BBK9: ಪೊಲೀಸ್ ಕಾನ್ಸ್ಟೇಬಲ್ ಜೇಬಿನಿಂದ 100 ರೂಪಾಯಿ ಕದ್ದ ರೂಪೇಶ್ ರಾಜಣ್ಣ; ಬಾಸುಂಡೆ ಬಿದ್ದ ಕಥೆ ಇದು...

By Vaishnavi ChandrashekarFirst Published Nov 25, 2022, 4:06 PM IST
Highlights

ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಅರಣ್ಯಕಾಂಡ ಟಾಸ್ಕ್‌ನಲ್ಲಿ ಹಂಚಿಕೊಂಡ ರಾಜಣ್ಣ. 100 ರೂಪಾಯಿ ಮಹತ್ವ ತಿಳಿದುಕೊಂಡ ಕಥೆ.

ಬಿಗ್ ಬಾಸ್ ಸೀಸನ್ 9ರಲ್ಲಿ 60 ದಿನ ಪೂರೈಸಿರುವ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದೀಗ ಅರಣ್ಯಕಾಂಡ ಟಾಸ್ಕ್‌ನಲ್ಲಿ ಜೀವನದ ಏಳು ಬೀಳುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಗಾಯಕನಾಗಬೇಕೆಂದು ಬಣ್ಣದ ಪ್ರಪಂಚದ ಸಂಪರ್ಕ ಬೆಳೆಸಿಕೊಂಡ ರೂಪೇಶ್ ರಾಜಣ್ಣ ಆಗಾಗ ಹಾಡುತ್ತ ಮಿಮಿಕ್ರಿ ಮಾಡುತ್ತ ಬಿಬಿಕೆ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ. ಪ್ರತಿವಾರ ನಾಮಿನೇಟ್ ಆದ್ದರೂ ಸೇಫ್ ಆಗಿ 7ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಎರಡು-ಮೂರು ಸಲ ಕಳಪೆ ಸ್ಪರ್ಧಿ ಪಟ್ಟ ಪಡೆದು ಜೈಲು ಸೇರಿದ್ದರು. 

ರಾಜಣ್ಣ ಕಥೆ:

'ನನ್ನ ಐಟಿಐ ಜೀವನ ಮುಗಿದ ಮೇಲೆ 6 ರಿಂದ 8 ರೂಮ್‌ ಇರುವಂತ ವಟಾರಕ್ಕೆ ಹೋಗಿ ಸೇರಿಕೊಳ್ಳುತ್ತೀನಿ. ಅಲ್ಲೊಂದು ಮೆಸ್ ಇತ್ತು ಅಲ್ಲಿ ಊಟ ಮಾಡಿ ವಾರಕ್ಕೊಮ್ಮೆ ಪೇಮೆಂಟ್ ಮಾಡಬೇಕಿತ್ತು. ಒಂದು ಸಮಯದಲ್ಲಿ ಹಣ ಇರಲಿಲ್ಲ ಆಗ ನೀವು 100 ರೂಪಾಯಿ ಕೊಟ್ಟಿಲ್ಲ ಅಂದ್ರೆ ನಾಳೆ ಊಟ ಸಿಗುವುದಿಲ್ಲ ಅಂತ ಹೇಳುತ್ತಾರೆ ಆಗ ಆ ರೂಮ್‌ಗಳಲ್ಲಿ ಇದ್ದ ಪೊಲೀಸ್ ಕಾಸ್ಟೆಬಲ್‌ ಜೇಬಿನಿಂದ 100 ರೂಪಾಯಿ ಕಳ್ಳತನ ಮಾಡುವೆ. 100 ರೂಪಾಯಿ ತೆಗೆದುಕೊಳ್ಳುವುದನ್ನು ಅವರು ನೋಡುತ್ತಾರೆ ಇಲ್ಲಿ ಯಾರಿಗೂ ಈ ವಿಚಾರ ಗೊತ್ತಾಗಬಾರದು ಅಂದ್ರೆ ಒಂದು ಪತ್ರ ಬರೆದುಕೊಡು ಅಂತಾರೆ. ತಪ್ಪು ಒಪ್ಪಿಕೊಂಡು 100 ರೂಪಾಯಿ ತೆಗೆದುಕೊಂಡಿರುವೆ ಅವರು ನೋಡಿ ಹಿಡಿದಿದ್ದಾರೆ ಮತ್ತೆ ಈ ರೀತಿ ತಪ್ಪು ಮಾಡುವುದಿಲ್ಲ' ಎಂದು ಬರೆದುಕೊಡುತ್ತೀನಿ. 

