ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಭರ್ಜರಿ ಟ್ವಿಸ್ಟ್​: ಹಬ್ಬದ ದಿನವೇ ತುಳಸಿಗೆ ಅಮ್ಮನ ಪಟ್ಟ!

Published : Apr 11, 2024, 02:15 PM IST
ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಭರ್ಜರಿ ಟ್ವಿಸ್ಟ್​: ಹಬ್ಬದ ದಿನವೇ  ತುಳಸಿಗೆ ಅಮ್ಮನ ಪಟ್ಟ!

ಸಾರಾಂಶ

ಯುಗಾದಿ ಹಬ್ಬದ ಸಂಭ್ರಮದಲ್ಲಿಯೇ ತುಳಸಿಗೆ ಭರ್ಜರಿ ಗಿಫ್ಟ್​ ಸಿಕ್ಕಿದೆ. ಅವಿಯ ಬಾಯಲ್ಲಿ ಅಮ್ಮಾ ಎನಿಸಿಕೊಂಡಿದ್ದಾಳೆ ತುಳಸಿ. ಏಕೆ ಈ ಪರಿವರ್ತನೆ?  

ಶ್ರೀರಸ್ತು- ಶುಭಮಸ್ತುವಿನಲ್ಲಿ ಯುಗಾದಿದ ಹಬ್ಬದ ಸಡಗರ ಜೋರಾಗಿ ನಡೆಯುತ್ತಿದೆ. ಈ ಹಿಂದೆ ಹೋಳಿಯ ಸಂದರ್ಭದಲ್ಲಿ ಅಭಿಯ ಹುಟ್ಟುಹಬ್ಬವೂ ನಡೆದಿತ್ತು. ಆ ಸಮಯದಲ್ಲಿ,  ತುಳಸಿ   ಅಭಿಗೆ ಭರ್ಜರಿ ಗಿಫ್ಟ್​ ಕೊಟ್ಟಿದ್ದಳು. ಅದೇನೆಂದರೆ ಮನೆಯ ಕೀ ಗೊಂಚಲನ್ನು ಅಭಿಯ ಕೈಗೆ ಇತ್ತು, ಇದು ನನಗೆ ಬೇಡ, ನೀನೇ ಇಟ್ಟುಕೋ. ನಾನು ನಿನ್ನ ಅಮ್ಮ ಎಂದು ಒಪ್ಪಿಕೊಂಡ ದಿನ ಇದನ್ನು ನನಗೆ ವಾಪಸ್​ ಕೊಡು ಎಂದಿದ್ದಾಳೆ. ಅಷ್ಟಕ್ಕೂ ತುಳಸಿಯಿಂದ ಮನೆ ಯಜಮಾನಿಕೆ ಪಟ್ಟ ಕಸಿದುಕೊಳ್ಳಲು  ಶಾರ್ವರಿ ಮತ್ತು ದೀಪಿಕಾ ಹೊಂಚು ಹಾಕುತ್ತಲೇ ಇದ್ದಾರೆ. ಅಭಿಯ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ತುಳಸಿಗೆ ಇನ್​ಸಲ್ಟ್​ ಮಾಡುವುದನ್ನು ಬಿಟ್ಟಿಲ್ಲ. ಆ ಮನೆಯ ಯಜಮಾನಿಕೆ ಪಟ್ಟದಿಂದ ಕೆಳಕ್ಕೆ ಇಳಿಯುವಂತೆ ಶಾರ್ವರಿ ತುಳಸಿಗೆ ಪರೋಕ್ಷವಾಗಿ ಹೇಳಿದ್ದಾಳೆ. ಹೋಳಿ ಮುಗಿದ ಮೇಲೆ ಇದಕ್ಕೆ ಉತ್ತರ ಕೊಡುವುದಾಗಿ ತುಳಸಿ ನಗುಮೊಗದಿಂದ ಹೇಳಿ ಹೋಗಿದ್ದಳು. ಇದೀಗ ಕೀಯನ್ನು ವಾಪಸು ಮಾಡಿದ್ದಾಳೆ. ಇದನ್ನು ನೋಡಿ ಶಾರ್ವರಿ ಮತ್ತು ದೀಪಿಕಾ ಒಳಗೊಳಗೇ ಕುಣಿದು ಕುಪ್ಪಳಿಸುತ್ತಿದ್ದಾರೆ.

ಹೇಗಾದರೂ ಮಾಡಿ ಅವಿ ಮತ್ತು ಅಭಿಯ ಬಾಯಲ್ಲಿ ಅಮ್ಮ ಎಂದು ಕೇಳಿಸಿಕೊಳ್ಳೋ ಆಸೆ ತುಳಸಿದೆ. ಆದರೆ ಕುತೂಹಲದ ಟ್ವಿಸ್ಟ್​ನಲ್ಲಿ ಯುಗಾದಿ ಸಂಭ್ರಮದ ಸಮಯದಲ್ಲಿಯೇ ಅವಿಯ ಬಾಯಲ್ಲಿ ತುಳಸಿ ಅಮ್ಮಾ ಎನಿಸಿಕೊಂಡಿದ್ದಾಳೆ. ಯುಗಾದಿ ಹಬ್ಬದಂದು ಮನೆಯ ಹಿರಿಯ ಸೊಸೆಯಾಗಿರೋ ತುಳಸಿ ಮತ್ತು ಪೂರ್ಣಿ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಶಾರ್ವರಿ ಮತ್ತು ದೀಪಿಕಾ ಅಲ್ಲಿಗೆ ಬಂದಿದ್ದಾರೆ. ಪ್ರತಿ ಬಾರಿಯೂ ನಾನೇ ಪೂಜೆ ಮಾಡುತ್ತಿದ್ದೆ, ಈಗ ತುಳಸಿ ಮಾಡುತ್ತಿದ್ದಾಳೆ ಎಂದು ಹೊಟ್ಟೆ ಉರಿಸಿಕೊಂಡಿದ್ದಾಳೆ ಶಾರ್ವರಿ.  ಆ ಸಮಯದಲ್ಲಿ ಬಂದ ಅಭಿ, ಅಲ್ಲಿಂದ ಏಳಿ, ಪೂಜೆ ಚಿಕ್ಕಮ್ಮ ಮಾಡುತ್ತಾರೆ, ನೀವು ಮಾಡ್ಬೇಡಿ ಎಂದು ಕೂಗಿದ್ದಾನೆ.

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್

ಅಷ್ಟರಲ್ಲಿಯೂ ಎಂಟ್ರಿ ಕೊಡೋ ಅವಿ, ಅಮ್ಮಾ ನೀವೇ ಪೂಜೆ ಮಾಡಿ ಎಂದಿದ್ದಾನೆ. ಅವಿಯ ಬಾಯಲ್ಲಿ ಅಮ್ಮಾ ಎನ್ನುವ ಮಾತು ಕೇಳಿ ತುಳಸಿ ಕಣ್ಣೀರಾದರೆ ಶಾರ್ವರಿ, ದೀಪಿಕಾ ಶಾಕ್​ ಆಗಿದ್ದಾರೆ. ತುಳಸಿ ಏನೆಂದೆ? ಅಮ್ಮಾ ಅಂದಿಯಾ ಎಂದು ಕೇಳಿದಾಗ ಅವಿ, ಹೌದು ಅಮ್ಮನಿಗೆ ಅಮ್ಮ ಎನ್ನದೇ ಇನ್ನೇನು ಹೇಳಬೇಕು ಎಂದಿದ್ದಾನೆ. ಒಟ್ಟಿನಲ್ಲಿ ಒಬ್ಬ ಮಗನ ಕೈಯಲ್ಲಿ ಅಮ್ಮಾ ಎನಿಸಿಕೊಂಡಾಗಿದೆ. ಈಗ ಏನಿದ್ದರೂ ಅಭಿಯ ಬಾಯಲ್ಲಿ ಅಮ್ಮಾ ಎನಿಸಿಕೊಳ್ಳಬೇಕಿದೆ ತುಳಸಿ. 

