ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಮ್ಮಿ ಅವಾರ್ಡ್ ಸ್ವೀಕರಿಸಿದ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ನಿರ್ಮಾಪಕಿ ಏಕ್ತಾ ಕಪೂರ್. ಏನಿದು ಪ್ರಶಸ್ತಿ?
51 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭ ಸೋಮವಾರ ರಾತ್ರಿ ನ್ಯೂಯಾರ್ಕ್ ನಗರದಲ್ಲಿ ನಡೆದಿದ್ದು, ಇದರಲ್ಲಿ ಭಾರತೀಯ ಚಿತ್ರರಂಗದ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆದ ಏಕ್ತಾ ಕಪೂರ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಸಿನಿಮಾಗಳಿಗೆ ಆಸ್ಕರ್ ಪ್ರಶಸ್ತಿ ಅತಿ ದೊಡ್ಡ ಪ್ರಶಸ್ತಿ ಎನಿಸಿರುವಂತೆ, ಕಿರುತೆರೆಯ ಅತ್ಯುತ್ತಮ ಸರಣಿ, ಡಾಕ್ಯುಮೆಂಟರಿ, ನಟನಟಿಯರ ಪ್ರತಿಭೆ ಗುರುತಿಸಲು ಇರುವುದೇ ಈ ಎಮ್ಮಿ ಪ್ರಶಸ್ತಿ. ಈ ಪ್ರಶಸ್ತಿಗೆ ಹಲವಾರು ಖ್ಯಾತ ನಾಮರು ಭಾಜನರಾಗಿದ್ದು, ಏಕ್ತಾ ಕಪೂರ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಾರಿ ಮೂವರು ಭಾರತೀಯರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗೆ ನಾಮಿನೇಷನ್ ಆಗಿದ್ದರು. ಅವರ ಪೈಕಿ ಇಬ್ಬರು ಭಾರತೀಯರು ಎಮ್ಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವೀರ್ ದಾಸ್ ಲ್ಯಾಂಡಿಂಗ್ ಎಂಬ ಕಾಮಿಡಿ ಸರಣಿಗೆ ಸ್ಟ್ಯಾಂಡ್ ಅಪ್ ಕಾಮೀಡಿಯನ್ ವೀರ್ದಾಸ್ ಅವರಿಗೆ ಪ್ರಶಸ್ತಿ ಸಿಕ್ಕಿದ್ದರೆ, ಏಕ್ತಾ ಕಪೂರ್ ಅವರಿಗೆ ಕಿರುತೆರೆಗೆ ನೀಡಿರುವ ವಿಶೇಷ ಕಾಣಿಕೆಯನ್ನು ಪ್ರಶಸ್ತಿ ನೀಡಲಾಗಿದೆ. ಖ್ಯಾತ ಲೇಖಕ ಮತ್ತು ನಟ ದೀಪಕ್ ಚೋಪ್ರಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಏಕ್ತಾ ಕಪೂರ್, ಈ ಪ್ರತಿಷ್ಠಿತ ಗೌರವವನ್ನು ಸಾಧಿಸಿದ ಮೊದಲ ಮಹಿಳಾ ಭಾರತೀಯ ಚಲನಚಿತ್ರ ನಿರ್ಮಾಪಕಿಯಾಗಿ ಹೊರಹೊಮ್ಮಿದ್ದಾರೆ. ಇವರಿಗೆ 'ಡೈರೆಕ್ಟೊರೇಟ್ ಯಮ್ಮಿ ಪ್ರಶಸ್ತಿ' ನೀಡಲಾಗಿದೆ. ಈ ಮೂಲಕ ಇವರು, ಅಂತಾರಾಷ್ಟ್ರೀಯ 'ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ಮಹಿಳಾ ಚಲನಚಿತ್ರ ನಿರ್ಮಾಪಕಿ ಎಂದು ಇತಿಹಾಸ ಸೃಷ್ಟಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲೇ ಗರ್ಭಿಣಿಯಾದೆಯೆಂದ ನಟಿ ಅಂಕಿತಾ, ಮಾಜಿ ಪ್ರೇಮಿ ಸುಶಾಂತ್ ಸಿಂಗ್ ಕುರಿತು ಹೇಳಿದ್ದೇನು?
