ಎಲ್ಲರಿಗೂ ಸ್ಫೂರ್ತಿ ತುಂಬುವ ಭಾವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭಾವನಾ. ಸೀರೆಯಲ್ಲಿ ದಿಶಾ ಸೂಪರ್ ಎಂದ ನೆಟ್ಟಿಗರು....
ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ' ಆರಂಭವಾಗಿದೆ. ದೊಡ್ಡ ಕಲಾವಿದರ ದಂಡೇ ಇರುವ ಈ ಧಾರಾವಾಹಿ ಅದ್ಭುತ ಫ್ಯಾಮಿಲಿ ಸ್ಟೋರಿ ಹೇಳುತ್ತದೆ. ಪೆನ್ಶನ್ ಬಂದ್ರೆ ಮಕ್ಕಳ ಮದುವೆ ಮತ್ತು ಮನೆ ಕಟ್ಟಬೇಕು ಅನ್ನೋದು ಪೋಷಕರ ಆಸೆ, ಪೆನ್ಶನ್ ಹಣ ಬಂದ್ರೆ ಮೊದಲು ಬೇರೆ ಹೋಗಬೇಕು ಅನ್ನೋದು ಗಂಡು ಮಕ್ಕಳ ಆಸೆ, ಎಲ್ಲರಂತೆ ವಿಜೃಂಭಣೆಯಿಂದ ಮದುವೆ ಮಾಡಿಕೊಳ್ಳಬೇಕು ಅನ್ನೋದು ಹೆಣ್ಣುಮಕ್ಕಳ ಆಸೆ. ಪಕ್ಕಾ ಜನ ಸಾಮಾನ್ಯರ ಜೀವನದಲ್ಲಿ ನಡೆಯುವ ಘಟನೆಯನ್ನು ಈ ಧಾರಾವಾಹಿಯಲ್ಲಿ ನೋಡಬಹುದು. ಸೋಷಿಯಲ್ ಮೀಡಿಯಾ ಸ್ಟಾರ್ ದಿಶಾ ಮದನ್ ಭಾವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಹೆಮ್ಮೆಯಿಂದ ಕೆಲವೊಂದು ವಿಚಾರ ಹಂಚಿಕೊಂಡಿದ್ದಾರೆ.
'ಭಾವನಾ ಅನ್ನೋ ಪಾತ್ರ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತಾಳೆ. ಈ ಪಾತ್ರದ ಸಣ್ಣ ಪುಟ್ಟ ವಿಚಾರಗಳನ್ನು ತುಂಬಾ ಹುಡುಗಿಯರು ಕನೆಕ್ಟ್ ಆಗುತ್ತಾರೆ. ಲಕ್ಷ್ಮಿ ನಿವಾಸ ಕಥೆ ಅದರಲ್ಲೂ ಭಾವನ ಕಥೆ ಜನರಿಗೆ ಹತ್ತಿರವಾಗುತ್ತದೆ. ಜೀ ಕನ್ನಡ ತಂಡ ತುಂಬಾ ಸೂಕ್ಷವಾಗಿರುತ್ತಾರೆ..ಒಂದು ಪಾತ್ರ ಹೇಗೆ ಕಾಣಿಸಬೇಕು, ಕೈಗೆ ಎಷ್ಟು ಬಳ ಹಾಕಬೇಕು, ಧರಿಸುವ ಸೀರಿಯಲ್ಲಿ ಎಷ್ಟು ಬಾರ್ಡರ್ ಇರಬೇಕು ಪ್ರತಿಯೊಂದನ್ನು ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ಸೋಷಿಯಲ್ ಮೀಡಿಯಾ ನೋಡಿದರೆ ನನಗೆ ಸೀರೆ ಹುಚ್ಚು ಹೆಚ್ಚಿದೆ ಎಂದು ಗೊತ್ತಾಗುತ್ತದೆ. ಅಮ್ಮ ಮತ್ತು ನಾನು ಎರಡು ವಾರಕ್ಕೆ ಒಮ್ಮೆ ಸೀರೆ ಶಾಪಿಂಗ್ ಮಾಡಿ ಅದಕ್ಕೆ ತಕ್ಕಂತೆ ಬ್ಲೌಸ್ ಸ್ಟಿಚ್ ಮಾಡಿಸಬೇಕು. 10 ವರ್ಷಗಳ ಹಿಂದೆ ಶೂಟಿಂಗ್‌ಗೆ ಎಂದು ಶಾಪಿಂಗ್ ಮಾಡಿದ್ದು ಈಗ ಮತ್ತೆ ಅದೇ ಮಾಡುತ್ತಿರುವುದಕ್ಕೆ ಖುಷಿಯಾಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ದಿಶಾ ಮದನ್ ಮಾತನಾಡಿದ್ದಾರೆ.
