ಪ್ರತಾಪ್ ಪರವಾಗಿ ನಿಲ್ಲುವ ಒಬ್ಬರೇ ಒಬ್ಬರು ಬಿಗ್ ಬಾಸ್ ಮನೆಯಲ್ಲಿ ಕಾಣಿಸುತ್ತಿಲ್ಲ. ಗುಂಪುಗುಂಪಾಗಿ ಬಂದು ಡ್ರೋನ್ ಪ್ರತಾಪ್‌ನನ್ನು ರೇಗಿಸಿ ಗೋಳುಹುಯ್ದುಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ ಮಿಕ್ಕ ಸ್ಪರ್ಧಿಗಳಲ್ಲಿ ಹಲವರು.
ಬಿಗ್ ಬಾಸ್ ಶೋ ಪ್ರಸಾರವಾಗುತ್ತಿರುವುದು ಗ ಹೊಸ ವಿಷಯವೇನಲ್ಲ. ಆದರೆ ಬಿಗ್ ಬಾಸ್ ಮನೆಯೊಳಕ್ಕೆ ಏನಾಗುತ್ತಿದೆ? ನಿನ್ನೆ ಏನಾಗಿದೆ ಎಂಬುದನ್ನು ಬಹಳಷ್ಟು ವೀಕ್ಷಕರು ನೋಡಿದ್ದಾರೆ. ಆದರೆ, ಇಂದು ಆಗುವುದೇನು? ಭಾರೀ ಕುತೂಹಲ ಕೆರಳಿಸುತ್ತಿದೆ ಬಿಗ್ ಬಾಸ್ ಮನೆಯೊಳಗಿನ ಜಗಳಗಳು, ಕಾಲೆಳೆಯುವಿಕೆ, ಗುಂಪುಗಾರಿಕೆ ಮುಂತಾದವುಗಳು. ಸದ್ಯ ದೊಡ್ಮನೆಯಲ್ಲಿ ದ್ರೋಣ್ ಪ್ರತಾಪ್ ಟಾರ್ಗೆಟ್ ಆಗ್ತಿದಾರಾ?
ಮಂಡ್ಯದ ಹುಡುಗ ಪ್ರತಾಪ್ 'ಡ್ರೋನ್ ಪ್ರತಾಪ್' ಎಂಬ ಹೆಸರಿನಿಂದ ಕರ್ನಾಟಕದ ತುಂಬಾ ವೈರಲ್ ಆಗುವುದಕ್ಕೆ ಕಾರಣವೇನು ಎಂಬ ಸಂಗತಿ ಬಹಳಷ್ಟು ಜನಕ್ಕೆ ಗೊತ್ತಿದೆ. ತಾನು ಹೊಸ ಡ್ರೋನ್ ಕಂಡುಹಿಡಿದಿದ್ದೇನೆ ಎಂದ ಕಾಗೆ ಹಾರಿಸಿ ಬಹಳಷ್ಟು ಸದ್ದು ಮಾಡಿದ್ದ ಡ್ರೋನ್ ಪ್ರತಾಪ್, ಇದೀಗ ಬಿಗ್ ಬಾಸ್ ಮನೆಯೊಳಕ್ಕೂ ಹೊರಕ್ಕೂ ಅದೇ ವಿಷಯಕ್ಕೆ ಟಾರ್ಗೆಟ್ ಆಗುತ್ತಿದ್ದಾರೆ. ಸ್ನೇಹಿತ್ ಗೌಡ, ತುಕಾಲಿ ಸಂತು ಮುಂತಾದವರು ಬೇಕಂತಲೇ ಪ್ರತಾಪ್‌ನನ್ನು 'ಡ್ರೋಣ್' ವಿಷಯ ಎಳೆದುತಂದು ರೇಗಿಸಿದ್ದಾರೆ. "ಅವನು ಹಾರಿಸದ್ದು ಮಾಡಿದ್ದಲ್ಲ, ಅಂಗಡಿಯಿಂದ ತಂದಿದ್ದು" ಎಂದು ಪ್ರತಾಪ್‌ನನ್ನು ಕಾಲೆಳೆದಿದ್ದಾರೆ. ಆದರೆ, ಅದಕ್ಕೆ ಕೌಂಟರ್ ಕೊಡಲು ಪ್ರಯತ್ನಪಟ್ಟ ಪ್ರತಾಪ್‌ನನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ.
ವಿಲನ್‌ಗಳನ್ನು ರೋಡ್‌ನಲ್ಲಿ ಅಟ್ಟಿಸಿಕೊಂಡು ಹೋದ ಚಾರು; ರಾಮಾಚಾರಿ ಆತಂಕ ಡಬಲ್!
ಪ್ರತಾಪ್ ಪರವಾಗಿ ನಿಲ್ಲುವ ಒಬ್ಬರೇ ಒಬ್ಬರು ಬಿಗ್ ಬಾಸ್ ಮನೆಯಲ್ಲಿ ಕಾಣಿಸುತ್ತಿಲ್ಲ. ಗುಂಪುಗುಂಪಾಗಿ ಬಂದು ಡ್ರೋನ್ ಪ್ರತಾಪ್‌ನನ್ನು ರೇಗಿಸಿ ಗೋಳುಹುಯ್ದುಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ ಮಿಕ್ಕ ಸ್ಪರ್ಧಿಗಳಲ್ಲಿ ಹಲವರು. ಆದರೆ, ಡ್ರೋನ್ ಪ್ರತಾಪ್ ಕೌಂಟರ್ ಕೊಟ್ಟರೂ ಕೂಡ ಅದನ್ನು ಒಪ್ಪಿಕೊಂಡು ಅವನನ್ನು ಗೇಲಿ ಮಾಡುವುದನ್ನು ನಿಲ್ಲಿಸುವ ಲಕ್ಷಣ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ನೋಡೋಣ, ಮುಂದೇನಾಗಲಿದೆ ಎಂದು..
ಒಂದು ವರ್ಷ ಪೂರೈಸಿದ ಭಾಗ್ಯಲಕ್ಷ್ಮಿ, ಕೇಕ್ ಕತ್ತರಿಸಿ ಸಂಭ್ರಮಿಸಿದ ಸೀರಿಯರ್ ತಂಡ
ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30 ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ಬಿಗ್ ಬಾಸ್ ಸಂಚಿಕೆ ಪ್ರಸಾರ ವೀಕ್ಷಿಸಬಹುದು. ಅಕ್ಟೋಬರ್ 8 ರಿಂದ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಶೋ ಸಾಕಷ್ಟು ವಿಭಿನ್ನ ಸ್ಪರ್ಧಿಗಳ ಮೂಲಕ ಸಖತ್ ಕುತೂಹಲ ಕೆರಳಿಸುತ್ತಿದೆ. ಇನ್ನೂ 3 ತಿಂಗಳಿಗೂ ಹೆಚ್ಚು ದಿನಗಳು ಪ್ರಸಾರ ಕಾಣಲಿರುವ ಬಿಗ್ ಬಾಸ್‌ನಲ್ಲಿ ಫೈನಲೀ ಗೆಲ್ಲೋದು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್!