ಬಿಗ್ ಬಾಸ್ ಹತ್ತರಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಸಂಗೀತಾ ಶೃಂಗೇರಿ ಮತ್ತೆ ಬಿಗ್ ಬಾಸ್ ಮನೆಗೆ ಬರ್ತಾರೆ. ಹೀಗೊಂದು ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದ ಸಂಗೀತಾ ಏನಂದ್ರು ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada Season 10) ರ ಟಾಪ್ 3 ಕಂಟೆಸ್ಟೆಂಟ್ ನಲ್ಲಿ ಒಬ್ಬರಾಗಿದ್ದ ಸಂಗೀತಾ ಶೃಂಗೇರಿ (Sangeetha Sringeri), ಮತ್ತೆ ಬಿಗ್ ಬಾಸ್ ಗೆ ಬರ್ತಾರೆ ಎನ್ನುವ ಸುದ್ದಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯ ಹರಿದಾಡುತ್ತಿರುವಾಗ್ಲೇ ಸಂಗೀತಾ ಶೃಂಗೇರಿ, ಇನ್ಸ್ಟಾಗ್ರಾಮ್ (Instagram) ನಲ್ಲಿ ಇಂದು ಲೈವ್ ಬಂದಿದ್ರು. ನಿನ್ನೆ ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ಸಂಗೀತಾ, ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಇದೆ. ಅದನ್ನು ನಾಳೆ ರಿವೀಲ್ ಮಾಡ್ತೇನೆ ಎಂದಿದ್ದರು. ಅದ್ರಂತೆ ಇಂದು ಫ್ಯಾನ್ಸ್ ಗೆ ದೊಡ್ಡ ಉಡುಗೊರೆಯನ್ನು ಸಂಗೀತಾ ಶೃಂಗೇರಿ ನೀಡಿದ್ದಾರೆ.
ಲೈವ್ ಬಂದ ಸಂಗೀತಾ ಶೃಂಗೇರಿ ಹೇಳಿದ್ದೇನು? : ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದ ಸಂಗೀತಾ ಶೃಂಗೇರಿ ಬ್ಯುಸಿನೆಸ್ ಶುರು ಮಾಡಿದ್ದಾರೆ. ಯಸ್. ಕ್ರಿಸ್ಟಲ್ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಸಂಗೀತಾ, ಈಗ ಅದಕ್ಕಾಗಿ ಹೊಸ ಪೇಜ್ ಶುರು ಮಾಡಿದ್ದಾರೆ. ಬಿಗ್ ಬಾಸ್ 10ರ ಶೋನಲ್ಲಿ ಸಂಗೀತಾಗೆ ಅಭಿಮಾನಿಗಳು ನೀಡಿದ್ದ ಹೆಸರು ಸಿಂಹಿಣಿಯನ್ನೇ ಸಂಗೀತಾ ತಮ್ಮ ಈ ಪೇಸ್ ಗೆ ಇಟ್ಟಿದ್ದಾರೆ. ಸಿಂಹಿಣಿ ಬೈ ಸಂಗೀತಾ ಶೃಂಗೇರಿ ಹೆಸರಿನ ಪೇಜ್ ಶುರು ಮಾಡಿರುವ ಸಂಗೀತಾ, ಕ್ರಿಸ್ಟಲ್ ಬಗ್ಗೆ ಅದ್ರಲ್ಲಿ ಹೆಚ್ಚಿನ ಮಾಹಿತಿ ನೀಡ್ತಾರಂತೆ.
'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಹಾಡು ವೈರಲ್; ಭಾನುವಾರ ಮತ್ತೆ ಬಂದು ಹಾಡ್ತೀನಿ ಎಂದ ಅಭಿಮಾನಿಗೆ ಧ್ರುವ ಮನವಿ!
ಬಿಗ್ ಬಾಸ್ ಮನೆಯಲ್ಲೂ ಸಂಗೀತಾ, ಕ್ರಿಸ್ಟಲ್ ಬಗ್ಗೆ ಮಾತನಾಡ್ತಿದ್ದರು. ಈಗ ತಮ್ಮ ಜ್ಞಾನವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಯಾವ ಕ್ರಿಸ್ಟಲ್ ಯಾವುದಕ್ಕೆ ಉಪಯೋಗವಾಗುತ್ತೆ ಎಂಬುದನ್ನು ಸಂಗೀತಾ ಹೇಳಲಿದ್ದಾರೆ. ಪ್ರತಿಯೊಂದು ಕ್ರಿಸ್ಟಲ್ ಬಗ್ಗೆ ಮಾಹಿತಿ ನೀಡ್ತೇನೆ, ಅದನ್ನು ಹೇಗೆ ಬಳಸಬೇಕು ಎಂಬುದನ್ನು ನಿಮಗೆ ತಿಳಿಸಿಕೊಡ್ತೇನೆ ಎಂದಿರುವ ಸಂಗೀತಾ, ಸಿಂಹಿಣಿ ಪೇಜ್ ಕೇವಲ ಮಹಿಳೆಯರಿಗೆ ಮಾತ್ರ ಮೀಸಲಲ್ಲ. ಅದನ್ನು ಎಲ್ಲರೂ ನೋಡಿ ಎಂದು ವಿನಂತಿ ಮಾಡಿದ್ದಾರೆ.
