ಕನ್ನಡ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ಜೀ ಕನ್ನಡದ ಕಾಮಿಡಿ ಕಿಲಾಡಿಗಳು ವೇದಿಕೆಗೆ ಬಂದು ಉತ್ತರ ಕರ್ನಾಟಕದ ನಾಟಕ ಕಲಾವಿದ ಜವಾರಿ ಹರೀಶ್‌ಗೆ ತಮ್ಮ ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಅಡ್ವಾನ್ಸ್ ಹಣ ನೀಡಿದ್ದಾರೆ.
ಬೆಂಗಳೂರು (ಜು.31): ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ಉತ್ತರ ಕರ್ನಾಟಕ ಮೂಲದ ಹಾಸ್ಯ ಕಲಾವಿದ ಜವಾರಿ ಹರೀಶ್ ಅವರನ್ನು ಹುಡುಕಿಕೊಂಡು ಬಂದ ಕನ್ನಡ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಸಿನಿಮಾದಲ್ಲಿ ನಟಿಸುವುದಕ್ಕೆ ಚಾನ್ಸ್ ಕೊಟ್ಟಿದ್ದೂ ಅಲ್ಲದೇ ಅಡ್ವಾನ್ಸ್ ಹಣವನ್ನೂ ಪಾವತಿ ಮಾಡಿದ್ದಾರೆ.
ಮಹಾನಟಿ ವೇದಿಕೆಯಲ್ಲಿ ಜಡ್ಜಸ್ ಆಗಿ ಕಾಣಿಸಿಕೊಂಡಿದ್ದ ಕನ್ನಡ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಮುಂದೆ ಪ್ರದರ್ಶನ ಮಾಡಿದ ಹಲವು ಕಂಟೆಸ್ಟೆಂಟ್‌ಗಳಿಗೆ ಶುಭವಾಗಲಿ ಎಂದು 500 ರೂ. ಹಣವನ್ನು ನೀಡಿದ್ದಾರೆ. ಆದರೆ, ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋಗೆ ಬಂದಿದ್ದ ತರುಣ್ ಸುಧೀರ್ ಅವರು ಜವಾರಿ ಹೈದ ಹಾಸ್ಯ ಕಲಾವಿದ ಹರೀಶ್ ಅವರ ನಟನೆಯನ್ನು ನೋಡಿ ತಮ್ಮ ಸಿನಿಮಾದಲ್ಲಿ ನಿಮಗೆ ನಟಿಸಲು ಒಂದು ಚಾನ್ಸ್ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ, ಇದೇ ವೇದಿಕೆಯಲ್ಲಿಯೇ ಸಿನಿಮಾದಲ್ಲಿ ನಟಿಸಲು ನಿಮಗೆ ಅಡ್ವಾನ್ಸ್ ಹಣವನ್ನೂ ನೀಡುತ್ತಿದ್ದೇನೆ 500 ರೂ. ಹಣವನ್ನು ನೀಡಿದ್ದಾರೆ.
ದರ್ಶನ್ ಬಗ್ಗೆ ಸುಳ್ಳು 'ಬಿಲ್ಡಪ್' ಕೊಟ್ಟಿದ್ದ ಅಭಿಮಾನಿ ಸಿದ್ಧಾರೂಢಗೆ ಮತ್ತೆ ಜೈಲುವಾಸ?
