ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ನೇಣಿಗೆ ಶರಣು; ಕಾರಣ ನಿಗೂಢವೇ!

By Shriram Bhat  |  First Published Jul 20, 2024, 4:33 PM IST

ವಿನೋದ್ ದೋಂಡಾಲೆ ಅವರ ಪಾರ್ಥಿವ ಶರೀರವನ್ನ ಪೋಸ್ಟ್ ಮಾರ್ಟಂಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನೀನಾಸಂ ಸತೀಶ್ ನಟನೆಯ 'ಅಶೋಕ ಬ್ಲೇಡ್' ಚಿತ್ರದ ನಿರ್ದೇಶಕರಾಗಿದ್ದರು ವಿನೋದ್ ದೋಂಡಾಲೆ. ಅವರ ನಿರ್ದೇಶನದ..


ಪಿ ಶೇಷಾದ್ರಿ ಹಾಗೂ ಟಿ ಎನ್ ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕ ವಿನೋದ್ ದೋಂಡಾಲೆ ನೇಣಿಗೆ ಶರಣಾಗಿದ್ದಾರೆ. 
ನಾಗರಭಾವಿಯ ತಮ್ಮ ನಿವಾಸದಲ್ಲೇ ನೇಣಿಗೆ ಶರಣು ನಿರ್ದೇಶಕ ವಿನೋದ್ ದೋಂಡಾಲೆ ನೇಣಿಗೆ ಶರಣಾಗಿರುವ ಮಾಹಿತಿ ಲಭ್ಯವಾಗಿದೆ. 

ಸದ್ಯ, ವಿನೋದ್ ದೋಂಡಾಲೆ ಅವರ ಪಾರ್ಥಿವ ಶರೀರವನ್ನ ಪೋಸ್ಟ್ ಮಾರ್ಟಂಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನೀನಾಸಂ ಸತೀಶ್ ನಟನೆಯ 'ಅಶೋಕ ಬ್ಲೇಡ್' ಚಿತ್ರದ ನಿರ್ದೇಶಕರಾಗಿದ್ದರು ವಿನೋದ್ ದೋಂಡಾಲೆ. ಅವರ ನಿರ್ದೇಶನದ 'ಅಶೋಕ್ ಬ್ಲೇಡ್' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಈ ಮೊದಲು 'ಮಿಥುನ, ನನ್ನರಸಿ ರಾಧೆ ಹಾಗೂ ಯಶೋಧೆ' ಸೀರಿಯಲ್‌ಗಳನ್ನು ಸಹ ನಿರ್ದೇಶನ ಮಾಡಿದ್ದರು.

Tap to resize

Latest Videos

ಸಿನಿಮಾದವರ ರಿಯಲ್ ಲೈಫ್ ಕಥೆಯೇ ಸಿನಿಮಾ ಆಗ್ತಿದ್ಯಾ? ತೆರೆಗೆ ಬಂದಾಗ ಉತ್ತರ ಸಿಗುತ್ತೆ ಬಿಡಿ!

ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ನಿರ್ಮಾಪಕರ ಜೊತೆ ಶೂಟಿಂಗ್ ಬಗ್ಗೆ ಚರ್ಚಿಸಿದ್ದರು ವಿನೋದ್ ಎನ್ನಲಾಗಿದ್ದು, ಬೆಳಿಗ್ಗ್ ಅವರ ಸಾವಿನ ಸುದ್ದಿ ಹಬ್ಬಿದೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದ ನಿರ್ದೇಶಕ ವಿನೋದ್ ದೋಂಡಾಲೆ ಸದ್ಯ 'ಕರಿಮಣಿ' ಸೀರಿಯಲ್ ನ ನಿರ್ದೇಶಕರೂ ಆಗಿದ್ದರು. ವಿನೋದ್ ದೋಂಡಾಲೆ ಅವರು ಆತ್ಮಹತ್ಯಗೆ ನಿಖರ ಕಾರಣಗಳೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. 

ಪತ್ನಿ ಹಾಗೂ ಮೂವರು ಮಕ್ಕಳನ್ನ ಅಗಲಿದ ಸ್ಯಾಂಡಲ್ ವುಡ್ ಡೈರೆಕ್ಟರ್ ವಿನೋದ್ ದೋಂಡಾಲೆ ಅವರು ಈ ಮೊದಲು 'ಮೌನರಾಗ' ಸೀರಿಯಲ್ ಸಹ ನಿರ್ದೇಶನ ಮಾಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ' ಶೋದಲ್ಲಿ ಕೂಡ ಹಲವು ಎಪಿಸೋಡ್‌ ನಿರ್ದೇಶನಮಾಡಿದ್ದರು ಎನ್ನಲಾಗಿದೆ. ತನಿಖೆ ಬಳಿಕವಷ್ಟೇ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ ಎನ್ನಲಾಗುತ್ತಿದೆ.

ವಿಷ್ಣುವರ್ಧನ್-ಶಿವರಾಜ್‌ಕುಮಾರ್ ಜೋಡಿ ಚಿತ್ರ ಸೆಟ್ಟೇರಿ ನಿಂತೇ ಹೋಯ್ತು; ಕಾಣದ ಕೈ ಕೆಲಸ ಮಾಡಿತ್ತಾ? 

click me!