ರಕ್ಷಾ ಬಂಧನಕ್ಕೆ ಸಖತ್ ಆಫರ್ ನೀಡಿದ ಸಂಗೀತಾ ಶೃಂಗೇರಿ : ಆಗಸ್ಟ್ 19ರಂದು ರಕ್ಷಾಬಂಧನ ಬರ್ತಾ ಇದೆ. ಈ ಸಮಯದಲ್ಲಿ ತಮ್ಮ ಪೇಜ್ ಲಾಂಚ್ ಮಾಡೋದಾಗಿ ಹೇಳಿದ ಸಂಗೀತಾ ಶೃಂಗೇರಿ, ರಾಖಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅವರು ಮೊದಲ ಬಾರಿ ಕ್ರಿಸ್ಟಲ್ ರಾಖಿಯನ್ನು ತಯಾರಿಸಿದ್ದಾರೆ. ಸಂಗೀತಾ ಹಾಗೂ ಸಂಗೀತಾ ಅಮ್ಮನ ಕೈನಲ್ಲಿ ರಾಖಿ ಸಿದ್ಧವಾಗಿದೆ. ಕರಿಯರ್ ಗ್ರೋಥ್ ಕ್ರಿಸ್ಟಲ್ ಅನ್ನು ಇದಕ್ಕೆ ಬಳಸಲಾಗಿದೆ.
ಸಂಗೀತಾ ಪ್ರಕಾರ, ರಕ್ಷಾಬಂಧನ ಹತ್ತಿರ ಬಂದಿರುವ ಕಾರಣ, ಲಿಮಿಟೆಡ್ ಸ್ಟಾಕ್ ಮಾತ್ರ ಅವರ ಬಳಿಯಿದೆ. ಹಾಗಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಈ ರಾಖಿ ಸಿಗುವ ಸಾಧ್ಯತೆ ಇದೆ. ಆದಷ್ಟು ಬೇಗ ಆರ್ಡರ್ ಮಾಡಿದ್ರೆ ನಿಮಗೆ ರಾಖಿ ಸಿಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಕ್ರಿಸ್ಟಲ್ ರಾಖಿ ಖರೀದಿ ಮಾಡಿದವರಿಗೆ ಸಂಗೀತಾ ಶೃಂಗೇರಿ ಅವರ ಕಡೆಯಿಂದ ಸ್ಮಾಲ್ ಗಿಫ್ಟ್ ಕೂಡ ಸಿಗ್ತಿದೆ.
ಸಂಗೀತಾ ಶೃಂಗೇರಿ ರಾಖಿ ಜೊತೆ ಬ್ರೇಸ್ಲೈಟ್ ಕೂಡ ಇಟ್ಟಿದ್ದಾರೆ. ಜನರು ತಮಗಿಷ್ಟವಾದ ಬ್ರೇಸ್ ಲೈಟ್ ಖರೀದಿ ಮಾಡ್ಬಹುದು. ಒಳ್ಳೆ ಗುಣಮಟ್ಟದ ಹಾಗೇ ಶಕ್ತಿ ತುಂಬಿದ ಕ್ರಿಸ್ಟಲನ್ನು ಸಂಗೀತಾ ಶೃಂಗೇರಿ ಮಾರಾಟ ಮಾಡ್ತಿರೋದಾಗಿ ತಿಳಿಸಿದ್ದಾರೆ. ಸಿಂಹಿಣಿ ಪೇಜ್ ನಲ್ಲಿ ಮೆಸ್ಸೇಜ್ ಮಾಡಿದ್ರೆ ನಿಮ್ಮ ಅಡ್ರೆಸ್ ಗೆ ಕ್ರಿಸ್ಟಲ್ ಬರುತ್ತೆ ಎಂದಿದ್ದಾರೆ ಸಂಗೀತಾ.
ಪ್ರೀತಿ ದೇವತೆ ನಿನ್ನಾಣೆ... ದರ್ಶನ್ ಚಿತ್ರದ ಹಾಡಿಗೆ ಅನುಶ್ರೀ-ಅಕುಲ್ ರೊಮಾನ್ಸ್: ನೆಟ್ಟಿಗರಿಗೆ ಇನ್ನೇನೋ ಚಿಂತೆ!
ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗಲಾಟೆ ಮಾಡ್ಕೊಂಡಿದ್ದ ಸಂಗೀತಾ ಶೃಂಗೇರಿ ಹರ ಹರ ಮಹಾದೇವ ಧಾರಾವಾಹಿ ನಂತ್ರ ಚಾರ್ಲಿ 777 ನಲ್ಲಿ ನಟಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಮಾರಿ ಗೋಲ್ಡ್ ಚಿತ್ರದಲ್ಲಿ ನಟಿಸಿದ್ದ ಸಂಗೀತಾ ಕೈನಲ್ಲಿ ಸದ್ಯ ಯಾವುದೇ ಪ್ರಾಜೆಕ್ಟ್ ಇಲ್ಲ.