ನಂತರ ಮಾತನಾಡಿದ ನಿರ್ದೇಶಕ ತರುಣ್ ಸುದೀರ್ ಅವರು, ಜವಾರಿ ಹರೀಶ್ ಅವರ ಮುಖ ಲಕ್ಷಣಗಳು ನಮ್ಮ ತಂದೆ ಸುಧೀರ್ ಅವರ ಹೋಲಿಕೆಗಳು ಕಾಣಿಸುತ್ತವೆ. ಅವರ ದೇಹದ ಹಾವ ಭಾವಗಳು, ನಿಲುವುಭಂಗಿ ಹಾಗೂ ವ್ಯಕ್ತಿತ್ವ ನಮ್ಮ ತಂದೆಗೆ ಸಾಕಷ್ಟು ಸಾಮ್ಯತೆಗೆ ಒಳಗಾಗುತ್ತವೆ. ನೀನೊಬ್ಬ ನಟ ಎನ್ನುವುದರಲ್ಲಿ ನನಗೆ ಯಾವುದೇ ಅಪನಂಬಿಕೆ ಇಲ್ಲ. ನಾನು ಸಿನಿಮಾ ಎಲ್ಲ ಮುಗಿಸಿ ರೈಟಿಂಗ್ ಅವಧಿಯನ್ನು ನಾನು ಮಹಾನಟಿಗೆ ಬಂದಾಗ ನಿಮ್ಮನ್ನು ನಾನು ನೋಡಿದ್ದೇನೆ. ಈಗಲೂ ನಾನು ಸಿನಿಮಾ ಸ್ಕ್ರಿಪ್ಟ್ ರೈಟಿಂಗ್ ಮಾಡುತ್ತಿದ್ದೇನೆ. ನಾನು ಯಾವಾಗ ಬರವಣಿಗೆ ಮುಗಿಸಿ ಚಿತ್ರೀಕರಣ ಆರಂಭಿಸುತ್ತೇನೋ, ಆಗ ನಾನು ನಿನ್ನನ್ನು ಕರಸಿಕೊಂಡು ನನ್ನ ಸಿನಿಮಾದಲ್ಲಿ ನಿನ್ನನ್ನು ಆಕ್ಟಿಂಗ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಕಾಟೇರ ಸಿನಿಮಾದಲ್ಲಿ ಚಾನ್ಸ್ ಕೊಡದಿದ್ದಕ್ಕೆ ಕ್ಷಮೆ ಕೇಳಿದ ತರುಣ್ ಸುಧೀರ್: ಮತ್ತೊಂದು ಸ್ಕಿಟ್ ಮಾಡಿದ ನಂತರ ಬಸು ಅವರಿಗೆ ಸ್ವತಃ ನಿರ್ದೇಶಕ ತರುಣ್ ಸುಧೀರ್ ಅವರು ಕ್ಷಮೆ ಕೇಳಿದ್ದಾರೆ. ನಾನು ಕಾಟೇರ ಸಿನಿಮಾ ಮಾಡುವಾಗ ಹಳ್ಳಿಯಲ್ಲಿ ಶೂಟಿಂಗ್ ಮಾಡುವಾಗ ಜೂನಿಯರ್ ಆರ್ಟಿಸ್ಟ್ ಕರೆತರದೇ 150 ಜನರೂ ಕಲಾವಿದರನ್ನು ಕರೆದುಕೊಂಡು ಬನ್ನಿ ಎಂದು ಕೇಳಿದ್ದೆ. ಸುಮಾರು 20ರಿಂದ 25 ಜನರು ಥಿಯೇಟರ್ ಆರ್ಟಿಸ್ಟ್‌ಗಳನ್ನು ಕರೆತರಲು ಹೇಳಿದ್ದೆ. ಆದರೆ, ಅದರಲ್ಲಿ ಕಾಮಿಡಿ ಕಿಲಾಡಿಗಳು ಶೋನ ಬಸು ಅವರು ಕೂಡ ಇದ್ದರು.
ಆಗ ಅವರನ್ನು ನೋಡಿ, ನಾನು ಇವರಿಗೆ ಕಾಟೇರ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಕೊಟ್ಟು ಅವರಿಗೆ ಅವಮಾನ ಮಾಡುವುದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವರ ಮನವೊಲಿಸಿ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡದಂತೆ ಮನವಿ ಮಾಡಲಾಯಿತು. ಇದರಿಂದ ಅವರಿಗೆ ಬಸು ಅವರಿಗೆ ಕ್ಷಮೆ ಕೇಳುತ್ತೇನೆ. ಜೊತೆಗೆ, ನನ್ನ ಮುಂದಿನ ಸಿನಿಮಾಗಳನ್ನು ಬಸು ಅವರ ನಟನೆಗೆ ಒಪ್ಪುವಂತಹ ಪಾತ್ರಗಳಿಗೆ ಅವರಿಂದ ನಟನೆಗೆ ಅವಕಾಶ ನೀಡಲಾಗುವುದು ಎಂದು ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಹೇಳಿದರು.
ಶೀಘ್ರದಲ್ಲೇ ಮುಗಿಯುತ್ತಂತೆ ಝೀ ಕನ್ನಡದ ಈ ಜನಪ್ರಿಯ ಧಾರಾವಾಹಿ?!