ಬದಲಾಗ್ತಿದ್ದಾಳೆ ಭಾಗ್ಯ? ಸೀರೆ ಹೋಗಿ ಜೀನ್ಸ್- ಜಡೆ ಹೋಗಿ ಬಾಬ್​ಕಟ್: ​ ಹೆಂಗಸ್ರ ಹಣೆಬರಹ ಇಷ್ಟೆನಾ? ನೆಟ್ಟಿಗರ ಬೇಸರ

By Suchethana D  |  First Published Sep 24, 2024, 2:19 PM IST

ಸೀರೆಯಲ್ಲಿ ಕಾಣಿಸಿಕೊಳ್ಳೋ ಭಾಗ್ಯ ಇನ್ನು ಮಾಡರ್ನ್​ ಆಗ್ತಾಳಾ? ಜೀನ್ಸ್​, ಬಾಬ್​ಕಟ್​ನಲ್ಲಿ ಕಾಣಿಸಿಕೊಳ್ತಾಳಾ? ಹೆಂಗಸರ ಜೀವನ ಯಾಕೆ ಹೀಗೆ..? ಇಷ್ಟೆಲ್ಲಾ ಚರ್ಚೆ ಹುಟ್ಟುಹಾಕಿದೆ ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೊಮೋ. ಅಷ್ಟಕ್ಕೂ ಅದರಲ್ಲಿ ಇರೋದೇನು?
 


ಭಾಗ್ಯಲಕ್ಷ್ಮಿ ಭಾಗ್ಯ ಬದಲಾಗ್ತಿದ್ದಾಳೆ. ಸೀರೆ ಜಾಗದಲ್ಲಿ ಜೀನ್ಸ್​ ಬರತ್ತೆ, ಜಡೆ ಹೋಗಿ ಬಾಬ್​ಕಟ್​ ಬರತ್ತೆ, ಇನ್ನು ಏನೇನೋ ಆಗತ್ತೆ ಅಂದ್ರೆ ನಂಬ್ತೀರಾ? ಸದ್ಯದ ಪರಿಸ್ಥಿತಿಯಲ್ಲಿ ಇದನ್ನೇ ಸೀರಿಯಲ್​ ಪ್ರೇಕ್ಷಕರು ನಂಬಿಕೊಂಡಿದ್ದಾರೆ. ಇದಕ್ಕೆ ಕಾರಣ ಇಂದಿನ ಸೀರಿಯಲ್​ ಪ್ರೊಮೋ. ಭಾಗ್ಯ ಬದಲಾಗುತ್ತಿದ್ದಾಳೆ ಎಂದೇ ಸದ್ಯದ ಪರಿಸ್ಥಿತಿಯಲ್ಲಿ ತಿಳಿದುಬರುತ್ತಿದೆ. ಆದರೆ ಗಂಡನಿಗಾಗಿ ಹೆಂಡತಿ ತನ್ನತನವನ್ನೇ ಮರೆಯಬೇಕಾ? ಇಷ್ಟು ಬದಲಾಗಬೇಕಾ? ಹೆಣ್ಣಿನ ಹಣೆಬರಹವೇ ಇಷ್ಟಾ, ಹೆಣ್ಣಿನ ಜನ್ಮ ಗಂಡ, ಅತ್ತೆಯ ಅಣತಿಯಂತೆ ನಡೆಯುವುದಾ? ಅದೇ ಅವಳ ಜೀವನನಾ... ಹೀಗೆ ಹಲವು ಪ್ರಶ್ನೆಗಳನ್ನೂ ಇದಾಗಲೇ ನೆಟ್ಟಿಗರು ಕೇಳಲು ಶುರು ಮಾಡಿದ್ದಾರೆ. 

ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೇಷ್ಠಾ ಮತ್ತು ತಾಂಡವ್​  ಮದುವೆ ನಿಂತಿದೆ. ಇನ್ನೇನು ತಾಂಡವ್​ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಕುಸುಮಾ ಮತ್ತು ಪೂಜಾ ಎಂಟ್ರಿಯಾಗಿದೆ. ಎಲ್ಲರ ಎದುರೇ ಮಗನಿಗೆ ಕಪಾಳಮೋಕ್ಷ  ಮಾಡಿದ್ದಾಳೆ ಕುಸುಮಾ. ನನ್ನ ಸೊಸೆಗೆ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾಳೆ. ಕುತ್ತಿಗೆಯಲ್ಲಿ ಹಾಕಿರೋ ಹೂವಿನ ಹಾರವನ್ನು ಕಿತ್ತೆಸೆದಿದ್ದಾಳೆ. ಶಲ್ಯವನ್ನೂ ಮಗನ ಕುತ್ತಿಗೆಗೆ ಕಟ್ಟಿ ದರದರ ಎಳೆದುಕೊಂಡು ಬಂದಿದ್ದಾಳೆ. ಆಕೆಯನ್ನು ತಡೆಯಲು ಬಂದವರನ್ನು ಝಾಡಿಸಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ.  ಇಷ್ಟಾಗುತ್ತಿದ್ದಂತೆಯೇ ಕೊತಕೊತ ಕುದಿಯುತ್ತಿದ್ದಾಳೆ ಶ್ರೇಷ್ಠಾ. ಅಸಲಿಗೆ ಈ ವಿಷಯವನ್ನು ಪೂಜಾ ಕುಸುಮಾಗೆ ಹೇಳಲೇ ಇಲ್ಲ.   ಮೈಮೇಲೆ ಬಂದಂತೆ ವರ್ತಿಸಿರೋ ಶ್ರೇಷ್ಠಾಳ ಅಹಂಗೆ ಪೆಟ್ಟು ಬಿದ್ದಿದೆ. ತನ್ನ ಮತ್ತು ತಾಂಡವ್​ ಮದುವೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದ ಆಕೆಗೆ ಎಲ್ಲರ ಎದುರೇ ಮುಖಭಂಗ ಆಗಿದೆ. ಇದೇ ಕಾರಣಕ್ಕೆ ಅವಳು ಏನು ಮಾಡಲೂ ಹೇಸಳು. ಆದ್ದರಿಂದಲೇ ಪೂಜಾಳ ಕೊಲೆಗೆ ಮುಂದಾಗಿದ್ದಾಳೆ. 

Tap to resize

Latest Videos

undefined

ಚೂಡಿದಾರ ಹಾಕ್ಕೊಂಡು, ಎಣ್ಣೆ ಹಚ್ಕೊತ್ತಿದ್ದೆ... ಅದ್ಯಾವಾಗ ಬಿಕಿನಿ ಧರಿಸಿದ್ನೋ... ಕಣ್ಣೀರಾದ 'ಕೂಲ್'​ ನಟಿ ಸನಾ!

ಅದೇ ಇನ್ನೊಂದೆಡೆ, ತಾಂಡವ್​ನನ್ನು ರಸ್ತೆಯ ಮೇಲೆ ದರದರ ಎಳೆದುಕೊಂಡು ಬಂದಿದ್ದಾಳೆ ಕುಸುಮಾ. ನಾನು ಹೀಗೆ ಆಡ್ತಿರೋದಕ್ಕೆ ನೀನೇ ಕಾರಣ ಎಂದು ಹೇಳಿದ್ದಾನೆ ತಾಂಡವ್​. ಇಷ್ಟವಿಲ್ಲದ ಮದ್ವೆ ಮಾಡಿರುವುದಕ್ಕೆ ಹೀಗೆ ಆಗಿದ್ದು ಎನ್ನುವುದು ಅವನ ಮಾತಿನ ಅರ್ಥ. ನಿನ್ನ ದರ್ಬಾರಿನಿಂದಾಗಿ ನನಗೆ ಹೀಗೆ ಆಗಿದ್ದು ಅಂದಿದ್ದಾನೆ ತಾಂಡವ್​. ಅದಕ್ಕೆ ಕುಸುಮಾ,  ತಾಂಡವ್​ಗೆ ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅಷ್ಟಕ್ಕೂ ತಾಂಡವ್​ಗೆ ಭಾಗ್ಯಳ ಮೇಲಿರೋ ಬಹುದೊಡ್ಡ ಸಿಟ್ಟು ಎಂದರೆ ಆಕೆ ಹಳೆ ಕಾಲದ ಹೆಂಗಸಿನ ರೀತಿ ಇದ್ದಾಳೆ, ಶ್ರೇಷ್ಠಾಳಂತೆ ಮಾಡರ್ನ್​ ಆಗಿಲ್ಲ, ಪೆದ್ದಿ ಎನ್ನೋದು. ಆದ್ರೆ ಇದಾಗಲೇ ಭಾಗ್ಯ ಇಂಗ್ಲಿಷ್​ ಕಲಿತು, ಎಸ್​ಎಸ್​ಎಲ್​ಸಿ ಬರೆದು, ಲಕ್ಷಗಟ್ಟಲೆ ದುಡಿಯೋ ಕೆಲಸನೂ ಗಿಟ್ಟಿಸಿಕೊಂಡಾಯ್ತು. ಈಗ ಏನಿದ್ದರೂ ಆಕೆಯನ್ನು ಮಾಡರ್ನ್​ ಮಾಡುವುದು ಅಷ್ಟೇ. ಅದಕ್ಕಾಗಿಯೇ ಗಂಡನಿಗಾಗಿ  ಭಾಗ್ಯಳನ್ನು ಮಾಡರ್ನ್​ ಹೆಣ್ಣಾಗಿ ಮಾಡುವುದೊಂದೇ ಕುಸುಮತ್ತೆಗೆ ಇರೋ ದಾರಿ ಎಂದೇ ಅರ್ಥೈಸಲಾಗುತ್ತಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಇದರ ಮಧ್ಯೆಯೇ ಹೆಣ್ಣಿನ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. 

