
Ananda Nilaya kannada serial: ‘ಆಕಾಶ ದೀಪ’, ‘ಅಮ್ಮ’, ‘ನೀಲಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯಾ ಶ್ರೀಧರ್ ಅವರು ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ‘ಆನಂದ ನಿಲಯ’ ಎನ್ನುವ ಧಾರಾವಾಹಿ ಪ್ರಸಾರ ಆಗಲಿದೆ. ಈ ಸೀರಿಯಲ್‌ನಲ್ಲಿ ದಿವ್ಯಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಜನ ಅಂದುಕೊಳ್ತಾರೆ ಮನೆ ಕಟ್ಟೋಕೆ ಬರೀ ಕಲ್ಲು, ಮಣ್ಣು ಇದ್ರೆ ಸಾಕು ಅಂತ. ಆದರೆ ಅದು ತಪ್ಪು. ಒಂದು ಮನೆಯ ಅಡಿಪಾಯದ ಕೆಳಗೆ ಯಾರಿಗೂ ಕಾಣದ ಎಷ್ಟೋ ತ್ಯಾಗಗಳಿರುತ್ತವೆ. ನನ್ನ ತಮ್ಮಂದಿರು ದೊಡ್ಡವರಾಗಬೇಕು, ಅವರಿಗೆ ಯಾವುದೇ ಕೊರತೆ ಆಗಬಾರದು ಅಂತ ಮುಚ್ಚಿಟ್ಟ ಕಣ್ಣೀರ ಹನಿಗಳಿರುತ್ತವೆ; ಇನ್ನೂ ಯಾರೋ ಕಂಡು ಮುಂದುವರಿದ ಕನಸುಗಳಿರುತ್ತವೆ.
ಅತ್ತಿಗೆ ಆದವಳು ಅಮ್ಮನಂತೆಯೇ ನಮ್ಮನ್ನು ಸಲಹಿದ ದಿನಗಳು ಅವು. 'ಅಣ್ಣ... ಅಣ್ಣ... ಅಣ್ಣ...' ಅಂತ ಕರೆದವರೆಲ್ಲರನ್ನೂ ಅಪ್ಪನಂತೆ ಸಲಹಿದ, ಅವರಿಗಾಗಿ ದುಡಿದ ಕ್ಷಣಗಳು ಅವು. ಹೀಗೆ ನನ್ನ ಮೂಲೆ ಮೂಲೆಯೂ ಒಂದೊಂದು ಕಥೆ ಹೇಳುತ್ತದೆ.
ಜನ ಅವರನ್ನು 'ಹಿರಿಮಗ, ಹಿರಿಸೊಸೆ' ಅಂತ ಕರೆಯುತ್ತಾರೆ. ಆದರೆ ಅವರು ನಿಜವಾಗಿಯೂ ಯಾರು ಮತ್ತು ಅವರ ಸ್ಥಾನವೇನು ಎಂಬುದು ನನಗೂ ಗೊತ್ತು, ನನ್ನೊಳಗಿನ ದುಃಖವನ್ನು ಹಂಚಿಕೊಂಡಿರುವ ಈ ಮನೆಯ ಪ್ರತಿ ಗೋಡೆಗಳಿಗೂ ಗೊತ್ತು.
ಬಂಧಗಳ ಬಂಧ ಸಡಿಲವಾಗದ ಹಾಗೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಇವರೇ ಧರ್ಮ ಮತ್ತು ಸುಧಾ. ಇನ್ನು ನಾನು... ಅವರ ಪ್ರೀತಿಯ 'ಆನಂದ ನಿಲಯ
ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಟಿ ಚಿತ್ಕಳಾ ಬಿರಾದಾರ್, ದಿವ್ಯಾ ಶ್ರೀಧರ್, ಮನೆಯೊಂದು ಮೂರು ಬಾಗಿಲು ಧಾರಾವಾಹಿ ನಟ ರಾಕೇಶ್, ಯಜಮಾನಿ ಧಾರಾವಾಹಿ ನಟ ಹರ್ಷ ಅವರು ಕೂಡ ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ದಿವ್ಯಾ ಶ್ರೀಧರ್ ಅವರು ಕೆಲ ವರ್ಷಗಳಿಂದ ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಮದುವೆಯಾಗಿ ಮಗಳಾದ ಮೇಲೆ ಅವರು ಕೆಲ ಕಾರಣಗಳಿಂದ ಮೊದಲ ಪತಿಯಿಂದ ಡಿವೋರ್ಸ್ ಪಡೆದರು. ಆಮೇಲೆ ಸಹನಟ ಅರ್ನವ್ ಅವರನ್ನು ಪ್ರೀತಿಸಿ, ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಅರ್ನವ್ ಅವರು ಅನ್ಯಕೋಮಿನವರಾಗಿದ್ದಕ್ಕೆ ಮತ್ತೆ ಅವರು ಮತಾಂತರ ಆದರು. ದಿವ್ಯಾ ಮತ್ತೆ ಗರ್ಭಿಣಿ ಎಂದಾಮೇಲೆ ಅರ್ನವ್ ಅವರು ಹಲ್ಲೆ ಮಾಡಿದ್ದಾರಂತೆ. ಇವರಿಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈಗ ದಿವ್ಯಾ ಇಬ್ಬರು ಹೆಣ್ಣು ಮಕ್ಕಳ ಜೊತೆ ಜೀವನ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.