ಅಷ್ಟಕ್ಕೂ ತುಳಸಿಗೆ ಅವಿ ಮತ್ತು ಅಭಿಯನ್ನು ಮಗ ಎಂದುಕೊಂಡಿರೋ ತುಳಸಿಗೆ ತನ್ನ ಹೆತ್ತ ಮಕ್ಕಳಂತೆಯೇ ಇವರ ಪ್ರೀತಿಯೂ ಮುಖ್ಯ. ಇದೇ ಕಾರಣಕ್ಕೆ ಅವರ ಖುಷಿಯಾಗಿ ತುಳಸಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾಳೆ. ಅವಿ ಇದಾಗಲೇ ತುಳಸಿಯ ಮೇಲೆ ಅಕ್ಕರೆ ತೋರಿ ಅಮ್ಮ ಎಂದಿದ್ದಾನೆ. ಅದರೆ  ಅಭಿಗೋ ಮುಂಗೋಪ ಜಾಸ್ತಿ. ಅಪ್ಪನನ್ನು ಮದುವೆಯಾಗಿರುವ ಈ ಹೆಂಗಸು ತನ್ನ ಅಮ್ಮನಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಇದನ್ನೇ ಶಾರ್ವರಿ ಮತ್ತು ದೀಪಿಕಾ ಮಿಸ್​ಯೂಸ್​ ಮಾಡಿಕೊಂಡದ್ದೂ ಇದೆ. ಇದಾಗಲೇ ಅಭಿಯ ಖುಷಿಯಾಗಿ ತುಳಸಿ  ಮನೆಯ ಕೀ ಗೊಂಚಲನ್ನು ಅಭಿಯ ಕೈಗೆ ಇತ್ತು, ಇದು ನನಗೆ ಬೇಡ, ನೀನೇ ಇಟ್ಟುಕೋ. ನಾನು ನಿನ್ನ ಅಮ್ಮ ಎಂದು ಒಪ್ಪಿಕೊಂಡ ದಿನ ಇದನ್ನು ನನಗೆ ವಾಪಸ್​ ಕೊಡು ಎಂದಿದ್ದಾಳೆ.  ಅದೇ ರೀತಿ ಮಗ ಅವಿಗಾಗಿ ತುಳಸಿ ಏನು ಬೇಕೋ ಹಾಗೆ ಬದಲಾಗಲು ರೆಡಿಯಾಗುತ್ತಿದ್ದಾಳೆ.  ಹೊಸದಾಗಿ ಅಮ್ಮನ ಸ್ಥಾನ ­­ಪಡೆದಿರೋ ತುಳಸಿಯನ್ನು ಕಂಡರೆ ಆಗ ಅವಿ ಮಾತಿನ ಭರದಲ್ಲಿ ನನ್ನ ಅಮ್ಮನ ಜೊತೆ ನಿಮ್ಮನ್ನು ಕಂಪೇರ್​ ಮಾಡಿಕೊಳ್ಳಬೇಡಿ. ಅವರು ಡ್ಯಾನ್ಸರ್​ ಆಗಿದ್ರು, ಇಂಗ್ಲಿಷ್​ ಚೆನ್ನಾಗಿ ಮಾತಾಡ್ತಿದ್ರು... ಎಂದೆಲ್ಲಾ ಹೇಳಿದ್ದಾನೆ. ಅವನಿಗಾಗಿ ಬದಲಾಗಿ ಅವನ ಪ್ರೀತಿ ಗಳಿಸಬೇಕು ಎನ್ನುವ ತಯಾರಿಯಲ್ಲಿ ಇದ್ದಾಳೆ ತುಳಸಿ. ಮುದ್ದಿನ ಸೊಸೆ, ಅವಿಯ ಪತ್ನಿ ಪೂರ್ಣಿಯ ನೆರವು ಪಡೆದು ಯೂಟ್ಯೂಬ್​ನಲ್ಲಿ ತಮಗೆ ಬೇಕಾಗಿರುವುದನ್ನು ಸರ್ಚ್​ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ. ಇದೀಗ ಡ್ಯಾನ್ಸ್​ ಮತ್ತು ಇಂಗ್ಲಿಷ್​ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾಳೆ. 

ಧನುಷ್​ ಜೊತೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?