ಪಾರ್ಟಿಗೆ ಹೋಗಿ ಕುಡಿಯುವ ವಿಚಾರದಲ್ಲಿ ಅಮೃತಧಾರೆ ಗೌತಮ್ ಮತ್ತು ಭೂಮಿಕಾ ಮಧ್ಯೆ ಜಗಳ ಶುರುವಾಗಿದೆ. ಪ್ರೋಮೋ ನೋಡಿ ಫ್ಯಾನ್ಸ್ ಹೇಳ್ತಿರೋದೇನು?
ಮದುವೆಯಾಗದವರಿಗೆ ಮದುವೆ ಯಾವಾಗ ಎನ್ನುವ ಒಂದೇ ಚಿಂತೆ, ಮದ್ವೆಯಾದ ಮೇಲೆ ನೂರಾರು ಚಿಂತೆ ಎನ್ನುವ ಹಳೆಯ ನಾಣ್ಣುಡಿ ಇದೆ. ಮದುವೆಯಾಗಲು ಗಂಡು ಸಿಗುತ್ತಿಲ್ಲ, ಹೆಣ್ಣು ಸಿಗುತ್ತಿಲ್ಲ ಎಂದು ಪರದಾಡುವ ಯುವಕರು ಅದೆಷ್ಟೋ ಮಂದಿ. ವಯಸ್ಸು ಮೀರಿದರೂ ಮದುವೆಗಾಗಿ ಪರದಾಡುತ್ತಿರುವವರು ಹಲವರು. ಅದೇ ಇನ್ನೊಂದೆಡೆ ಮದುವೆಯಾದವರು ಸಾಮಾನ್ಯವಾಗಿ ಹೇಳುವ ಮಾತು ಮದ್ವೆಯಾಗಿ ತಪ್ಪು ಮಾಡಿಬಿಟ್ಟೆ ಎಂದು. ಒಟ್ಟಿನಲ್ಲಿ ಇದ್ದದ್ದು ಯಾರಿಗೂ ಬೇಡ ಎನ್ನುವುದು ನಿಜವೇ ಆದರೂ, ಮದುವೆಯಾದ ಮೇಲೆ ಪ್ರತಿಯೊಬ್ಬರೂ ಒಂದಿಷ್ಟು ಬದಲಾಗಲೇಬೇಕು ಎನ್ನುವುದು ಕೂಡ ಅಷ್ಟೇ ದಿಟ. ಸಿಂಗಲ್ ಆಗಿದ್ದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಹಾಗೆ ಮಾಡಬಹುದು. ಆದರೆ ಮದುವೆಯ ಬಂಧನಕ್ಕೆ ಒಳಪಟ್ಟಮೇಲೆ ಒಂದಿಷ್ಟು ರೂಲ್ಸ್ ಫಾಲೋ ಮಾಡಲೇಬೇಕು. ಇದನ್ನು ತೋರಿಸಿಕೊಟ್ಟಿದೆ ಅಮೃತಧಾರೆ ಸೀರಿಯಲ್.
ವಿಭಿನ್ನ ಕಥಾಹಂದರ ಹೊಂದಿರುವ ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್, ಧಾರಾವಾಹಿ ಪ್ರಿಯರ ಮನಸ್ಸನ್ನು ಕದ್ದಿದೆ. ಭೂಮಿಕಾ (Bhoomika) ಅಮೃತಧಾರೆ ಸೀರಿಯಲ್ ನಾಯಕಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಪಾತ್ರ ಈ ಭೂಮಿಕಾಳದ್ದು. ಭೂಮಿಕಾ ಪಾತ್ರಕ್ಕೆ ಜೀವ ತುಂಬಿರೋ ನಟಿಯ ಅಸಲಿ ಹೆಸರು ಛಾಯಾ ಸಿಂಗ್. ಕೋಟ್ಯಧೀಶ್ವರ ಬಿಜಿನೆಸ್ಮೆನ್ ಆಗಿ ನಟಿಸುತ್ತಿರುವವರು ಗೌತಮ್. ಟಿಆರ್ಪಿಯಲ್ಲಿಯೂ ಮುಂದಿರೋ ಈ ಸೀರಿಯಲ್ನಲ್ಲಿ ಈ ಜೋಡಿಯನ್ನು ಪ್ರೇಕ್ಷಕರು ಸಕತ್ ಇಷ್ಟಪಡುತ್ತಿದ್ದಾರೆ. ಇವರನ್ನೇ ಜನರು ನೆಚ್ಚಿನ ನಾಯಕರಾಗಿ ಸ್ವೀಕರಿಸಿದ್ದು, ಜೀ ಕನ್ನಡ ಕೂಡ ಅವರನ್ನೇ ಆಯ್ಕೆ ಮಾಡಿದೆ.
ಹೆಣ್ಣಿನ ಮೇಲೆರಗಲು ಬಂದವನಿಗೆ ಒದ್ದು ಬುದ್ಧಿ ಕಲಿಸಿದ ಸಹನಾ, ಅತ್ತೆಗೂ ಹಿಂಗೆ ಬುದ್ಧಿ ಕಲಿಸೆಂದ ನೆಟ್ಟಿಗರು!
