ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

Published : Nov 18, 2023, 02:14 PM IST
ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

ಸಾರಾಂಶ

ಬಿಗ್​ಬಾಸ್​ ಮನೆಯೊಳಗಿದ್ದ  ಸ್ಪರ್ಧಿ ಅಂಕಿತಾ ಲೋಖಂಡೆ ಗರ್ಭಿಣಿ ಎಂದು ಮೂರು ದಿನಗಳ ಹಿಂದೆಯೇ ಹೇಳಿದ್ದರೂ, ವರದಿ ಬಾರದ ಕಾರಣ ಟ್ರೋಲಿಗರು ಈ ಪ್ರಶ್ನೆಗಳನ್ನು ಕೇಳ್ತಿದ್ದಾರೆ!  

ಬಿಗ್​ ಬಾಸ್​ (Bigg Boss) ಎಂದ ಮೇಲೆ ಭಾಷೆ ಯಾವುದೇ ಆಗಿರಲಿ, ಅಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್​ ಆಗಿವೆ. ಕೆಲವೊಮ್ಮೆ ಇದು ಸ್ಕ್ರಿಪ್ಟೆಡ್​ ಎಂದೂ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದವರು ಹೇಳುವುದು ಇದೆ. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್​ ಮಾಡಿ ಕೊಡಲಾಗುತ್ತದೆ ಎಂದೂ ಹೇಳಲಾಗುತ್ತದೆ.  ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ.  ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್​  ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್​ಗಳು ಶೇರ್​ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಹೀಗೆ ಬೈದುಕೊಳ್ಳಲಾದರೂ ಇವರಿಗೆ ಈ ಷೋ ನೋಡಬೇಕು! ಅದೇ ಕಾರಣಕ್ಕೆ ಟಿಆರ್​ಪಿ ರೇಟ್​ ಬಿಗ್​ಬಾಸ್​ಗಳಲ್ಲಿ ಟಾಪ್​ 1ನಲ್ಲಿ ಇರುವುದು ಸಾಮಾನ್ಯ.

ಇದೀಗ ಹಿಂದಿ ಬಿಗ್​ಬಾಸ್​ ಸಕತ್​ ಸುದ್ದಿ ಮಾಡುತ್ತಿದೆ. ಇದಕ್ಕೆ  ಕಾರಣ, ಇದರ ಸ್ಪರ್ಧಿ  ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಅಷ್ಟಕ್ಕೂ ಅಂತಿಕಾ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದಾರೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾ-ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.  ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್​ ಆಗಿತ್ತು.  ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ವಿಕ್ಕಿ ಜೈನ್​ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಅತ್ತ  ಇಂಟರ್ನೆಟ್ ಬಳಕೆದಾರರು ಕಿಡಿ ಕಾರಿದ್ದರು.

ಸುಶಾಂತ್ ಸಿಂಗ್ ಎಕ್ಸ್ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್! ಬಿಗ್​ಬಾಸ್​ ಮನೇಲಿ ಗಂಡನೊಟ್ಟಿಗಿದ್ದಾರೆ ನಟಿ!

