ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

Published : Mar 12, 2025, 10:46 PM ISTUpdated : Mar 13, 2025, 10:26 AM IST
 ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಸಾರಾಂಶ

'ಕನ್ನಡತಿ' ಖ್ಯಾತಿಯ ಕಿರಣ್ ರಾಜ್ ಅಭಿನಯದ 'ಕರ್ಣ' ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದೆ. ವೈದ್ಯನ ಪಾತ್ರದಲ್ಲಿ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದು, ಪ್ರೋಮೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 24 ಗಂಟೆಗಳಲ್ಲಿ 6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನಾಯಕಿಯ ಬಗ್ಗೆ ಅಭಿಮಾನಿಗಳು ಕುತೂಹಲ ಹೊಂದಿದ್ದು, ಹೊಸ ಪ್ರತಿಭೆ ಇರಲಿದ್ದಾರೆ ಎಂದು ಕಿರಣ್ ರಾಜ್ ತಿಳಿಸಿದ್ದಾರೆ. ಧಾರಾವಾಹಿಯಲ್ಲಿ ನಾಗಾಭರಣ ಸೇರಿದಂತೆ ದೊಡ್ಡ ತಾರಾ ಬಳಗವಿದೆ.

ಕನ್ನಡತಿ (kannadathi) ಖ್ಯಾತಿಯ ಹರ್ಷ ಅಲಿಯಾಸ್ ಕಿರಣ್ ರಾಜ್ (kiran raj) ಹೊಸ ಸೀರಿಯಲ್ ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ಅದ್ಧೂರಿಯಾಗಿ ಅವರನ್ನು ವೆಲ್ ಕಂ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದೇ ದಿನದಲ್ಲಿ ಧೂಳೆಬ್ಬಿಸಿದ ಕರ್ಣ ಸೀರಿಯಲ್ ಪ್ರೋಮೋ (Karna serial promo) ಉತ್ತಮ ಉದಾಹರಣೆ. ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಿರಣ್ ರಾಜ್, ಮೇಲ್ ಓರಿಯಂಟ್ ಕಂಟೆಂಟ್ ಸೀರಿಯಲ್ ಬಂದ್ರೆ ಮಾಡ್ತೀನಿ ಅಂತ ಅಭಿಮಾನಿಗಳಿಗೆ ಹೇಳಿದ್ರು. ಅದ್ರಂತೆ ಈಗ ಸೀರಿಯಲ್ ಕಡೆ ಮುಖ ಮಾಡಿದ್ದಾರೆ. ಝೀ ಕನ್ನಡದಲ್ಲಿ ಕಿರಣ್ ರಾಜ್ ಅಭಿನಯದ ಸೀರಿಯಲ್ ಪ್ರಸಾರವಾಗಲಿದ್ದು, ಕರ್ಣ ಎಂದು ಸೀರಿಯಲ್ ಗೆ ನಾಮಕರಣ ಮಾಡಲಾಗಿದೆ.  ನಿನ್ನೆಯಷ್ಟೆ ಕರ್ಣ ಸೀರಿಯಲ್ ಪ್ರೋಮೋ ಒಂದು ರಿಲೀಸ್ ಆಗಿದೆ. ಕಿರಣ್ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಅದ್ರ ವಿಡಿಯೋ ಹಂಚಿಕೊಂಡಿದ್ದರು. ಈಗ ತಮ್ಮೊಂದು ಖುಷಿ ಸುದ್ದಿಯನ್ನು ಕಿರಣ್ ರಾಜ್ ನೀಡಿದ್ದಾರೆ.

ಒಂದೇ ದಿನದಲ್ಲಿ ಇಷ್ಟೊಂದು ವೀವ್ಸ್! : ಕಿರಣ್ ರಾಜ್, ಸೀರಿಯಲ್ ಗೆ ಕಮ್ಬ್ಯಾಕ್ ಮಾಡ್ತಾ ಇರೋದು ಫ್ಯಾನ್ಸ್ ಗೆ ಖುಷಿ ನೀಡಿದೆ. ಕಿರಣ್ ರಾಜ್ ಪ್ರೋಮೋವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಹಾಗಾಗಿಯೇ ಕಳೆದ 24 ಗಂಟೆಯಲ್ಲಿ ಕರ್ಣ ಸೀರಿಯಲ್ ಪ್ರೋಮೋ 6 ಮಿಲಿಯನ್ಸ್ ವೀವ್ಸ್ ಪಡೆದಿದೆ. ಬಿಗ್ ಓಪನಿಂಗ್ ಸಿಕ್ಕಿದೆ. 24 ಗಂಟೆಯಲ್ಲಿ 6 ಮಿಲಿಯನ್ಸ್ ವೀವ್ ಸಿಕ್ಕಿದೆ. ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಶೋ ನೋಡ್ತಾ ಇರಿ ಎಂದು ಕಿರಣ್ ರಾಜ್ ಶೀರ್ಷಿಕೆ ಹಾಕಿದ್ದಾರೆ. 

ಲಂಡನ್‌ನಲ್ಲಿ ಹೃದಯ ಅರಳಿ ನಲಿದಿದೆ ಅಂತ ಹಾಡ್ತಿರೋ ಆಂಕರ್ ಅನುಶ್ರೀ, ಪಕ್ಕದಲ್ಲಿರೋರು ಯಾರು?