ಈ ಧಾರಾವಾಹಿಯಲ್ಲಿ ಇಬ್ಬರೂ ಮಧ್ಯ ವಯಸ್ಕರು. ಇಷ್ಟವಿಲ್ಲದೇ ಅನಿವಾರ್ಯ ಕಾರಣಗಳಿಂದ ಮದುವೆಯಾಗಿದ್ದರೂ ಪತಿ-ಪತ್ನಿಯಾಗಿ ಬಾಳುತ್ತಿಲ್ಲ. ಹಾಗೆಂದು ಇಬ್ಬರ ನಡುವೆ ತಮಗೆ ಅರಿವಿಲ್ಲದೇ ಪ್ರೀತಿ ಮೊಳಗುತ್ತಿದೆ ಎಂದು ತಿಳಿದುಕೊಳ್ಳದಷ್ಟೂ ದಡ್ಡರಲ್ಲ. ಆದರೆ ಅದನ್ನು ಒಪ್ಪಿಕೊಳ್ಳುತ್ತಿಲ್ಲವಷ್ಟೇ. ಇದೇ ಕಾರಣಕ್ಕೆ ಸಣ್ಣಪುಟ್ಟ ವಿಷಯಕ್ಕೂ ಇಬ್ಬರಿಗೂ ಭಿನ್ನಾಭಿಪ್ರಾಯ ಬಂದು ಜಗಳವಾಡುವುದು ನಡೆದೇ ಇದೆ. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇಷ್ಟವಿರಲಿ, ಇಷ್ಟವಿಲ್ಲದೇ ಇರಲಿ ವಿವಾಹಿತ ಆದ್ಮೇಲೆ ಒಂದಿಷ್ಟು ರೂಲ್ಸ್ ಫಾಲೋ ಮಾಡ್ಲೇಬೇಕು ಎನ್ನುವುದನ್ನು ತೋರಿಸಿಕೊಟ್ಟಿದೆ.
ಅಷ್ಟಕ್ಕೂ ಗೌತಮ್ ದೊಡ್ಡ ಬಿಜಿನೆಸ್ಮೆನ್. ಪಾರ್ಟಿ ಗೀರ್ಟಿ ಅಂತ ಹೋದ್ಮೆಲೆ ಕುಡಿಯುವುದು ಇದ್ದೇ ಇರುತ್ತದೆ. ಅದೇ ಕಾರಣಕ್ಕೆ ಪತ್ನಿ ಭೂಮಿಕಾಳನ್ನು ಕರೆದುಕೊಂಡು ಹೋಗುವ ಮನಸ್ಸು ಮಾಡಿರಲಿಲ್ಲ. ಆದರೆ ಆತನ ಸ್ನೇಹಿತನ ಒತ್ತಾಯಕ್ಕೆ ಭೂಮಿಕಾ ರೆಡಿಯಾಗಿದ್ದಾಳೆ. ತಾನು ಯಾಕೆ ನಿನ್ನನ್ನು ಕರೆಯಲಿಲ್ಲ ಎನ್ನುವುದಕ್ಕೆ ನಿಜ ಹೇಳಿ ಗೌತಮ್ ಪೇಚಿಗೆ ಸಿಲುಕಿದ್ದಾನೆ. ಅಲ್ಲಿ ಸ್ವಲ್ಪ ಕುಡಿಯಬೇಕು, ಅದಕ್ಕೇ ಕರೆಯಲಿಲ್ಲ ಎಂಬ ಸತ್ಯ ಕೇಳುತ್ತಿದ್ದಂತೆಯೇ ಭೂಮಿಕಾ ರೇಗಿ ಹೋಗಿದ್ದಾಳೆ. ನಾನು ಬರುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಕುಡಿಯುವುದು ನಂತರ ಗಾಡಿ ಡ್ರೈವ್ ಮಾಡುವುದು, ಪೊಲೀಸರು ಹಿಡಿಯುವುದು... ಬೇಡಪ್ಪಾ ಬೇಡ ಸಹವಾಸ ಎಂದು ಗಂಡನಿಗೆ ಬೈದಳು. ತಾವು ಸ್ವಲ್ಪವೇ ಕುಡಿಯುವುದು ಎಂದು ಗಂಡ ಹೇಳಿದರೂ ಈಕೆ ಕೇಳಲಿಲ್ಲ. ಕೊನೆಗೆ ಬೇರೆ ವಿಧಿ ಕಾಣದೇ ಸರಿ ಪಾರ್ಟಿ ಮುಗಿದ ಮೇಲೆ ಡ್ರೈವರ್ನನ್ನು ಕರೆಯುತ್ತೇನೆ. ಅವನೇ ಗಾಡಿ ಓಡಿಸುತ್ತಾನೆ. ಈಗಲಾದ್ರೂ ಬನ್ನಿ ಎಂದಾಗ ಒಲ್ಲದ ಮನಸ್ಸಿನಿಂದ ಭೂಮಿಕಾ ಒಪ್ಪುತ್ತಾಳೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್ ಊರ್ಮಿಳಾ: ನಟಿಯ ಕುರಿತು ಇಂಟರೆಸ್ಟಿಂಗ್ ಮಾಹಿತಿ...
ಇದೇ ಕಾರಣಕ್ಕೆ ಪ್ರೊಮೋದಲ್ಲಿ ಸಂಸಾರಿ ಆಗಿರೋ ಗೌತಮ್ ದಿವಾನ್... ಪಾರ್ಟಿ ಮಾಡ್ಬೇಕು ಅಂದ್ರೆ ರೂಲ್ಸ್ ಪಾಲಿಸ್ಲೇ ಬೇಕು ಎಂದು ತಿಳಿಸಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿದ್ದು, ಬ್ಯಾಚುಲರ್ ಲೈಫೇ ಒಳ್ಳೇದಪ್ಪ ಅಂತಿದ್ದಾರೆ ಹಲವರು. ಸಂಸಾರಿ ಆಗೋದು ಎಂದ್ರೆ ಸುಮ್ನೇನಾ ಅಂತಿದ್ದಾರೆ ಮತ್ತೆ ಕೆಲವರು.