ಮಹಾನಟಿ ರಿಯಾಲಿಟಿ ಷೋ ಶೂಟಿಂಗ್ ಹೇಗೆಲ್ಲಾ ನಡೆದಿದೆ? ತೀರ್ಪುಗಾರರಾಗಿರುವ ನಟಿ ನಿಶ್ವಿಕಾ ನಾಯ್ಡು ರಿಯಾಕ್ಷನ್ ಹೇಗಿತ್ತು? ರೋಚಕ ಪಯಣದ ವಿಡಿಯೋ ರಿಲೀಸ್...
ಮಹಾನಟಿ ಕಿರೀಟ ಯಾರ ಪಾಲಾಗಲಿದೆ ಎನ್ನುವುದನ್ನು ತಿಳಿದುಕೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಕಳೆದ 3 ತಿಂಗಳಿನಿಂದ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದ್ದ ಈ ಷೋದ ಸೆಮಿ ಫಿನಾಲೆ ಕಳೆದ ವಾರವಷ್ಟೇ ಮುಗಿದಿದೆ. ಐವರು ಪ್ರತಿಭಾನ್ವಿತ ನಟಿಯರು ಫಿನಾಲೆ ಹಂತ ತಲುಪಿದ್ದಾರೆ. ಚಿತ್ರದುರ್ಗದ ಗಗನ, ಮೈಸೂರಿನ ಪ್ರಿಯಾಂಕ, ಕಾರವಾರದ ಶ್ವೇತಾ ಭಟ್, ಮೂಡಬಿದಿರೆಯ ಆರಾಧನಾ ಭಟ್ ಹಾಗೂ ತರಿಕೆರೆಯ ಧನ್ಯಶ್ರೀ ಫಿನಾಲೆ ತಲುಪಿದ ಸ್ಪರ್ಧಿಗಳು. ಇವರಲ್ಲಿ ಕಿರೀಟ ಯಾರ ಮುಡಿಲಿಗೆ ಹೋಗಲಿದೆ ಎನ್ನುವುದು ಈಗಿರುವ ಕುತೂಹಲ.
ಅಷ್ಟಕ್ಕೂ ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಮಹಾನಟಿ ಇದೀಗ, ಗ್ರ್ಯಾಂಡ್ ಫಿನಾಲೆಗೆ ಬಂದು ತಲುಪಿದೆ. ಇದೀಗ ಮಹಾನಟಿ ಯಾರಾಗುತ್ತಾರೆ ಎನ್ನುವ ಕುತೂಹಲ ಇದೆ.
69ನೇ ಫಿಲಂ ಫೇರ್ ಅವಾರ್ಡ್ ಬಿಡುಗಡೆ: ಹಲವು ಪ್ರಶಸ್ತಿ ಬಾಚಿಕೊಂಡ ಕಾಂತಾರ- ಫುಲ್ ಡಿಟೇಲ್ಸ್ ಇಲ್ಲಿದೆ...
ಒಂದು ರಿಯಾಲಿಟಿ ಷೋ ನಡೆಯಬೇಕು ಎಂದರೆ ಅದರ ಹಿಂದೆ ಕೆಲ ವರ್ಷಗಳ ಶ್ರಮ ಇರುತ್ತದೆ. ಅದರಲ್ಲಿಯೂ ಪ್ರತಿ ಊರುಗಳಿಗೆ ಸಾಗಿ, ಅಲ್ಲಿಯ ಪ್ರತಿಭಾನ್ವಿತರನ್ನು ಹೆಕ್ಕಿ ವೇದಿಕೆಯ ಮೇಲೆ ತಂದು ಒಂದು ಷೋ ನಡೆಸಬೇಕು ಎಂದರೆ ಅದು ಊಹಿಸಲಾಗದ ಮಾತು. ಒಂದು ಚಿಕ್ಕ ಕಾರ್ಯಕ್ರಮ ಆಯೋಜಿಸುವಾಗಲೇ ಅದೆಷ್ಟು ಅಡೆತಡೆಗಳು, ಪರಿಶ್ರಮ ಬೇಕು. ಅಂಥ ಸಂದರ್ಭದಲ್ಲಿ ಒಂದು ರಿಯಾಲಿಟಿ ಷೋ ನಡೆಸುವುದು ಬಹಳ ಕಷ್ಟಕರ. ಇದರ ಹಿಂದೆ ನೂರಾರು ಜನರ ಪರಿಶ್ರಮವೂ ಇರುತ್ತದೆ. ಇದೀಗ ಮಹಾನಟಿ ರಿಯಾಲಿಟಿ ಷೋ ನಡೆಸಿದ್ದು ಹೇಗೆ? ಅದರ ಹಿಂದೆ ಹೇಗಿತ್ತು ಪರಿಶ್ರಮ, ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಹೇಗೆ? ಅವರಿಗೆ ರಿಹರ್ಸಲ್ ಮಾಡಿಸಿದ್ದು ಹೇಗೆ ಇತ್ಯಾದಿಗಳ ಕುರಿತ ರೋಚಕ ವಿಡಿಯೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಇದೇ ಸಂದರ್ಭದಲ್ಲಿ, ತೀರ್ಪುಗಾರರಲ್ಲಿ ಒಬ್ಬರಾಗಿರುವ ನಿಶ್ವಿಕಾ ನಾಯ್ಡು ಅವರು ಇಡೀ ಷೋನಲ್ಲಿ ಯಾವೆಲ್ಲಾ ರೀತಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದರು ಎಂಬ ವಿಶೇಷ ವಿಡಿಯೋ ಕೂಡ ಶೇರ್ ಮಾಡಿಕೊಂಡಿದೆ ವಾಹಿನಿ. ಸ್ಪರ್ಧಿಗಳ ನ ಟನೆ ನೋಡಿ ಅವರ ಮುಖದಲ್ಲಿ ಕಂಡುಬಂದ ವಿಭಿನ್ನ ರಿಯಾಕ್ಷನ್ಗಳನ್ನು ಸೆರೆ ಹಿಡಿದು ಅವುಗಳನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇಡೀ ಷೋ ಕಳೆಕಟ್ಟಿದ್ದು ಹೇಗೆ ಎಂಬ ಬಗ್ಗೆ ವಿವರಣೆ ನೀಡಲಾಗಿದೆ.
ಮಹಾನಟಿ ಕಿರೀಟ ರಿವೀಲ್! ಕೊಠಡಿಯೊಳಕ್ಕೆ ಇಣುಕಿದ ಐವರು ಬೆಡಗಿಯರ ರಿಯಾಕ್ಷನ್ ಹೀಗಿದೆ ನೋಡಿ!