Bigg Boss ವಿನ್ನರ್​ ಹೌಸ್​ ಅರೆಸ್ಟ್​! ಗೆಲುವು ಘೋಷಣೆ ಬಳಿಕ ಮನೆಯಲ್ಲಿಯೇ ಲಾಕ್​? ಅಷ್ಟಕ್ಕೂ ಆಗಿದ್ದೇನು?

Published : Jan 18, 2026, 10:42 PM IST
BBK 12

ಸಾರಾಂಶ

ಬಿಗ್​ಬಾಸ್​ ಸೀಸನ್​ 12ರ ವಿನ್ನರ್​ ಯಾರೇ ಆದರೂ ಮನೆಯಿಂದ ಹೊರಬಂದು ಸಂಭ್ರಮಿಸುವಂತಿಲ್ಲ. ಅಷ್ಟಕ್ಕೂ ಆಗಿದ್ದೇನು? ಪೊಲೀಸರು ಈ ಸೂಚನೆ ನೀಡಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ. 

ಇಂದು ಬಿಗ್​ಬಾಸ್​ ಸೀಸನ್​ 12 (Bigg Boss Season 12)ರ ಯಾವ ಸ್ಪರ್ಧಿ ಗೆಲುವು ಸಾಧಿಸುತ್ತಾರೆ ಎಂದು ಇನ್ನೇನು ಕೆಲವೇ ಕ್ಷಣಗಳಲ್ಲಿ ತಿಳಿಯುತ್ತದೆ. ಆದರೆ ಇದರ ನಡುವೆಯೇ ಶಾಕಿಂಗ್​ ವಿಷಯವೊಂದು ಹೊರಬಂದಿದೆ. ಅದೇನೆಂದರೆ, ಇಂದು ಯಾರೇ ವಿನ್​ ಆದರೂ ಅವರು ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬಂದು ಸಂಭ್ರಮ ಆಚರಿಸುವಂತಿಲ್ಲ. ಅವರು ಮನೆಯಲ್ಲಿಯೇ ಲಾಕ್​ ಆಗಿ ಇರುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದಾಗಲೇ ಗಿಲ್ಲಿ ನಟ ಈ ಬಾರಿಯ ವಿನ್ನರ್​ ಎಂದು ಜನರು ಹೇಳುತ್ತಲಿದ್ದರಾದರೂ, ವಿನ್ನರ್​ ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಆಗಿದ್ದೇನು?

ಆದರೆ ವಿನ್ನರ್​ ಯಾರೇ ಆದರೂ ಅವರು ಮಾತ್ರ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬರುವಂತಿಲ್ಲ. ಅದರಲ್ಲಿಯೂ ಗಿಲ್ಲಿ ನಟ ವಿನ್​ ಆದರಂತೂ ಹೌಸ್ ಅರೆಸ್ಟ್​ ಆಗಿಯೇ ಇರಬೇಕು ಎಂದು ರಾಮನಗರ ಎಸ್‌ಪಿ, ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಇದಾಗಲೇ ಬಿಗ್​ಬಾಸ್​ ಮನೆಯ ಹೊರಗೆ ಸಹಸ್ರಾರು ಮಂದಿ ಅಭಿಮಾನಿಗಳು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಅದರಲ್ಲಿಯೂ ಗಿಲ್ಲಿ ನಟನೇ ವಿನ್​ ಆಗುವುದು ಎನ್ನುವ ಕಾರಣಕ್ಕೆ ಹುಚ್ಚಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿದೆ.

ಕೈ ಮೀರಿದ ಪರಿಸ್ಥಿತಿ

ಒಂದು ವೇಳೆ ಗಿಲ್ಲಿ ನಟ ವಿನ್​ ಆದರೆ ಪರಿಸ್ಥಿತಿ ಇನ್ನೂ ಕೈಮೀರಿ ಹೋಗುತ್ತದೆ. ಅದೇ ಬೇರೆ ಸ್ಪರ್ಧಿಗಳು ವಿನ್​ ಆದರೂ ಅದು ಇನ್ನೊಂದು ಹಂತದಲ್ಲಿ ಕೈಮೀರಿ ಹೋಗುತ್ತದೆ. ಯಾವುದಕ್ಕೂ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡುವುದು ಒಳ್ಳೆಯದು ಎನ್ನುವ ಕಾರಣಕ್ಕೆ ಗೆದ್ದ ಸ್ಪರ್ಧಿ ಇಂದು ಸಂಭ್ರಮ ಆಚರಿಸುವಂತಿಲ್ಲ. ನಾಳೆ ಬೆಳಿಗ್ಗೆಯವರೆಗೂ ಸುರಕ್ಷತೆಯ ದೃಷ್ಟಿಯಿಂದ ಬಿಗ್​ಬಾಸ್​ ಮನೆಯಲ್ಲಿಯೇ ಅರೆಸ್ಟ್​ ಆಗಿ ಇರಲಿದ್ದಾರೆ ಎನ್ನಲಾಗಿದೆ.

 

ನಾಳೆ ಬೆಳಿಗ್ಗೆ ಹೊರಕ್ಕೆ

ಇದಾಗಲೇ ಅಭಿಮಾನಿಗಳ ಅತಿರೇಕ ಪೊಲೀಸರಿಗೆ ತಲೆನೋವಾಗಿ ಹೋಗಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) 50ಕ್ಕೂ ಹೆಚ್ಚು ಪೊಲಿಸರನ್ನು ಬಿಗ್​ಬಾಸ್​ ಮನೆಯ ಹೊರಗೆ ನಿಯೋಜಿಸಿದೆ. ಇದರಿಂದ ನಾಳೆ ಬೆಳಿಗ್ಗೆಯವರೆಗೂ ವಿನ್​ ಆದವರನ್ನು ಹೊರಕ್ಕೆ ತರದೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯರಾತ್ರಿ ವಿನ್ನರ್ ಘೋಷಣೆಯಾಗಲಿದ್ದಾರೆ. ಆದ್ದರಿಂದ ನಾಳೆ ಬೆಳಿಗ್ಗೆಯವರೆಗೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಗೆದ್ದ ಅಭ್ಯರ್ಥಿಯನ್ನು ಹೊರಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ 12ರ ವಿನ್ನರ್‌ಗೆ ಸಿಗುವ ನಗದು ಹಾಗೂ ಇತರ ಬಹುಮಾನಗಳೇನು?
BBK 12: ಕಾವ್ಯಾಶೈವಗೆ ಸಿಕ್ಕ ಹಣವೆಷ್ಟು? ಅಶ್ವಿನಿ ಗೌಡಗೆ ಟಾಂಟ್​ ಕೊಟ್ಟು ಗಿಲ್ಲಿ ಬಗ್ಗೆ ಶಾಕಿಂಗ್​ ಸ್ಟೇಟ್​ಮೆಂಟ್!