ ಮೆಣಸಿನಕಾಯಿ ಬಜ್ಜಿ ಮಾಡಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿ ಬಜ್ಜಿ ಮಾಡುವುದನ್ನು ಕಲಿತಿರುವ ನಿವಿ ಮಾತನಾಡಿರುವ ಶೈಲಿಗೆ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಮಾತೃ ಭಾಷೆ ಕನ್ನಡ ಬಳಸಮ್ಮ ಎಂದಿದ್ದಾರೆ.

ನಿವಿ ಅಡುಗೆ:

Tap to resize

Latest Videos

'ನಾನು ಮತ್ತೊಮ್ಮೆ ಅಡುಗೆ ಮಾಡಲು ಶುರು ಮಾಡಿರುವೆ. ಇದೇ ಮೊದಲು ನಾನು ಮೆಣಸಿನಕಾಯಿ ಬಜ್ಜೆ ಮಾಡುತ್ತಿರುವುದು. ಬಜ್ಜೆ ಮಾಡುವುದು ಹೇಗೆ ಎಂದು ತಿಳಿದುಕೊಂಡ ನಂತರ ನಾನು ಅಯ್ಯೋ ಇಷ್ಟೊಂದು ಸಲಭ ಅಂತ ಅನಿಸುತ್ತಿದೆ. ಮೊದಲು ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಬೇಕಿಂಗ್ ಪೌಡರ್, ಖಾರದ ಪುಡಿ, ಎಣ್ಣಿ ಮತ್ತು ಉಪ್ಪು ಹಾಕಿ  ಮಿಕ್ಸ್‌ ಮಾಡಬೇಕು. ಈಗ ನೋಡಿ ಅಡುಗೆ ವಿಡಿಯೋದಲ್ಲಿ ಎಷ್ಟು ಎನರ್ಜಿಯಿಂದ ಕೆಲಸ ಮಾಡುತ್ತೀನಿ ಕಳೆದ ಅಡುಗೆ ವಿಡಿಯೋ ಮಾಡುವಾಗ ಭಯ ಇತ್ತು..ಈಗ ಧೈರ್ಯದಿಂದ ಮಾಡುತ್ತಿರುವೆ' ಎಂದು ನಿವೇದಿತಾ ಗೌಡು ಅಡುಗೆ ಕೆಲಸ ಶುರು ಮಾಡಿದ್ದಾರೆ.

ಎಲ್ಲಾ ಹಾಕಿದ ನಿವೇದಿತಾ ಗೌಡ ನೀರು ಹಾಕಿಕೊಳ್ಳುವುದನ್ನೇ ಮರೆತು ಬಿಟ್ಟಿದ್ದರು. ಹೀಗಾಗಿ ಪದೇ ಪದೇ ನೀರು ಹಾಕಿ ಹಿಟ್ಟು ರೆಡಿ ಮಾಡುತ್ತಿದ್ದರು. 'ನನಗೆ ನಂಬಲು ಆಗುತ್ತಿಲ್ಲ ಇಷ್ಟು ಬೇಗ ಅಡುಗೆ ಕೆಲಸ ಮಾಡುತ್ತಿರುವೆ ಖಂಡಿತ ಬೆಂಗಳೂರಿನಲ್ಲಿ ಮಳೆ ಬರಲಿದೆ. ಹಿಟ್ ರೆಡಿ ಆದ್ಮೇಲೆ ಒಂದು ಚೂರು ರುಚಿ ನೋಡಬೇಕು. ಮೆಣಸಿನಕಾಯಿ ಬಜ್ಜಿ ಮಾಡಲು 5 ಮೆಣಸು ತೆಗೆದುಕೊಂಡಿರುವ ಎಲ್ಲವೂ ಅರ್ಧ ಕಟ್ ಮಾಡಿ ಬಜ್ಜೆ ಮಾಡುವೆ. ಎಷ್ಟು ಸೂಪರ್ ಆಗಿ ಮಾಡುತ್ತಿರುವೆ ಅಂದ್ರೆ ಕೆಲವು ದಿನಗಳಲ್ಲಿ ನಾನೇ ಅಂಗಡಿ ತೆಗೆಯಬಹುದು. ಒಂದು ಪ್ಲೇಟ್ ಬಜ್ಜಿಗೆ 1000 ರೂಪಾಯಿ ಕೊಡಬೇಕು.' ಎಂದು ಹೇಳಿದ್ದಾರೆ.

'ಅಡುಗೆ ಮಾಡುವಾಗ ನಾನು ಸ್ಲೋ ಆದರೆ ಬಜ್ಜೆ ಮಾಡುವಾಗ ತುಂಬಾನೇ ಫಾಸ್ಟ್‌ ಇದ್ದೀನಿ.  ನಾನು ಪ್ರತಿ ಸಲ ಡಯಟ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದಾಗ ಏನಾದರೂ ಒಂದು ಕೆಲಸ ಬರುತ್ತದೆ. ಬಜ್ಜಿ ಮಾಡುವುದು ಸುಲಭ ಮಾಡಿದ ಮೇಲೆ ಅಡುಗೆ ಮನೆ ಕ್ಲೀನ್ ಮಾಡುವುದು ತುಂಬಾನೇ ಕಷ್ಟ ಆಗುತ್ತದೆ.' ಎಂದಿದ್ದಾರೆ ನಿವಿ.

ಮನೆ ಕೆಲಸ ಮಾಡೋಕೆ ಇಷ್ಟನೇ ಇಲ್ಲ, ಗಂಡನ್ ಕೆಲ್ಸಾನೂ ನಾನೇ ಮಾಡ್ಬೇಕು: ನಿವೇದಿತಾ ಗೌಡ

ಅಡುಗೆ ಮಾಡುವಾಗ ನಿವಿ ತುಂಬಾನೇ ಆಂಗ್ಲ ಪದಗಳನ್ನು ಬಳಸಿದ್ದಾರೆ..ವಾಟರ್, ಮಿರ್ಜಿ ಹಾಗೆ ಹೀಗೆ ಅಂತ. ಕನ್ನಡ ಬಂದರೂ ಮಾತನಾಡಲು ಕಷ್ಟ ಪಡುತ್ತಿರುವ ದಡ್ಡಿ ಎಂದು ಕಾಲೆಳೆದಿದ್ದಾರೆ. ಒಂದು ಬಜ್ಜಿ ಮಾಡುವುದು ಇಷ್ಟೊಂದು ಕಷ್ಟನಾ? ನೂರಾರು ಜನರಿಗೆ ಅಡುಗೆ ಮಾಡುವ ಹೆಣ್ಣು ಮಕ್ಕಳಿದ್ದಾರೆ ನೀನು ಬಜ್ಜಿ ಮಾಡುವುದನ್ನು ವಿಡಿಯೋ ಮಾಡಬೇಕಾ? ಓವರ್ ಆಕ್ಟಿಂಗ್ ಮಾಡುತ್ತಿರುವ ಎಂದು ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.

ನೆಟ್ಟಿಗರಿಗೆ ಟಾಂಗ್‌ ಕೊಟ್ಟ ನಿವಿ:

'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್‌ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ.ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್‌ ಮಾಡುತ್ತಿರುವೆ ಎಂದು ಕಾಮೆಂಟ್‌ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್‌ ಸೆಟ್‌ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.

 

click me!