ಪ್ರೀತಿಯಾಗಿ ಎರಡೂವರೆ ವರ್ಷದ ನಂತ್ರ ಮೊದಲ ಬಾರಿಗೆ ದಿವ್ಯಾ-ಅರವಿಂದ್ ರೊಮ್ಯಾಂಟಿಕ್ ಪ್ರಪೋಸಲ್!
ಬಿಗ್ ಬಾಸ್‌ನ ಪ್ರೇಮ ಪಕ್ಷಿಗಳು ರಿಯಲ್ ಲೈಫ್‌ನಲ್ಲೂ ಜೊತೆಯಾಗಿರುವುದು ನಡೆದೇ ಇದೆ. ಅಂಥದ್ದೇ ಒಂದು ಜೋಡಿ ಬೈಕ್ ರೇಸರ್ ಕೆ.ಪಿ.ಅರವಿಂದ್ ಹಾಗೂ ನಟಿ ದಿವ್ಯಾ ಉರುಡುಗ ದಿವ್ಯಾ ಉರುಡುಗ- ಅರವಿಂದ್ ಕೆ.ಪಿ. 2021ರಂದು ನಡೆದಿದ್ದ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದಿವ್ಯಾ ಉರುಡುಗ ಹಾಗೂ ಕೆ.ಪಿ.ಅರವಿಂದ್ ಮಧ್ಯೆ ಮಾತುಕತೆ ಇರಲಿಲ್ಲ. ಆದರೆ, ನಂತರ ಆತ್ಮೀಯತೆ ಬೆಳೆಯಿತು. ‘ಬಿಗ್ ಬಾಸ್’ ಮನೆಯಲ್ಲೇ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನ ಬಿಚ್ಚಿ ಕೆ.ಪಿ.ಅರವಿಂದ್ ಕೈಬೆರಳಿಗೆ ದಿವ್ಯಾ ಉರುಡುಗ ತೊಡಿಸಿದ್ದರು. ಪ್ರೀತಿಗೆ ಎರಡು ವರ್ಷ ತುಂಬಿದ್ದ ಬಳಿಕ ಕಳೆದ ಫೆಬ್ರುವರಿಯಲ್ಲಿ ದಿವ್ಯಾ ಉರುಡುಗ – ಅರವಿಂದ್ ಕೆಪಿ (Divya Uruduga and Aaravind KP) ಜೋಡಿಯ ಜೊತೆಯಾಗಿ ಮಾಡುತ್ತಿದ್ದ ಟಾಸ್ಕ್, ಅಡುಗೆ, ಡ್ಯಾನ್ಸ್ ಹೀಗೆ ಒಬ್ಬರಿಗೊಬ್ಬರು ಸಾಥ್ ನೀಡುತ್ತ ಇರುವ ಪುಟ್ಟ ಪುಟ್ಟ ವಿಡಿಯೋಗಳನ್ನು ತುಣುಕುಗಳನ್ನು ಹಂಚಿಕೊಂಡು ಸೆಲೆಬ್ರೇಟ್ ಮಾಡಿತ್ತು.
ಇವರಿಬ್ಬರ ಮದ್ವೆ ಯಾವಾಗ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ಅಂದಹಾಗೆ ಈ ಜೋಡಿ ‘ಅರ್ಧಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ನಟಿಸಿದ್ದು, ಅದಿನ್ನೂ ತೆರೆಗೆ ಬರಲಿದೆ. ಈ ಸಿನಿಮಾ ರಿಲೀಸ್ ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಕುತೂಹಲದ ಸಂಗತಿಯೇನೆಂದ್ರೆ ಇದುವರೆಗೂ ಈಜೋಡಿ ಪ್ರಪೋಸ್ ಮಾಡಿಲ್ವಂತೆ. ಇದೇ ಕಾರಣಕ್ಕೆ ಪ್ರೀತಿ ಹುಟ್ಟಿ ಎರಡೂವರೆ ವರ್ಷಗಳ ಬಳಿಕ ಜೋಡಿ ಇದೇ ಮೊದಲ ಬಾರಿಗೆ ಜೋಡಿ ಪ್ರಪೋಸ್ ಮಾಡಿದೆ.
