ರವಿ ಬೆಳಗೆರೆ ಆರೋಗ್ಯದಲ್ಲಿ ದಿಢೀರನೇ ಬದಲಾವಣೆ | ಬಿಗ್ ಬಾಸ್ ಮನೆಯಿಂದ ಪದ್ಮನಾಭ ನಿವಾಸಕ್ಕೆ ಬಂದಿದ್ದರು | ಇದೀಗ ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ
ಅನಾರೋಗ್ಯ ನಿಮಿತ್ತ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಪತ್ರಕರ್ತ ರವಿ ಬೆಳೆಗೆರೆ ಈಗ ಆರಾಮಾಗಿದ್ದು ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ಎನ್ನಲಾಗಿದೆ.
ರಾತ್ರಿ ಬಾತ್ ರೂಮ್ ಗೆ ಹೋದ ವೇಳೆ ಕಾಲು ಜಾರಿ ಬಿದ್ದಿದ್ದರು. ಶುಗರ್ ಲೆವೆಲ್ ಹೆಚ್ಚು ಕಡಿಮೆ ಆಗಲು ಶುರುವಾಗಿತ್ತು. ಕೂಡಲೇ ಅವರನ್ನು ಪದ್ಮನಾಭ ನಿವಾಸಕ್ಕೆ ಕರೆ ತರಲಾಗಿತ್ತು. ಇದೀಗ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು ಮತ್ತೆ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.
undefined
ಬಿಗ್ ಬಾಸ್ ಮನೆಯೊಳಗೆ ಹೋಗಿ 38 ಗಂಟೆಯೊಳಗೆ ಹೊರಬಿದ್ದ ರವಿ ಬೆಳಗೆರೆ?
ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಸುದೀಪ್ ಜೊತೆ ಫುಲ್ ಜೋಶ್ ನಲ್ಲಿಯೇ ಮಾತನಾಡಿದ್ದರು. ನನ್ನ ಜೀವನದ ಅನುಭವಗಳನ್ನು ನನಗಿಂತ ಕಿರಿಯರಿಗೆ ಕಲಿಸಿಕೊಡಲು ಮನೆಯೊಳಗೆ ಹೋಗುತ್ತಿದ್ದೇನೆ. ನಿಮಗೆ ಇದುವರೆಗೂ ಗೊತ್ತಿರಲಿಕ್ಕಿಲ್ಲ. ನನಗೆ ಜ್ಯೋತಿಷ್ಯ ಹೇಳುವುದಕ್ಕೂ ಬರುತ್ತದೆ. ಮನೆಯೊಳಗೆ ಹೇಗೆಲ್ಲಾ ಭವಿಷ್ಯ ಹೇಳುತ್ತೀನಿ ನೀವೇ ಕೇಳಿ’ ಎಂದು ಸುದೀಪ್ ಗೆ ಹೇಳಿ ಗಮನ ಸೆಳೆದಿದ್ದರು.
40 ರಿಂದ 38 ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ
ಇದೀಗ ಮತ್ತೆ ಮನೆಯೊಳಗೆ ಹೋಗಿದ್ದು ಇನ್ನಷ್ಟು ರಂಗು ಬಂದಂತಾಗಿದೆ. ಬಿಗ್ ಬಾಸ್ ಕಳೆಯೇರಲಿದೆ. ಮನೆಯೊಳಗೆ ಭವಿಷ್ಯ ಹೇಗೆಲ್ಲಾ ಹೇಳುತ್ತಾರೆ? ಸ್ಪರ್ಧಿಗಳ ಜೊತೆ ಹೇಗೆಲ್ಲಾ ಇರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: