ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ನಟ-ನಟಿಯರ ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ ಶ್ರುತಿ

Published : Mar 12, 2025, 11:25 PM ISTUpdated : Mar 13, 2025, 10:23 AM IST
 ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ನಟ-ನಟಿಯರ ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ  ಶ್ರುತಿ

ಸಾರಾಂಶ

ಧಾರಾವಾಹಿಗಳಲ್ಲಿನ ಪಾತ್ರಗಳು ಬದಲಾದಾಗ ವೀಕ್ಷಕರಿಗೆ ಬೇಸರವಾಗುತ್ತದೆ. ರಿಯಾಲಿಟಿ ಶೋಗಳ ಆಹ್ವಾನದಿಂದ ಕಲಾವಿದರು ಧಾರಾವಾಹಿ ತೊರೆಯುವುದರಿಂದ ತಂಡಕ್ಕೆ ತೊಂದರೆಯಾಗುತ್ತದೆ ಎಂದು ನಿರ್ದೇಶಕಿ ಶ್ರುತಿ ನಾಯ್ಡು ಹೇಳಿದ್ದಾರೆ. ಕಲಾವಿದರು ಹೆಚ್ಚಿನ ಸಂಭಾವನೆ ಕೇಳುತ್ತಾರೆ, ಆದರೆ ಪ್ರಮುಖ ಪಾತ್ರಧಾರಿಗಳನ್ನು ಬದಲಾಯಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ನಿರ್ಮಾಪಕರು ಕಷ್ಟಪಡುವಂತಾಗುತ್ತದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವುದೇ ಒಂದು ಸೀರಿಯಲ್​ ಅನ್ನು ಸುದೀರ್ಘ ಅವಧಿಯವರೆಗೆ ನೋಡುತ್ತಿರುವ ಸಂದರ್ಭದಲ್ಲಿ, ಆ ಸೀರಿಯಲ್​ನಲ್ಲಿ ಇರುವ ಪಾತ್ರಗಳ ಒಳಹೊಕ್ಕು ಬಿಡುತ್ತಾರೆ ವೀಕ್ಷಕರು. ಆದರೆ ಆ ಪಾತ್ರಧಾರಿಗಳು ಸೀರಿಯಲ್​ ಮಧ್ಯದಲ್ಲಿಯೇ ಕೈಕೊಟ್ಟು ಹೋದಾಗ ಆ ಪಾತ್ರಕ್ಕೆ ಬೇರೆಯವರನ್ನು ಊಹಿಸಿಕೊಳ್ಳಲು ವೀಕ್ಷಕರಿಗೆ ಸಾಧ್ಯವಾಗುವುದೇ ಇಲ್ಲ. ಹೊಸಬರು ಹಿಂದಿನ ನಟ-ನಟಿಯರಿಗಿಂತಲೂ ಚೆನ್ನಾಗಿ ಆ್ಯಕ್ಟ್​ ಮಾಡಿದರೂ, ಅವರನ್ನು ಒಪ್ಪಿಕೊಳ್ಳಲು ವೀಕ್ಷಕರಿಗೆ ಸಾಧ್ಯವಾಗುವುದೇ ಇಲ್ಲ. ಅದರಲ್ಲಿಯೂ ಲೀಡ್​ ರೋಲ್​ನಲ್ಲಿರೋ ನಟ-ನಟಿಯರು ಬದಲಾಗಿಬಿಟ್ಟರಂತೂ ಮುಗಿದೇ ಹೋಯ್ತು. ನಿರ್ದೇಶಕರೇ ಏನೋ ಪಾಪ ಮಾಡಿದ್ದಾರೆ ಎನ್ನುವಷ್ಟರ ಮಟ್ಟಿಗೆ ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುವುದನ್ನು ನೋಡಿದರೆ, ಸೀರಿಯಲ್​ಗಳಿಗೆ ಹೇಗೆ ಜನರು ಒಗ್ಗಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಬಹುದು.

ಓರ್ವ ಪಾತ್ರಧಾರಿ ಕೈಕೊಟ್ಟು ಹೋದರೆ, ಅದು ವೀಕ್ಷಕರಿಗೆ ಮಾತ್ರವಲ್ಲದೇ, ಆ ಸೀರಿಯಲ್​ನ ಸಹ ನಟರಿಗೆ, ನಿರ್ದೇಶಕರಿಗೆ, ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಹೇಗೆ ಸಮಸ್ಯೆಯಾಗುತ್ತದೆ ಎನ್ನುತ್ತಲೇ ರಿಯಾಲಿಟಿ ಷೋಗಳಿಗೆ ಕರೆ ಬಂದಾಗ ಕೆಲವು ನಟ-ನಟಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ರಿವೀಲ್​ ಮಾಡಿದ್ದಾರೆ ಖ್ಯಾತ ನಿರ್ದೇಶಕಿ ಶ್ರುತಿ ನಾಯ್ಡು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನಟ-ನಟಿಯರ ವರ್ತನೆಯ ಬಗ್ಗೆ ಆಕ್ರೋಶದ ಜೊತೆ ಅವರ ನಡವಳಿಕೆಗೆ ಬೇಸರನ್ನೂ ವ್ಯಕ್ತಪಡಿಸಿದ್ದಾರೆ.

