ಬೇಡವೇ ಬೇಡ ಎಂದು ನಿಶ್ಚಿತಾರ್ಥ ಮುರಿದ ವೈಷ್ಣವಿ ಗೌಡ

By Vaishnavi Chandrashekar  |  First Published Nov 25, 2022, 11:19 AM IST

ಸೋಷಿಯಲ್ ಮೀಡಿಯಾದಲ್ಲಿ ಕ್ಲಾರಿಟಿ ಕೊಟ್ಟ ವೈಷ್ಣವಿ ಗೌಡ. ಸಂಬಂಧ ಬೇಡವೇ ಬೇಡ ಅಂದಿದ್ಯಾಕೆ?


ಕನ್ನಡ ಕಿರುತೆರೆ ವೀಕ್ಷಕರ ಮನೆ ಮಗಳು ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೈಲೆಂಟ್ ಆಗಿ ಹಸೆಮಣೆ ಏರಲು ಸಜ್ಜಾದ ನಟಿ, ಲವ್ ಆರ್ ಅರೇಂಜ್ಡ್‌ ಮ್ಯಾರೇಜ್‌ ಹೀಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದು. ಮೊದಲು ಪ್ರೈವಸಿ ನೀಡಬೇಕು ಎಂದು ಮನವಿ ಮಾಡಿಕೊಂಡ ನಟಿ ಒಂದೇ ದಿನದಲ್ಲಿ ಸಂಬಂಧ ಮುರಿದಿರುವುದಾಗಿ ಬರೆದುಕೊಂಡಿದ್ದಾರೆ.

ಹೌದು! 10 ದಿನಗಳ ಹಿಂದೆ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಕುಟುಂಬದ ನಡುವೆ ಮದುವೆ ಮಾತುಕತೆ ನಡೆದಿದೆ. ಸಣ್ಣದಾಗಿ ಶಾಸ್ತ್ರ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಮತ್ತು ವಿಡಿಯೋ ವೈರಲ್ ಅಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿ 'ಎಲ್ಲಾ ಕಡೆ ಈ ಫೋಟೋ ನೋಡುತ್ತಿರುವೆ. ನಮ್ಮ ವೈಯಕ್ತಿಕ ಜೀವನ ಪ್ರೈವಸಿಯನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೀನಿ. ಇದು ಎಂಗೇಜ್‌ಮೆಂಟ್‌ ಅಲ್ಲ. ಯಾವುದೇ ವಿಚಾರವಿದ್ದರೂ ನಾನೇ ಪೋಸ್ಟ್‌ ಹಾಕುವ ಮೂಲಕ ತಿಳಿಸುತ್ತೇನೆ' ಎಂದು ವೈಷ್ಣವಿ ಬರೆದುಕೊಂಡಿದ್ದರು. 

Tap to resize

Latest Videos

ವಿದ್ಯಾಭರಣ್ ಕ್ಯಾರೆಕ್ಟರ್‌ ಬಗ್ಗೆ ಜೀವನದ ಬಗ್ಗೆ ಇಬ್ಬರು ಯುವತಿಯರು ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಲು ವಿದ್ಯಾಭರಣ್ ಮುಂದಾದ್ದರು. ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದು ಈ ಸಂಬಂಧ ಮುಂದುವರೆಸುವುದು ಬೇಡ ಎಂದು ತೀರ್ಮಾನ ಮಾಡಿಕೊಂದಿದ್ದಾರೆ. 'ನಾವು ಈ ಸಂಬಂಧ ಮುರಿಯುತ್ತಿದ್ದೇವೆ. ಈ ವಿಚಾರವನ್ನು ಮುಂದೆವರೆಸುವುದು ಬೇಡ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಳ್ಳುತ್ತೀನಿ. ಇನ್ನುಳಿದ ವಿಚಾರಗಳು ಇಲ್ಲಿದೆ. ನನಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದವರಿಗೆ ಧನ್ಯವಾದಗಳು' ಎಂದು ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದಾರೆ.

ಸ್ಪಷ್ಟನೆ ಕೊಟ್ಟ ವೈಶ್:

'ಹುಡುಗನ ಕಡೆಯವರು ನಮ್ಮ ಮನೆಗೆ ಬಂದಿದ್ದರು. ಆದರೆ ನಾವು ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಅರೇಂಜ್‌ ಮ್ಯಾರೇಜ್‌ ಆಗಿರೋದರಿಂದ ನಾನು ಹುಡುಗನ ಬಗ್ಗೆ ತಿಳಿದುಕೊಳ್ಳಬೇಕು, ಒಂದಷ್ಟು ಸಮಯ ಕಳೆಯಬೇಕು. ಇನ್ನೂ ನಾನು ಮದುವೆಗೆ ಓಕೆ ಎಂದು ಹೇಳಿಲ್ಲ' ಎಂದಿದ್ದಾರೆ. 

Vaishnavi ನಿಶ್ಚಿತಾರ್ಥ ಮಾಡ್ಕೊಂಡಿಲ್ಲ, ವೈಷ್ಣವಿ ಬೇಜಾರ್ ಮಾಡ್ಕೋಬೇಡಿ ಇದು ಶತ್ರುಗಳ ಕೆಲಸ: ವಿದ್ಯಾಭರಣ್

ವಿದ್ಯಾಭರಣ್ ಸ್ಪಷ್ಟನೆ:

'ವೈಷ್ಣವಿ ಅವರ ಜೊತೆ ನನ್ನ ನಿಶ್ಚಿತಾರ್ಥ ಆಗಿಲ್ಲ. ನಿಶ್ಚಿತಾರ್ಥ ಅಂದ್ರೆ ಉಂಗುರ ಬದಲಾಯಿಸಿಕೊಳ್ಳುವುದು ಅಲ್ವಾ? ನಾವು ಹಾಗೆಲ್ಲ ಮಾಡಿಲ್ಲ ಒಂದು ವೇಳೆ ಆಗಿದ್ದರೆ ಹೇಳಿಕೊಳ್ಳುತ್ತೀವಿ ವೈಷ್ಣವಿ ಅವರು ಹೇಳಿಲ್ಲ ನಾನು ಹೇಳಿಲ್ಲ ಅಂದ್ಮೇಲೆ ಆಗಿಲ್ಲ ಅಂತ ಅರ್ಥ. ಎರಡು ಕುಟುಂಬದ ನಡುವೆ ಕೇವಲ ಮಾತುಕತೆಯಾಗಿ ಅಷ್ಟೆ. ಇದೆಲ್ಲಾ ಆಗಿ 10 ದಿನಗಳು ಕಳೆದಿದೆ. ನಾವಿಬ್ಬರೂ ಇನ್ನೂ ಮಾತನಾಡಿಲ್ಲ ಅರ್ಥ ಮಾಡಿಕೊಂಡಿಲ್ಲ. ಆದರೆ ಹೇಗೆ ಆ ಫೋಟೋ ವೈಲರ್ ಆಗಿದೆ ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ವೈಷ್ಣವಿ ಅವರಿಗೆ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡುತ್ತೀನಿ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ನಾನು ಮುಂದೆ ಮದುವೆ ಆಗ್ತೀವೋ ಇಲ್ವೋ ಗೊತ್ತಿಲ್ಲ ...ಕಾಣದ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ. ಇದರಿಂದ ಹೊರ ಬರುತ್ತೀನಿ' ಎಂದು ಹೇಳಿದ್ದಾರೆ. 

' ಮದುವೆ ವಿಚಾರ ಎಂದು ಗೊತ್ತಾಗುತ್ತಿದ್ದಂತೆ ನನ್ನ ಕುಟುಂಬದವರ ವರ್ಚಸ್‌ನ ಹಾಳು ಮಾಡಲು ಹಿತ ಶತ್ರುಗಳು ಮುಂದಾಗಿದ್ದಾರೆ. ನಾನು ಯಾವುದೇ ಹುಡುಗಿಯ ಜೊತೆ ತಪ್ಪಾಗಿ ನಡೆದುಕೊಂಡಿಲ್ಲ. ಈ ಹಿಂದೆ ನನಗೆ ಗರ್ಲ್‌ಫ್ರೆಂಡ್‌ ಇದ್ದಳು ಇದೆಲ್ಲಾ ನನ್ನ ಫ್ರೆಂಡ್ಸ್ ಸರ್ಕಲ್‌ಗೂ ಗೊತ್ತಿದೆ ಆದರೆ ಅವರೆಲ್ಲಾ ಇಷ್ಟು ಕೀಳಾಗಿ ಇಳಿಯುವುದಿಲ್ಲ. ಆರೋಪ ಮಾಡುತ್ತಿರುವ ಯುವತಿ ನೇರವಾಗಿ ಬಂದು ಆರೋಪ ಮಾಡಬೇಕು. ನನ್ನ ಮೊದಲ ಸಿನಿಮಾ ಬಂದಾಗಲೇ ಆರೋಪ ಮಾಡಬೇಕಿತ್ತು ಅವರಿಗೆ ಹೆಸರು ಹೇಳುವುದಕ್ಕೆ ಧೈರ್ಯವಿಲ್ಲ ಸುಮ್ಮನೆ ಅರೋಪ ಮಾಡುತ್ತಿದ್ದಾಳೆ ಹೀಗಾಗಿ ಈ ವಿಚಾರದ ಬಗ್ಗೆ ನಾಳೆ ಕಮಿಷನರ್‌ಗೆ ದೂರು ನೀಡುತ್ತೀನಿ. ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಬದಲು ಹೋಗಿ ದೂರು ನೀಡಬೇಕಿತ್ತು.' ಎಂದಿದ್ದಾರೆ ವಿದ್ಯಾಭರಣ್.

click me!