ಡ್ರೋನ್ ಪ್ರತಾಪ್‌ಗೆ 143 ಅರ್ಥನೇ ಗೊತ್ತಿಲ್ವಾ..! ಗಗನಾ ತಬ್ಬಿಕೊಂಡು ಅಮಾಯಕನ ಥರಾ ನಾಟಕ ಮಾಡ್ತಿದ್ದಾನಾ?

Published : Mar 01, 2025, 06:43 PM ISTUpdated : Mar 01, 2025, 06:45 PM IST
ಡ್ರೋನ್ ಪ್ರತಾಪ್‌ಗೆ 143 ಅರ್ಥನೇ ಗೊತ್ತಿಲ್ವಾ..! ಗಗನಾ ತಬ್ಬಿಕೊಂಡು ಅಮಾಯಕನ ಥರಾ ನಾಟಕ ಮಾಡ್ತಿದ್ದಾನಾ?

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಚಿತ್ರದುರ್ಗದ ಗಗನಾ ಭಾರಿ ಜೋಡಿಯಾಗಿದ್ದಾರೆ. 27 ವರ್ಷವಾದರೂ 143ರ ಅರ್ಥ ಗೊತ್ತಿಲ್ಲವೆಂದು ಡ್ರೋನ್ ಹೇಳಿದ್ದು ಅನುಮಾನ ಮೂಡಿಸಿದೆ.

ಬೆಂಗಳೂರು (ಮಾ.01): ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಡ್ರೋನ್ ಪ್ರತಾಪ್‌ಗೆ ಚಿತ್ರದುರ್ಗದ ಮಾತಿನ ಮಲ್ಲಿ ಗಗನಾ ಭಾರಿ ಜೋಡಿ ಆಗಿದ್ದಾಳೆ. ಆದರೆ, ಗಗನಾ ಕಳೆದ ವಾರ ಹೇಳಿದ್ದ 143 (ಒನ್‌ ಫೋರ್ ಥ್ರೀ..) ಎಂದರೆ ಗೊತ್ತೇ ಇರಲಿಲ್ಲ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾನೆ. ಸುಮಾರು 27 ವರ್ಷ ಆಸುಪಾಸಿನಲ್ಲಿರುವ ಡ್ರೋನ್ ಪ್ರತಾಪ್ ನಿಜವಾಗ್ಲೂ ಮುಗ್ಧನಾ ಅಥವಾ ಅಮಾಯಕನ ತರಹ ನಾಟಕ ಮಾಡುತ್ತಿದ್ದಾನಾ? ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಿಂದ ಬಿಡುಗಡೆ ಮಾಡಲಾದ ಈ ಪ್ರೋಮೋ ವಿಡಿಯೋದಲ್ಲಿ 'ಗಗನಾಗೆ ಒಂದು ಬುಟ್ಟಿಯಲ್ಲಿ ಸೇಬು ಹಣ್ಣನ್ನು ಮುಚ್ಚಿ ಕೊಡಲಾಗುತ್ತದೆ. ಇದನ್ನು ಮುಟ್ಟಿನೋಡಿ ಇದೇನು ಎಂದು ಹೇಳುವಂತೆ  ಕೇಳಿದಾಗ, ಇದು ಹಣ್ಣು ಎಂಬಂತೆ ಕಾಣುತ್ತದೆ ಎನ್ನುತ್ತಾಳೆ. ಇದರ ಅರ್ಥವೇನು? ಯಾರು ನಿಮಗೆ ಜೋಡಿಯಾಗ್ತಾರೆ ಎಂದು ಕೇಳಿದಾಗ ಯಾರೋ ಸೈಂಟಿಸ್ಟ್ ಸಿಗುತ್ತಾರೆ ಎಂದು ಹೇಳುತ್ತಾರೆ. ಇದರ ಬೆನ್ನಲ್ಲಿಯೇ ಒಂದು ಕೋಣೆ ಒಳಗಿನಿಂದ ವಿಜ್ಞಾನಿ ಐನ್‌ಸ್ಟೀನ್ ಫೋಟೀ ಹಿಡಿದುಕೊಂಡಿದ್ದ ಡ್ರೋನ್ ಪ್ರತಾಪ್ ವೇದಿಕೆಗೆ ಬರುತ್ತಾನೆ. ಆನಂತರ ಡ್ರೋನ್ ಪ್ರತಾಪ್‌ಗೆ ಗಗನಾ ಭಾರಿಯ ಬಗ್ಗೆ ಒಂದಷ್ಟು ಅಭಿಪ್ರಾಯಗಳನ್ನು ಕೇಳಲಾಗುತ್ತದೆ. ಗಗನಾ ತುಂಬಾ ಒಳ್ಳೆ ಟ್ಯಾಲೆಂಟ್ ಇರುವ ಹುಡುಗಿ. ಶೋಗಳಲ್ಲಿ ನೋಡಿದ್ದೇನೆ. ಒಳ್ಳೆಯ ಅಭಿನಯ ಇದೆ. ಒಳ್ಳೆಯ ಗುಣಗಳಿವೆ, ಒಳ್ಳೆಯದಾಗಲಿ ಅವರಿಗೆ ಎಂದು ಹೇಳುತ್ತಾನೆ. 

