ತಮಿಳಿನ ಧಾರಾವಾಹಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಚೆಲುವಿ; ಲಕ್ಷ್ಮೀ ನಿವಾಸಕ್ಕೆ ಹೇಳಿದ್ರಾ ಟಾಟಾ?

Published : Mar 01, 2025, 04:29 PM ISTUpdated : Mar 01, 2025, 04:33 PM IST
ತಮಿಳಿನ ಧಾರಾವಾಹಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಚೆಲುವಿ; ಲಕ್ಷ್ಮೀ ನಿವಾಸಕ್ಕೆ ಹೇಳಿದ್ರಾ ಟಾಟಾ?

ಸಾರಾಂಶ

Actress Ashwini Murthy: ನಟಿ ಅಶ್ವಿನಿ ಮೂರ್ತಿ ತಮಿಳಿನ ಗಟ್ಟಿಮೇಳಂ ಧಾರಾವಾಹಿಯ ಮೂಲಕ ತಮಿಳು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಲಕ್ಷ್ಮೀ ನಿವಾಸದಲ್ಲಿ ಚೆಲುವಿಯಾಗಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ವೆಂಕಿಯ ಕೈ ಹಿಡಿದು ತುಂಬು ಕುಟುಂಬದ ಸೊಸೆಯಾಗಿದ್ದರು.

Lakshmi Nivasa Cheluvi Actress: ಲಕ್ಷ್ಮೀ ನಿವಾಸದ ಚೆಲುವಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಅಶ್ವಿನಿ ಮೂರ್ತಿ ತಮಿಳು ಕಿರುತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ತಮಿಳಿನ ಗಟ್ಟಿಮೇಳಂ ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ.  ಲಕ್ಷ್ಮೀ ನಿವಾಸದಲ್ಲಿ ಹೂ ಮಾರುವ ಹುಡುಗಿಯಾಗಿ ಕಾಣಿಸಿಕೊಂಡ ಚೆಲುವಿ, ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿ ದತ್ತು ಪುತ್ರ ವೆಂಕಿ ಕೈ ಹಿಡಿದು ತುಂಬಾ ಕುಟುಂಬದ ಸೊಸೆಯಾಗಿದ್ದಾಳೆ. ಮೂಕ ಗಂಡನಿಗೆ ಧ್ವನಿಯಾಗಿರೋ ಚೆಲುವಿಗೆ ಆರ್ಥಿಕವಾಗಿ ಸದೃಢವಾಗಬೇಕು ಮತ್ತು ಅಂಧ ತಾಯಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಅನ್ನೋದು ಚೆಲುವಿಯ ಆಸೆಯಾಗಿದೆ. ಇತ್ತೀಚೆಗೆ ತನಗೆ ಗಂಡನಂತಿರೋ ಮಗು ಬೇಕೆಂದು ಚೆಲುವಿ ಹೇಳಿಕೊಳ್ಳುತ್ತಿದ್ದಾಳೆ.

ಲಕ್ಷ್ಮೀ  ನಿವಾಸದಲ್ಲಿ ಗಂಡನಿಗೆ ತಕ್ಕ ಹೆಂಡತಿಯಾಗಿ, ತುಂಬು ಕುಟುಂಬದ ಜವಾಬ್ದಾರಿಯುತ ಸೊಸೆಯಾಗಿ ಕಾಣಿಸಿಕೊಳ್ಳುತ್ತಿರುವ ಚೆಲುವಿ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ವೆಂಕಿಗೆ ಆತನ ಸೋದರರಿಂದ ಎಷ್ಟೇ ಅವಮಾನವಾದರೂ ಗಂಡನ ಪ್ರೀತಿಯಿಂದಾಗಿ ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ಹೆಚ್ಚು ಹಣ ದುಡಿದು ಕಷ್ಟದಲ್ಲಿರುವ ಅತ್ತೆ-ಮಾವನಿಗೆ ಸಹಾಯ ಮಾಡಬೇಕು ಎಂದು ವೆಂಕಿ-ಚೆಲುವಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಳೆ. 

