ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಕೆಲವೊಂದು ತಪ್ಪುಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ ಅಭಿಮಾನಿಗಳು. ಅವರ ತಕರಾರು ಏನು?
ಪುಟ್ಟಕ್ಕನ ಮಗಳು ಸಹನಾ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಆಕೆಯದ್ದೇ ಶವ ಎಂದುಕೊಂಡು ಅದಕ್ಕೆ ಪುಟ್ಟಕ್ಕನ ಕುಟುಂಬಸ್ಥರು ಶವ ಸಂಸ್ಕಾರವನ್ನು ಮಾಡಿದ್ದಾರೆ. ಅಲ್ಲಿ ಸತ್ತಿರುವವಳು ಸಹನಾ ಎಂದು ಪುಟ್ಟಕ್ಕ ಗುರುತಿಸಿದ್ದಾಳೆ. ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದವಳು ತನ್ನ ಮಗಳೇ ಎಂದಿದ್ದಾಳೆ. ಶವದ ಮುಖ ಜಜ್ಜಿ ಹೋಗಿದ್ದರಿಂದ ಅದರ ಗುರುತು ಸಿಗುತ್ತಿರಲಿಲ್ಲ. ಆದರೆ ಆಕೆ ಸಹನಾಳ ಬ್ಯಾಗ್ ತೆಗೆದುಕೊಂಡು ಹೋದ ಕಳ್ಳಿಯಾಗಿದ್ದಳು. ಅಲ್ಲಿರುವ ಶವವನ್ನು ನೋಡಿದಾಗ ಪುಟ್ಟಕ್ಕ ಸಹನಾ ಎಂದು ಸುಲಭದಲ್ಲಿ ಗುರುತಿಸಿಬಿಟ್ಟಳು. ಆದರೆ ಈಗ ದೇವಾಲಯದ ಒಳಗೆ ಸೇರಿಕೊಂಡಿರೋ ಸಹನಾ ಪ್ರಸಾದ ಮಾಡುತ್ತಿರುವ ಸಮಯದಲ್ಲಿ ಕೈಸುಟ್ಟುಕೊಂಡು ಅವ್ವಾ ಎಂದಳು. ಆಗ ಎಲ್ಲಿಯೋ ಇದ್ದ ಪುಟ್ಟಕ್ಕನಿಗೆ ಚುರುಕ್ ಎಂದಿದೆ. ಸಹನಾ ಎಂದು ಕೂಗಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಿಂದ ಹಲವು ಬಗೆಯ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.
ಎಲ್ಲೋ ಇರುವ ಮಗಳ ಅವ್ವಾ ಅನ್ನೋ ಕೂಗೂ ಎದೆಗೆ ತಟ್ಟಿ ಹಳ ಹಳಿಸುವ ಪುಟ್ಟಕ್ಕನಂತಹ ತಾಯಿಗೆ ಸತ್ತು ಮಲಗಿದ್ದವಳು ತನ್ನ ಮಗಳಲ್ಲ ಅನ್ನೋದು ಹೇಗೆ ಗೊತ್ತಾಗಲಿಲ್ಲ? ಮುಖ ಜಜ್ಜಿ ಹೋಗಿತ್ತು ನಿಜ,ಆದ್ರೆ ತಾಯಿಯ ಕಣ್ಣುಗಳಿಗೆ ಸತ್ಯ ತಿಳಿಯಲಿಲ್ಲ ಅನ್ನೋದು ನಂಬೊಕ್ಕೆ ಆಗ್ತಿಲ್ಲ. ಅಲ್ಲಿ ನೋಡಿದರೆ ಬ್ಯಾಗ್ ಹಣ ಎಲ್ಲ ಕಳೆದುಕೊಂಡ ಸಹನಾ ಒಳ್ಳೊಳ್ಳೆ ಸೀರೆ, ಮ್ಯಾಚಿಂಗ್ ಮ್ಯಾಚಿಂಗ್ ಬ್ಲೌಸ್ ಎಲ್ಲ ಹಾಕಿಕೊಳ್ಳುತ್ತಾ ಇದ್ದಾಳೆ, ಎಲ್ಲಿಂದ ಬಂದವು ಅವೆಲ್ಲ ಅಂತಾನೆ ನಮಗೆ ಅರ್ಥ ಆಗ್ತಾ ಇಲ್ಲ ಎಂದು ಮಲ್ಲಪ್ಪ ಭಜಂತ್ರಿ ಎನ್ನುವ ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಇದೇ ರೀತಿಯ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಮನೆಗೆ ಹೋಗಲು ಸಹನಾ ಬಳಿ ಒಂದುಪೈಸೆಯೂ ಇಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕುತ್ತಿದ್ದಾಳೆ. ಆದರೆ, ಆಕೆ ಡೇಲಿ ಮ್ಯಾಚಿಂಗ್ ಸೀರೆ, ಬ್ಲೌಸು ಎಲ್ಲಾ ಹಾಕ್ತಾ ಇದ್ದಾಳೆ. ದುಡ್ಡು ಯಾರು ಕೊಡ್ತಾ ಇದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.