ಭರ್ಜರಿ ಬ್ಯಾಲರ್ಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದ ವೇಳೆ ಗಗನಾ ಭಾರಿ ಅವರು ಇಲ್ಲೇನಿದ್ದರೂ ಹೆಚ್‌2ಎಸ್‌ಓ4 (H2SO4) ನಡೆಯುವುದಿಲ್ಲ. ಒನ್‌ಫೋರ್‌ಥ್ರೀ (143) ಮಾತ್ರ ವರ್ಕೌಟ್ ಆಗೋದು ಎಂದು ಹೇಳಿದ್ದರು. ಇದರ ಅರ್ಥವೇನು ಎಂದು ನಿರೂಪಕ ನಿರಂಜನ್ ದೇಶಪಾಂಡೆ ಕೇಳುತ್ತಾರೆ.

ಇದನ್ನೂ ಓದಿ:  ಅಬ್ಬಬ್ಬಾ ಎಷ್ಟು ರೊಮ್ಯಾಂಟಿಕ್‌, ಚೈತ್ರಾ ವಾಸುದೇವನ್ ಮೆಹಂದಿ ಶಾಸ್ತ್ರದ ಸುಂದರ ಫೋಟೋಗಳು

ಆಗ ಡ್ರೋನ್ ಪ್ರತಾಪ್ '143' ಅಂದರೆ ನೋಡ್ಕೊಂಡು ಬಂದೆ.. ನಾನು ಎಂದು ನಗಾಡುತ್ತಾ ನಾಚಿಕೊಳ್ಳುತ್ತಾರೆ. ಆಗ ಗಗನಾ ಮಧ್ಯಬಂದು 143 ಅಂದರೆ ನಂಬರ್ ಅಂತಾ ಹೇಳ್ತಾರೆ ಎನ್ನುತ್ತಾಳೆ. ಇದಕ್ಕೆ ಡ್ರೋನ್ ಪ್ರತಾಪ್ ನಾಚಿಕೊಳ್ಳುತ್ತಾ ನಂಬರ್ ಅಲ್ಲ ಅದು.. ಎನ್ನುತ್ತಾನೆ. ಈ 143 ಎನ್ನೋದು ಒಂದಷ್ಟು ಲೆಟರ್‌ಗಳನ್ನು ರೆಪ್ರೆಸೆಂಟ್ ಮಾಡುತ್ತದೆ ಎಂದು ಹೇಳುತ್ತಾನೆ. ಆಗ ನಿರೂಪಕ ನಿರಂಜನ್ ಡೈರೆಕ್ಟ್ ಆಗಿ ಮ್ಯಾಟರ್‌ಗೆ ಬಾ ಎಂದು ಹೇಳಿದಾಗ, ಜಡ್ಜಸ್ ಸೀಟಿನಲ್ಲಿ ಕುಳಿತುಕೊಂಡಿದ್ದ ರಚಿತಾ ರಾಮ್ ಕೂಡ ಕೋಪಗೊಂಡು ಹೊಡಿತೀನಿ ಇವಾಗ.. ಏಯ್... ಎಂದು ಗದರುತ್ತಾರೆ. ಆಗ ಐ ಲವ್ ಯೂ (I Love You) ಎಂದು ಅರ್ಥ ಮೇಡಂ ಎಂದು ಡ್ರೋನ್ ಪ್ರತಾಪ್ ಹೇಳುತ್ತಾನೆ. ಅದರಲ್ಲೇನಿದೆ ಎಂದು ನಿರಂಜನ್ ಹೇಳುತ್ತಾರೆ.