ಕರ್ಣ ಸೀರಿಯಲ್ ನಲ್ಲಿ ಕಿರಣ್ ರಾಜ್ ವೈದ್ಯರಾಗಿ ಕಾಣಿಸಿಕೊಳ್ತಿದ್ದಾರೆ. ಡಾಕ್ಟರ್ ಆದ್ರೂ ಮನೆಯಲ್ಲಿ ಅವರಿಗೆ ಪ್ರೀತಿ ಸಿಗ್ತಿಲ್ಲ. ಅನಾಥ ಕರ್ಣನನ್ನು ದೊಡ್ಡ ಮನೆಯವರು ಸಾಕುತ್ತಾರೆ. ಡಾಕ್ಟರ್ ಕರ್ಣನಿಗೆ ಪ್ರಶಸ್ತಿ ಸಿಕ್ಕಿದ್ರೂ ಕರ್ಣನನ್ನು ಮನೆಯವರು ಆಳಿನಂತೆ ನೋಡ್ತಾರೆ. ಎಲ್ಲರ ತಾತ್ಸಾರಕ್ಕೆ ಒಳಗಾಗುವ ಕರ್ಣ, ಮನೆಯವರ ಎಲ್ಲ ಕೆಲಸ ಮಾಡಿಕೊಡ್ತಾನೆ. ಏಪ್ರಿಲ್ ನಲ್ಲಿ ಸೀರಿಯಲ್ ಪ್ರಸಾರವಾಗುವ ಸಾಧ್ಯತೆ ಇದ್ದು, ಕಿರಣ್ ರಾಜ್ ಅವರನ್ನು ಹೊಸ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. 

ಪ್ರೋಮೋದಲ್ಲಿ ಮನೆಯವರನ್ನು ಮಾತ್ರ ತೋರಿಸಲಾಗಿದೆ. ಹೀರೋಯಿನ್ ಪ್ರೋಮೋ ಬಿಡುಗಡೆ ಆಗಿಲ್ಲ. ಹೀರೋಯಿನ್ ಆಗಿ ಬರುವವರು ಯಾರು ಎನ್ನುವ ಪ್ರಶ್ನೆ ಎದ್ದಿದೆ. ಪ್ರೋಮೋ ನೋಡಿದ ಫ್ಯಾನ್ಸ್, ಕನ್ನಡತಿ ರಂಜನಿ ರಾಘವನ್ ಹೀರೋಯಿನ್ ಆಗಿ ಬರ್ಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಕೆಲವರು ಭವ್ಯ ಗೌಡ, ಹೀರೋಯಿನ್ ಆಗ್ಬೇಕು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸೀರಿಯಲ್ ನಲ್ಲಿ ಇಬ್ಬರು ಹೀರೋಯಿನ್ಸ್ ಇದ್ದಾರೆ, ಒಬ್ಬರು ರಂಜನಿ ರಾಘವನ್ ಇನ್ನೊಬ್ಬರು ಭವ್ಯ ಗೌಡ ಎಂಬ ಸುದ್ದಿ ಕೂಡ ಇದೆ. ಈ ಮಧ್ಯೆ ಕರಣ್ ರಾಜ್ ತಮ್ಮ ಫ್ಯಾನ್ಸ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹೀರೋಯಿನ್ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು? : ಪ್ರೋಮೋದಲ್ಲಿ ಹೀರೋಯಿನ್ ಕಾಣ್ತಿಲ್ಲ, ಯಾರು ಎನ್ನುವ ಪ್ರಶ್ನೆಗೆ ಕಿರಣ್ ರಾಜ್ ಉತ್ತರ ನೀಡಿದ್ದಾರೆ. ಹೊಸ ಟ್ಯಾಲೆಂಟ್. ಅಪ್ಡೇಟ್ ಗೆ ಕಾಯಿರಿ ಎನ್ನುವ ಮೂಲಕ, ತಮ್ಮ ಸೀರಿಯಲ್ ಹೀರೋಯಿನ್ ಭವ್ಯ ಹಾಗೂ ರಂಜನಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ನಿವೇದಿತಾ ಎದುರೇ ಬಾಡಿ ಬಿಲ್ಡ್​ ಗುಟ್ಟು ರಟ್ಟು ಮಾಡಿದ ಚಂದನ್​ ಶೆಟ್ಟಿ -ಹೊಸ ಜೀವನದ ಬಗ್ಗೆ

ಇನ್ನು ಕರ್ಣ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಾಗಾಭರಣ, ಸುಂದರ್ ವೀಣಾ, ಆಶಾರಾಣಿ, ವೀಣಾ ರಾವ್ ಈ ಸೀರಿಯಲ್ ನಲ್ಲಿದ್ದಾರೆ. ಕಿರಣ್ ರಾಜ್ ಅಭಿನಯದ ಕರ್ಣ ಪ್ರೋಮೋ ಅದ್ಭುತವಾಗಿ ಮೂಡಿ ಬಂದಿದ್ದು, ಈ ಸೀರಿಯಲ್ ಗೆ ಕಿರಣ್ ರಾಜ್ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಕೂಡ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!