Niveditha Gowda: ಗಂಡನ ದುಡ್ಡು ಖರ್ಚು ಮಾಡೋಳು ನೀನು: ನೆಟ್ಟಿಗರಿಗೆ ಟಾಂಗ್‌ ಕೊಟ್ಟ ನಿವಿ

Published : Nov 26, 2022, 11:49 AM ISTUpdated : Nov 26, 2022, 11:53 AM IST
Niveditha Gowda: ಗಂಡನ ದುಡ್ಡು ಖರ್ಚು ಮಾಡೋಳು ನೀನು: ನೆಟ್ಟಿಗರಿಗೆ ಟಾಂಗ್‌ ಕೊಟ್ಟ ನಿವಿ

ಸಾರಾಂಶ

 Niveditha Gowda - Chandan Shetty: ಸೋಲೋ ಟ್ರಿಪಲ್ಲಿ ಬ್ಯುಸಿಯಾಗಿರುವ ನಿವೇದಿತಾ ಗೌಡ. ಇಷ್ಟು ದಿನ ಸುಮ್ಮನಿದ್ದ ನಿವಿ ಈಗ ನೆಗೆಟಿವ್ ಕಾಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ.

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಕೆಲವು ದಿನಗಳಿಂದ Baliಗೆ ಸೋಲೋ ಟ್ರಿಪ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿರುವ ಚೆಲುವೆ ಪ್ರತಿಯೊಂದರ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ನಿವಿ ಹಾಟ್ ಅಂಡ್ ಕೂಟ್ ಫೋಟೋ ನೋಡುತ್ತಿರುವ ನೆಟ್ಟಿಗರು ಎಷ್ಟು ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದಾರೆ ಅಷ್ಟೇ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಚಂದನ್ ಶೆಟ್ಟಿ ಹಣವನ್ನು ಖರ್ಚು ಮಾಡುತ್ತಿರುವ ಎಂದಿದ್ದಾರೆ. ಇರ್ಲಿ ಬಿಡು ಅಂತ ಇಷ್ಟು ದಿನ ಸುಮ್ಮನಿದ್ದ ನಿವಿ ಈಗ ಗರಂ ಆಗಿದ್ದಾರೆ.

ನೆಗೆಟಿವ್ ಕಾಮೆಂಟ್‌ಗಳಿಗೆ ಉತ್ತರ:

'ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ ಆದರೆ ಇದೆಲ್ಲಾ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್‌ಸೆನ್ಸ್‌ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ' ಎಂದು ನಿವೇದಿತಾ ಬರೆದುಕೊಂಡಿದ್ದಾರೆ. 

'ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದ್ದರೆ ತಪ್ಪಲ್ಲ ಆದರೆ ಹುಡುಗಿ ಪ್ರವಾಸ ಮಾಡಿದ್ದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ? ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವೆ ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್‌ ಮಾಡುತ್ತಿರುವೆ ಎಂದು ಕಾಮೆಂಟ್‌ ಮಾಡುತ್ತಿರುವವರಿಗೆ ಒಂದು ಪ್ರಶ್ನೆ..ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್‌ ಸೆಟ್‌ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದ್ದರು ನಿಮಗೆ ಏನು ಸಮಸ್ಯೆ? ಇದು ನಿಮಗೆ ಸಂಬಂಧಿಸಿ ವಿಚಾರವಲ್ಲ' ಎಂದು ನಿವೇದಿತಾ ಹೇಳಿದ್ದಾರೆ.

Niveditha Gowda ಯಾಕಮ್ಮಾ ಪದೇ ಪದೇ ಮುತ್ತು ಕೊಟ್ಟು ವಿಡಿಯೋ ಮಾಡ್ತೀಯಾ?

'ಇಷ್ಟು ನೆಗೆಟಿವ್‌ ಜನರು ಇದ್ದರೂ ನನ್ನ ಪರವಾಗಿ ಮಾತನಾಡುತ್ತಿರುವವರಿದ್ದಾರೆ ಅವರಿಗೆ ತುಂಬಾ ಥ್ಯಾಂಕ್ಸ್‌. ಕೆಟ್ಟ ಜನರ ನಡುವೆ ಒಳ್ಳೆ ಪ್ರಪಂಚವಿದೆ ಒಳ್ಳೆ ಜನರಿದ್ದಾರೆ ಅಂತ ತೋರಿಸುತ್ತಿದ್ದಾರೆ' ಎಂದಿದ್ದಾರೆ ನಿವಿ.

ನೆಟ್ಟಿಗರ ಪ್ರಶ್ನೆಗೆ ಉತ್ತರ:

ಯೂಟ್ಯೂಬ್ ಚಾನೆಲ್ ಆರಂಭಿಸಿರುವ ನಿವೇದಿತಾ ಗೌಡ ಜನರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ...

ನೀವು ಪ್ರಗ್ನೆಂಟ್ ಅಂತ ರೂಮರ್ಸ್‌ ಇದೆ. ಇದಕ್ಕೆ ನಿಮ್ಮ ರೆಸ್ಪಾನ್ಸ್‌ ಏನು?
ನನಗೆ ಎಷ್ಟೊಂದು ಸಲ ಕಾಲ್ ಮಾಡಿ ಕೇಳುತ್ತಾರೆ. ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಇಲ್ಲ. ಲೈಫ್‌ನ ಎಂಜಾಯ್ ಮಾಡಬೇಕು ಮಕ್ಕಳಿಗೆಂದು ಟೈಮ್ ಕೊಡಬೇಕು ತುಂಬಾ ಕೇರ್ ಮಾಡಬೇಕು. ಈಗ ಅದೆಲ್ಲಾ ಮಾಡಲು ಆಗುದಿಲ್ಲ. ಏನಾದರೂ ಇದ್ದರೆ ನಾನೇ ಅನೌನ್ಸ್ ಮಾಡ್ತೀನಿ...

ನಿಮ್ಮ ಸ್ಯಾಲರಿ ಎಷ್ಟು?
ಎಷ್ಟು ಕಷ್ಟವಾದ ಪ್ರಶ್ನೆ ಕೇಳಿದ್ದೀರಿ. ತಿಂಗಳಿಗೊಂದು ರೀತಿ ಸಂಬಳ ಬರುತ್ತೆ. ಒಂದೊಂದು ತಿಂಗಳು ಬರೋದೇ ಇಲ್ಲ. ಬಂದಾಗ ಚೆನ್ನಾಗಿ ಇಟ್ಟಿಕೊಳ್ಳಬೇಕು ಬೇಕಾಗುತ್ತದೆ. ಹುಡುಗಿಯರ ವಯಸ್ಸು ಹೇಗೆ ಕೇಳಬಾರದು ಅವರ ಸಂಬಳ ಕೂಡ ಕೇಳಬಾರದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್