10 ವರ್ಷಗಳ ನಂತರ 'ಲಕ್ಷ್ಮಿ ನಿವಾಸ'ಕ್ಕೆ ಕಾಲಿಟ್ಟ ದಿಶಾ ಮದನ್; ಎರಡು ಮಕ್ಕಳ ತಾಯಿ ಅಂದ್ರೆ ಯಾರೂ ನಂಬಲ್ಲ!
'ಮದುವೆ ಮಕ್ಕಳು ಆದ ಮೇಲೆ ಕಮ್‌ಬ್ಯಾಕ್ ಮಾಡಲು ಕಾರಣವೇ ನನ್ನ ಸಪೋರ್ಟ್ ಸಿಸ್ಟಮ್. ನನಗೆ ಸಪೋರ್ಟ್ ಸಿಸ್ಟಮ್ ತುಂಬಾ ಸ್ಟ್ರಾಂಗ್ ಆಗಿದೆ. ಮಕ್ಕಳು ಅಪ್ಪ-ಅಮ್ಮ ಜೊತೆ ಇರುತ್ತಾರೆ, ನನ್ನ ಗಂಡ ಕೆಲಸ ಮುಗಿಸಿಕೊಂಡು ಬೇಗ ಬರುತ್ತಾರೆ, ಇಡೀ ದಿನ ನನಗ ಚಿತ್ರೀಕರಣ ಇದೆ ಅಂದ್ರೆ ಅವತ್ತು ಮನೆಯಿಂದಲೇ ನನ್ನ ಗಂಡ ಕೆಲಸ ಮಾಡುತ್ತಾರೆ. ಈ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮುನ್ನ ನನಗೆ ತುಂಬಾ ಭಯ ಇತ್ತು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀನಿ, ಅವರೊಂದಿಗೆ ಟೈಮ್ ಸಿಗುತ್ತೋ ಇಲ್ವೋ ಅವರನ್ನು ಸ್ಕೂಲ್‌ಗೆ ಸೇರಿಸಬೇಕ...ಪ್ರತಿಯೊಂದರ ಬಗ್ಗೆ ಭಯ ಇತ್ತು. ಸ್ವಲ್ಪ ದಿನಗಳಿಂದ ಚಿತ್ರೀಕರಣ ಮಾಡುತ್ತಿರುವ ಕಾರಣ ಈ ದಿನಚರಿ ನನಗೆ ಮಾತ್ರವಲ್ಲ ಮಕ್ಕಳಿಗೂ ಅಭ್ಯಾಸ ಆಗಿದೆ. ಎದ್ದ ತಕ್ಷಣ ನನ್ನನ್ನು ಮನೆಯಲ್ಲಿ ನೋಡಿದರೆ ಅಮ್ಮ ಶೂಟಿಂಗ್ ಇಲ್ವಾ ಎಂದು ಕೇಳುತ್ತಾರೆ. ನಾನು ಶೂಟಿಂಗ್ ಮಾಡುವಾಗ ಕಾಲ್ ಮಾಡಿ ಶೂಟಿಂಗ್ ಆಯ್ತು ಅಂತ ಕೇಳುತ್ತಾರೆ. ತುಂಬಾ ಚೆನ್ನಾಗಿದೆ ಈ ಜರ್ನಿ. ಮನೆಯಲ್ಲಿ ನಾನಿದ್ದರೆ ಮಕ್ಕಳಿಗೂ ಜಾಸ್ತಿ ಟೆನ್ಶನ್ ಅನ್ಸುತ್ತೆ ಅದಿಕ್ಕೆ ಶೂಟಿಂಗ್ ಹೋಗಲಿ ಎಂದು ಇಷ್ಟ ಪಡುತ್ತಾರೆ' ಎಂದು ದಿಶಾ ಮದನ್ ಹೇಳಿದ್ದಾರೆ.