ಪೂರ್ಣಿಗೆ ಕೈಯಾರೆ ಕುಡಿಸಿದ ಔಷಧದಲ್ಲಿ ವಿಷ: ಸ್ವಾಮಿ ಹೇಳಿದ ಮಾತಿಗೆ ತುಳಸಿ ಶಾಕ್​!

Published : Feb 19, 2024, 05:58 PM IST
ಪೂರ್ಣಿಗೆ ಕೈಯಾರೆ ಕುಡಿಸಿದ ಔಷಧದಲ್ಲಿ ವಿಷ: ಸ್ವಾಮಿ ಹೇಳಿದ ಮಾತಿಗೆ ತುಳಸಿ ಶಾಕ್​!

ಸಾರಾಂಶ

ಪೂರ್ಣಿಮಾಗೆ ತುಳಸಿ ಕೊಟ್ಟ ಔಷಧದಲ್ಲಿ ವಿಷ ಬೆರೆಸಿರುವ ಕಾರಣ, ಆಕೆ ಆಸ್ಪತ್ರೆ ಸೇರಿದ್ದಾಳೆ. ಆರೋಪ ತುಳಸಿಯ ಮೇಲೆ ಬಂದಿದೆ. ಮುಂದೇನು?  

 ಗರ್ಭಿಣಿ ಪೂರ್ಣಿಗೆ ತುಳಸಿ ಕೈಯಾರೆ ಔಷಧ ಕುಡಿಸಿದ್ದಾಳೆ. ಆದರೆ ಕುತಂತ್ರಿ ದೀಪಿಕಾ, ಈ ಔಷಧದ ಬಾಟಲಿಯಲ್ಲಿ ಮೊದಲೇ ವಿಷ ಬೆರೆಸಿದ್ದಾಳೆ. ಇದು ತುಳಸಿಗೆ ತಿಳಿದಿರಲಿಲ್ಲ. ತನ್ನ ಹೆತ್ತ ಮಗಳಂತೆಯೇ ಕಾಣುತ್ತಿರುವ ಪೂರ್ಣಿಗೆ ಪ್ರೀತಿಯಿಂದ ಕೊಟ್ಟ ಔಷಧವೇ ವಿಷವಾಗಿದೆ. ಪೂರ್ಣಿಗೆ ಹೊಟ್ಟೆ ನೋವು ತಾಳಲಾರದೇ ಆಸ್ಪತ್ರೆಗೆ ದಾಖಲಾಗಿದ್ದಾಳೆ. ವೈದ್ಯರು ಪೂರ್ಣಿ ವಿಷ ಕುಡಿದಿರುವುದಾಗಿ ಹೇಳಿದ್ದಾರೆ. ಇದೀಗ ವಿಷ ಕುಡಿಸಿರುವ ಆರೋಪ ತುಳಸಿಯ ಮೇಲೆ ಬಂದಿದೆ. ಯಾರ ಮೇಲೂ ಸಂದೇಹ ಬರದ ಸ್ಥಿತಿ ತುಳಸಿಗೆ. ಏಕೆಂದರೆ ಈಕೆಗೆ ಎಲ್ಲರೂ ಒಳ್ಳೆಯವರೇ. ಅದರಲ್ಲಿಯೂ ತಾನು ತುಂಬಾ ಒಳ್ಳೆಯವಳು ಎಂದುಕೊಂಡು ದೀಪಿಕಾ ಇದಾಗಲೇ ಪೋಸ್​ ಕೊಟ್ಟಾಗಿದೆ. ಇದರಿಂದ ತುಳಸಿಗೆ ಇದರ ಅರಿವಿಲ್ಲ.

ಆದರೆ ವಿಷ ಔಷಧದಲ್ಲಿ ಹೇಗೆ ಬಂತು ಎಂದು ನೋಡಲು ಸ್ವಾಮಿಗಳ ಮೊರೆ ಹೋಗಿದ್ದಾಳೆ ತುಳಸಿ. ಔಷಧ ಕುಡಿಸುವ ಮುನ್ನ ಈ ಬಾಟಲಿಯಲ್ಲಿ ವಿಷ ಬೆರೆಸಲಾಗಿತ್ತು ಎಂದು ಸ್ವಾಮೀಜಿ ಹೇಳಿದ್ದಾರೆ. ಈ ಹಿಂದೆ ಕೂಡ ಪೂರ್ಣಿಗೆ ಗರ್ಭಪಾತವಾಗಲು ವಿಷವೇ ಕಾರಣ ಎಂದು ಈ ಹಿಂದೆ ಇದೇ ಸ್ವಾಮೀಜಿ ಹೇಳಿದ್ದರು. ತುಳಸಿಗೆ ಶಾಕ್​ ಆಗಿದೆ. ಯಾರ ಮೇಲೂ ಅನುಮಾನ ಪಡಲಾಗದ ಸ್ಥಿತಿ. ಮುಂದೇನು? 

ಒಬ್ಬಳು ಸಾಲಲ್ಲಾ ಅಂತ ಇನ್ನೊಬ್ಬಳು ಬಂದ್ಲಾ? ಒಳ್ಳೆಯ ಸೀರಿಯಲ್​ ಹಳಿ ತಪ್ಪಿಸಬೇಡಿ ಅಂದ ಫ್ಯಾನ್ಸ್​

ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಕಥೆ.  ಅಷ್ಟಕ್ಕೂ ದೀಪಿಕಾ ಮೇಲೆ ಸಂದೇಹ ಪಡುವ ಚಾನ್ಸೇ ಇಲ್ಲ. ಏಕೆಂದರೆ,  ಎಲ್ಲರ ಕಣ್ಣಲ್ಲಿ ದೀಪಿಕಾ ಹೀರೋ ಆಗಿದ್ದಾಳೆ. ಆದರೆ ನಿಜಕ್ಕೂ ಆಕೆಯ ಬಣ್ಣವೇ ಬೇರೆ. ಇದಾಗಲೇ ಇರುವ ವಿಲನ್​ ಶಾರ್ವರಿಯನ್ನೂ ಮೀರಿಸಿ ಒಂದು ಹೆಜ್ಜೆ ಮುಂದೆ ಪ್ಲ್ಯಾನ್​ ಮಾಡಿದ್ದಾಳೆ ದೀಪಿಕಾ. ತನ್ನ ಉದ್ದೇಶವೇ ತುಳಸಿಯನ್ನು ಓಡಿಸುವುದು ಆಗಿದೆ,  ನಾನು ಈ ಮನೆಗೆ ಬಂದಿರುವ ಉದ್ದೇಶವೇ ಮನೆಯವರ ನೆಮ್ಮದಿ ಹಾಳು ಮಾಡಲು. ತುಳಸಿಯನ್ನು ದಾಳವಾಗಿಸಿ ಮನೆ ನೆಮ್ಮದಿ ಹಾಳು ಮಾಡುವುದು ಎಂದೇ ಮನೆಗೆ ಕಾಲಿಟ್ಟಿದ್ದಾಳೆ.  

ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿ ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಶಾರ್ವರಿಯೆಂದು ಓರ್ವ ವಿಲನ್​ನ ನಡುವೆಯೇ ಇನ್ನೋರ್ವ ವಿಲನ್​ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಒಬ್ಬಳು ಸಾಲುವುದಿಲ್ಲ ಎಂದು ಹಲವು ಮಹಿಳೆಯರನ್ನು ವಿಲನ್​ ಮಾಡುವ ಎಲ್ಲಾ ಸೀರಿಯಲ್​ಗಳಂತೆಯೇ ಇದು ಕೂಡ ದಾರಿ ತಪ್ಪುತ್ತಿದೆಯೇ ಎಂದು ಅಭಿಮಾನಿಗಳು ಈ ಹಿಂದೆ ಪ್ರಶ್ನಿಸಿದ್ದರು.  ಮಹಿಳೆಯರು ತುಂಬಾ ಒಳ್ಳೆಯವರಾಗಿದ್ದರೆ ಕಷ್ಟ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ತೋರಿಸುವ ಹೊತ್ತಿನಲ್ಲಿ, ಈ ಸೀರಿಯಲ್​ ಕೂಡ ತುಳಸಿ ಎನ್ನುವ ಒಳ್ಳೆಯ ಹೆಣ್ಣನ್ನು ಟಾರ್ಗೆಟ್​ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ವರ್ಷಾನುಗಟ್ಟಲೆ ಸೀರಿಯಲ್​ ಅನ್ನು ಎಳೆದು ಕೊನೆಗೆ ಒಳ್ಳೆಯವರೇ ಒಳ್ಳೆಯದಾಗುತ್ತದೆ ಎನ್ನುವ ಸಿದ್ಧ ಮಂತ್ರ ಇಟ್ಟುಕೊಂಡರೂ ಅತಿ ಎನಿಸುವಷ್ಟು ವಿಲನ್​ಗಳನ್ನು ತುರುಕಿ ಸುಂದರ ಧಾರಾವಾಹಿಯನ್ನು ಹಾಳು ಮಾಡಬೇಡಿ ಎನ್ನುತ್ತಿದ್ದಾರೆ. 

ಉತ್ತರ ಪ್ರದೇಶದ ಕಾನ್ಸ್​ಟೆಬಲ್​ ಹುದ್ದೆಗೆ ಹಾಟ್​ ಬ್ಯೂಟಿ ಸನ್ನಿ ಲಿಯೋನ್​ ಅರ್ಜಿ! ನಟಿಗೆ ಆಗಿದ್ದಾದ್ರೂ ಏನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?