ಚಂದನವನದ ಚಂದನ್ ಮತ್ತು ಕವಿತಾಗೆ ಮುದ್ದು ಮಗು ಜನಿಸಿದೆ. ಗಂಡು ಮಗುವಿಗೆ ಪೆರೆಂಟ್ಸ್ ಆಗಿರುವ ಜೋಡಿಗೆ ಫ್ಯಾನ್ಸ್ ಟಿಪ್ಸ್ ನೀಡೋಕೆ ಶುರು ಮಾಡಿದ್ದಾರೆ. ಚಂದನ್ ವಿಡಿಯೋ ಹಾಕಿದ್ದೇ ಹಾಕಿದ್ದು, ಕಮೆಂಟ್ ಸುರಿಮಳೆಯಾಗ್ತಿದೆ.
ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದನ್ ಗೌಡ (Lakshmi Baramma fame actor Chandan Gowda) ಹಾಗೂ ನಟಿ ಕವಿತಾ ಗೌಡ (actress Kavita Gowda) ಈಗ ಅಪ್ಪ – ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಅವರಿಬ್ಬರಿಗೆ ಮುದ್ದಾದ ಗಂಡು ಮಗು ಜನಿಸಿದೆ. ಸೆಪ್ಟೆಂಬರ್ 19ರಂದು ಕವಿತಾ, ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ (Social Media) ದಲ್ಲಿ ಹಂಚಿಕೊಂಡಿದ್ದರು. ಈಗ ಚಂದನ್ ತಮ್ಮ ಮಗನ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದು, ಅದ್ರ ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಂದನ್ ಗೌಡ, ಹೊಸ ಮುಂಜಾನೆ ಎಂದು ಶೀರ್ಷಿಕೆ ಹಾಕಿ, ಹಾರ್ಟ್ ಎಮೋಜಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಂದನ್ ಬೆಡ್ ಮೇಲೆ ಮಲಗಿದ್ದು, ನವಜಾತ ಶಿಶು ಅವರ ಎದೆ ಮೇಲೆ ಬೋರಲಾಗಿ ಮಲಗಿದೆ. ಚಂದನ್ ಮಗುವಿನ ತಲೆ ಮುಟ್ತಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಇನ್ನೂ ಅರ್ಧ ಗಂಟೆಯಾಗಿಲ್ಲ ಆಗ್ಲೇ ಮುನ್ನೂರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜೊತೆಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಚಂದನ್ ಗೆ ಬಳಕೆದಾರರು ಪೆರೆಂಟಿಂಗ್ ಟಿಪ್ಸ್ ನೀಡಲು ಶುರು ಮಾಡಿದ್ದಾರೆ.
undefined
ವೀಕ್ಷಕರ ಕಮೆಂಟ್ ಗೆ ಹೆದರಿದ್ರಾ ಡೈರೆಕ್ಟರ್, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ
ಚಂದನ್ ಮಗು ಹುಟ್ಟಿ ಈಗಷ್ಟೇ ಐದು ದಿನವಾಗ್ತಿದೆ. ಆಸ್ಪತ್ರೆಯಿಂದ ತಾಯಿ, ಮಗು ಮನೆಗೆ ಬಂದಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ. ಆದ್ರೆ ನವಜಾತ ಶಿಶುವನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಬೇಕು. ಮಗು ತುಂಬಾ ಚಿಕ್ಕದಾಗಿದೆ. ಹಾಗಾಗಿ ಈ ರೀತಿ ನಿಮ್ಮ ಎದೆ ಮೇಲೆ ಬೋರಲಾಗಿ ಮಲಗಿಸಿಕೊಳ್ಬೇಡಿ. ಮಗುವನ್ನು ಎತ್ತಿಕೊಳ್ಳಿ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಮಗು ಜೊತೆ ಇರುವಾಗ ವಿಡಿಯೋ ರೆಕಾರ್ಡ್ ಮಾಡ್ಬೇಡಿ ಎಂದು ಚಂದನ್ ಗೆ ಅಭಿಮಾನಿಗಳು ಸೂಚನೆ ನೀಡಿದ್ದಾರೆ. ಮೊಬೈಲ್ ರೇಡಿಯೇಷನ್ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಗು ಬಳಿ ಇರುವಾಗ ಮೊಬೈಲ್ ಬಳಸಬೇಡಿ ಎಂದಿದ್ದಾರೆ ಅಭಿಮಾನಿಗಳು.
