
ಸದಾ ಸುದ್ದಿಯಲ್ಲಿರುವ 'ಬಿಗ್ ಬಾಸ್ ಕನ್ನಡ ಸೀಸನ್ 12' ಖ್ಯಾತಿಯ ಡಾಗ್ ಸತೀಶ್ ಮತ್ತೊಮ್ಮೆ ತಮ್ಮ ಮಾತುಗಳಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಬಾರಿ ಅವರು ಮಗನ ಸಿನಿಮಾ ಪ್ರವೇಶ, ಮದುವೆ ಹಾಗೂ ತಮ್ಮ ವೈಯಕ್ತಿಕ ಅನುಭವಗಳ ಬಗ್ಗೆ ಮಾತನಾಡಿದ್ದು, "ನನ್ನ ಮಗನಿಗೆ 40 ವರ್ಷ ತುಂಬುವವರೆಗೂ ಮದುವೆ ಮಾಡಲ್ಲ" ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಪುತ್ರ ಹರ್ಷನನ್ನು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪರಿಚಯಿಸಲು ಸತೀಶ್ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಇತ್ತೀಚಿನ ಟ್ರೆಂಡ್‌ನಂತೆ ಜಿಮ್, ಸಿಕ್ಸ್ ಪ್ಯಾಕ್ ಅಥವಾ ದೇಹದಾಕೃತಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ತಮ್ಮದಲ್ಲ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಿಕ್ಸ್ ಪ್ಯಾಕ್ ಇದ್ದವರು ಮಾತ್ರ ಯಶಸ್ವಿಯಾಗಿದ್ದಾರೆ ಎನ್ನುವುದಿಲ್ಲ. ಹರ್ಷನನ್ನು ಥಾಯ್ ಬಾಕ್ಸಿಂಗ್, ಹಾರ್ಸ್ ರೈಡಿಂಗ್ ಮತ್ತು ಆಕ್ಟಿಂಗ್ ತರಗತಿಗಳಿಗೆ ಸೇರಿಸಿದ್ದೇನೆ. ಒಳ್ಳೆಯ ನಟನಾಗಲು ಇಷ್ಟೇ ಸಾಕು. ಸಿಕ್ಸ್ ಪ್ಯಾಕ್ ಮಾಡಿಸುವ ಅಗತ್ಯ ನನಗೆ ಕಾಣುವುದಿಲ್ಲ. ನಾನು ಹುಟ್ಟಿದಾಗಿನಿಂದ ಜಿಮ್‌ಗೆ ಹೋಗಿಲ್ಲ, ವಾಕಿಂಗ್ ಕೂಡ ಮಾಡಿಲ್ಲ. ಜಿಮ್‌ಗೆ ಹೋಗಿದ್ದರೆ ಈಗಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೆ," ಎಂದು ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಗನ ಮದುವೆ ಕುರಿತು ಕೇಳಿದ ಪ್ರಶ್ನೆಗೆ ಡಾಗ್ ಸತೀಶ್ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದರು. "ನನ್ನ ಮಗ 40 ವರ್ಷ ಆಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದೇನೆ. ಹೀರೋ ಆಗಬೇಕಾದರೆ ಮದುವೆ ಅವನ ಇಮೇಜ್‌ಗೆ ಪರಿಣಾಮ ಬೀರುತ್ತದೆ. ನಾನು ಮದುವೆಯಾದ ಕೆಲವೇ ತಿಂಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ಅದೇ ಅನುಭವ ಅವನಿಗೆ ಆಗಬಾರದು. ಆದ್ದರಿಂದ ಸಿನಿಮಾ ಮೇಲೆಯೇ ಗಮನ ಹರಿಸಬೇಕು ಎಂದು ಅವನಿಗೆ ಹೇಳಿದ್ದೇನೆ. ಯಾರನ್ನೂ ಪ್ರೀತಿಸಬೇಡ ಎಂದೂ ಸೂಚಿಸಿದ್ದೇನೆ. ಸೂಕ್ತ ಸಮಯ ಬಂದಾಗ ನಾನೇ ಮದುವೆ ಮಾಡಿಸುತ್ತೇನೆ," ಎಂದು ಹೇಳಿದರು.
ಇದೇ ವೇಳೆ ಭವಿಷ್ಯದ ಸೊಸೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್, "ಕುಟುಂಬದ ಎಲ್ಲರನ್ನು ತನ್ನವರಂತೆ ಕಾಣುವ, ಸರಳ ಸ್ವಭಾವದ ಹುಡುಗಿಯಾಗಿರಬೇಕು. 'ಅಗ್ನಿಸಾಕ್ಷಿ' ಧಾರಾವಾಹಿಯ ನಾಯಕಿಯಂತಹ ಗುಣಗಳು ಇದ್ದರೆ ಚೆನ್ನಾಗಿರುತ್ತದೆ," ಎಂದು ಅಭಿಪ್ರಾಯಪಟ್ಟರು. ಮಗನನ್ನು ಯಶಸ್ವಿ ನಾಯಕನನ್ನಾಗಿ ಮಾಡುವ ಗುರಿಯೊಂದಿಗೆ ಡಾಗ್ ಸತೀಶ್ ಹಾಕಿಕೊಂಡಿರುವ ಈ '40 ವರ್ಷಗಳ ನೋ ಮ್ಯಾರೇಜ್ ರೂಲ್' ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.