 
ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎನ್ನುತ್ತಿದ್ದಾರೆ.  ಇದರ ಪ್ರೊಮೋ ಕೆಲ ದಿನಗಳ ಹಿಂದೆ  ರಿಲೀಸ್​ ಆಗಿದ್ದು, ಬಹುಶಃ ಅಂಕಿತಾ ಗರ್ಭಿಣಿ ಎನ್ನಲಾಗುತ್ತಿದೆ.  ಅಂಕಿತಾ ಅವರು, ತಮಗೆ  ಹುಳಿ ತಿನಬೇಕೆಂದು ಅನಿಸುತ್ತಿದೆ ಎಂದಿದ್ದಾರೆ. ಅದರ ಜೊತೆಗೆ ಈ ಬಾರಿ ತಮಗೆ  ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗ್ತಿದೆ. ಅಷ್ಟೇ ಅಲ್ಲದೇ,  ಕುಟುಂಬ ಸದಸ್ಯರು ಆಕೆಯೊಂದಿಗೆ ಗರ್ಭಧಾರಣೆಯ ಬಗ್ಗೆ ಮಾತನಾಡುತ್ತಿರುವುದನ್ನೂ ಪ್ರೊಮೋದಲ್ಲಿ ಕೇಳಬಹುದು.  ಇದರ ಜೊತೆ ಗರ್ಭಧಾರಣೆಯ ಬಗ್ಗೆ ಮಾತನಾಡಿರುವ ಅವರು, ತಾವು ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿಯಲು  ಮೂತ್ರ ಪರೀಕ್ಷೆ ಮಾಡಿಸುವ ಬಗ್ಗೆ ಹೇಳಿದ್ದಾರೆ.  ವೈದ್ಯಕೀಯ ಪರೀಕ್ಷೆಯೂ ನಡೆದಿದ್ದು, ಅದರ ಫಲಿತಾಂಶಕ್ಕೆ ಕಾಯಲಾಗುತ್ತಿದೆ ಎಂದು ವರದಿಯಾಗಿದೆ.   

ಆದರೆ ಈ ವಿಷಯ ಸತ್ಯ ಎಂದು ಬಿಗ್​ಬಾಸ್​ ಪ್ರೇಮಿಗಳು ನಂಬಿ ಕುಳಿತಿದ್ದಾರೆ. ಆದರೆ ಮೂತ್ರ ಪರೀಕ್ಷೆಯ ವರದಿ ಬರಲು 2-3 ದಿನಗಳು ಬೇಕೆ ಎಂಬ ಬಗ್ಗೆ ಇದೀಗ ಗುಮಾನಿ ಶುರುವಾಗಿದೆ. ಅಸಲಿಗೆ ಪ್ರೆಗ್ನೆನ್ಸಿ ಟೆಸ್ಟ್​ ಕಿಟ್​ನಲ್ಲಿ ಗರ್ಭಿಣಿ ಹೌದೋ ಅಲ್ವೋ ಎಂದು ತಿಳಿಯಲು ಒಂದೇ ಒಂದು ನಿಮಿಷ ಸಾಕು. ಅದರಲ್ಲಿ ಗರ್ಭಿಣಿಯ ಮೂತ್ರ ಹಾಕಿ ಪರೀಕ್ಷೆ ಮಾಡಿದರೆ ಸುಲಭವಾಗಿ ತಿಳಿಯಬಹುದು. ಅದನ್ನು ಬಿಟ್ಟು ಮೂತ್ರ ಪರೀಕ್ಷೆಗೆ ವೈದ್ಯಕೀಯ ಪರೀಕ್ಷೆ ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇರಲಿ... ಒಂದು ವೇಳೆ ಪರೀಕ್ಷೆಗೆ ಕಳುಹಿಸಿದ್ದರೂ ಅದರ ರಿಸಲ್ಟ್​ ಬರಲು ಮೂರು ದಿನ ಬೇಕಾ ಅಂತ ಪ್ರಶ್ನೆ ಮಾಡಲಾಗ್ತಿದೆ. ಚೀಪ್​ ಪ್ರಚಾರಕ್ಕಾಗಿ ಬಿಗ್​ಬಾಸ್​ ಈ ಮಟ್ಟಕ್ಕೆ ಇಳೀತಾ ಅಥವಾ ನಟಿಯೇ ಈ ರೀತಿ ಸುಳ್ಳು ಹೇಳಿದ್ರಾ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. 

ಹುಲಿ ಉಗುರು ಪ್ರಕರಣದಲ್ಲಿ ಬೀಗ್​ಬಾಸ್​ ಕಿಟ್ಟಿ ಅರೆಸ್ಟ್​! ಮುಂದೇನಾಗತ್ತೆ ಕೇಳ್ತಿದ್ದಾರೆ ಫ್ಯಾನ್ಸ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