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಒಂದು ವರ್ಷಕ್ಕೂ ಅಧಿಕ ಸಮಯದಿಂದಲೂ ಹೆಚ್ಚು ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಎರಡ್ಮೂರು ವಾರಗಳಿಂದ ಅದೇ ವಾಹಿನಿಯ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಲಕ್ಷ್ಮೀ ನಿವಾಸ ಜನಪ್ರಿಯತೆಯಿಂದಾಗಿ ಈ ಧಾರಾವಾಹಿ ತಮಿಳು ಮತ್ತು ತೆಲುಗು ಭಾಷೆಗೆ ರಿಮೇಕ್ ಆಗಿದೆ. ಇನ್ನು ಕೆಲ ಭಾಷೆಗೆ ಧಾರಾವಾಹಿ ಡಬ್ಬಿಂಗ್ ಮಾಡಲಾಗುತ್ತಿದೆ. 

ಇದನ್ನೂ ಓದಿ: ಬರಿದ ಒಡಲಿನಲ್ಲಿ ಬಂದ ಚಿನ್ನುಮರಿ; ಚೆಲುವಿ ಪ್ರಶ್ನೆಗೆ ದಂಗಾದ ಸೈಕೋ ಜಯಂತ್‌ನ ಹೃದಯ ಪುಕ ಪುಕ

ತಮಿಳಿನಲ್ಲಿ ಗಟ್ಟಿಮೇಳಂ ಆದ ಲಕ್ಷ್ಮೀ ನಿವಾಸ
ತಮಿಳಿನಲ್ಲಿ ರಿಮೇಕ್ ಆಗಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕನ್ನಡದ ಬಹುತೇಕ ಕಲಾವಿದರು ನಟಿಸಿದ್ದಾರೆ. ಗಟ್ಟಿಮೇಳಂ ಹೆಸರಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ಭಾವನಾ ಪಾತ್ರದಲ್ಲಿ ಛಾಯಾ ಸಿಂಗ್, ವೆಂಕಿ ಪಾತ್ರದಲ್ಲಿ ಅಮೃತಧಾರೆಯ ಆನಂದ್ ನಟಿಸುತ್ತಿದ್ದಾರೆ. ವೆಂಕಿ ನಟನೆಯನ್ನು ಅಚ್ಚು ಒತ್ತಿದ್ದಂತೆ ಆನಂದ್ ನಟಿಸುತ್ತಿದ್ದಾರೆ. ಇನ್ನು ವಿಶ್ವನ ತಾಯಿಯಾಗಿರುವ ಹಿರಿಯ ಕಲಾವಿದೆ ಗಟ್ಟಿಮೇಳಂನಲ್ಲಿಯೀ ಅದೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ತಮಿಳಿನ ಚೆಲುವಿಯಾಗಿ ಇದೇ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ಈ ಮೂಲಕ ಒಂದೇ ಕಥೆಯುಳ್ಳು ಎರಡು ಭಾಷೆಯ ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ.

ತಮಿಳು ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿರುವ ಕುರಿತ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ  ಪೋಸ್ಟ್‌ಗೆ ಅಭಿಮಾನಿಗಳು, ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿದ್ದಾರೆ. ಕಲಾವಿದರು ಏಕಕಾಲದಲ್ಲಿ ಎರಡರಿಂದ ಮೂರು ಧಾರಾವಾಹಿಗಳಲ್ಲಿ ನಟಿಸುತ್ತಿರುತ್ತಾರೆ. ಹಾಗಾಗಿ ಲಕ್ಷ್ಮೀ ನಿವಾಸ ಮತ್ತು ಗಟ್ಟಿ ಮೇಳಂ ಧಾರಾವಾಹಿಯ ಚೆಲುವಿ ಪಾತ್ರದಲ್ಲಿ ಅಶ್ವಿನಿ ಮೂರ್ತಿ ಅವರೇ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಅಶ್ವಿನಿ ಮೂರ್ತಿ ಬಾಲ್ಯದ ಫೋಟೋ ವೈರಲ್ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