ಹೆಣ್ಣುಮಕ್ಕಳ ಜೊತೆ ಚೆಲ್ಲಾಟವಾಡಿ ತಪ್ಪಿಸಿಕೊಳ್ಳೋದು ದೊಡ್ಡವರಿಗೆ ಇಷ್ಟು ಸುಲಭನಾ? ಯುವತಿಯರಿಗೆ 'ಅಮೃತಧಾರೆ' ಎಚ್ಚರಿಕೆ!

Published : Feb 20, 2024, 01:14 PM IST
ಹೆಣ್ಣುಮಕ್ಕಳ ಜೊತೆ ಚೆಲ್ಲಾಟವಾಡಿ ತಪ್ಪಿಸಿಕೊಳ್ಳೋದು ದೊಡ್ಡವರಿಗೆ ಇಷ್ಟು ಸುಲಭನಾ? ಯುವತಿಯರಿಗೆ 'ಅಮೃತಧಾರೆ' ಎಚ್ಚರಿಕೆ!

ಸಾರಾಂಶ

ಯುವಕರ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಿ ದೇಹ ಒಪ್ಪಿಸಿ ಮುಂದೊಂದು ದಿನ ನೀವೇ ನಾಪತ್ತೆಯಾಗಬಹುದು.  ಅಮೃತಧಾರೆ ಸೀರಿಯಲ್​ ಕೊಟ್ಟಿದೆ ಈ ಸಂದೇಶ.  

ದೊಡ್ಡವರು ಎನಿಸಿಕೊಂಡವರ, ಆಗರ್ಭ ಶ್ರೀಮಂತರ ಮನೆಯಲ್ಲಿ ನಡೆಯುವ ಕೆಲವು ವಿಷಯಗಳು ನಿಗೂಢವಾಗಿಯೇ ಉಳಿದುಬಿಡುವುದು ಹೊಸತೇನಲ್ಲ. ಅದರಲ್ಲಿಯೂ ಇಂಥವರ ಮಕ್ಕಳು ಮಾಡುವ ತಪ್ಪುಗಳಿಗೆ ಅದೆಷ್ಟೋ ಮಂದಿ ಅಮಾಯಕರು ಬಲಿಯಾದದ್ದೂ ಇದೆ. ಆದರೆ ಹಣದ ಬಲದಿಂದ ಸುಲಭದಲ್ಲಿ ತಪ್ಪಿಸಿಕೊಳ್ಳುವುದು ಅವರಿಗೆ ಚೆನ್ನಾಗಿ ಗೊತ್ತು. ಇದಕ್ಕೆ ಕಾರಣ ಬೇರೆ ಹೇಳಬೇಕಿಲ್ಲ. ಆದರೆ ಇಂಥವರ ಬಲೆಯಲ್ಲಿ ಬಿದ್ದು ಒದ್ದಾಡುವ ಬಡವರ ಪಾಡು ಮಾತ್ರ ಯಾರಿಗೂ ಬೇಡ. ಅದರಲ್ಲಿಯೂ ಹೆಣ್ಣುಮಕ್ಕಳ ವಿಷಯದಲ್ಲಿ ಆಗುವ ಅದೆಷ್ಟೋ ಘಟನೆಗಳು ಹೊರಕ್ಕೆ ಬರುವುದೇ ಇಲ್ಲ. ಅವರಿಗೆ ಬೆದರಿಕೆ ಹಾಕಿಯೋ ಇಲ್ಲವೇ ದುಡ್ಡು ಕೊಟ್ಟೋ ಬಾಯಿ ಮುಚ್ಚಿಸುತ್ತಾರೆ. 

ಇನ್ನು ಹೆಣ್ಣುಮಕ್ಕಳೋ ತಮ್ಮ ಮೈಮೇಲೆ ಪ್ರಜ್ಞೆ ಇಲ್ಲದೇ ಇಂಥವರು ತೋರುವ ಆಮಿಷಕ್ಕೆ ಒಳಗಾದರಂತೂ ಮುಗಿದೇ ಹೋಯ್ತು ಅವರ ಪಾಡು. ಬಣ್ಣ ಬಣ್ಣದ ಮಾತುಗಳಿಂದ ಮರುಳಾಗುವ ಹೆಣ್ಣುಮಕ್ಕಳು ತಮ್ಮ ದೇಹವನ್ನೂ ಅರ್ಪಿಸಿ ಬಿಡುತ್ತಾರೆ. ಆದರೆ ಮುಂದೆ ಏನಾಗುವುದು ಎನ್ನುವ ಅರಿವೂ ಅವರಿಗೆ ಆಗದೇ ಇರುವುದು ವಿಷಾದನೀಯ. ಆದರೆ ಹೆಣ್ಣುಮಕ್ಕಳು ಎಷ್ಟು ಜಾಗರೂಕರಾಗಿರಬೇಕು ಎಂದು ತೋರಿಸಿಕೊಟ್ಟಿದೆ ಅಮೃತಧಾರೆ ಸೀರಿಯಲ್​.

ಡೀಪ್​ಫೇಕ್​ ಹೆಸ್ರಲ್ಲಿ ಶಾರುಖ್​, ಸಲ್ಮಾನ್​, ರಣಬೀರ್, ಅಕ್ಷಯ್​​ಗೆ ಹೀಗೆಲ್ಲಾ ಮಾಡೋದಾ? ಉಫ್​ ಎಂದ ಫ್ಯಾನ್ಸ್​! ​

ಭೂಮಿಕಾ ತಂಗಿ ಮದ್ವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೆಲಸದ ಹುಡುಗಿಗೆ ಗರ್ಭಿಣಿ ಮಾಡಿರುವ ಈತ ರಾಜಾರೋಷವಾಗಿ ಮದುವೆಗೆ ರೆಡಿಯಾಗಿದ್ದಾನೆ.   ಆತ ಕೆಲಸದಾಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವ ವಿಷ್ಯ ಯಾರಿಗೂ ಗೊತ್ತಿಲ್ಲ. ಪಾರ್ಥನನ್ನು ಪ್ರೀತಿಸ್ತಿರೋ ಭೂಮಿಕಾ ತಂಗಿ ಪೇಚಿಗೆ ಸಿಲುಕಿದ್ದಾಳೆ. ಇಷ್ಟವಿಲ್ಲದ ಮದ್ವೆಗೆ ಈಕೆ ರೆಡಿಯಾಗುವ ಅನಿವಾರ್ಯತೆ ಉಂಟಾಗಿದೆ. ಜೈದೇವನಿಂದ ಕೆಲಸದಾಕೆ ಗರ್ಭಿಣಿಯಾಗಿರುವ ವಿಷಯ ಭೂಮಿಕಾಗೆ ತಿಳಿದಿದೆ. ಇದನ್ನು ಆಕೆ ಹೋಗಿ ಹೋಗಿ ಅತ್ತೆಗೆ ಹೇಳಿದ್ದಾಳೆ. ಭೂಮಿಕಾಗೆ ವಿಷಯ ತಿಳಿದಿರುವುದನ್ನು ಕೇಳಿ ಅತ್ತೆ ಶಾಕ್​ ಆಗಿದ್ದಾಳೆ. ಆದರೆ ಹೆತ್ತ ಮಗನನ್ನು ಕೆಲಸದವನ ಜೊತೆ ಮದುವೆ ಮಾಡಿಸುತ್ತಾಳಾ ಅವಳು? ಹೇಗಾದರೂ ಮಾಡಿ ಕೆಲಸದಾಕೆಯನ್ನೇ ನಾಪತ್ತೆ ಮಾಡುವ ಪ್ಲ್ಯಾನ್​ ಮಾಡಿದ್ದಾಳೆ ಜೈದೇವನ ಅಮ್ಮ  ಅರ್ಥಾತ್​ ಭೂಮಿಕಾಳ ಅತ್ತೆ.

 

ಮದುವೆಗೆ ಸಿದ್ಧತೆ ನಡೆಯುತ್ತಿರುವ ನಡುವೆಯೇ, ಭೂಮಿಕಾ ತನ್ನ ಸ್ವಂತ ತಂಗಿಗೆ ಒಂದೆಡೆ ಅನ್ಯಾಯ ಆಗುತ್ತಿದ್ದರೆ, ಇನ್ನೊಂದೆಡೆ ಕೆಲಸದಾಕೆಗೆ ಅನ್ಯಾಯವಾಗುವುದನ್ನು ಕಂಡು ತಲ್ಲಣಗೊಂಡಿದ್ದಾಳೆ. ಹೇಗಾದರೂ ಮಾಡಿ ಈ ಸತ್ಯವನ್ನು ಎಲ್ಲರ ಎದುರು ಇಡಲು ಆಕೆ ನೋಡಿದ್ದಾಳೆ.ಆದರೆ ಮದುವೆಯ ತಯಾರಿಯಲ್ಲಿ ಇರುವಾಗಲೇ ಕೆಲಸದಾಕೆ ನಾಪತ್ತೆಯಾಗಿದ್ದಾಳೆ. ಅಂಥ ಒಬ್ಬಳು ಕೆಲಸದಾಕೆ ಇರಲೇ ಇಲ್ಲ ಎಂದು ಎಲ್ಲರ ಬಾಯಲ್ಲಿಯೂ ಹೇಳಿಸುವಲ್ಲಿ ಜೈದೇವನ ಅಮ್ಮ ಸಕ್ಸಸ್​ ಆಗಿದ್ದಾಳೆ. ಇದನ್ನು ಕೇಳಿ ಭೂಮಿಕಾಗೆ ಶಾಕ್​ ಆಗಿದೆ. ಈಗ ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಭೂಮಿಕಾ ತಂಗಿ ಮತ್ತು ಕೆಲಸದಾಕೆಗೆ ನ್ಯಾಯ ಒದಗಿಸುತ್ತಾಳಾ ಎನ್ನುವುದು ಈಗಿರುವ ಪ್ರಶ್ನೆ. ಅದರ ಜೊತೆಗೇ, ಶ್ರೀಮಂತರ ಮಕ್ಕಳ ಗಾಳಕ್ಕೆ ಬೀಳುವ ಮುನ್ನ ಹೇಗಿರಬೇಕು ಎನ್ನುವುದಕ್ಕೆ ಹೆಣ್ಣುಮಕ್ಕಳಿಗೆ ಪಾಠವನ್ನೂ ಕಲಿಸುತ್ತಿದೆ ಈ ಸೀರಿಯಲ್​.

ಇನ್ನೇನು 50 ಆಗ್ತಿದೆ, ಈಗ ಸುಂದರಿಯ ವರಿಸಿದ ಮತ್ತೊಬ್ಬ ಖಾನ್ ನಟ, ಯುವಕರಲ್ಲಿ ತಲ್ಲಣ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Brahmagantu: ಚಾಲೆಂಜ್​ ಸೋತು ಮನೆಬಿಟ್ಟ ದೀಪಾ- ಖುಷಿ ಬದ್ಲು ಅಡಕತ್ತರಿಯಲ್ಲಿ ಒದ್ದಾಡಿದ ಸೌಂದರ್ಯ! ಏನಾಯ್ತು?
ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!