ಅರವಿಂದ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದಿವ್ಯಾ ಉರುಡುಗ: ಫೋಟೋ ವೈರಲ್
ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ರಿಯಾಲಿಟಿ ಷೋ ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್ನಲ್ಲಿ, ಈ ಜೋಡಿಯನ್ನು ಕರೆಯಲಾಗಿತ್ತು. ಇವರಿಬ್ಬರೂ ಮುಂಬರುವ ಚಿತ್ರ ‘ಅರ್ಧಂಬರ್ಧ ಪ್ರೇಮ ಕಥೆ’ (Ardhambardha Prema Kathe) ಚಿತ್ರದ ಪ್ರಮೋಷನ್ಗೆಂದು ಷೋಗೆ ಬಂದಿದ್ದರು. ಈ ಸಮಯದಲ್ಲಿ ನಿಮ್ಮಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂದು ನಿರೂಪಕ ಸೃಜನ್ ಲೋಕೇಶ್ ಕೇಳಿದ್ದಾರೆ. ಆಗ ಇಬ್ಬರೂ ತಾವು ಇದುವರೆಗೂ ಪ್ರಪೋಸೇ ಮಾಡಿಲ್ಲ ಎಂದಿದ್ದಾರೆ. ನಂತರ ಗುಲಾಬಿ ಹೂವನ್ನು ತರಿಸಿ ಅಲ್ಲಿಯ ವಾತಾವರಣವನ್ನು ರೊಮ್ಯಾಂಟಿಕ್ ಗೊಳಿಸಿ ಪ್ರಪೋಸ್ ಮಾಡಿಸಲಾಗಿದೆ. ಈ ಸಂದರ್ಭದಲ್ಲಿ ಜೀವನದ ಜೋಡಿಯಲ್ಲಿ ಸಹಪಾಠಿಯಾಗ್ತಿಯಾ ಎಂದು ಹೂವು ಕೊಟ್ಟು ಅರವಿಂದ್ ಪ್ರಪೋಸ್ ಮಾಡಿದ್ದಾರೆ. ಆಗ ದಿವ್ಯಾ, ನನಗೆ ನೀವೆಂದರೆ ತುಂಬಾ ಇಷ್ಟ. ನಿಮ್ಮ ಜೊತೆ ಯಾವಾಗ್ಲೂ ಇರಬೇಕು ಎಂದು ಇಷ್ಟಪಡುತ್ತೇನೆ. ಯಾವಾಗಲೂ ನನ್ನ ಜೊತೆ ಇರಿ ಎಂದು ಅಪ್ಪಿಕೊಂಡಿದ್ದಾರೆ. ನಂತರ ಇಬ್ಬರೂ ಸೇರಿ ಡ್ಯಾನ್ಸ್ ಮಾಡಿದ್ದಾರೆ.
ಅಂದಹಾಗೆ, ಅರ್ಧಂಬರ್ಧ ಪ್ರೇಮ ಕಥೆ ಶೀಘ್ರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಇಂಥದ್ದೊಂದು ಹೆಸರು ಇಟ್ಟಿರುವ ಬಗ್ಗೆ ನಿರ್ದೇಶಕ ಅರವಿಂದ್ ಕೌಶಿಕ್ ಮಾಹಿತಿ ನೀಡಿದ್ದಾರೆ. ಎಲ್ಲವೂ ಅರ್ಧಂಬರ್ಧ ಪ್ರೇಮ ಕಥೆ ಅನ್ನೋದು ನಿಜವೇ, ಎಲ್ಲ ಪ್ರೇಮಗಳು ಪೂರ್ತಿ ಆಗೋದು ಕಡಿಮೇನೆ ಎಂದಿದ್ದಾರೆ. ಆದರೆ ಅಮ್ಮ, ಅಕ್ಕ, ತಂಗಿ ಪ್ರೀತಿ ಲೆಕ್ಕ ಬೇರೆ. ಹುಡುಗ-ಹುಡುಗಿ ವಿಷಯದಲ್ಲಿ ಪ್ರೀತಿ ಪ್ರೇಮ ಪೂರ್ಣ ಆಗೋದು ಕಡಿಮೇನೆ ಅನ್ನೋ ಅರ್ಥದಲ್ಲಿಯೇ ಇದನ್ನು ಮಾಡಲಾಗಿದೆ ಎಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಪ್ರೀತಿ-ಪ್ರೇಮದ ಮೇಲೆ ಸಿನಿಮಾ ಮಾಡಿದ್ದಾರೆ. ಅವರೂ ಕೂಡ ಅದನ್ನ ವಿಭಿನ್ನವಾಗಿಯೇ ಹೇಳಿದ್ದಾರೆ. ಹಂಗೇನೆ ನಾನು ಈ ಅರ್ಧಂಬರ್ಧ ಪ್ರೇಮ ಕಥೆಯಲ್ಲಿ ಪ್ರೀತಿ-ಪ್ರೇಮವನ್ನ ಬೇರೆ ರೀತಿಯಲ್ಲಿ ಹೇಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ರಾಣಿ ಪಿಂಕ್ ಮೈಸೂರು ಸಿಲ್ಕ್‌ನಲ್ಲಿ ಬಿಗ್ ಬಾಸ್ ದಿವ್ಯಾ ಉರುಡುಗ; ನಿನ್ನ ನಗುವೇ ಒಡವೆ ಎಂದ ನೆಟ್ಟಿಗರು