ಅತ್ತ ಭಾಗ್ಯಳಿಗೆ ಮಾತ್ರ ಇನ್ನೂ ಸತ್ಯ ತಿಳಿದಿಲ್ಲ ಎನ್ನುವುದು ಇನ್ನೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಆಕೆಯನ್ನು ಮದುವೆ ಮಂಟಪಕ್ಕೆ ಹೋಗಲು ಸುಂದರಿ ಬಿಡಲಿಲ್ಲ. ಪೂಜಾಳಿಗೆ ಮೊದಲೇ ಭಾವನ ವಿಷಯ ಗೊತ್ತಿದ್ದರೂ ಅದನ್ನು ಹೇಳಿರಲಿಲ್ಲ. ಈಗ ಕುಸುಮಾ ಕೂಡ ತನ್ನ ಸೊಸೆಗೆ ಸತ್ಯ ಗೊತ್ತಾಗಬಾರದು ಎಂದು ಅದನ್ನು ಮುಚ್ಚಿಟ್ಟಿದ್ದಾಳೆ. ಆದರೆ ಪರಿಸ್ಥಿತಿಯನ್ನು ನೋಡಿಯಾದರೂ ಭಾಗ್ಯಳಿಗೆ ಗಂಡನ ಮೇಲೆ ಸಂದೇಹ ಬರಬೇಕಿತ್ತು. ಆದರೆ ಆಕೆಗೆ ಗಂಡನ ಮೇಲೆ ಅಷ್ಟು ವಿಶ್ವಾಸ. ಇದ್ಯಾಕೋ ಅತಿಯಾಯಿತು ಎನ್ನುವುದು ನೆಟ್ಟಿಗರ ಮಾತು.  ಮನೆಗೆ ದೌಡಾಯಿಸಿರೋ ಭಾಗ್ಯ, ತಾಂಡವ್​ ಕಿಟಿಕಿ ಮುರಿದು ಹೋಗಿದ್ದನ್ನು ನೋಡಿದ್ದಾಳೆ. ಯಾವಳದ್ದೋ ಮದ್ವೆಗೆ ತನ್ನ ಗಂಡ ಯಾಕೆ ಹೀಗೆ ಹೋಗ್ಬೇಕು ಎನ್ನೋದು ಅವಳ ಪ್ರಶ್ನೆ. ಇದೊಂದು ರೀತಿಯಲ್ಲಿ ಹಾಸ್ಯಾಸ್ಪದ ಆಗಿದೆ ಎನ್ನುವುದು ಬಹುತೇಕ ನೆಟ್ಟಿಗರ ಅಭಿಮತ. ಅನುಬಂಧ ಅವಾರ್ಡ್ಸ್​ನಲ್ಲಿ ಜನ ಮೆಚ್ಚಿದ ನಾಯಕಿ ಪಟ್ಟ ಪಡೆದಿರೋ ಭಾಗ್ಯಳಿಗೆ ಇಷ್ಟೂ ಚಿಕ್ಕ ವಿಷ್ಯ ಗೊತ್ತಾಗಿಲ್ವಾ ಎನ್ನೋದು ಅವರ ಪ್ರಶ್ನೆ.

ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್​ ​


click me!