ಬಿಗ್ಬಾಸ್ ಓಟಿಟಿ ಸೀಸನ್-3ಗಾಗಿ ಕಾಯುತ್ತಿರುವ ವೀಕ್ಷಕರಿಗೆ ಭರ್ಜರಿ ಸುದ್ದಿ. ಮುಂದಿನ ತಿಂಗಳು ಇದರ ಷೋ ನಡೆಯಲಿದೆ. ಇಲ್ಲಿದೆ ಡಿಟೇಲ್ಸ್.
ಬಿಗ್ಬಾಸ್ ಎಂದರೆ ಏನು ಎನ್ನುವುದು ಬಹುತೇಕ ಮಂದಿಗೆ ತಿಳಿದಿದೆ. ಭಾಷೆ ಯಾವುದೇ ಇರಲಿ, ಇಲ್ಲಿ ಮೊದಲು ಎಂಟ್ರಿ ಸಿಗುವುದು ವಿವಿಧ ವಲಯಗಳಲ್ಲಿ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಎನ್ನುವ ಮಾತಿದೆ. ಇದನ್ನು ಬಿಟ್ಟರೆ ರೀಲ್ಸ್ ಸ್ಟಾರ್ಗಳು (ಅದೂ ಕಾಂಟ್ರವರ್ಸಿಯವರಿಗೆ ಹೆಚ್ಚಿನ ಆದ್ಯತೆ), ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು, ರೀಲ್ ಬಿಡುತ್ತಲೇ ಫೇಮಸ್ ಆಗಿ ವಿವಾದದಲ್ಲಿ ಸಿಲುಕಿದವರು... ಹೀಗೆ ಸ್ಪರ್ಧಿಗಳ ಆಯ್ಕೆ ಮಾನದಂಡದ ಬಗ್ಗೆ ಭಾರಿ ಆರೋಪವಿದೆ. ಇದರ ನಡುವೆಯೇ ಬಿಗ್ಬಾಸ್ ಮನೆಯಿಂದ ಒಂದೆರಡು ವಾರಗಳಲ್ಲಿಯೇ ಹೊರಗೆ ಕಳುಹಿಸಲು ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಾಗೂ ತಾವು ಎಲ್ಲಾ ಕ್ಷೇತ್ರದವರನ್ನೂ ಬಿಗ್ಬಾಸ್ಗೆ ಆಯ್ಕೆ ಮಾಡುತ್ತೇವೆ ಎಂದು ತೋರಿಸಲು ಒಳ್ಳೆಯ ರೀತಿಯಲ್ಲಿ ಹೆಸರು ಮಾಡಿಕೊಂಡವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಅವರು ಒಂದೆರಡು ವಾರಗಳಲ್ಲಿಯೇ ಬೇಗ ಮನೆಯಿಂದ ಹೊರಕ್ಕೆ ಬರುತ್ತಾರೆ ಎನ್ನುವ ಗಂಭೀರ ಆರೋಪವೂ ಇದೆ.
ಅಷ್ಟಕ್ಕೂ ಬಿಗ್ಬಾಸ್ ಎಂದರೇನೇ ಕಚ್ಚಾಟ, ಗಲಾಟೆ, ಒಂದಿಷ್ಟು ಅಶ್ಲೀಲತೆ, ಅತಿ ಎನಿಸುವಷ್ಟು ಪ್ರೀತಿ, ಪ್ರೇಮ, ಕಾಮ... ಎಲ್ಲವುಗಳ ಮಿಶ್ರಣ. ಹೀಗೆ ಇರುವುದಕ್ಕಾಗಿಯೇ ಅದಕ್ಕಷ್ಟು ಟಿಆರ್ಪಿ. ಇಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್ ಎಂದು ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವವರೇ ಹೇಳಿದ್ದಿದೆ. ವೀಕ್ಷಕರ ಕಣ್ಣಿಗೆ ಎಲ್ಲವೂ ಸಹಜ, ನಿಜವಾಗಿ ನಡೆಯುತ್ತಿದೆ ಎಂದು ಎನಿಸಿದರೂ ಜಗಳ, ಅಶ್ಲೀಲತೆ, ಪ್ರೀತಿ-ಪ್ರೇಮ ಸೇರಿದಂತೆ ಹೀಗೆಯೇ ಮಾಡಬೇಕು ಎಂದು ಮೊದಲೇ ಹೇಳಿಕೊಡಲಾಗುತ್ತದೆ, ಟಿಆರ್ಪಿ ಹೆಚ್ಚಾಗುತ್ತಿದ್ದಂತೆಯೇ ಇಂಥ ಸೀನ್ಗಳನ್ನು ಮತ್ತಷ್ಟು ತುರುಕಲಾಗುತ್ತದೆ ಎಂದು ಸ್ಪರ್ಧಿಗಳೇ ಮಾತನಾಡಿದ್ದೂ ಇದೆ. ಅದೇನೇ ಇದ್ದರೂ ಬಿಗ್ಬಾಸ್ ಎಂದರೆ ಹಲವರಿಗೆ ಪಂಚಪ್ರಾಣ. ಊಟವನ್ನಾದರೂ ಬಿಟ್ಟಿಯಾರು, ಒಂದು ದಿನವೂ ಬಿಗ್ಬಾಸ್ ನೋಡಲು ಮರೆಯದವರೇ ಹೆಚ್ಚು. ದಿನವೂ ಬೈದುಕೊಳ್ಳುತ್ತಲೇ ಇದನ್ನು ನೋಡುವ ದೊಡ್ಡ ವರ್ಗವೂ ಇದೆ.
ಸದ್ದಿಲ್ಲದೇ ಮದ್ವೆಯಾಗಿ ಫೋಟೋ, ವಿಡಿಯೋ ಶೇರ್ ಮಾಡದ ನಟಿ ತಾಪ್ಸಿ ಪನ್ನು: ಕೊನೆಗೂ ಕಾರಣ ಬಹಿರಂಗ!
ಇದೇ ಕಾರಣಕ್ಕೆ ಟಿ.ವಿಯಲ್ಲಿ ಮಾತ್ರವಲ್ಲದೇ ಓಟಿಟಿಯಲ್ಲಿಯೂ ಬಿಗ್ಬಾಸ್ ನಡೆಯುತ್ತಿದೆ. ಇದೀಗ ಬಿಗ್ಬಾಸ್ ಅಭಿಮಾನಿಗಳಿಗೆ ಇನ್ನೊಂದು ಖುಷಿ ಸುದ್ದಿ ಇದೆ. ಅದೇನೆಂದರೆ, ಬಿಗ್ಬಾಸ್ ಹಿಂದಿನ ಓಟಿಟಿ ಸೀಸನ್-3 ಶೀಘ್ರದಲ್ಲಿಯೇ ಶುರುವಾಗಲಿದೆ. ನಟ ಸಲ್ಮಾನ್ ಖಾನ್ ನಡೆಸಿಕೊಡುವ ಈ ಬಿಗ್ಬಾಸ್ನಲ್ಲಿ ಮೊದಲ ಸ್ಪರ್ಧಿಯಾಗಿ, ಖಾಸಗಿ ವಿಡಿಯೋ ವೈರಲ್ ಮಾಡಿಕೊಂಡ ನಟಿ ತ್ರಿಶಾ ಕರ್ ಮಧು (Trisha Kar Madhu) ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಭೋಜ್ಪುರಿ ನಟಿ ತ್ರಿಶಾ ಕರ್ ಮಧು ಅವರಿಗೆ ಆಫರ್ ನೀಡಲಾಗಿದೆ. 2021ರಲ್ಲಿ ತ್ರಿಶಾ ಕರ್ ಮಧು ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಪುರುಷನೊಬ್ಬನ ಜೊತೆ ಕಿಸ್ ಮಾಡುತ್ತಾ ತುಂಬಾ ಖಾಸಗಿಯಾಗಿ ಕಳೆದ ಕ್ಷಣಗಳ ವಿಡಿಯೋ ಅದಾಗಿತ್ತು. ಇದೀಗ ಇವರು ಓಟಿಟಿಯಲ್ಲಿ ಮೊದಲ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಾಗಿ ತಿಳಿದು ಬಂದಿದೆ.
ಅಂದಹಾಗೆ, OTT 3 ಕಾರ್ಯಕ್ರಮವನ್ನು ನೋಡಲು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರಂತೆ. ಇದೇ ಕಾರಣಕ್ಕೆ ನಿರೀಕ್ಷೆಗಿಂತ ಬೇಗ ಪ್ರೀಮಿಯರ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಿಂದಿ ಬಿಗ್ಬಾಸ್ನಲ್ಲಿ ಕಳೆದ ಬಾರಿ ಅಂದ್ರೆ OTT ಸೀಸನ್ 2ನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಆದರೆ, ಓಟಿಟಿ ಮೂರನೇ ಸೀಸನ್ ಮೇ 15 ರಂದು ಪ್ರೀಮಿಯರ್ ಆಗಲಿದೆ ಎನ್ನಲಾಗುತ್ತಿದೆ. ಇದರಲ್ಲಿ ಯಾರ್ಯಾರು ಇರಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರದ್ದು.
ಧನುಷ್ ಜೊತೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ಹೊತ್ತಲ್ಲೇ ಆರೋಗ್ಯಕರ ಜೀವನದ ಸಲಹೆ ನೀಡಿದ ರಜನಿ ಪುತ್ರಿ ಐಶ್ವರ್ಯಾ!