ಹುಚ್ಚನಂತೆ ಪ್ರೀತಿಸೋ ಗಂಡ ಸಿಗ್ಲಪ್ಪಾ ಅಂತೀರಾ? ದೇವ್ರು ವರ ಕೊಡೋ ಮೊದ್ಲು ಈ ಮಾನಸಿಕ ಸಮಸ್ಯೆ ಅರಿಯಿರಿ!

By Suchethana D  |  First Published Aug 14, 2024, 1:59 PM IST

ಪತಿ ಅಥವಾ ಪತ್ನಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಎಂದರೆ ಏನು? ಇದೊಂದು ಮಾನಸಿಕ ಸಮಸ್ಯೆಯೆ?  ಏನಿದು Obsessive Love Disorder?
 


ಬಹುತೇಕ ಎಲ್ಲರಿಗೂ ತಾನು ಮದುವೆಯಾಗುವ ಹುಡುಗ ಅಥವಾ ಹುಡುಗಿ ನನ್ನನ್ನು ಸಿಕ್ಕಾಪಟ್ಟೆ ಪ್ರೀತಿಸಬೇಕು ಎನ್ನುವ ಮನದಾಳದ ಆಸೆ ಇದ್ದೇ ಇರುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಈ ವಿಷ್ಯದಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು. ದೊಡ್ಡ ಶ್ರೀಮಂತನಾಗಿರಬೇಕು, ವೆಲ್​ ಸೆಟ್ಲ್​ಡ್​ ಆಗಿರಬೇಕು. ಫಾರಿನ್​ ರಿಟರ್ನ್ ಆಗಿರಬೇಕು, ಇಂತಿಷ್ಟು ಆಸ್ತಿ ಮಾಡಿರಬೇಕು... ನಾನು ಜೀವನಪೂರ್ತಿ ಅವನ ದುಡ್ಡಿನಲ್ಲೇ ಮಜಾ ಮಾಡಬೇಕು...  ಹೀಗೆಲ್ಲಾ ಅಂದುಕೊಳ್ಳುವ ಒಂದು ವರ್ಗದ ಹೆಣ್ಣುಮಕ್ಕಳಿದ್ದರೆ, ಇನ್ನು ಹಲವರು ನನ್ನ ಗಂಡನಾಗುವವ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಅವರು ಪ್ರೀತಿಸಬಾರದು. ನನ್ನನ್ನು ಬಿಟ್ಟು ಹೋಗಬಾರದು. ನನ್ನನ್ನು ಬಿಟ್ಟು ಯಾರನ್ನೂ ನೋಡಬಾರದು, ನನ್ನನ್ನು ಹುಚ್ಚುನಂತೆ ಪ್ರೀತಿಸಬೇಕು... ಹೀಗೆ ಕನಸುಗಳಿಗೆ ಕೊನೆಯೇ ಇಲ್ಲ. ಹೀಗೆ ಕನಸು ಹೊತ್ತು ದೇವರಿಗೆ ಬೇಡಿ ಕೊಳ್ಳುವ ಮೊದಲು OLD ಎಂಬ ಮಾನಸಿಕ ಸಮಸ್ಯೆ ಕುರಿತು ತಿಳಿದುಕೊಳ್ಳಲೇಬೇಕು!

ಹೌದು. OLD ಎಂದ್ರೆ ಹಾಗೆ ನೋಡಿದರೆ ನಮ್ಮ ಸೊಸೈಟಿಯಲ್ಲೂ ಇಂಥಾ ಮನಸ್ಥಿತಿಯರವರು ಒಂದಿಷ್ಟು ಜನ ಇದ್ದಾರೆ. OLD ಎಂದರೆ Obsessive Love Disorder. ಅಂದ್ರೆ ಪ್ರೇಮದ ವಿಚಿತ್ರ ಗೀಳು ಎನ್ನುವುದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮಿ ನಿವಾಸ ಸೀರಿಯಲ್​ ವೀಕ್ಷಕರಿಗೆ ಇದು ಸುಲಭದಲ್ಲಿ ಅರ್ಥವಾಗಿ ಬಿಡುತ್ತದೆ. ಈ ಸೀರಿಯಲ್​ ನಾಯಕ ಜಯಂತ್​ನಿಗೆ ಪತ್ನಿ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್​ ಕ್ಯಾರೆಕ್ಟರ್​ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ.

Latest Videos

ಶ್ರೀರಸ್ತು ಶುಭಮಸ್ತು ಪೂರ್ಣಿ- ಅಮೃತಧಾರೆ ಜೀವಾ ಈ ಪರಿ ರೊಮಾನ್ಸಾ? ಫ್ಯಾನ್ಸ್​ಗೆ ಮಗುವಿನದ್ದೇ ಚಿಂತೆ!

ಇದೀಗ ಈ ಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ ಮನೆಯ ಒಳಕ್ಕೆ ಸಿಸಿಟಿವಿ ಹಾಕಿಸಿದ್ದಾನೆ. ಮನೆಯ ಹೊರಗೆ ಈಗ ಸಿಸಿಟಿವಿ ಅಳವಡಿಸಿದ್ದಾರೆ. ಹಾಗಂತ ಪತ್ನಿ ಬೇರೊಬ್ಬರ ಪುರುಷನ ಜೊತೆ ಅಂತಲ್ಲ, ಮಹಿಳೆಯರ ಜೊತೆನೂ ಮಾತನಾಡಬಾರದು. ಏನಿದ್ದರೂ ಆಕೆ ನನಗೊಬ್ಬಳಿಗೇ ಸೀಮಿತ ಎನ್ನುವುದು ಆತನ ಮನಸ್ಥಿತಿ. ತನ್ನ ಗಂಡ ಹುಚ್ಚನಂತೆ ಪ್ರೀತಿಸಬೇಕು ಅಂತ ಬಯಸ್ತಾರಲ್ಲ ಹೆಣ್ಣುಮಕ್ಕಳು, ಅಂಥವರಿಗೆ ಪ್ರತೀಕದಂತೆ ಇದ್ದಾನೆ ಈ ಜಯಂತ್​.  ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ವೀಕ್ಷಕರಿಗೆ ಅಸಹನೀಯ ಎನಿಸುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುತ್ತಿದ್ದಾರೆ. ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಅವನ ಈ ಸ್ವಭಾವಕ್ಕೆ ಚಿಂತಿಸುತ್ತಿದ್ದಾಳೆ. 

ಹಾಗಿದ್ದರೆ ಇಂಥ ಗೀಳು ಎಷ್ಟು ಮಂದಿಗೆ ಇರುತ್ತದೆ ಎಂದು ಅಧ್ಯಯನದ ವರದಿಗಳನ್ನು ನೋಡುವುದಾದರೆ 0.1 ಮಂದಿಯಲ್ಲಿ ಈ ಗೀಳು ಇರುತ್ತದೆ ಎನ್ನುತ್ತದೆ ಅಧ್ಯಯನ. ಈ ಸಮಸ್ಯೆ ಮಹಿಳೆಯರಿಗಿಂತಲೂ ಹೆಚ್ಚಾಗಿ ಪುರುಷರಲ್ಲಿ ಇರುತ್ತದೆ. ಮೊದಲೇ ಹೇಳಿದ ಹಾಗೆ ಸಂಶಯದ ಪಿಶಾಚಿ ಎಂದೇನು ಕರೆಯುತ್ತೆವೆಯೋ ಇದು ಹಾಗಲ್ಲ. ಇದು ಅತಿಯಾದ ಪ್ರೀತಿಯ ಫಲಿತಾಂಶ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುತ್ತಾರಲ್ಲ, ಹಾಗಿದು. ಇದಕ್ಕೆ ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆಯುವುದು ಒಂದೇ ಪರಿಹಾರ. ಹಾಗಂತ ಇವರು ಹುಚ್ಚರೆ? ಮೇಲ್ನೋಟಕ್ಕೆ ಅಲ್ಲ, ಪತ್ನಿಯನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಎನಿಸಬಹುದು. ಆದರೆ ಅದನ್ನು ಅನುಭವಿಸುತ್ತಿರುವವರಿಗೆ ಮಾತ್ರ ಗೊತ್ತು ಇದರ ನೋವು. ಈ ಸೀರಿಯಲ್​ನಲ್ಲಿ ಹಿಂದೊಮ್ಮೆ ಪತ್ನಿಗಾಗಿ ವೈದ್ಯನ ಕೈಮುರಿದಿದ್ದ ಜಯಂತ್​. ಇದು ಪ್ರೀತಿಯ ಪರಾಕಾಷ್ಠೆ! ಈಗ ಹೇಳಿ ದೇವರು ವರ ಕೊಡುವ ಮೊದ್ಲು.... 

ಮುಂದೆ ಪಶ್ಚಾತ್ತಾಪ ಪಡೋ ಬದ್ಲು ಇಂದು ಹುಡುಗಿಯರು ಹೇಗಿರಬೇಕು? ಸುಧಾರಾಣಿ ಅನುಭವದ ಮಾತು ಕೇಳಿ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!