ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್!
ಅಪಾರ ಅಭಿಮಾನಿ ಬಳಗ ಹೊಂದಿರುವ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುತ್ತಿರುತ್ತಾರೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್ ಎಂಜಾಯ್ ಮಾಡ್ತಿರೋ ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಈಕೆ ಇನ್ಸ್ಟಾಗ್ರಾಮ್ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಇನ್ನು ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ', 'ಸೂತ್ರಧಾರಿ' ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಹೊಸ ಚಿತ್ರಕ್ಕೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಹೆಸರಿಡಲಾಗಿದೆ. ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ಈ ಟೈಟಲ್. ಈ ಹಿಂದೆ ಶ್ರೀಮುರಳಿ, ಅಕುಲ್ ಬಾಲಾಜಿ, ಶ್ರೀಕಿ ನಟಿಸಿದ್ದ 'ಲೂಸ್‌ಗಳು' ಸಿನಿಮಾವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ಅವರು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಬಾರ್ಬಿಡಾಲ್ ರೂಪದಲ್ಲಿ ನಿವೇದಿತಾ ವಿಡಿಯೋ! ಹಾರ್ಟ್ ಬೀಟ್ ಹೆಚ್ತಿದೆ ಗೊಂಬೆ ಅಂತಿದ್ದಾರೆ ಫ್ಯಾನ್ಸ್
ಆದರೆ ನಿವೇದಿತಾ ಶೆಟ್ಟಿ ತೊಬಾ ತೊಬಾ ಎನ್ನುವ ಹಿಂದಿ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಎಂದಿನಂತೆ ಅವರು ಈ ರೀಲ್ಸ್ನಲ್ಲಿಯೂ ಕಂಗೊಳಿಸಿದ್ದಾರೆ. ಇವರಿಗೆ ಎಲ್ಲರೂ ಬೇಬಿ ಡಾಲ್ ಎಂದೇ ಕರೆಯುತ್ತಾರೆ. ಅದೇ ರೀತಿ ಗೊಂಬೆಯಂತೆಯೇ ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ತುಳುಕಾಡುತ್ತಿದೆ. ತುಂಬಾ ಮಂದಿ ಈ ರೀಲ್ಸ್ ಇಷ್ಟಪಟ್ಟಿದ್ದಾರೆ.
ಆದರೆ ಇದಕ್ಕೂ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಕಾರಣ, ನಿವೇದಿತಾ ಹೆಚ್ಚಾಗಿ ಕನ್ನಡ ಬಿಟ್ಟು ಬೇರೆ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ ಎನ್ನುವುದೇ ಇದಕ್ಕೆ ಕಾರಣ. ಗಂಡ ಕನ್ನಡದ ಸಂಗೀತ ನಿರ್ದೇಶಕ ಆಗಿದ್ದರೂ ಹಿಂದಿ, ಇಂಗ್ಲಿಷ್ ಹಾಡಿಗೆ ಯಾಕೆ ಡ್ಯಾನ್ಸ್ ಮಾಡುವುದು ಎಂದು ನಟಿಯ ವಿರುದ್ಧ ಕೆಲವರು ಕೋಪ ತೋರಿಸಿದ್ದಾರೆ. ನಿಮ್ಮ ಗಂಡ ಯಾವಾಗಲೂ ಒಂದೇ ರೀತಿಯ ಮ್ಯೂಸಿಕ್ ಮಾಡ್ತಾರೆ ಅಂತ ಬೋರಾ ಎಂದಿದ್ದರೆ, ಗಂಡನ ಸಂಗೀತ ನಿಮಗೆ ಇಷ್ಟವಾಗ್ತಿಲ್ವಾ ಎಂದು ಹಲವರು ಕೇಳುತ್ತಿದ್ದಾರೆ. ಗಂಡನ ಬಗ್ಗೆ ಪ್ರೀತಿ ಇದ್ರೆ, ಕನ್ನಡದ ಹಾಡಿಗೆ ನೃತ್ಯ ಮಾಡಮ್ಮಾ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ.