ಅನುಪಮಾ ಸೀರಿಯಲ್ ಖ್ಯಾತಿಯ ನಟ ರಿತುರಾಜ್ ಸಿಂಗ್ ಅವರು ನಿಧನರಾಗಿದ್ದು, ಹಿಂದಿ ಸಿರೀಯಲ್ ಲೋಕದ ಖ್ಯಾತ ನಟ 59 ವರ್ಷದ ರಿತುರಾಜ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಅನುಪಮಾ ಸೀರಿಯಲ್ ಖ್ಯಾತಿಯ ನಟ ರಿತುರಾಜ್ ಸಿಂಗ್ ಅವರು ನಿಧನರಾಗಿದ್ದು, ಹಿಂದಿ ಸಿರೀಯಲ್ ಲೋಕದ ಖ್ಯಾತ ನಟ 59 ವರ್ಷದ ರಿತುರಾಜ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಿತುರಾಜ್ ಸಿಂಗ್ ಅವರು ಕಳೆದ ಕೆಲ ದಿನಗಳಿಂದ ತಮ್ಮ ಮೇದೋಜೀರಕ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಅವರಿಗೆ ದಿಢೀರ್ ಹೃದಯಾಘಾತವಾಗಿದ್ದು, ಇಹಲೋಕ ತ್ಯಜಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಕಾರಣಕ್ಕೆ ಅವರು ಅನುಪಮಾ ಸೀರಿಯಲ್‌ನ ಕಳೆದ ಕೆಲ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ, ರಿತುರಾಜ್ ಸಿಂಗ್ ಅವರ ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ಹೇಳುವಂತೆ, ರಿತುರಾಜ್ ಅವರು ಕಳೆದ ಕೆಲ ದಿನಗಳಿಂದ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪಿತ್ತಕೋಶ ಅಥವಾ ಮೆದೋಜೀರಕ ಗ್ರಂಥಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಸೋಮವಾರ ರಾತ್ರಿ ಅವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದ್ದು, ಇಹಲೋಕ ತ್ಯಜಿಸಿದ್ದಾರೆ. ರಿತುರಾಜ್ ಅವರ ದಿಢೀರ್ ನಿಧನದಿಂದ ಹಿಂದಿ ಚಿತ್ರರಂಗ ಆಘಾತಕ್ಕೊಳಗಾಗಿದೆ.
ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿರೋ ಅನುಪಮಾ ಸೀರಿಯಲ್‌ನಲ್ಲಿ ರೋಚಕ ಟ್ವಿಸ್ಟ್ ಏನದು?
ರಿತುರಾಜ್ ಅವರು ಕೇವಲ ಹಿಂದಿ ಸಿರೀಯಲ್‌ಗಳು ಮಾತ್ರವಲ್ಲದೇ ಸಿನಿಮಾ ಹಾಗೂ ಕೆಲವು ವೆಬ್ ಸಿರೀಸ್‌ಗಳಲ್ಲಿಯೂ ನಟಿಸಿದ್ದಾರೆ. ಹಿಂದಿಯ ಖ್ಯಾತ ಸಿರೀಯಲ್ ಅನುಪಮಾದಲ್ಲಿ ರಿತುರಾಜ್ ಅವರು ಶಿಸ್ತುಬದ್ಧವಾದ ಹೊಟೇಲ್ ಮಾಲೀಕ ಯಶ್‌ಪಾಲ್‌ನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದರ ಜೊತೆಗೆ ಅವರು ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ವಿವೇಕ್ ಒಬೇರಾಯ್ ಅವರ ವೆಬ್ ಸಿರೀಸ್ ಇಂಡಿಯನ್ ಪೊಲೀಸ್ ಫೋರ್ಸ್‌ನಲ್ಲೂ ನಟಿಸಿದ್ದರು.
1993ರಲ್ಲಿ ತೋಲ್ ಮೋಲ್ ಕೆ ಬೋಲ್ ಎಂಬ ರಿಯಾಲಿಟಿ ಶೋದಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುವ ಮೂಲಕ ರಿತುರಾಜ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಇದಾದ ನಂತರ ರಿಸ್ತೇ, ಕುಟುಂಬ್, ಕಹಾನಿ ಘರ್ ಘಟರ್ ಕೀ, ಸಿಐಡಿ, ಅದಾಲತ್, ದಿಯಾ ಭರ್ ಬಾತಿ ಹಮ್, ಹಾಗೂ ಯೆಹ್ ರಿಸ್ತಾ ಕ್ಯಾ ಕೆಹ್ಲಾತಾ ಹೈ ಮುಂತಾದ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿಂದಿ ಕಿರುತೆರೆ ಲೋಕದಲ್ಲಿ ಸ್ಟಾರ್ ಎನಿಸಿದ್ದರು.
ಅನುಪಮಾ ಸೀರಿಯಲ್‌ಗೆ ಬ್ರೇಕ್ ಕೊಟ್ಟು ಮಾರಿಶಸ್‌ಗೆ ತೆರಳಿದ ರೂಪಾಲಿ ಗಂಗೂಲಿ
ಹಾಗೆಯೇ ಬಾಲಿವುಡ್‌ನಲ್ಲಿ ಬದ್ರಿನಾಥ್ ಕಿ ದುಲ್ಹಾನಿಯಾ ಸಿನಿಮಾದಲ್ಲಿ ನಟಿಸಿದ್ದ ಇವರು ವರುಣ್ ಧವನ್ ಅವರ ಸಂಪ್ರದಾಯವಾದಿ ಅಪ್ಪನ ಪಾತ್ರವನ್ನು ನಿರ್ವಹಿಸಿದ್ದರು. ಇದರ ಜೊತೆಗೆ ಯಾರಿಯಾನ್ 2, ಸತ್ಯಮೇವ ಜಯತೆ 2 ಮುತಾಂದ ಸಿನಿಮಾಗಳಲ್ಲಿ ನಟಿಸಿದ್ದಾರೆ.