undefined
ರಾಮ್ಗೆ ಸಿಹಿಯ ಗುಟ್ಟು ತಿಳಿಸಿದ ಸೀತಾ: ಜೋಡಿ ಒಂದಾಗೋ ಹೊತ್ತಲ್ಲೇ ಎದ್ದಿದೆ ಬಿರುಗಾಳಿ!
ಇನ್ನು ಪುಟ್ಟಕ್ಕನಂಥ ಅಮ್ಮ ಯಾರದ್ದೋ ಶವವನ್ನು ಮಗಳದ್ದೇ ಎಂದು ಗುರುತಿಸಿರುವ ಬಗ್ಗೆಯೂ ಇದಾಗಲೇ ಹಲವಾರು ಮಂದಿ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲಾ ಸಾಕ್ಷ್ಯಾಧಾರಗಳೂ ಇದು ಸಹನಾನೇ ಎಂದು ಹೇಳುತ್ತಿದ್ದರೂ ತಾಯಿಯಾದವಳು ಅಷ್ಟು ಬೇಗ ಮೋಸ ಹೋಗಲಾರಳು. ಅದೂ ಪುಟ್ಟಕ್ಕನಂಥ ತಾಯಿಯಂತೂ ಸಾಧ್ಯವೇ ಇಲ್ಲ. ಪುಟ್ಟಕ್ಕನ ಬದಲು ಶವ ಗುರುತಿಸಲು ಬೇರೆ ಯಾರಾದರೂ ಹೋಗುವಂತೆ ತೋರಿಸಬೇಕಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಪುಟ್ಟಕ್ಕ ಎನ್ನುವುದು ಕೇವಲ ಸೀರಿಯಲ್ ಪಾತ್ರವಲ್ಲ, ಇದು ಐಕಾನ್ ಆಗಿದೆ. ಅದರಲ್ಲಿಯೂ ಈ ಪಾತ್ರ ಮಾಡುತ್ತಿರುವ ಉಮಾಶ್ರೀಯವರ ಲೆವೆಲ್ಲೇ ಬೇರೆಯದ್ದಾಗಿರುವ ಹಿನ್ನೆಲೆಯಲ್ಲಿ, ಮಗಳನ್ನು ಗುರುತಿಸುವುದು ಅಮ್ಮನಿಂದ ಸಾಧ್ಯವಾಗಲಿಲ್ಲ ಎಂದು ತೋರಿಸಿರುವುದು ಸರಿಯಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸಹನಾಗೆ ಸದ್ಯ ದೇವಾಲಯದಲ್ಲಿ ಅಡುಗೆ ಕೆಲಸ ಸಿಕ್ಕಿದೆ. ಪುಟ್ಟಕ್ಕನ ರೋಧನೆ ಮುಗಿಯುತ್ತಿಲ್ಲ. ಸಹನಾ ಸಾವಿಗೆ ತನ್ನಷ್ಟೇ ಕಾರಣ, ಸ್ನೇಹಾ ಹಾಗೂ ಗಂಡ ಎಂದು ದೂರುತ್ತಿದ್ದಾಳೆ. ಅವಳೀಗ ಬಂಗಾರಮ್ಮನ ಬಳಿ ರೋಧಿಸುತ್ತಿದ್ದಾಳೆ. ಬಂಗಾರಮ್ಮನಿಗೆ ತನ್ನ ಸ್ನೇಹಿತೆ ಪುಟ್ಟಕ್ಕನನ್ನು ಹೇಗೆ ಸಮಾಧಾನ ಪಡಿಸಬೇಕೋ ತಿಳಿಯುತ್ತಿಲ್ಲ. ಅನೇಕ ದಿನಗಳಿಂದ ಈ ಗೋಳು ನೋಡಲು ಆಗುತ್ತಿಲ್ಲ, ದಯವಿಟ್ಟು ಗೋಳು ನಿಲ್ಲಿಸಿ ಎಂದು ಸೀರಿಯಲ್ ಪ್ರೇಮಿಗಳು ಕೇಳಿಕೊಳ್ಳುತ್ತಿದ್ದಾರೆ.
ಖುಷಿಯಾಗಿದ್ರೆ ಓವರ್ಆ್ಯಕ್ಟಿಂಗ್ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್ ಅಂತೀರಾ: ಆ್ಯಂಕರ್ ಅನುಶ್ರೀ ಬೇಸರ