ಸ್ನೇಹಾಳ ಸಾಯಿಸೋ ಉದ್ದೇಶವೇ ಇರ್ಲಿಲ್ಲ- ನಟಿಗಾಗಿ ಬದಲಾಯ್ತಾ ಕಥೆ? ಅವಾರ್ಡ್​ನಲ್ಲಿ ಸಂಜನಾಗೆ ಮೋಸ ಎಂದ ಫ್ಯಾನ್ಸ್​!

'ಸೀರಿಯಲ್​ ಹಿಟ್​ ಆಗುತ್ತಿದ್ದಂತೆಯೇ ನಟ-ನಟಿಯರನ್ನು ರಿಯಾಲಿಟಿ ಷೋಗಳಿಗೆ ಕರೆಯುತ್ತಾರೆ. ಆಗ ತಮಗೆ ಉತ್ತಮ ಭವಿಷ್ಯ ಸಿಗುತ್ತದೆ ಎಂದು ಸೀರಿಯಲ್​ ಬಿಟ್ಟು ಹೊಗುತ್ತಾರೆ. ಆದರೆ ಅವರನ್ನೇ ನಂಬಿಕೊಂಡಿರುವ ಇಡೀ ಟೀಮ್​ ಎಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವುದನ್ನು ಯೋಚನೆ ಮಾಡುವುದಿಲ್ಲ. ಹಾಳಾಗಿ ಹೋಗಲಿ ಎಂದರೆ, ಅವರನ್ನು ರಿಯಾಲಿಟಿ ಷೋಗೆ ಕರೆಯಲು ಕಾರಣವಾದದ್ದೇ ನಮ್ಮ ಸೀರಿಯಲ್​, ಅವರಿಗೆ ಇದರಿಂದಲೇ ಪಾಪ್ಯುರ್ಯಾಲಿಟಿ ಬಂದದ್ದು ಎನ್ನುವುದನ್ನೂ ಮರೆಯುತ್ತಾರೆ. ಯಾವುದೋ ಮೂಲೆಯಲ್ಲಿದ್ದವರನ್ನು ತಂದು, ಅವರಿಗೆ ತರಬೇತಿ ನೀಡಿ, ಸಾಕಷ್ಟು  ಶ್ರಮ ವಹಿಸಿ ಅವರಿಗೆ ನಟನೆ ಹೇಳಿಕೊಟ್ಟು ಸೀರಿಯಲ್​ಗೆ ಹಾಕಿಕೊಂಡರೆ, ಆಮೇಲೆ ನಮಗೇ ಕೈಕೊಟ್ಟು ಹೋಗುತ್ತಾರೆ. ಬಳಿಕ ನಾವೇ ಅವರ ಕೈಕಾಲು ಹಿಡಿದುಕೊಳ್ಳುವ ಸ್ಥಿತಿ ಬರುತ್ತದೆ' ಎಂದು ಶ್ರುತಿ ನಾಯ್ಡು ನೊಂದು ನುಡಿದಿದ್ದಾರೆ.

ದಯವಿಟ್ಟು ಸೀರಿಯಲ್​ ಬಿಟ್ಟು ಹೋಗಬೇಡಿ, ನಮಗೆ ಸಮಸ್ಯೆ ಆಗುತ್ತದೆ ಎಂದರೆ, ಡಬಲ್​ ಪೇಮೆಂಟ್​ ಕೊಡ್ತೀರಾ ಕೇಳ್ತಾರೆ. ಸಿಟ್ಟು ನೆತ್ತಿಗೇರತ್ತೆ. ಆದರೆ ಅದನ್ನು  ತೋರಿಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಲೀಡ್​ ರೋಲ್​ನಲ್ಲಿ ಹಲವು ವರ್ಷಗಳಿಂದ ವೀಕ್ಷಕರು ಅವರನ್ನೇ ನೋಡಿರುತ್ತಾರೆ, ಕೂಡಲೇ ಅವರನ್ನು ಬದಲಿಸುವುದು ತುಂಬಾ ಕಷ್ಟ. ಅದಕ್ಕಾಗಿಯೇ ಅವರು ಹೇಳುವ ಷರತ್ತುಗಳನ್ನು ನಾವು ಒಪ್ಪಿಕೊಳ್ಳುವ ಸ್ಥಿತಿ ಬರುತ್ತದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಒಂದು ಸೀರಿಯಲ್​ ಮಾಡಬೇಕಾಗಿದೆ ಎಂದಿದ್ದಾರೆ. 

ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್​ಬಾಸ್​ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