ಹುಸನ ತೆರಾ ತೌಬಾ ತೌಬಾ... ಪುಟ್ಟಕ್ಕನ ಮಗಳು ಸ್ನೇಹಾ ಭರ್ಜರಿ ಸ್ಟೆಪ್​- ಡಿಕೆಡಿಯಲ್ಲಿ ಯಾಕಿಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್​

By Suchethana D  |  First Published Jul 31, 2024, 2:15 PM IST

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರಧಾರಿಯಾಗಿ ನಟಿಸಿರೋ ಸಂಜನಾ ಬುರ್ಲಿ ಅವರು ಹುಸನ ತೆರಾ ತೌಬಾ ತೌಬಾ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. 
 


ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ  ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! 

 ಸ್ನೇಹಾ ಅಲಿಯಾಸ್​ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರು ಹುಸನ ತೆರಾ ತೌಬಾ ತೌಬಾ ಹಾಡಿಗೆ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಇವರ ಡಾನ್ಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ಪುಟ್ಟಕ್ಕನ ಮಗಳು ಸಹನಾ ಅರ್ಥಾತ್​ ಅಕ್ಷರಾ ಕಾಣಿಸಿಕೊಂಡಿದ್ದಾರೆ. ನೀವ್ಯಾಕೆ ಇಲ್ಲ ಎಂದು ಸಂಜನಾ ಅವರನ್ನು ಫ್ಯಾನ್ಸ್​ ಕೇಳುತ್ತಿದ್ದಾರೆ. 

Tap to resize

Latest Videos

ಕುಷ್ಠರೋಗಿ ಎಂದು ಶಾಲೆಯಿಂದ ಬಹಿಷ್ಕರಿಸಿದ್ದ ನಟಿ ಬಾಲಿವುಡ್​​ ಸೂಪರ್​ ಸ್ಟಾರ್​! ಡಿಂಪಲ್​ ಕಥೆಯೇ ರೋಚಕ

ಅಷ್ಟಕ್ಕೂ ಕೆಲ ದಿನಗಳ ಹಿಂದೆ ಸಂಜನಾ, ಟ್ಲುಟ್​ ಪುಟ್​ ಗಯಾಗೆ ಹಾಡಿಗೆ  ಸಕತ್​ ಡ್ಯಾನ್ಸ್​ ಮಾಡಿದ್ದರು. ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು.  ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳಿದ್ದರು.  ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸಿದ್ದರು.   ಈಗಲೂ ನೆಟ್ಟಿಗರು ಡ್ಯಾನ್ಸ್​ ಅನ್ನು ಹೊಗಳಿದ್ದಾರೆ. ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದಾರೆ. 

ಪುಟ್ಟಕ್ಕನ ಮಕ್ಕಳ ಧಾರಾವಾಹಿ ಕುರಿತು ಈ ಹಿಂದೆ ಮಾತನಾಡಿದ್ದ ಸಂಜನಾ ಅವರು,  ಹಳ್ಳಿ ಹುಡುಗಿ ರೀತಿ ಕಾಣಿಸಬೇಕು, ಎಂದು ನಾನು ಲುಕ್ ಬದಲಾಯಿಸಿಕೊಂಡೆ. ಆ್ಯಕ್ಟಿಂಗ್ ಕ್ಲಾಸ್‌ನಲ್ಲಿ (Acting Class) ಭಾಗಿಯಾಗಿ ಪಾತ್ರಕ್ಕೆ ರೆಡಿಯಾದೆ.  ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ.  ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್‌ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ  ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,' ಎಂದಿದ್ದಾರೆ ಸಂಜನಾ. 

ತಿಂಗಳಿಗೆ 300 ರೂ. ಪಡೀತಿದ್ದ ಪ್ರಕಾಶ್​ ರಾಜ್​ಗೆ ವಿಲನ್ ತಂದ ಅದೃಷ್ಟ! ಮದ್ವೆ ವಿಷ್ಯ ಕೆದಕೋದಾ ನೆಟ್ಟಿಗರು?
 

click me!