BBK9 ಮುಖವಾಡ ಕಳಚಿಡಿ: ರೂಪೇಶ್ ರಾಜಣ್ಣ ಅಸಲಿ ಮುಖ ಬಿಚ್ಚಿಟ್ಟ ಸುದೀಪ್

'ಹೊರಗಡೆ ಹೋಗಿ ರಾತ್ರಿ ವಟಾರಕ್ಕೆ ಬಂದಾಗ ಅಲ್ಲಿದ್ದ 20ರಿಂದ 25 ಜನರು ಕುಳಿತುಕೊಂಡು ನಾನು ಕೊಟ್ಟ ಪತ್ರ ನೋಡುತ್ತಿರುತ್ತಾರೆ. ಸುಮಾರು ನಾಲ್ಕು ಜನ ಒಂದು ಬೆತ್ತದಿಂದ ನನಗೆ ಹೊಡೆಯುತ್ತಾರೆ ಆಗ ಬಳಸುವ ಪದಗಳು ನಾನು ಇಲ್ಲಿ ಹೇಳುವುದಕ್ಕೆ ಆಗೋಲ್ಲ. ನನ್ನ ಬಟ್ಟೆಗಳು ಇದ್ದ ಒಂದೇ ಒಂದು ಬ್ಯಾಗ್‌ನ ಪ್ಯಾಕ್‌ ಮಾಡಿ 3ನೇ ಮಹಡಿಯಿಂದ ಹೊರಗಡೆ ಬಿಸಾಡುತ್ತಾರೆ. ನನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಯಾಕೆ ಆ ಹಣ ತೆಗೆದುಕೊಂಡಿರುವುದು ಅಂತ ಯಾರೂ ಕೇಳುತ್ತಿಲ್ಲ ಎನು ಮಾಡಬೇಕು ತಿಳಿಯುತ್ತಿಲ್ಲ. ಊರಲ್ಲಿ ಹೇಳುವಂತಿಲ್ಲ ಅಲ್ಲೇ ಉಳಿದುಕೊಳ್ಳುವಂತಿಲ್ಲ ರಾತ್ರಿ 12.30 ಸಮಯದಲ್ಲಿ ಬ್ಯಾಗ್ ಹಿಡಿದುಕೊಂಡು ನಡೆದುಕೊಂಡು ಹೋಗುವಾಗ ಮನಸ್ಸಿನಲ್ಲಿ ಏನೋ ಒಂದು ತರ ದುಖಃ..ಒಬ್ಬನೇ ಸಬರ್ ಬಸ್‌ ಸ್ಟ್ಯಾಂಡ್‌ನಲ್ಲಿ ನಿಂತುಕೊಂಡು ಊರಿಗೆ ಹೋಗಬೇಕಾ ಅಥವಾ ಬೇರೆ ಊರಿಗೆ ಹೋಗಬೇಕು ಎಂದು ಚಿಂತೆ ಮಾಡಿಕೊಂಡು ಬಸ್‌ ಸ್ಟ್ಯಾಂಡ್‌ನಲ್ಲಿ ಮಲಗುತ್ತೀನಿ.' ಎಂದು ರಾಜಣ್ಣ ಹೇಳಿದ್ದಾರೆ.

'ಅಲ್ಲಿಂದ ಮತ್ತೊಂದು ಇತಿಹಾಸವಿದೆ ಸಮಯ ಸಿಕ್ಕಾಗ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಹೇಳಿಕೊಳ್ಳುತ್ತೀನಿ. ಯಾವ ವ್ಯಕ್ತಿ ಅವತ್ತು ನನಗೆ ಸೂ ಎಂದು ಹೇಳುತ್ತಾನೆ ಅವರು 2 ವರ್ಷಗಳ ಹಿಂದೆ ಕಷ್ಟದಲ್ಲಿ ಸಿಲುಕಿಕೊಂಡಾ ನಾನು ಹೋಗಿ ಸಹಾಯ ಮಾಡುತ್ತೀನಿ' ಎಂದಿದ್ದಾರೆ.

click me!