ಒಂದ್ಕಡೆ ಚಂದನ್ ಗೆ ಅಭಿಮಾನಿಗಳು ಸಲಹೆ ನೀಡಿದ್ರೂ ಇನ್ನೊಂದು ಕಡೆ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಇದು ತಂದೆ – ತಾಯಿಗೆ ಬಹಳ ವಿಶೇಷ. ಪೆರೆಂಟಿಂಗ್ ಎಂಜಾಯ್ ಮಾಡಿ ಎಂದಿರುವ ನೆಟ್ಟಿಗರು, ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ. ಚಂದನ್ ಹಾಗೂ ಕವಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕವಿತಾ ಗೌಡ, ಗರ್ಭಿಣಿಯಾಗಿದ್ದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದರು. ಅನೇಕ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಕವಿತಾ ಸೀಮಂತ ಕಾರ್ಯಕ್ರಮ ಫ್ಯಾನ್ಸ್ ಗಮನ ಸೆಳೆದಿತ್ತು. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕವಿತಾಗೆ ಹರಸಿದ್ದರು.
Dr bro ಗೆ ಬಿಗ್ ಬಾಸ್ ಗೆ ಬನ್ನಿ ಅಂದ್ರೆ, ಬೇಡ ವಿಡಿಯೋ ಪೋಸ್ಟ್ ಮಾಡ್ತೀರಿ ಸಾಕೆಂದ ಫ್ಯಾನ್ಸ್!
ಕವಿತಾ ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಹೋಗಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ನಗ್ತಾ ನಗ್ತಾ ಹೆರಿಗೆಗೆ ಹೋಗಿದ್ದ ಕವಿತಾ, ಗಂಡು ಮಗುವಿಗೆ ಜನ್ಮ ನೀಡಿ ಸಂಭ್ರಮಿಸಿದ್ದರು. ಯುವರಾಜನ ಆಗಮನ ಎಂದು ಪೋಸ್ಟ್ ಹಾಕಿದ್ದರು. ಚಂದನ್ ಪುಟಾಣಿ ಮಗುವಿನ ಕಾಲು ತೋರಿಸಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದ ಕವಿತಾ ಗೌಡಗೆ ಮನೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಮಗುವನ್ನು ಹಿಡಿದು ಚಂದನ್ ಮನೆಗೆ ಬಂದ್ರೆ ಪುಟ್ಟ ಸಸಿಯನ್ನು ಹಿಡಿದು ಮನೆಗೆ ಬಂದಿದ್ದರು. ಇದು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಚಂದನ್, ಕವಿತಾ ಜೊತೆ ಮಗುವನ್ನು ಸ್ವಾಗತಿಸಿರುವ ಫ್ಯಾನ್ಸ್, ಸದಾ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ಚಂದನವನದಲ್ಲಿ ಅನೇಕ ನಟಿಯರು ಅಮ್ಮನಾಗ್ತಿದ್ದಾರೆ. ಲಕ್ಷ್ಮಿ ಬಾರಮ್ಮ ಫೇಮ್ ನ ಕವಿತಾ ಗೌಡ ಹಾಗೂ ನೇಹಾ ಇಬ್ಬರೂ ಒಂದೇ ಬಾರಿ ಗರ್ಭಿಣಿಯಾಗಿದ್ದು, ನೇಹಾಗೆ ಯಾವ ಮಗು ಎನ್ನುವ ಕುತೂಹಲದಲ್ಲಿ ಈಗ ಅಭಿಮಾನಿಗಳಿದ್ದಾರೆ.