ಮೀಡಿಯಾ ಅಂದ್ರೆ ಭಯ ಎಂದ ಡ್ರೋನ್ ಪ್ರತಾಪ್!
ರಚಿತಾ ರಾಮ್ ಅವರು ಡ್ರೋನ್ ಪ್ರತಾಪ್‌ಗೆ ನಿಮಗ್ಯಾಕೆ ಎಲ್ಲಿಯಾದರೂ ಪ್ರೀಯಾಗಿ ಮಾತನಾಡೋಕೆ ಏಕೆ ಮುಜುಗರ ಎಂದು ಕೇಳುತ್ತಾರೆ. ಆಗ ಡ್ರೋನ್ ಪ್ರತಾಪ್ 'ನನಗೆ ಮೀಡಿಯಾ ಅಂದ್ರೆ ಭಯ' ಎಂದು ಹೇಳುತ್ತಾರೆ. ಇದಕ್ಕೆ ನಟಿ ರಚಿತಾ ರಾಮ್ ತಲೆ ಮೇಲೆ ಕೈ ಇಟ್ಟುಕೊಂಡು ಅಯ್ಯೋ..! ದೇವ..! ಎಂತಹ ಒಳ್ಳೆಯ ಪ್ಲಾಟ್‌ಫಾರ್ಮ್‌ ಇದು. ನೀವು ನೀವಾಗಿ ಇರಬೇಕು. ನೀವು ಏನು ಬೇಕಾದರೂ ಮಾತನಾಡಬಹುದು ಇಲ್ಲಿ. ಯಾರೂ ನಿಮ್ಮನ್ನು ಜಡ್ಜ್ ಮಾಡೋದಿಲ್ಲ. ಯಾರಿಗೋಸ್ಕರ ಬದುಕ್ತಿದ್ದೀರಿ ನೀವು.? ಕಳೆದ ವಾರ ಈ ಶೋ ಬಗ್ಗೆ ಏನೆಂದು ಹೇಳಿದ್ರಿ ನೆನಪಿದೆಯಾ? ಎಂದು ಕೇಳುತ್ತಾರೆ. ಆಗ ಪ್ರತಾಪ್ ನಾನು 100 ಪರ್ಸೆಂಟ್ ಕೊಡುತ್ತೇನೆ ಎಂದು ಹೇಳಿದ್ದನ್ನು ಪುನಃ ಉಚ್ಛರಿಸುತ್ತಾರೆ.. 

ಇದನ್ನೂ ಓದಿ:  ನಟಿ ರಮೋಲಾ ಮಾತಿನಿಂದ ವೇದಿಕೆ ಮೇಲೆ ರಕ್ಷಕ್‌ಗೆ ಮುಜುಗರ; ಗಪ್‌ ಚುಪ್‌ ಆಗಿ ನಿಂತ ಮರಿ ಬುಲೆಟ್

27 ವರ್ಷವಾದ್ರೂ 143 ಅರ್ಥ ಗೊತ್ತಿಲ್ಲವೆಂದು ನಂಬ್ತೀರಾ?
ಡ್ರೋನ್ ಪ್ರತಾಪ್ 1998ರ ಜನವರಿ ತಿಂಗಳಲ್ಲಿ ಜನಿಸಿದ್ದಾರೆ. ಅಂದರೆ, ಈಗ ಅವರಿಗೆ 27 ವರ್ಷ ವಯಸ್ಸಾಗಿದೆ. ಇಂದಿನ ಪ್ರೈಮರಿ ಶಾಲೆ ಮಕ್ಕಳು ಕೂಡ 143 ಅಂದ್ರೆ ಏನೆಂದು ಅರ್ಥ ತಿಳಿದುಕೊಂಡಿರುತ್ತಾರೆ. ಅಂಥದ್ದರಲ್ಲಿ 27 ವರ್ಷ ವಯಸ್ಸಾಗಿರುವ, ಸಿನಿಮಾ ಹಾಡುಗಳನ್ನು ಕೇಳಿ ಡ್ಯಾನ್ಸ್ ಮಾಡುವ ಡ್ರೋನ್ ಪ್ರತಾಪ್‌ಗೆ 143 ಅರ್ಥ ಗೊತ್ತಿಲ್ಲ ಎಂದು ನಂಬುತ್ತೀರಾ? ಅಥವಾ ಅಮಾಯಕನ ಹಾಗೆ ಇಲ್ಲಿಯೂ ನಾಟಕ ಮಾಡ್ತಿದ್ದಾನೆ ಎನ್ನಿಸುತ್ತಿದೆಯಾ? ನೀವೇ ತೀರ್ಮಾನಿಸಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