ನಟ ಜೀತೇಂದ್ರ ಕಪೂರ್ ಮತ್ತು ಶೋಭಾ ಕಪೂರ್ ಪುತ್ರಿಯಾದ ಏಕ್ತಾ ಕಪೂರ್, 1994 ರಲ್ಲಿ ಏಕ್ತಾ ಕಪೂರ್ ಬಾಲಾಜಿ ಟೆಲಿಫಿಲ್ಮಂ ಪ್ರಾರಂಭಿಸಿದರು. ಇವರ ಬಾಲಾಜಿ ಬ್ಯಾನರ್‌ನಿಂದ ಭಾರತದ ಟಿವಿ ಇತಿಹಾಸದಲ್ಲಿ ಹೊಸ ಬದಲಾವಣೆಗಳು ಶುರುವಾದವರು. ಮೊಟ್ಟ ಮೊದಲ ಬಾರಿಗೆ 17 ಸಾವಿರ ಗಂಟೆಗಳ ಟಿವಿ ಸೀರಿಯಲ್ಸ್ ಮತ್ತು 45 ಚಲನಚಿತ್ರಗಳನ್ನು ನಿರ್ಮಿಸಿರುವ ಕೀರ್ತಿ ಇವರದ್ದು.
ಇವರಿಬ್ಬರ ಹೊರತಾಗಿ ಪ್ರಶಸ್ತಿ ಪುರಸ್ಕೃತರ ಲಿಸ್ಟ್ ಇಲ್ಲಿದೆ; ಅತ್ಯುತ್ತಮ ನಟ: ಮಾರ್ಟಿನ್ ಫ್ರೀಮನ್ (ದಿ ರೆಸ್ಪಾಂಡರ್; ಅತ್ಯುತ್ತಮ ನಟಿ: ಕಾರ್ಲಾ ಸೌಜ್ (ಡೈವ್); ಅತ್ಯುತ್ತಮ ಕಾಮಿಡಿ: ವೀರ್ ದಾಸ್ ಮತ್ತು ಡೆರ್ರಿ ಗರ್ಲ್ಸ್ ಸೀಸನ್ 3; ಅತ್ಯುತ್ತಮ ಮಿನಿ ಸೀರೀಸ್: ಡೈವ್ (ಲಾ ಕೈಡಾ); ಅತ್ಯುತ್ತಮ ಕಿರು ಸರಣಿ: ಎ ವೆರ್ರಿ ಆರ್ಡಿನರಿ ವರ್ಲ್ಡ್; ಮಕ್ಕಳಿಗಾಗಿ ಜ್ಞಾನಪೂರ್ಣ ಮನೊರಂಜನಾ ಚಿತ್ರ: ಬಿಲ್ಟ್ ಟು ಸರ್ವೈವ್; ಅತ್ಯುತ್ತಮ ಡಾಕ್ಯುಮೆಂಟರಿ: ಮಾರಿಯೋಪೋಲ್; ಅತ್ಯುತ್ತಮ ಕ್ರೀಡಾ ಡಾಕ್ಯುಮೆಂಟರಿ: ಹಾರ್ಲಿ ಮತ್ತು ಕಾಟ್ಯಾ; ಅತ್ಯುತ್ತಮ ಅನಿಮೇಷನ್: ದಿ ಸ್ಮೆಡ್ಸ್ ಆಂಡ್ ದಿ ಸ್ಮೂಸ್; ಅತ್ಯುತ್ತಮ ಟೆಲಿನೋವೆಲ್: ಯಾರ್ಗಿ; ಅತ್ಯುತ್ತಮ ಡ್ರಾಮಾ ಸೀರೀಸ್: ದಿ ಎಂಪ್ರೆಸ್; ಅತ್ಯುತ್ತಮ ಲೈವ್ ಆಕ್ಷನ್: ಹಾರ್ಟ್ ಬ್ರೇಕ್ ಹೈ; ನಾನ್ ಸ್ಕ್ರಿಪ್ಟೆಡ್ ಎಂಟರ್ಟೈನ್ಮೆಂಟ್: ಎ ಪೊಂಟೆ- ದಿ ಬ್ರಿಡ್ಜ್ ಬ್ರೆಸಿಲ್; ಆರ್ಟ್ಸ್ ಪ್ರೋಗ್ರಾಮಿಂಗ್: ಬಫ್ಫಿ-ಸ್ಯಾಂಟಿ-ಮ್ಯಾರಿ: ಕ್ಯಾರಿ ಇಟ್ ಆನ್.
ಗಂಡ ಹೊರಗಿದ್ದಾನೆ, ಸಲ್ಮಾನ್ ಖಾನ್ ಇಲ್ಲೇ ಇದ್ದಾನೆ! ಕತ್ರಿನಾ ಕೈಫ್ ಉತ್ತರಕ್ಕೆ ಫ್ಯಾನ್ಸ್ ಸುಸ್ತು...